Asianet Suvarna News Asianet Suvarna News

ಸದ್ಗುರು ಜಗ್ಗಿ ವಾಸುದೇವ್‌ ಬಳಿಗೆ ಸಮಂತಾ ರುತ್‌ ಪ್ರಭು ಪದೆ ಪದೇ ಹೋಗುವುದೇಕೆ?

ಸಮಂತಾ ರುತ್ ಪ್ರಭು ಎಂಬ ಚೆಲುವೆ ನಟಿಗೆ ಸದ್ಗುರು ಜಗ್ಗಿ ವಾಸುದೇವ್ ಬಳಿ ಏನು ಕೆಲಸ? ಸದ್ಗುರು ಜೊತೆ ಮಾತನಾಡಿದ ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. 

Why Samantha Ruth Prabhu goes to Sadguru jaggi vasudev
Author
First Published Jan 27, 2024, 11:59 AM IST

ಕೆಲವು ಸಮಯದ ಹಿಂದೆ ಒಂದು ವಿಡಿಯೋ ವೈರಲ್‌ ಆಗಿತ್ತು. ಅದರಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಅವರ ಬಳಿ ನಟಿ ಸಮಂತಾ ರುತ್‌ ಪ್ರಭು ಒಂದು ಪ್ರಶ್ನೆ ಕೇಳಿದ್ದಳು. ʼʼಬದುಕು ನನ್ನ ಪಾಲಿಗೆ ಇಷ್ಟೊಂದು ಅನ್ಯಾಯಭರಿತ ಆಗಿರುವುದೇಕೆ?ʼʼ ಎಂದು ಆಕೆ ಹತಾಶಳಾಗಿ ಪ್ರಶ್ನಿಸಿದ್ದು ಅದರಲ್ಲಿತ್ತು. ಸದ್ಗುರು ಅದಕ್ಕೆ ಉಲ್ಲಾಸಮಯವಾದ ಉತ್ತರ ಕೊಟ್ಟು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಲೇ ಆಧ್ಯಾತ್ಮಿಕ ಸತ್ಯವನ್ನೂ ಹೇಳಿದ್ದರು. ʼʼಬದುಕು ಎಲ್ಲರಿಗೂ ಎಲ್ಲ ಕಾಲದಲ್ಲೂ ನ್ಯಾಯಭರಿತ, ಮೃದು ಆಗಿರಬೇಕು ಎಂಬುದೇನಿಲ್ಲ. ನೀನು ಇನ್ನೂ ಅದನ್ನು ನಿರೀಕ್ಷೆ ಮಾಡುತ್ತೀಯಾ? ಬದುಕು ಮೃದುವಲ್ಲ ಎಂಬುದು ನಿನಗೆ ಈಗಾಗಲೇ ಗೊತ್ತಾಗಿರಬೇಕಿತ್ತು" ಎಂದು ಸದ್ಗುರು ಉತ್ತರಿಸಿದ್ದರು.

ಇದಲ್ಲದೇ ಇನ್ನೊಂದಷ್ಟು ಫೋಟೋ ವಿಡಿಯೋಗಳನ್ನೂ ಸಮಂತಾ ತಮ್ಮ ಇನ್‌ಸ್ಟಗ್ರಾಂ (Instagram) ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದರಲ್ಲಿ ಆಕೆ ಸದ್ಗುರು ಆಶ್ರಮದಲ್ಲಿ ಧ್ಯಾನ ಮಾಡುತ್ತಿರುವುದು, ಅಡ್ಡಾಡುತ್ತಿರುವುದು ಎಲ್ಲಾ ಇತ್ತು. ತಮಿಳುನಾಡಿನ ಕೊಯಮತ್ತೂರಿನ ಸದ್ಗುರು ಆಶ್ರಮದಲ್ಲಿ ಆಕೆ ಇದ್ದಳು. ಈಗಲೂ ಆಕೆ ಆಗಾಗ ಅಲ್ಲಿಗೆ ಹೋಗುತ್ತಿರುತ್ತಾಳೆ. ಅದಿರಲಿ, ಇಷ್ಟಕ್ಕೂ ಸಮಂತಾ ರುತ್‌ ಪ್ರಭು ಯಾಕೆ ಸದ್ಗುರುವಿನ ಆಶ್ರಮಕ್ಕೆ ಹೋಗುತ್ತಿರುತ್ತಾಳೆ?

