Asianet Suvarna News Asianet Suvarna News

Dasara 2022: ವಿಜಯದಶಮಿ ಬಗ್ಗೆ ನೀವು ತಿಳಿಯಬೇಕಾದ 10 ಸಂಗತಿಗಳು

ವಿಜಯದಶಮಿ ಅಥವಾ ದಸರಾ ಭಾರತಕ್ಕೆ ಬಹಳ ದೊಡ್ಡ ಹಬ್ಬ. ಈ ದಿನದ ಕುರಿತ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ..

Ten things you should know about the festival of Dussehra skr
Author
First Published Oct 3, 2022, 5:41 PM IST

ವಿಜಯದಶಮಿ ಅಥವಾ ದಸರಾ, ವಾಸ್ತವವಾಗಿ ಭಾರತದಲ್ಲಿ ಎರಡು ಆಚರಣೆಗಳನ್ನು ಗುರುತಿಸುತ್ತದೆ. ಮೊದಲನೆಯದು ರಾವಣನ ಮೇಲೆ ರಾಮನ ವಿಜಯ ಮತ್ತು ಎರಡನೆಯದು ರಾಕ್ಷಸನ ಮೇಲೆ ದುರ್ಗಾ ದೇವಿಯ ವಿಜಯ. ವಿಜಯದಶಮಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು ಇಲ್ಲಿವೆ:

1. ಇದೇ ದಿನದಂದು ಭಗವಾನ್ ರಾಮನು ಒಂಬತ್ತು ದಿನಗಳ ಯುದ್ಧದ ನಂತರ ರಾವಣ(Ravan)ನನ್ನು ಸೋಲಿಸಿದನು. ಇದನ್ನು ದಸರಾ ಎಂದೂ ಕರೆಯಲಾಗುತ್ತದೆ. ಇದು ಸಂಸ್ಕೃತ ಪದವಾಗಿದ್ದು, 'ಸೂರ್ಯನು ಉದಯಿಸುವುದಿಲ್ಲ' ಎಂದರ್ಥ. ರಾಮನು ರಾವಣನನ್ನು ಸೋಲಿಸದಿದ್ದರೆ ಸೂರ್ಯನು ಉದಯಿಸುತ್ತಿರಲಿಲ್ಲ ಎಂಬ ಪುರಾಣ ನಂಬಿಕೆ ಇದೆ. ದಸರಾದ ಮತ್ತೊಂದು ಅರ್ಥ ದಸ್(ಹತ್ತು) ಮತ್ತು ಹರಾ(ಸೋಲು). 10 ತಲೆಯ ರಾವಣನ ಸೋಲು. 

2. ಭಾರತೀಯರು ದಸರಾದಂದು ರಾವಣನ ಪ್ರತಿಕೃತಿಯನ್ನು ಸುಡುತ್ತಾರೆ. ರಾವಣನ ಪ್ರತಿಕೃತಿ ದಹನವು ಒಬ್ಬರ ಪಾಪದ ಆತ್ಮದ ಶುದ್ಧೀಕರಣದ ಸಂಕೇತವಾಗಿದೆ. ಈ 10 ತಲೆಗಳು ಅಹಂಕಾರ , ಕ್ರೌರ್ಯ, ಅನ್ಯಾಯ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ, ಸ್ವಾರ್ಥ ಮುಂತಾದ 10 ಕೆಟ್ಟ ಗುಣಗಳನ್ನು ಪ್ರತಿನಿಧಿಸುತ್ತವೆ. 

3. ವಿಜಯದಶಮಿ ಎರಡು ಪದಗಳ ಸಂಯೋಜನೆಯಿಂದ ಹುಟ್ಟಿಕೊಂಡಿದೆ: ವಿಜಯ ಮತ್ತು ದಶಮಿ ಎಂದರೆ ಚಂದ್ರನ ಕ್ಯಾಲೆಂಡರ್ನ 10ನೇ ದಿನ. ಇದು ದುರ್ಗೆಯು ರಾಕ್ಷಸ ಮಹಿಷಾಸುರನನ್ನು ಸೋಲಿಸಿದ ದಿನವನ್ನು ಸೂಚಿಸುತ್ತದೆ.

ಉದ್ದಿನ ಬೇಳೆಯಿಂದಲೂ ಬದಲಿಸಬಹುದು ಲಕ್, ಈ ಟ್ರಿಕ್ಸ್ ಫಾಲೋ ಮಾಡಿ!

