ಚಂದ್ರಗ್ರಹಣದಂದು ಪರಿಘ ಯೋಗ; ಈ ನಾಲ್ಕು ರಾಶಿಯವರಿಗೆ ಹೆಚ್ಚಲಿದೆ ಕಷ್ಟನಷ್ಟ
ಈ ಬಾರಿ ಚಂದ್ರಗ್ರಹಣವು ಪರಿಘ ಯೋಗದಲ್ಲಿ ಸಂಭವಿಸುತ್ತಿದೆ. 80 ವರ್ಷದ ನಂತರ ರೂಪುಗೊಂಡ ಈ ಸಂಯೋಜನೆಯಿಂದಾಗಿ ಆರು ರಾಶಿಚಕ್ರ ಚಿಹ್ನೆಗಳ ಜನರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.
ಜ್ಯೋತಿಷಿಗಳ ಪ್ರಕಾರ, ಈ ಚಂದ್ರಗ್ರಹಣ(lunar eclipse)ವು ವಿಶಾಖ ನಕ್ಷತ್ರ ಮತ್ತು ವೃಶ್ಚಿಕ ರಾಶಿಯಲ್ಲಿ ವೈಶಾಖ ಪೂರ್ಣಿಮೆ(Vaishakh Purnima)ಯಂದು ಸಂಭವಿಸುತ್ತಿದೆ. ಈ ದಿನ ಬುದ್ಧ ಪೂರ್ಣಿಮೆಯೂ ನಡೆಯುತ್ತದೆ. ಕೆಲ ರಾಶಿಚಕ್ರ ಚಿಹ್ನೆಗಳಿಗೆ ವರ್ಷದ ಮೊದಲ ಚಂದ್ರಗ್ರಹಣವು ಭಾರೀ ಪ್ರಮಾಣದ ನಕಾರಾತ್ಮಕ ಪರಿಣಾಮ ಬೀರುತ್ತದೆ.
80 ವರ್ಷಗಳ ನಂತರ ಅಪರೂಪದ ಸಂಯೋಜನೆ
ಈ ಬಾರಿ ಮೇ 16ರಂದು ಬುದ್ಧ ಪೂರ್ಣಿಮೆ ಮತ್ತು ಚಂದ್ರಗ್ರಹಣ ಎರಡೂ ಪರಿಘ ಯೋಗದಲ್ಲಿ ಸಂಭವಿಸುತ್ತವೆ. 80 ವರ್ಷಗಳ ನಂತರ ಇಂಥ ಗ್ರಹಗಳು ಮತ್ತು ನಕ್ಷತ್ರಪುಂಜಗಳ(constellations) ಸಂಯೋಜನೆಯ ಸೃಷ್ಟಿಯಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. 80 ವರ್ಷದ ನಂತರ ರೂಪುಗೊಂಡ ಈ ಸಂಯೋಜನೆಯಿಂದಾಗಿ ಆರು ರಾಶಿಚಕ್ರ ಚಿಹ್ನೆಗಳ ಜನರು ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ಅವು ಯಾವೆಲ್ಲ, ಏನು ಪರಿಣಾಮ ನೋಡೋಣ.
ಕರ್ಕಾಟಕ(Cancer): ಕರ್ಕಾಟಕ ರಾಶಿಯ ಜನರು ವರ್ಷದ ಮೊದಲ ಚಂದ್ರಗ್ರಹಣ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಂಗಾಲಾಗಿಸಬಹುದು. ಈ ಗ್ರಹಣವು ವೃತ್ತಿ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಹಣವನ್ನು ಉಳಿಸುವಲ್ಲಿ ತೊಂದರೆ ಉಂಟಾಗಬಹುದು. ಸಾಧ್ಯವಾದಷ್ಟು ಉಳಿತಾಯದ ಕಡೆ ಗಮನ ಹರಿಸಿ. ಸಾಲ ಮಾಡದಿರಲು ಪ್ರಯತ್ನಿಸಿ.
Buddha Purnima: ಬುದ್ಧ ಮಾನವತೆಯ ಮಂದಹಾಸ ತೊರೆದು ಹೋದವನು ತೋರಿದ ದಾರಿ
ತುಲಾ(Libra): ತುಲಾ ರಾಶಿಯ ಜನರು ವರ್ಷದ ಮೊದಲ ಚಂದ್ರಗ್ರಹಣದಂದು ಬಹಳ ಜಾಗರೂಕರಾಗಿರಬೇಕು. ನಿಮಗಾಗಿ ಅತಿಯಾದ ಉತ್ಸಾಹವು ಹಾನಿಕಾರಕವೆಂದು ಸಾಬೀತಾಗಬಹುದು. ಯಾರನ್ನಾದರೂ ಕುರುಡಾಗಿ ನಂಬುವುದು ನಿಮಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ನಿಮ್ಮ ಮಾತಿನಲ್ಲಿ ತಾಳ್ಮೆಯಿಂದಿರಿ. ಯಾರದಾದರೂ ಬಗ್ಗೆ ನಕಾರಾತ್ಮಕವಾಗಿ ಮಾತಾಡುವ ಮೊದಲು ಯೋಚಿಸಿ. ಹಾಗೆ ಮಾತಾಡದೆ ಉಳಿಯುವುದು ಉತ್ತಮೋತ್ತಮ.
ಕುಂಭ ರಾಶಿ(Aquarius): ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಬಹುದು. ನ್ಯಾಯಾಲಯದ ಪ್ರಕರಣಗಳಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಇಮೇಜ್ ಹಾಳಾಗಬಹುದು. ಮಾತಿನ ಮೇಲೆ ಸಂಯಮವನ್ನು ಅನುಸರಿಸಲು ವಿಫಲವಾದರೆ ದೊಡ್ಡ ಹಾನಿ ಉಂಟಾಗುತ್ತದೆ. ನೀವು ಮಾನಸಿಕ ಒತ್ತಡಕ್ಕೆ ಬಲಿಯಾಗಬಹುದು. ಹಣಕಾಸಿನ ತೊಂದರೆಗಳು ನಿಮ್ಮನ್ನು ಸುತ್ತುವರೆಯಲಿವೆ.
ಮಕರ ರಾಶಿ(Capricorn): ಈ ಗ್ರಹಣವು ಮಕರ ರಾಶಿಯವರಿಗೆ ಒಳ್ಳೆಯದಲ್ಲ. ನಿಮ್ಮ ರಾಶಿಯ ಅಧಿಪತಿ ಶನಿದೇವ. ಈ ರಾಶಿಯವರು ಶನಿ ಸಾಡೇಸಾತಿಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಗ್ರಹಣದ ಅವಧಿಯಲ್ಲಿ ನೀವು ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು.
Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?
ಇನ್ನು ಇದೇ ಗ್ರಹಣವು 2 ರಾಶಿಗಳಿಗೆ ಹೆಚ್ಚು ಲಾಭಗಳನ್ನು ತಂದುಕೊಡಲಿದೆ. ಅವೆಂದರೆ,
ಮೇಷ ರಾಶಿ (Aries)
ವರ್ಷದ ಮೊದಲ ಚಂದ್ರ ಗ್ರಹಣವು ಮೇಷ ರಾಶಿಯ ಜನರಿಗೆ ಮಂಗಳಕರ ಎಂದು ಹೇಳಲಾಗಿದೆ. ಈ ರಾಶಿಯ ವ್ಯಕ್ತಿಗಳಿಗೆ ಧನ ಲಾಭ ಉಂಟಾಗುವುದಲ್ಲದೆ, ಸಮಾಜದಲ್ಲಿ ಗೌರವಯುತ ಸ್ಥಾನಮಾನವನ್ನು ಪಡೆಯುತ್ತಾರೆ. ಇವರು ಯಾವುದೇ ಕೆಲಸ ಮಾಡಲಿ, ಅದರಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಗಳಿಸಲಿದ್ದಾರೆ.
ಸಿಂಹ ರಾಶಿ (Leo)
ಸಿಂಹ ರಾಶಿಯ ವ್ಯಕ್ತಿಗಳಿಗೆ ಈ ಗ್ರಹಣವು ಶುಭ ಫಲವನ್ನು ಹೊತ್ತು ತರಲಿದೆ. ಈ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗಲಿದ್ದು, ಅವರು ದೃಢ ಮನಸ್ಸಿನಿಂದ ಹೆಜ್ಜೆಯನ್ನಿಡಬೇಕು. ಇವರು ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಹೂಡಿಕೆ ಮಾಡಲು ಸಹ ಇದು ಸಕಾಲ. ಇವರು ಯಾವುದೇ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸು ಮತ್ತು ಲಾಭ ಸಿಗುತ್ತದೆ. ಇನ್ನು ಸಂಗಾತಿ ಜೊತೆಗೆ ಇವರ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ.