Asianet Suvarna News Asianet Suvarna News

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಮತ್ತು ಕೊಡಬಾರದು, ಇದರಿಂದ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ದಿನನಿತ್ಯ ನಾವು ಬಳಸುವ ಹಲವಾರು ವಸ್ತುಗಳು ಇದರಲ್ಲಿವೆ. ಅವು ಯಾವುವು ಎಂದು ತಿಳಿದುಕೊಂಡು ಆ ವಸ್ತುಗಳನ್ನು ಪಡೆಯದೆ ಇದ್ದರೆ ಒಳಿತಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

Taking these things from others is welcoming your unfortune
Author
Bangalore, First Published Jun 19, 2020, 5:07 PM IST | Last Updated Jun 19, 2020, 5:07 PM IST

ನಮ್ಮ ಹಿರಿಯರು ಕೆಲವು ನಿಯಮಗಳನ್ನು ಬಿಡದೇ ಆಚರಿಸುತ್ತಿದ್ದರು. ಹೂ ಕೊಯ್ಯುವುದು, ದೇವರ ಪೂಜೆ ಮಾಡುವುದು, ಭಜನೆ ಮಾಡುವುದು. ಭೋಜನದ ಸಮಯದಲ್ಲಿ ಮೌನವಾಗಿರುವುದು, ಉಪ್ಪನ್ನು ಕೈಯಿಂದ ಕೊಡದಿರುವುದು ಹೀಗೆ ಹತ್ತು ಹಲವು ಆಚರಣೆಗಳು ರೂಢಿಯಲ್ಲಿತ್ತು. ಬರುತ್ತಾ ಬರುತ್ತಾ ಆ ಆಚರಣೆಗಳೆಲ್ಲ ಮೌಢ್ಯವೆಂಬಂತೆ ಬಿಂಬಿತವಾಯಿತು ಮತ್ತು ಅವುಗಳ ಪಾಲಿಸುವವರೂ ಕಡಿಮೆಯಾದರು. ಇತ್ತೀಚೆಗೆ ಆ ಆಚರಣೆಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ, ಹಲವರಿಗೆ ಗೊತ್ತಿದ್ದರೂ ಪಾಲಿಸಲಾಗುತ್ತಿಲ್ಲ.

ಅದೇ ಹಲವು ನಿಯಮಗಳು ಈಗ ವಾಸ್ತು ಶಾಸ್ತ್ರದಲ್ಲಿದೆ ಎಂದು ತಿಳಿದ ಮೇಲೆ ಹಲವರು ಅವುಗಳನ್ನು ತಿಳಿದುಕೊಂಡು ಪಾಲಿಸುವತ್ತ ಹೆಜ್ಜೆಹಾಕಿದ್ದಾರೆ. ಮನೆಯಲ್ಲಿರುವ ಹಲವು ವಸ್ತುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ, ಮತ್ತೆ ಕೆಲವು ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ವೃದ್ಧಿಸುತ್ತದೆ. ಹಾಗೆಯೇ ಮನೆಯಲ್ಲಿ ಇಲ್ಲವೆಂದೋ, ಮುಜುಗರಕ್ಕೊ ಅಥವಾ ಯಾವುದೋ ಅನಿವಾರ್ಯತೆಗೆ ಸಿಕ್ಕಿ ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯುತ್ತೇವೆ. ಹಾಗೆ ಕೆಲವು ವಸ್ತುಗಳನ್ನು ಪಡೆದರೆ ಅಥವಾ ಕೊಟ್ಟರೆ ಅವುಗಳಿಂದ ದೌರ್ಭಾಗ್ಯ ಉಂಟಾಗುತ್ತದೆ. ನಕಾರಾತ್ಮಕ ಶಕ್ತಿಯು ಹೆಚ್ಚಿದಾಗ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅವುಗಳಿಂಗ ದೂರವಿರಬೇಕಾದರೆ, ಬೇರೆಯವರಿಂದ ಪಡೆಯಬಾರದ ಅಥವಾ ಬೇರೆಯವರಿಗೆ ಕೊಡಬಾರದ ಮಸ್ತುಗಳ ಬಗ್ಗೆ ತಿಳಿದುಕೊಳ್ಳಬೇಕು.