4. ವಿಜಯದಶಮಿ ದುರ್ಗಾ ಪೂಜೆಯ ಕೊನೆಯ ದಿನ. ದುರ್ಗಾ ಪೂಜೆಯು ತನ್ನ ಮಕ್ಕಳಾದ ಕಾರ್ತಿಕಾ ಮತ್ತು ಗಣೇಶನೊಂದಿಗೆ ತನ್ನ ತಂದೆಯ ಮನೆಗೆ ದುರ್ಗಾದೇವಿಯ ವಾರ್ಷಿಕ ಭೇಟಿಯನ್ನು ಸೂಚಿಸುತ್ತದೆ. ದಶಮಿಯಂದು, ಅವಳು ತನ್ನ ಗಂಡನ ಮನೆಗೆ ಹಿಂದಿರುಗುತ್ತಾಳೆ.

Ten things you should know about the festival of Dussehra skr

5. ಈ ದಿನವು ಋತುವಿನ ಬದಲಾವಣೆಯನ್ನು ಸಹ ಸೂಚಿಸುತ್ತದೆ. ಬೇಸಿಗೆ ಮತ್ತು ಮಳೆಗಾಲದ ನಂತರ, ಇದು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ರೈತರು ಕೂಡ ದಸರಾ ನಂತರ ಖಾರಿಫ್ ಬೆಳೆಯನ್ನು ಕಟಾವು ಮಾಡುತ್ತಾರೆ.

6. ಬೌದ್ಧರು ಈ ದಿನವನ್ನು ಅಶೋಕ ವಿಜಯದಶಮಿ ಎಂದು ಆಚರಿಸುತ್ತಾರೆ. ಏಕೆಂದರೆ ಮೌರ್ಯ ರಾಜ ಅಶೋಕನು ಈ ದಿನದಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡನು ಎಂದು ನಂಬಲಾಗಿದೆ. 1956ರಲ್ಲಿ ಡಾ ಭೀಮ್ ರಾವ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವೂ ಇದೇ ಆಗಿದೆ. 

7. 17ನೇ ಶತಮಾನದಲ್ಲಿ ಮೈಸೂರು ರಾಜರ ಆದೇಶದ ಮೇರೆಗೆ ದಸರಾದ ಮೊದಲ ಭವ್ಯವಾದ ಆಚರಣೆಯು ನಡೆಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಭಾರತದಾದ್ಯಂತ ಈ ಹಬ್ಬವನ್ನು ಅತ್ಯಂತ ಶಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.

8. ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ವಿಜಯದಶಮಿಯಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸುತ್ತದೆ. ಇದೇ ದಿನದಂದು RSSನ ಮೊದಲ ಸಭೆಯು 1925ರಲ್ಲಿ ನಾಗಪುರದಲ್ಲಿ ನಡೆಯಿತು.

9. ವಿಜಯದಶಮಿ ಅಥವಾ ದಸರಾವನ್ನು ಭಾರತದಲ್ಲಿ ಮಾತ್ರ ಆಚರಿಸಲಾಗುವುದಿಲ್ಲ. ನೆರೆಯ ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲಿಯೂ ಇದನ್ನು ಆಚರಿಸಲಾಗುತ್ತದೆ. ಇದು ಮಲೇಷ್ಯಾದಲ್ಲಿ ಧಾರ್ಮಿಕ ರಜಾದಿನವಾಗಿದೆ.

Vijayadashami 2022: ಈ ದಸರಾದಂದು ಈ ನಾಲ್ಕು ದುರಭ್ಯಾಸಕ್ಕೆ ಇತಿ ಹಾಡಿ

10. ಪಾಂಡವರು ವನವಾಸಕ್ಕೆ ತೆರಳುವಾಗ ತಮ್ಮ ಆಯುಧಗಳನ್ನು ಶಮಿ ವೃಕ್ಷದ ಕೆಳಗೆ ಬಚ್ಚಿಟ್ಟಿದ್ದರು. ನವರಾತ್ರಿಯ ಆಯುಧ ಪೂಜೆಯಂದು ಅವರು ತಮ್ಮ ವನವಾಸ ಕೊನೆಗೊಳಿಸಿ, ಬಚ್ಚಿಟ್ಟ ಆಯುಧಗಳನ್ನು ತೆಗೆದು ಪೂಜೆ ಮಾಡಿದರು ಎನ್ನಲಾಗಿದೆ. ಇಂದಿಗೂ ಈ ದಿನ ಆಯುಧ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios