ಮಾರ್ಚ್ 14ರ ಮಧ್ಯರಾತ್ರಿ ಸೂರ್ಯ ಸಂಕ್ರಮಣವು ಮೀನ ರಾಶಿಯಲ್ಲಿ ಆಗುತ್ತಿದೆ. ಮಾರ್ಚ್ 15ರ ಬೆಳಗ್ಗೆ ಸೂರ್ಯನನ್ನು ವಿಶೇಷವಾಗಿ ಆರಾಧಿಸುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು.
ಸಂಕ್ರಾಂತಿಗೆ ಸನಾತನ ಧರ್ಮ(Sanatan Dharma)ದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದೇ ಸಂಕ್ರಾಂತಿಯಾಗಿದೆ. ಈ ಬಾರಿ ಅಂದರೆ ಮಾರ್ಚ್ 14ರಂದು ಬೆಳಗ್ಗೆ ಮೀನ ಸಂಕ್ರಮಣ ಸಂಭವಿಸಲಿದೆ. ಅಂದರೆ ಸೂರ್ಯನು ಮೀನ(Pisces) ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಪಥ ಬದಲಾವಣೆಯು ಸಕಲ ಚರಾಚರ ಜೀವಿಗಳ ಬದುಕಲ್ಲೂ ಬದಲಾವಣೆ ತರಲಿದೆ. ಎಲ್ಲ ಸಂಕ್ರಾಂತಿಗಳಂತೆ ಮೀನ ಸಂಕ್ರಾಂತಿಗೂ ಅದರದೇ ಆದ ವೈಶಿಷ್ಠ್ಯವಿದೆ. ಏಕೆಂದರೆ ಸೂರ್ಯನು ಮೇಷ ರಾಶಿಯಲ್ಲಿ ಚಲನೆ ಆರಂಭಿಸಿ ಎಲ್ಲ ರಾಶಿಯನ್ನೂ ಪೂರೈಸಿ ಕಡೆಗೆ ಮೀನ ರಾಶಿಗೆ ಬರುತ್ತಾನೆ. ಅಂದರೆ, ಇದು ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷದ ಕಡೆಯ ಸಂಕ್ರಮಣವಾಗಿದೆ.
ಸೂರ್ಯನ ಮೀವನ ಸಂಕ್ರಮಣವು 14ರ ಬೆಳಗ್ಗೆ 8.16ಕ್ಕೆ ಸಂಭವಿಸಲಿದೆ. ಈ ಸಮಯದಲ್ಲಿ ಪವಿತ್ರ ನದಿಗಳ(holy rivers)ಲ್ಲಿ ಭಕ್ತರು ಮುಳುಗು ಹಾಕುವುದರಿಂದ ಸಾಕಷ್ಟು ಲಾಭಗಳಿವೆ, ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೆ ಈ ದಿನ ಮಾಡುವ ದಾನ(donation) ಕಾರ್ಯಾದಿಗಳಿಗೂ ಸಾಕಷ್ಟು ಪ್ರಾಮುಖ್ಯತೆ ಇದೆ. ಮೀನ ಸಂಕ್ರಾಂತಿಯ ದಿನ ಸೂರ್ಯನನ್ನು ಹೇಗೆ ಆರಾಧಿಸಬೇಕೆಂಬ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಮೀನ ಸಂಕ್ರಾಂತಿ(Pisces Sankranti)
ಮಾರ್ಚ್ 14ರಂದು ಸೂರ್ಯನು ಕುಂ ರಾಶಿಯನ್ನು 12.16ರ ಬೆಳಗಿನ ಜಾವದಲ್ಲಿ ತೊರೆಯುತ್ತಾನೆ. ನಂತರ ಬೆಳಗ್ಗೆ 8.43ಕ್ಕೆ ಮೀನಕ್ಕೆ ಪ್ರವೇಶಿಸಲಿದ್ದಾನೆ. ಮೀನ ಸಂಕ್ರಾಂತಿಯ ಮಹಾಪುಣ್ಯ ಕಾಲವು ಬೆಳಗ್ಗೆ 6.31ರಿಂದ ಮಾರ್ಚ್ 15ರ ಬೆಳಗ್ಗೆ 8.31ರವರೆಗೂ ಇರಲಿದೆ.
Sun transits in Pisces 2022: ಸೂರ್ಯ ಗೋಚಾರದಿಂದ ವೃಷಭ, ಮಿಥುನ ರಾಶಿಗೆ ಲಾಟ್ರಿ, ಉಳಿದ ರಾಶಿಗಳ ಕತೆಯೇನು?