ಇದನ್ನು ಓದಿ: ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ! 

ಲೇಖನಿ ಕಹಾನಿ
ಪೆನ್ನು ಬರೆಯುವ ಸಾಧನ, ಇದನ್ನು ಕೊಟ್ಟು, ತೆಗೆದುಕೊಂಡರೆ ಏನಾಗುತ್ತದೆ ಎಂದು ಅನ್ನಿಸಬಹುದು. ಹೆಚ್ಚಿನವರು ಪೆನ್ನನ್ನು ಸಹಿ ಹಾಕಲು, ಅರ್ಜಿ ಹಾಕುವುದಕ್ಕೆ ಇತ್ಯಾದಿ ಹಲವು ಕೆಲಸಗಳಿಗೆ ಬೇರೆಯವರಿಂದ ಪಡೆದೇ ಉಪಯೋಗಿಸುವುದು ಆನಂತರ ಅದನ್ನು ಹಿಂತಿರುಗಿಸಲು ಮರೆಯುವುದು ಸರ್ವೇ ಸಾಮಾನ್ಯ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಬೇರೆಯವರಿಂದ ಪಡೆದ ಪೆನ್ನನ್ನು ತಕ್ಷಣವೇ ಹಿಂತಿರುಗಿಸಬೇಕು. ಹಾಗೆ ಮಾಡದಿದ್ದಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಆಸ್ತಿ ಖರೀದಿಯಂತ ವಿಚಾರಗಳಲ್ಲೂ ಇದರಿಂದ ತೊಂದರೆಯಾಗುತ್ತದೆ ಎಂದು ಹೇಳುತ್ತದೆ.

ವಸ್ತ್ರ ಧರಿಸುವಲ್ಲಿ ಇರಲಿ ಎಚ್ಚರ
ಬೇರೆಯವರ ಉಡುಗೆಯನ್ನು ಧರಿಸುವುದು ಮತ್ತು ಬೇರೆಯವರಿಗೆ ನಮ್ಮ ಉಡುಪನ್ನು ಧರಿಸಲು ಕೊಡುವುದು ಎರಡೂ ವಾಸ್ತು ಶಾಸ್ತ್ರದ ಪ್ರಕಾರ ನಿಷಿದ್ಧ. ಬೇರೆಯವರ ಬಟ್ಟೆ ಧರಿಸಿದಾಗ ಅವರ ನೆಗೆಟಿವ್ ಎನರ್ಜಿ ನಮ್ಮೊಳಗೆ ಸೇರಿಕೊಳ್ಳುತ್ತದೆ. ಯಾವುದಾದರೂ ಶುಭ ಕಾರ್ಯಗಳಿಗೆ ಹೋಗುವ ಸಂದರ್ಭದಲ್ಲಿ ಬೇರೆಯವರ ಬಟ್ಟೆ ಧರಿಸಿದರೆ ದೌರ್ಭಾಗ್ಯವನ್ನು ಹೊತ್ತುತಂದಂತೆ. ಇದರಿಂದ ಆಗಬೇಕಾದ ಒಳ್ಳೆಯ ಕೆಲಸಕ್ಕೆ ಅಡೆತಡೆ ಉಂಟಾಗುತ್ತದೆ.

ಬೇರೆಯವರ ಬಟ್ಟೆ ಧರಿಸಿದರೆ ಅಥವಾ ಬೇರೆಯವರ ವಸ್ತುಗಳನ್ನು ಬಳಸಿದರೆ ಅವರ ಗ್ರಹಚಾರ ನಮಗೆ ಬರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಈಗ ಅದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತಿದೆ.  

ಇದನ್ನು ಓದಿ: ವಿವಾಹದ ಬಳಿಕ ಕುಜ ದೋಷವಿದ್ದದ್ದು ತಿಳಿದರೆ ಈ ರೀತಿ ಮಾಡಿ! 

