Asianet Suvarna News Asianet Suvarna News

Sun transit : ಸೂರ್ಯ ಗ್ರಹ ರಾಶಿ ಪರಿವರ್ತನೆ ಈ ರಾಶಿಗಳಿಗೆ ಸುಯೋಗ

ಇದೇ ಮೇ 15ರಂದು ಸೂರ್ಯ ಗ್ರಹವು ವೃಷಭ ರಾಶಿಗೆ ಪ್ರವೇಶಿಸಲಿದೆ. ಈ ಗ್ರಹದ ರಾಶಿ  ಪರಿವರ್ತನೆಯಿಂದ ಹಲವು ರಾಶಿಯವರಿಗೆ ಶುಭ ಯೋಗ ಕೂಡಿ ಬರಲಿದೆ. ಹಾಗಾದರೆ ಆ ರಾಶಿ ಚಕ್ರಗಳು ಯಾವವು ಎಂಬುದನ್ನು ತಿಳಿಯೋಣ ....

Sun transit will give luck to these zodiac sign
Author
Bangalore, First Published May 13, 2022, 6:32 PM IST

ಗ್ರಹಗಳ (Planet) ರಾಶಿ ಪರಿವರ್ತನೆಯ (Transit) ವ್ಯಕ್ತಿಯ ಜೀವನದ (Life) ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಗ್ರಹಗಳು ತಮ್ಮ ನಿಶ್ಚಿತ ಸಮಯದಲ್ಲಿ (Time) ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಗೋಚಾರ ಆಗುವುದರಿಂದ ವ್ಯಕ್ತಿಗೆ ಶುಭ ಮತ್ತು ಅಶುಭ ಫಲಗಳು ಪ್ರಾಪ್ತವಾಗುತ್ತವೆ. ಇದೇ ಮೇ 15ಕ್ಕೆ ಸೂರ್ಯ ಗ್ರಹವು ವೃಷಭ ರಾಶಿಗೆ (Taurus) ಪ್ರವೇಶಿಸಲಿದೆ. ಒಂದು ತಿಂಗಳುಗಳ ಕಾಲ ಒಂದು ರಾಶಿಯಲ್ಲಿ ಸ್ಥಿತವಾಗಿರುವ ಸೂರ್ಯ ಗ್ರಹವು (Sun Planet) ಎಲ್ಲ ರಾಶಿಗಳ ಮೇಲೆ ಶುಭಾಶುಭ ಪರಿಣಾಮವನ್ನು ಉಂಟುಮಾಡುತ್ತದೆ.

ಸೂರ್ಯ ಗ್ರಹವು ಪ್ರತಿಷ್ಠೆ, ಗೌರವ, ಉದ್ಯೋಗ (Job) ಮತ್ತು ಪದವಿ ಇವುಗಳ ಕಾರಕ ಗ್ರಹವಾಗಿದೆ. ವ್ಯಕ್ತಿಯ ಜಾತಕದಲ್ಲಿ ಸೂರ್ಯ ಗ್ರಹವು ಉಚ್ಛ ಸ್ಥಿತಿಯಲ್ಲಿದ್ದರೆ ಸಫಲತೆ, ಪ್ರಸಿದ್ಧಿ (Fame) ಮತ್ತು ಪ್ರಶಂಸೆಗಳು ಸಿಗುತ್ತವೆ. ಅದೇ ನೀಚ ಸ್ಥಿತಿಯಲ್ಲಿದ್ದರೆ ಉದ್ಯೋಗ ಮತ್ತು ಯಶಸ್ಸು (Success) ಪಡೆಯುವಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾದರೆ ಸೂರ್ಯಗ್ರಹದ ರಾಶಿ ಪರಿವರ್ತನೆಯಿಂದ ಯಾವ್ಯಾವ ರಾಶಿಗಳಿಗೆ ಶುಭ ಫಲ ದೊರೆಯಲಿದೆ ಎಂಬುದನ್ನು ನೋಡೋಣ....

ಮೇಷ ರಾಶಿ (Aries)
ಸೂರ್ಯಗ್ರಹದ ಈ ಗೋಚಾರದಿಂದ ಮೇಷ ರಾಶಿಯವರಿಗೆ ಉತ್ತಮ ಲಾಭ (Profit) ಉಂಟಾಗಲಿದೆ. ಸೂರ್ಯನು ಈ ರಾಶಿಯ ಪಂಚಮ ಭಾವದ ಅಧಿಪತಿಯಾಗಿದ್ದಾನೆ. ಹಾಗಾಗಿ ಈ ಗೋಚಾರದಿಂದ ಧನಸಂಪತ್ತು ಮತ್ತು ಕುಟುಂಬದ ವಿಷಯದಲ್ಲಿ ಉತ್ತಮ ಪರಿಣಾಮಗಳು ಉಂಟಾಗುತ್ತವೆ. ಒಂದಕ್ಕಿಂತ ಹೆಚ್ಚಿನ ಮೂಲಗಳಿಂದ ಕೆಲಸ ಮತ್ತು ಸಂಪಾದನೆಯ ಅವಕಾಶ ಉಂಟಾಗುತ್ತದೆ. ಇದರಿಂದ ಆರ್ಥಿಕವಾಗಿ ಹೆಚ್ಚಿನ  ಸಬಲತೆಯನ್ನು ಪಡೆಯಬಹುದಾಗಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಬಹುದಾಗಿದೆ. ಈ ಅವಧಿಯಲ್ಲಿ ಕರಿಯರ್ ಪ್ರೊಫೈಲ್ (Career Profile) ಮತ್ತಷ್ಟು ಬಲವಾಗುತ್ತದೆ.