ಸೂರ್ಯನ ಆರಾಧನೆ
ಸೌರಮಂಡಲದ ಶೇ.99ರಷ್ಟು ದ್ರವ್ಯ ರಾಶಿಯನ್ನು ಸೂರ್ಯನೊಬ್ಬನೇ ಹೊಂದಿದ್ದಾನೆ. ಭೂಮಿ ಸೇರಿದಂತೆ ಸಕಲ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತವೆ. ಅಂದರೆ, ಎಲ್ಲ ಗ್ರಹಗಳ ಅಧಿಪತಿ ಸೂರ್ಯನಾಗಿದ್ದಾನೆ. ಭೂಮಿಯಿಂದ ಸೂರ್ಯನು 15 ಕೋಟಿ ಕಿಲೋಮೀಟರ್‌ಗಳಷ್ಟು ದೂರವಿದ್ದರೂ ಇಲ್ಲಿನ ಹವಾಮಾನ, ಜೀವರಾಶಿ ಸೇರಿದಂತೆ ಎಲ್ಲವನ್ನೂ ಆತನೇ ನಿಯಂತ್ರಿಸುತ್ತಾನೆ. ಹೀಗಾಗಿ, ಸೂರ್ಯನನ್ನು ಕಣ್ಣಿಗೆ ಕಾಣುವ ಏಕೈಕ ದೇವರು ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಅವನ ವಿಶೇಷ ಆರಾಧನೆಯಲ್ಲಿ ಎಲ್ಲರೂ ತೊಡಗಬೇಕು.
Personality Traits: ಈ ರಾಶಿಯವರಿಗೆ ಬೇಜವಾಬ್ದಾರಿ ಹೆಚ್ಚು.. ನೀವಿದ್ದೀರಾ?
- ಮೀನ ಸಂಕ್ರಾಂತಿಯ ದಿನದಂದು ಗಂಗಾ(Ganges) ಅಥವಾ ಗೋದಾವರಿ(Godavari) ನದಿಯಲ್ಲಿ ಸ್ನಾನ ಮಾಡುವುದು ವಿಶೇಷವಾಗಿ ಮಹತ್ವ ಪಡೆದಿದೆ. ಕಾರಣಾಂತರಗಳಿಂದ ನೀವು ಈ ನದಿಗಳಲ್ಲಿ ಸ್ನಾನಕ್ಕೆ ಹೋಗಲು ಸಾಧ್ಯವಿಲ್ಲವೆಂದರೆ ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಿ.
- ಬೆಳಗ್ಗೆ ಸೂರ್ಯ ಉದಯಿಸುವ ಸಮಯಕ್ಕೆ ಅವನಿಗೆ ಅಭಿಮುಖವಾಗಿ ನಿಂತು ಸೂರ್ಯ ನಮಸ್ಕಾರ ಮಾಡಿ.
- ಈ ದಿನ ಸೂರ್ಯನನ್ನು ಪೂಜಿಸಲಾಗುತ್ತದೆ. ಈ ದಿನ, ತಾಮ್ರದ ಪಾತ್ರೆ(copper vessel)ಯಲ್ಲಿ ನೀರನ್ನು ತುಂಬುವ ಮೂಲಕ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ಸಂದರ್ಭದಲ್ಲಿ 'ಓಂ ಸೂರ್ಯಾಯ ನಮಃ' ಮಂತ್ರ ಪಠಣ ಮಾಡುತ್ತಿರಿ. ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಕಾರಾತ್ಮಕ ಶಕ್ತಿಯನ್ನು ಕೂಡಾ ಹೋಗಲಾಡಿಸುತ್ತದೆ.
- ಮೀನ ಸಂಕ್ರಾಂತಿಯ ದಿನದಂದು ಭಗವಾನ್ ಸೂರ್ಯನ ಮಂತ್ರಗಳನ್ನು ಮತ್ತು ಆದಿತ್ಯ ಹೃದಯ ಸ್ತೋತ್ರ(Aditya Hriday Stotra)ವನ್ನು ಪಠಿಸಿ.
- ಸಂಕ್ರಾಂತಿ ಸಂದರ್ಭದಲ್ಲಿ ದಾನಕ್ಕೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಟ್ಟೆ, ಎಳ್ಳು ಮತ್ತು ಧಾನ್ಯಗಳನ್ನು ದಾನ ಮಾಡಿ.
- ಈ ದಿನದಂದು ಹಸುವಿಗೆ ಆಹಾರವನ್ನು ನೀಡುವುದು(feed the cow) ಮಂಗಳಕರವೆಂದು ಪರಿಗಣಿಸಲಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