ಬೇರೆಯವರ ಶಂಖ ಬೇಡವೇ ಬೇಡ
ಶಂಖವನ್ನು ಲಕ್ಷ್ಮೀದೇವಿಯ ಪ್ರತೀಕ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾಗಿ ಮನೆಯಲ್ಲಿರುವ ಶಂಖವನ್ನು ಬೇರೆಯವರಿಗೆ ಕೊಡಬಾರದು. ಹಾಗಂತ ಬೇರೆಯವರ ಮನೆಯಲ್ಲಿರುವ ಶಂಖವನ್ನೂ ತರಬಾರದು. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಮ್ಮ ಮನೆಯಲ್ಲಿರುವ ಶಂಖವನ್ನು ಬೇರೆಯವರಿಗೆ ಕೊಟ್ಟಿದ್ದೇ ಆದಲ್ಲಿ ವಾಪಸ್ ಕೊಟ್ಟ ನಂತರ ಅದನ್ನು ಗಂಗಾಜಲದಿಂದ ಶುದ್ಧಮಾಡಿ. ಇಲ್ಲದೇ ಹೋದರೆ ಒಮ್ಮೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುವ ಸಂಭವ ಬರುತ್ತದೆ.

Taking these things from others is welcoming your unfortune

ಇನ್ನೊಬ್ಬರ ವಾಚ್ ಕಟ್ಟಿದರೆ ಕೆಟ್ಟಿರಿ
ಸಮಯ ಎಲ್ಲರ ಜೀವನದಲ್ಲೂ ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿಯ ಅನುಭವವನ್ನು ಕೊಟ್ಟಿರುತ್ತದೆ. ಈ ಒಳ್ಳೆಯ ಮತ್ತು ಕೆಟ್ಟ ಪ್ರಭಾವವು ಗಡಿಯಾರದಿಂದಲೇ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾಗಿ ಬೇರೆಯವರ ಕೈ ಗಡಿಯಾರವನ್ನು ಧರಿಸಬಾರದು ಮತ್ತು ನಮ್ಮ ಕೈ ಗಡಿಯಾರವನ್ನು ಬೇರೆಯವರಿಗೆ ನೀಡಬಾರದು. ಬೇರೆಯವರ ವಾಚ್ ಧರಿಸುವುದರಿಂದ ಅವರ ನಕಾರಾತ್ಮಕ ಶಕ್ತಿಯು ನಮಗೆ ಬರುತ್ತದೆ. ಅದರಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಇದನ್ನು ಓದಿ: ಗರ್ಭಧರಿಸಿದ ನವಮಾಸಕ್ಕಿದೆ ನವಗ್ರಹಗಳ ನಂಟು! 

ಬೆಡ್ ರೂಮ್ ಬಿಟ್ಟುಕೊಟ್ಟರೆ ದುಡ್ಡಿಗೆ ತೊಂದರೆ
ಬೇರೆಯವರ ಮಲಗುವ ಕೋಣೆಯನ್ನು ನಾವು ಉಪಯೋಗಿಸಬಾರದು. ನಾವು ಮಲಗುವ ಕೋಣೆಯನ್ನೂ ಬೇರೆಯವರಿಗೆ ಉಪಯೋಗಿಸಲು ನೀಡಬಾರದು. ಇದರಿಂದ ವಾಸ್ತುದೋಷ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಜೀವನದಲ್ಲಿ ನಿರಾಶೆಯನ್ನು ಅನುಭವಿಸಬೇಕಾಗುತ್ತದೆ. ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಾಲವನ್ನು ಹಿಂತಿರುಗಿಸಲು ಕಷ್ಟ ಪಡಬೇಕಾಗುತ್ತದೆ. ಆರ್ಥಿಕ ಸ್ಥಿತಿ ಕುಸಿಯುತ್ತದೆ.

Latest Videos
Follow Us:
Download App:
  • android
  • ios