2021ರಲ್ಲಿ ಪತಿ ನಾಗ ಚೈತನ್ಯನಿಂದ ಬೇರ್ಪಟ್ಟ ನಂತರ ಸಮಂತಾ ಮನಸ್ಸು ಸಿಕ್ಕಾಪಟ್ಟೆ ಪ್ರಕ್ಷುಬ್ಧತೆಗೆ ಒಳಗಾಗಿತ್ತಂತೆ. ಆಗಲೂ ಆಕೆಯನ್ನು ನಾಗ ಚೈತನ್ಯ ಅಭಿಮಾನಿಗಳು ಮತ್ತಿತರರು ಆನ್‌ಲೈನ್‌ನಲ್ಲಿ ನಿರ್ದಯವಾಗಿ ಟ್ರೋಲ್ ಮಾಡಿದ್ದರು. ಆಕೆಯ ಉತ್ಸಾಹ, ಆನಂದ ಎಲ್ಲವೂ ಸತ್ತಂತಾಗಿತ್ತು. ಆಕೆ ಪಾಸಿಟಿವ್‌ ಶಕ್ತಿಗಾಗಿ ಹುಡುಕಾಡುತ್ತಿದ್ದಳು. ಆಗ ಆಕೆಗೆ ಕಂಡವರೇ ಸದ್ಗುರು. ಆಕೆ ನೇರವಾಗಿ ಸದ್ಗುರುವಿನಲ್ಲಿಗೆ ಹೋಗಿದ್ದಳು. ಸದ್ಗುರು ಆಕೆಗೆ ಧ್ಯಾನದ ಹಲವು ತಂತ್ರಗಳನ್ನು ಹೇಳಿಕೊಟ್ಟಿದ್ದರು. ಸರಳ ಮಂತ್ರದೀಕ್ಷೆಯನ್ನು ಕೊಟ್ಟಿದ್ದರು.

ನಿಮ್ಮದು ನರೇಂದ್ರ ಮೋದಿ ಜನ್ಮರಾಶಿ- ನಕ್ಷತ್ರವೇನಾ? ಹಾಗಾದ್ರೆ ಸದ್ಯ ನಿಮಗೆ ಸೋಲೇ ಇಲ್ಲ!

ಅಲ್ಲಿಂದಾಚೆಗೆ ಸಮಂತಾ ರುತ್‌ ಪ್ರಭು ಹೊಸ ವ್ಯಕ್ತಿಯೇ ಆಗಿದ್ದಾಳೆ. ಆಕೆಗೆ ಮೇಲಿಂದ ಮೇಲೆ ಹೊಸ ಫಿಲಂ ಪ್ರಾಜೆಕ್ಟುಗಳು ಬಂದವು. ಕೆಲವು ಹಿಟ್‌ ಆದವು. ಕೆಲವು ಗೆಲ್ಲದಿದ್ದರೂ ಅವರೇಜ್‌ ಗಳಿಕೆ ಮಾಡಿದವು. ಏನಿದ್ದರೂ ಆಕೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕೆಲಸ ಕಡಿಮೆ ಇದ್ದಾಗ ಆಕೆ ಆಶ್ರಮದಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದಳು. ಹೊಸ ಚೈತನ್ಯ ತುಂಬಿಕೊಳ್ಳುತ್ತಿದ್ದಳು. ಇದನ್ನೆಲ್ಲ ಆಕೆಯೇ ಒಂದು ಫಿಲಂ ಮ್ಯಾಗಜಿನ್‌ಗೆ ನೀಡಿದ ಇಂಟರ್‌ವ್ಯೂನಲ್ಲಿ ಹೇಳಿಕೊಂಡಿದ್ದಾಳೆ.