ಇದನ್ನು ಓದಿ : Vastu Tips: ಆರ್ಥಿಕ ಮುಗ್ಗಟ್ಟು, ಪ್ರಗತಿ ಕಾಣದಿರಲು ಇವೇ ಕಾರಣ!

ವೃಷಭ ರಾಶಿ (Taurus)
ಈ ರಾಶಿಯ ಚತುರ್ಥ ಭಾವದಲ್ಲಿ ಸೂರ್ಯ ಗೋಚರವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Examination) ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ (Students) ಈ ಅವಧಿಯು ಅತ್ಯಂತ ಸಫಲತೆಯನ್ನು ತಂದುಕೊಡುತ್ತದೆ. ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಶಂಸೆಯನ್ನು (Praise) ಪಡೆಯುವುದಲ್ಲದೆ, ಹೊಸ ವ್ಯಾಪಾರವನ್ನು (Business) ಆರಂಭಿಸುವವರಿಗೆ ಇದು ಅನುಕೂಲಕರ ಸಮಯವಾಗಿದೆ. ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಈ ಸಮಯದಲ್ಲಿ ಆಹ್ವಾನ ಬರುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆಯಾಗಿ ಸೂರ್ಯ ಗ್ರಹಣದ ಗೋಚಾರ ಈ ರಾಶಿಯವರಿಗೆ ಯಶಸ್ಸನ್ನು ತಂದು ಕೊಡುತ್ತದೆ.

ಸಿಂಹ ರಾಶಿ (Leo)  
ಸಿಂಹ ರಾಶಿಯ ಅಧಿಪತಿ ದೇವರು ಸೂರ್ಯ ಗ್ರಹವಾಗಿದೆ. ಹಾಗಾಗಿ ಈ ಸೂರ್ಯ ಗ್ರಹಣದ ಗೋಚಾರದಿಂದ ಉತ್ತಮ ಫಲಗಳು ಉಂಟಾಗುತ್ತವೆ. ಉದ್ಯೋಗದಲ್ಲಿ (Job) ಹೆಚ್ಚಿನ ಪ್ರಶಂಸೆ ದೊರಕುವುದಲ್ಲದೆ ನಿರೀಕ್ಷಿತ ಪದವಿ ಲಭ್ಯವಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಿರತೆ ಮತ್ತು ಉತ್ತಮ ಬೆಳವಣಿಗೆಗಳು ಉಂಟಾಗುತ್ತದೆ. ಸಿಂಹ ರಾಶಿಯವರ ಎಲ್ಲ ಕನಸುಗಳು ಈಡೇರುವ ಅವಧಿ ಇದಾಗಿದೆ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ (Relationship) ಹೊಂದುವುದರಿಂದ ಲಾಭ ಉಂಟಾಗುತ್ತದೆ.

ವೃಶ್ಚಿಕ ರಾಶಿ (Scorpio)
ಸೂರ್ಯ ಗ್ರಹದ ಗೋಚಾರವು ರಾಶಿಯವರಿಗೆ ಒಳಿತನ್ನು ಮಾಡಲಿದೆ. ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಲಾಭಗಳು ಉಂಟಾಗಲಿವೆ. ಆರ್ಥಿಕ ಸಬಲತೆ ಉಂಟಾಗುವುದಲ್ಲದೆ ಉನ್ನತ ಪದವಿಯನ್ನು ಸಹ ಸಿಗುವ ಯೋಗವಿದೆ. ಪಾಲುದಾರಿಕೆ (Partnership) ವ್ಯವಹಾರ ಮಾಡುವ ಅವಕಾಶಗಳು ಲಭ್ಯವಾಗುತ್ತವೆ. ಈ ಮೂಲಕ ಲಾಭ ಪಡೆದಿರುವ ಎಲ್ಲ ಮಾರ್ಗಗಳು ಸಿಗುತ್ತವೆ.

ಇದನ್ನು ಓದಿ : ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

ಕುಂಭ ರಾಶಿ (Aquarius)
ಈ ರಾಶಿಯ ಚತುರ್ಥ ಭಾವದಲ್ಲಿ ಗೋಚರಿಸುವ ಸೂರ್ಯ ದೇವನು ಎಲ್ಲ ರೀತಿಯಲ್ಲೂ ಒಳಿತನ್ನು ಮಾಡುತ್ತಾನೆ. ಈ ಸಮಯದಲ್ಲಿ ಕುಟುಂಬದವರಿಗಾಗಿ ವಾಹನ (Vehicles) ಖರೀದಿಸುವ ಯೋಗವೂ ಇದೆ. ನೃತ್ಯ (Dance) ಕ್ಷೇತ್ರದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಈ ಅವಧಿಯಲ್ಲಿ  ಮಾಡುವ ಕೆಲಸಗಳಿಗೆ ಕುಟುಂಬಸ್ಥರ ಪೂರ್ಣ ಸಹಕಾರ (Cooperation) ಮತ್ತು ಬೆಂಬಲ ದೊರೆಯಲಿದೆ.  

Follow Us:
Download App:
  • android
  • ios