ಟೊಪ್ಪಿಗೆ, ಪೇಟವಿಲ್ಲದ ಸದ್ಗುರು ವಾಸುದೇವ್ ನೋಡಿದ್ದೀರಾ? ಇಲ್ಲಿವೆ ನೋಡಿ ಸರಳತೆಯ ಫೊಟೋಗಳು
ಬೆಂಗಳೂರು (ಫೆ.04): ದೇಶಾದ್ಯಂತ ಈಶ ಫೌಂಡೇಶನ್ ಸದ್ಗುರು ಎಂದೇ ಪ್ರಸಿದ್ಧಿಯಾಗಿರುವ ಜಗ್ಗಿ ವಾಸುದೇವ್ ಯಾವಾಗಲೂ ತಲೆಗೆ ಪೇಟ ಸುತ್ತಿಕೊಂಡು ಅಥವಾ ಟೋಪಿಯನ್ನು ಧರಿಸಿಕೊಂಡೇ ಭಕ್ತರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅವರು ಟೊಪ್ಪಿಗೆ ಹಾಗೂ ಪೇಟವಿಲ್ಲದೆ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲಿವೆ ನೋಡಿ ಫೋಟೋಗಳು..
ಅಪ್ಪಟ ಕನ್ನಡಿಗರಾಗಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ದಕ್ಷಿಣ ಕರ್ನಾಟಕದ ಭಾಗದವರು. ಅವರ ಮಣ್ಣಿನ ರಕ್ಷಣೆ, ಕಾವೇರಿ ಕೂಗು ಹಾಗೂ ಇತರೆ ನೈಸರ್ಗಿಕ ಕಾಳಜಿ ಹಾಗೂ ಈಶ ಫೌಂಡೇಶನ್‌ನಿಂದ ದೇಶಾದ್ಯಂತ ಪ್ರಸಿದ್ಧಿಯಾಗಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಬೃಹತ್ ಈಶ್ವರನ ಅರ್ಧಶಿಲಾ ಪ್ರತಿಮೆಯನ್ನು ಸ್ಥಾಪಿಸಿದ ಸದ್ಗುರು ಅಲ್ಲಿಯೇ ಇಶಾ ಫೌಂಡೇಶನ್ ಆರಂಭಿಸಿದರು. ಈ ಮೂಲಕ ಈಶ್ವರ ಅನುಯಾಯಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದಾರೆ.
ಇಶಾ ಫೌಂಡೇಶನ್ ಒಂದು ಲಾಭರಹಿತ , ಆಧ್ಯಾತ್ಮಿಕ ಸಂಸ್ಥೆಯಾಗಿದ್ದು 1992 ರಲ್ಲಿ ಭಾರತದ ತಮಿಳುನಾಡಿನ ಕೊಯಮತ್ತೂರು ಸ್ಥಾಪಿಸಿದ್ದಾರೆ. ಇತ್ತೀಚಿನ ನಾಲ್ಕೈದು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿಯೂ ಶಾಖೆ ಆರಂಭಿಸಿದ್ದಾರೆ.
ಭಕ್ತರೊಂದಿಗೆ ಯಾವಾಗಲೂ ತಲೆಗೆ ಪೇಟ ಸುತ್ತಿಕೊಂಡು ಅಥವಾ ಟೋಪಿಯನ್ನು ಧರಿಸಿಕೊಂಡೇ ಕಾಣಿಸಿಕೊಳ್ಳುವ ಸದ್ಗುರು, ಟೋಪಿ-ಪೇಟವಿಲ್ಲದೆ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ.
ಸದ್ಗುರು ಅವರ ಕೆಲವು ಸಂಗ್ರಹಿತ ಫೋಟೋಗಳು ಲಭ್ಯವಿದ್ದು, ಅವುಗಳಲ್ಲಿ ಅಪ್ಪಟ ಭಾರತೀಯರಂತೆ ಕಾಣಿಸಿಕೊಂಡಿದ್ದಾರೆ. ಇವರು ಈಶಾ ಯೋಗ ಕೇಂದ್ರವನ್ನೂ ನಡೆಸುತ್ತಾರೆ.
ಪ್ರತಿ ಶಿವರಾತ್ರಿ ವೇಳೆ ಈಶ್ವರ ಪ್ರತಿಮೆ ಮುಂಭಾಗದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ರಾತ್ರಿ ಜಾಗರಣೆ ಮಾಡುವ ಸದ್ಗುರು ಶಿವನ ಧ್ಯಾನ ಮಾಡುತ್ತಾ ಕುಣಿದು ಭಕ್ತರನ್ನು ಭಕ್ತಿ ಪರಾಕಾಷ್ಠೆಯಲ್ಲಿ ಮುಳುಗಿಸುತ್ತಾರೆ.
ಈಶ ಫೌಂಡೇಶನ್ ಯಫಗ ಕೇಂದ್ರದಿಂದ 1996 ರಲ್ಲಿ ಭಾರತೀಯ ರಾಷ್ಟ್ರೀಯ ಹಾಕಿ ತಂಡ, 1997ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯೋಗ ಕಾರ್ಯಕ್ರಮ ಹಾಗೂ 1998ರಲ್ಲಿ ತಮಿಳುನಾಡಿನಲ್ಲಿ ಜೀವಾವಧಿ ಕೈದಿಗಳಿಗೆ ಯೋಗ ತರಗತಿಗಳನ್ನು ನಡೆಸಲಾಯಿತು.
ಇಶಾ ಫೌಂಡೇಶನ್ ಶಿಕ್ಷಣ ಪ್ರಸಾರವನ್ನೂ ಮಾಡುತ್ತದೆ. ಒಟ್ಟು 7 ಶಾಲೆಗಳನ್ನು ಹೊಂದಿದ್ದು ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಹಾಗೂ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. 3000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.