"ಧ್ಯಾನ ನನ್ನನ್ನು ಸಮತೋಲನದಲ್ಲಿಡುತ್ತದೆ. ನಾನು ಆಳವಾದ ಮನಸ್ಸಿನ ಪ್ರಶಾಂತಿಯತ್ತ ಹೋಗುತ್ತೇನೆ. ಅಲ್ಲಿ ನಾನ ಸಮಂತಾ ಎಂಬ ಸಮಂತಾ ಆಗಿರುವುದಿಲ್ಲ. ನಾನು ಒಬ್ಬ ಮನುಷ್ಯ ಆಗಿರುವುದಿಲ್ಲ. ನಾನು ಈ ವಿಶ್ವವನ್ನೆಲ್ಲ ಆವರಿಸಿರುವ ದಿವ್ಯವಾದ, ಭವ್ಯವಾದ ಪ್ರಜ್ಞೆಯೊಂದಿಗೆ ಒಂದಾಗಿರುತ್ತೇನೆ. ಆಗ ನಾನು ಬೇರೆಯಲ್ಲಿ, ಈ ಮಹಾ ಪ್ರಕೃತಿ ಬೇರೆಯಲ್ಲ ಎಂಬ ಸತ್ಯ ಅರಿವಾಗುತ್ತದೆ. ಆದ್ದರಿಂದ, ನಾನು ಋಣಾತ್ಮಕ ಸಂಗತಿಗಳನ್ನು (Negative Facts) ನನ್ನೊಳಗೆ ಇಟ್ಟುಕೊಳ್ಳಬೇಕಿಲ್ಲ ಎಂಬುದು ಅರಿವಾಗುತ್ತದೆ. ಆಗ ನಾನು ಆ ಋಣಾತ್ಮಕ ಸಂಗತಿಗಳನ್ನೆಲ್ಲ ಈ ವಿಶ್ವದ ಯಾವುದೋ ಮೂಲೆಯಲ್ಲಿ ಚೆಲ್ಲಿಬಿಡುತ್ತೇನೆ. ಬದಲಾಗಿ, ಎಲ್ಲ ಕಡೆ ತುಂಬಿರುವ ಸಕಾರಾತ್ಮಕ ಅನುಭೂತಿಯನ್ನು (Positive Vibes), ದಿವ್ಯ ಪರಿಮಳವನ್ನು ನನ್ನೊಳಗೆ ತುಂಬಿಕೊಳ್ಳುತ್ತೇನೆ. ಪ್ರತಿಯೊಂದು ಧ್ಯಾನವೂ ಹೊಸ ಹುಟ್ಟು ನೀಡುತ್ತದೆ" ಎಂದು ಸಮಂತಾ ಹೇಳಿಕೊಳ್ಳುತ್ತಾಳೆ.

ಜೊತೆಗೆ ಸದ್ಗುರು ಸಮಂತಾಗೆ ಹಲವು ಮಂತ್ರದೀಕ್ಷೆಗಳನ್ನೂ ಕೊಟ್ಟಿದ್ದಾರಂತೆ. ಈ ಮಂತ್ರಗಳು ಆಧ್ಯಾತ್ಮಿಕ ಸಾಧನೆಗೆ ಪೂರಕವಾಗಿವೆಯಂತೆ. ಆದರೆ ಆ ಮಂತ್ರಗಳು ಯಾವುದು ಎಂಬುದು ಮಾತ್ರ ಗುಟ್ಟು ಗುಟ್ಟು. 

ಸದ್ಗುರು ಜಗ್ಗಿ ವಾಸುದೇವ್ ಪ್ರೀತಿಯ ವಿಜಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು..
 

Follow Us:
Download App:
  • android
  • ios