ಬರೋಬ್ಬರಿ 35,000 ರೂಪಾಯಿಗೆ ಹರಾಜಾಯ್ತು ದೇವರ ಒಂದೇಒಂದು ನಿಂಬೆಹಣ್ಣು!
ತಮಿಳುನಾಡಿನ ದೇಗುಲವೊಂದರಲ್ಲಿ ದೇವರ ಎದುರು ಇರಿಸಿದ್ದ ಕೇವಲ ಒಂದೇ ನಿಂಬೇಹಣ್ಣಿಗೆ ಭಕ್ತರೊಬ್ಬರು ಬರೋಬ್ಬರಿ 35,000 ರು. ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ.
ಈರೋಡ್: ಸಾಮಾನ್ಯವಾಗಿ ಯಾವುದಾದರು ವಿಶೇಷ ವಸ್ತುಗಳನ್ನು ಹರಾಜಿನಲ್ಲಿ ಹೆಚ್ಚು ಹಣ ನೀಡಿ ಖರೀದಿ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ತಮಿಳುನಾಡಿನ ದೇಗುಲವೊಂದರಲ್ಲಿ ದೇವರ ಎದುರು ಇರಿಸಿದ್ದ ಕೇವಲ ಒಂದೇ ನಿಂಬೇಹಣ್ಣಿಗೆ ಭಕ್ತರೊಬ್ಬರು ಬರೋಬ್ಬರಿ 35,000 ರು. ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ.
ಈರೋಡ್‌ನಿಂದ 35 ಕಿಲೋಮೀಟರ್ ದೂರದಲ್ಲಿರುವ ಶಿವಗಿರಿ ಗ್ರಾಮದ ಪಳಪೂಸಾಯಿನ್ ದೇಗುಲದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಯಾವ ವ್ಯಕ್ತಿ ದೇವರ ಎದುರು ಪೂಜೆ ಮಾಡಿ ಇರಿಸಿದ್ದ ನಿಂಬೆಹಣ್ಣನ್ನು ಖರೀದಿ ಮಾಡುವರೋ, ಅವರಿಗೆ ಐಶ್ವರ್ಯ, ಒಳ್ಳೆಯ ಆರೋಗ್ಯ ಹಾಗೂ ಸನ್ಮಂಗಲವಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶಿವರಾತ್ರಿ ನಿಮಿತ್ತ ನಡೆದ ಹರಾಜು ಪ್ರಕ್ರಿಯೆಯಲ್ಲಿ 15 ಭಕ್ತರು ಭಾಗವಹಿಸಿದ್ದರು. ಅದರಲ್ಲೊಬ್ಬರು ದೇವರ ಎದುರು ಇಟ್ಟಿದ್ದ ನಿಂಬೆ ಹಣ್ಣನ್ನು 35,000 ರು. ನೀಡಿ ಖರೀದಿ ಮಾಡಿದ್ದಾರೆ.
ದೇಶದ ನನ್ನ ಕುಟುಂಬಗಳ ಶ್ರೇಯಸ್ಸಿಗೆ ಕಾಶಿ ವಿಶ್ವನಾಥನಲ್ಲಿ ಪ್ರಾರ್ಥನೆ: ಮೋದಿ
ವಾರಾಣಸಿ: ಕಾಶಿಯ ವಿಶ್ವನಾಥ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾನು ಭಾರತದ ‘ತಮ್ಮ ಕುಟುಂಬ’ಗಳ ಒಳಿತಿಗಾಗಿ ವಿಶ್ವನಾಥನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಇತ್ತೀಚೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ನೀಡಿದ್ದ ಪ್ರಧಾನಿ ಮೋದಿಗೆ ಕುಟುಂಬವೇ ಇಲ್ಲ ಎಂಬ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಮುಳುಗುತ್ತಿವೆ ಗಂಗೆಯ ತಟದಲ್ಲಿರುವ ಕಾಶಿ ಘಾಟ್‌ಗಳು: ಭೂವಿಜ್ಞಾನಿಗಳ ಸಂಶೋಧನಾ ವರದಿ
ಶನಿವಾರದ ತಮ್ಮ ಕಾಶಿ ಭೇಟಿ ಕುರಿತು ಭಾನುವಾರ ಟ್ವೀಟ್ ಮಾಡಿದ ಮೋದಿ ಅವರು,ಕಾಶಿ ವಿಶ್ವನಾಥನಲ್ಲಿ ಪ್ರತಿ ಬಾರಿ ಪ್ರಾರ್ಥನೆ ಸಲ್ಲಿಸಿದಾಗ ವಿಶಿಷ್ಟ ಹಾಗೂ ತೃಪ್ತಿ ಸಿಗುತ್ತದೆ. ಕಾಶಿಯಲ್ಲಿ ವಿಶೇಷವಾಗಿ ದೇಶದ ನನ್ನ ಕುಟುಂಬ ವರ್ಗಕ್ಕೆ ಒಳ್ಳೆಯ ಆರೋಗ್ಯ, ಸುಖ ಸಂತೋಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಮೋದಿ ಭೇಟಿ, ತ್ರಿಶೂಲ ಹಿಡಿದು ಹರ ಹರ ಮಹಾದೇವ್ ಎಂದ ಪ್ರಧಾನಿ