Asianet Suvarna News Asianet Suvarna News

Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?

ಮೇ 16ರಂದು ಚಂದ್ರ ಗ್ರಹಣ. ಈ ಚಂದ್ರಗ್ರಹಣ  ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಅರಿತಿದ್ದೀರಾ?

Dos and Donts effect of first chandra grahan of 2022 SKR
Author
Bangalore, First Published May 9, 2022, 2:20 PM IST

ಮೊನ್ನೆಯಷ್ಟೇ ಸೂರ್ಯ ಗ್ರಹಣ ಕಳೆದಿದೆ. ಅಷ್ಟರಲ್ಲಾಗಲೇ ಜಗತ್ತು ಈ ವರ್ಷದ ಮೊದಲ ಚಂದ್ರಗ್ರಹಣ(Lunar Eclipse)ಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಹೌದು, ಇದೇ ಮೇ 16ರ ವೈಶಾಖಾ ಪೂರ್ಣಿಮೆಯಂದು ಚಂದ್ರಗ್ರಹಣವೂ ಘಟಿಸುತ್ತಿದೆ. ಇದೊಂದು ಸಂಪೂರ್ಣ ಚಂದ್ರಗ್ರಹಣವಾಗಿದೆ. ಇನ್ನು ಈ ವರ್ಷದ ಎರಡನೆಯ ಹಾಗೂ ಕಡೆಯ ಚಂದ್ರಗ್ರಹಣವು ನವೆಂಬರ್ 8ಕ್ಕೆ ಜರುಗುತ್ತಿದ್ದು ಅದೂ ಕೂಡಾ ಸಂಪೂರ್ಣ ಗ್ರಹಣವಾಗಿರಲಿದೆ. 

ಸೂರ್ಯ, ಭೂಮಿ, ಚಂದ್ರರು ಸಮಾನ ರೇಖೆಯಲ್ಲಿ ಬಂದಾಗ ಸೂರ್ಯನ ಬೆಳಕು ನೇರವಾಗಿ ಚಂದ್ರನಿಗೆ ತಾಕಲಾರದೆ, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಬಾರಿ ಚಂದ್ರಗ್ರಹಣವು ಮೇ 15 ರಂದು ರಾತ್ರಿ 10.28  ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ.  

ವೈಶಾಖ ಪೂರ್ಣಿಮಾ(Vaishakh Purnima) ದಿನಾಂಕ 2022
ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಮೇ 15 ರ ಭಾನುವಾರದಂದು ಮಧ್ಯಾಹ್ನ 12.45 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮೇ 16ರ ಸೋಮವಾರದಂದು ಬೆಳಿಗ್ಗೆ 09:43 ಕ್ಕೆ ಕೊನೆಗೊಳ್ಳುತ್ತದೆ. ಎಲ್ಲೆಡೆ ಮೇ 16ರಂದು ವೈಶಾಖ ಪೂರ್ಣಿಮಾ ಆಚರಿಸಲಾಗುವುದು.

Chandra Grahan 2022: ಈ ವರ್ಷ ಎರಡೆರಡು ಚಂದ್ರಗ್ರಹಣ

ಈ ಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಸೂತಕ ಸಮಯವೂ ಇರುವುದಿಲ್ಲ. ಆದರೆ ಗ್ರಹಣದ ಪರಿಣಾಮವು ಖಂಡಿತವಾಗಿಯೂ ಜಗತ್ತಿನಾದ್ಯಂತ ಜನರ ಜೀವನದ ಮೇಲಾಗಲಿದೆ. ಈ ಸಮಯದಲ್ಲಿ ನಾವು ಮಾಡಬೇಕಾದುದೇನು ಮತ್ತು ಮಾಡಬಾರದ್ದು ಏನು, ಅದರ ಪರಿಣಾಮಗಳ ಬಗ್ಗೆ ನಿಮಗೆ ಅರಿವು ಮೂಡಿಸಲು ನಾವು ಇಲ್ಲಿದ್ದೇವೆ.

ಚಂದ್ರ ಗ್ರಹಣ ಸಂದರ್ಭದಲ್ಲಿ ಮಾಡಬೇಕಾದ್ದು
ವಿಜ್ಞಾನಿಗಳ ಪ್ರಕಾರ, ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ, ಚಂದ್ರ ಗ್ರಹಣವನ್ನು ನೇರವಾಗಿ ಕಣ್ಣುಗಳ ಮೂಲಕ ವೀಕ್ಷಿಸುವುದು ಸುರಕ್ಷಿತವಾಗಿದೆ. ಹಾಗಾಗಿ ಚಂದ್ರಗ್ರಹಣ ವೀಕ್ಷಿಸಲು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಇದು ಭಾರತದಲ್ಲಿ ಗೋಚರವಾಗದ ಕಾರಣ ಇದನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದಷ್ಟೇ  ಈ ಬಾರಿ ನಮ್ಮ ಪಾಲಿಗೆ ಸಾಧ್ಯವಾಗುವುದು. 
ಹಿಂದೂ ಪುರಾಣಗಳ ಪ್ರಕಾರ, ಜನರು ಚಂದ್ರಗ್ರಹಣದ ಸಮಯದಲ್ಲಿ ಪವಿತ್ರ ಮಂತ್ರಗಳನ್ನು ಪಠಿಸಬೇಕು.
ಗ್ರಹಣ ಸಂದರ್ಭದಲ್ಲಿ ಮೊಸರು, ಹಿಟ್ಟು ಸೇರಿದಂತೆ ಮರುದಿನಕ್ಕಾಗಿ ಇಟ್ಟ ಆಹಾರ ಪದಾರ್ಥಗಳಲ್ಲಿ ಜನರು ತುಳಸಿ (ತುಳಸಿ) ಎಲೆಯನ್ನು ಹಾಕಿಡಬೇಕು.
ಗ್ರಹಣ ಸಂದರ್ಭದಲ್ಲಿ ಮಾಡುವ ದಾನಕ್ಕೆ ವಿಶೇಷ ಫಲಗಳಿವೆ. ಅದರಲ್ಲೂ ಹುಣ್ಣಿಮೆಯ ದಿನ ಗ್ರಹಣ ಕಾಲದಲ್ಲಿ ದಾನ ಮಾಡುವುದರಿಂದ ಮತ್ತಷ್ಟು ಹೆಚ್ಚಿನ ಪುಣ್ಯ ಫಲಗಳನ್ನು ಪಡೆಯಬಹುದಾಗಿದೆ. 

Lunar Eclipse 2022: ಈ ಎರಡು ರಾಶಿಗಳ ಜನರು ಎಚ್ಚರ, ಕಟ್ಟೆಚ್ಚರ!

ಮಾಡಬಾರದ್ದೇನು?
ಚಂದ್ರ ಗ್ರಹಣವು ಸೂರ್ಯ ಗ್ರಹಣಕ್ಕಿಂತ ಸುರಕ್ಷಿತವೇ ಆದರೂ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಗ್ರಹಣ ಸಂದರ್ಭದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು.
ಚಂದ್ರ ಗ್ರಹಣದ ಸಮಯದಲ್ಲಿ ಜನರು ತಮ್ಮ ಉಗುರು ಅಥವಾ ಕೂದಲನ್ನು ಕತ್ತರಿಸಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ.
ಗ್ರಹಣದ ಸಮಯದಲ್ಲಿ ತಿನ್ನುವುದು ಸೂಕ್ತವಲ್ಲ. ಗ್ರಹಣ ಆರಂಭವಾಗುವ ಎರಡು ಗಂಟೆಗಳ ಮುಂಚೆಯೇ ಊಟ ಮುಗಿಸಬೇಕು. ಗ್ರಹಣ ಮುಗಿದ ಎರಡು ಗಂಟೆಗಳ ಬಳಿಕ ಮತ್ತೆ ಆಹಾರ ಸೇವಿಸಬಹುದು. ಆದರೆ, ಆಗಲೂ ತಾಜಾವಾಗಿ ತಯಾರಿಸಿದ ಬಿಸಿಯಾದ ಆಹಾರವನ್ನೇ ಸೇವಿಸಬೇಕು. 
ಗ್ರಹಣ ಸಂದರ್ಭದಲ್ಲಿ ನೀರು ಕುಡಿಯುವುದು ಕೂಡಾ ಒಳ್ಳೆಯದಲ್ಲ. ಗ್ರಹಣದ ಬಳಿಕ ನೀರನ್ನು ಕಾಯಿಸಿ ಆರಿಸಿ ಸೇವಿಸಬೇಕು. 
ಗ್ರಹಣ ಸಂದರ್ಭದಲ್ಲಿ ಚಾಕು, ಕತ್ತಿ, ಸೂಜಿ ಸೇರಿದಂತೆ ಯಾವುದೇ ಇತರ ಮೊನಚಾದ ಮತ್ತು ಚೂಪಾದ ಉಪಕರಣಗಳನ್ನು ಬಳಸಬಾರದು. 

Follow Us:
Download App:
  • android
  • ios