Personality Traits: ಈ ರಾಶಿಯವರಿಗೆ ಬೇಜವಾಬ್ದಾರಿ ಹೆಚ್ಚು.. ನೀವಿದ್ದೀರಾ?

ಎಲ್ಲ ರಾಶಿ ಚಕ್ರದವರು ವಿಶೇಷ ಸ್ವಭಾವವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಕೆಲಸದಲ್ಲಿ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯನ್ನು ಹೊಂದಿದವರಾಗಿರುತ್ತಾರೆ. ಹಾಗೆಯೇ ಮತ್ತೆ ಕೆಲವರು ಹೆಚ್ಚು ಆಲಸಿಗಳಾಗಿರುತ್ತಾರೆ. ತಮ್ಮ ಕೆಲಸಗಳಿಗೂ ಜವಾಬ್ದಾರಿಯನ್ನು ತೋರಿಸದೇ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಾರೆ. ಅಂತಹ ರಾಶಿಯನರ ಬಗ್ಗೆ ತಿಳಿಯೋಣ.

These Zodiac people are irresponsible

ಜ್ಯೋತಿಷ್ಯ ಶಾಸ್ತ್ರದ ( Astrology) ಮೂಲಕ ವ್ಯಕ್ತಿಯ ಭವಿಷ್ಯವನ್ನು (Future) ತಿಳಿಯಬಹುದಾಗಿದೆ. ಅಲ್ಲದೆ, ರಾಶಿಚಕ್ರದ (Zodiac sign) ಅನುಸಾರವಾಗಿ ಯಾವುದೇ ಅವರ ಗುಣಗಳು  (Character), ಮನಸ್ಸಿನ ಭಾವನೆಗಳು (Feelings), ವ್ಯಕ್ತಿತ್ವಗಳು (Personalities) ಹೇಗೆ ಎಂಬುದನ್ನು ಸಹ ಕಂಡುಕೊಳ್ಳಬಹುದಾಗಿದೆ. ಪ್ರತಿಯೊಂದು ರಾಶಿಚಕ್ರದವರ ಗುಣ ಮತ್ತು ದುರ್ಗುಣಗಳು ಬೇರೆ ಬೇರೆಯಾಗಿರುತ್ತದೆ. ಯಾಕೆಂದರೆ ಹುಟ್ಟಿದ ದಿನ (Birthday), ಘಳಿಗೆಗಳು (Time) ಬದಲಾದಂತೆ ಅವರ ರಾಶಿ, ನಕ್ಷತ್ರಗಳು ಸಹ ಬದಲಾಗುತ್ತದೆ. 

ಹೀಗಾಗಿ ರಾಶಿಗಳಿಗೆ ಅನುಸಾರವಾಗಿ ಕೆಲವರು ಬಹಳ ಬುದ್ಧಿವಂತರು (Intelligent) ಇರುತ್ತಾರೆ. ಮತ್ತೆ ಕೆಲವರು ಬಹಳ ಚುರುಕು ವ್ಯಕ್ತಿತ್ವದವರಾಗಿರುತ್ತಾರೆ. ಎಲ್ಲಿ ಹೋದರೂ ಅವರ ಚುರುಕು ಸ್ವಭಾವದಿಂದ ಗುರುತಿಸಿಕೊಂಡಿರುತ್ತಾರೆ. ಆದರೆ, ಇನ್ನು ಕೆಲವರು ಹುಟ್ಟಾ ಸೋಮಾರಿಗಳು (Lazy). ಅವರನ್ನು ಲೇಟ್ ಲತೀಫ್‌ಗಳು ಎಂತಲೂ ಕರೆಯುತ್ತಾರೆ. ಅವರು ಜೀವನದ ಪ್ರತಿ ಕ್ಷಣವನ್ನು ಸಹ ಅಸಡ್ಡೆಯಿಂದಲೇ ಕಳೆಯುತ್ತಾರೆ. ಕಚೇರಿ (Office), ಸಭೆಗೆ (Meeting) ವಿಳಂಬವಾಗಿ ಹೋಗುವುದು, ಯಾವ ಕೆಲಸ ಕೊಟ್ಟರೂ ನಿಧಾನವಾಗಿ ಮಾಡುವುದು. ಯಾವ ವಿಷಯಕ್ಕೂ ಜಾಗ್ರತೆ ವಹಿಸದಿರುವುದು. ಇವರ ಇಂಥ ಮನೋಭಾವವು ಯಾರಿಗೂ ಇಷ್ಟವಾಗುವುದಿಲ್ಲ. ಇವರ ಈ ಸ್ವಭಾವದ ಹಿಂದೆ ಜ್ಯೋತಿಷ್ಯದ ಪಾತ್ರವೂ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಎಲ್ಲ 12 ರಾಶಿಚಕ್ರಗಳ ವ್ಯಕ್ತಿಗಳಿಗೆ ಗುಣ ಮತ್ತು ದೋಷಗಳು ವಿಭಿನ್ನವಾಗಿರುತ್ತವೆ. ತುಂಬಾ ಅಸಡ್ಡೆ ಸ್ವಭಾವದ 5 ರಾಶಿಚಕ್ರದವರು ಯಾರು ಎಂಬುದನ್ನು ನೋಡೋಣ... 

ವೃಶ್ಚಿಕ ರಾಶಿ (Scorpio)
ಜ್ಯೋತಿಷ್ಯದ ಪ್ರಕಾರ ವೃಶ್ಚಿಕ ರಾಶಿಯ ಜನರು ತುಂಬಾ ಅಸಡ್ಡೆ ಉಳ್ಳವರಾಗಿದ್ದಾರೆ. ಈ ರಾಶಿಚಕ್ರದ ಬಹಳ ವಿನಯವಂತರಾಗಿದ್ದರೂ ಸಹ ತಮ್ಮ ಬಗ್ಗೆಯೇ ಜಾಗ್ರತೆಯನ್ನು ವಹಿಸುವುದಿಲ್ಲ. ತಮ್ಮ ಹತ್ತಿರದವರಿಗೆ ಅಗತ್ಯವಿದ್ದಾಗ ಸಹಾಯ ಮಾಡುವ ಗುಣವನ್ನು ಇವರು ಹೊಂದಿರುತ್ತಾರೆ. ತುಂಬಾ ಪ್ರಾಮಾಣಿಕರಾಗಿದ್ದರೂ (Honest) ಸಹ ತಮ್ಮ ನಿರ್ಲಕ್ಷ್ಯದ ಅಭ್ಯಾಸದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಧನು ರಾಶಿ (Sagittarius)
ಈ ರಾಶಿಚಕ್ರದವರು ತುಂಬಾ ಸೋಮಾರಿಗಳು. ಆದಾಗ್ಯೂ, ಅವರು ಬಹಳ  ಬುದ್ಧಿವಂತರಾಗಿದ್ದಾರೆ. ಈ ವ್ಯಕ್ತಿಗಳು ಸಹ ತಮ್ಮ ಜೀವನದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಅವರು ಯಾವಾಗಲೂ ಸತ್ಯದ (Truth) ಪರವಾಗಿ ನಿಲ್ಲುವವರಾಗಿದ್ದರೂ ತಮ್ಮನ್ನೂ ಸೇರಿದಂತೆ ತಮ್ಮವರನ್ನು ಇದೇ ಸ್ವಭಾದಿಂದ ಸಂಕಷ್ಟಕ್ಕೆ ತೊಂದೊಡ್ಡಿಬಿಡುತ್ತಾರೆ. ಅನೇಕ ಬಾರಿ ತಮ್ಮ ಅಜಾಗರೂಕತೆಯ ಸ್ವಭಾವದಿಂದಾಗಿ ಸಮಸ್ಯೆಗಳಿಗೂ ತುತ್ತಾಗುತ್ತಾರೆ. 

ಇದನ್ನು ಓದಿ : Sun Transit: ಈ ನಾಲ್ಕು ರಾಶಿಗಳಿಗೆ ಅದೃಷ್ಟ ಬದಲಾಗೋಕೆ ಇನ್ನೈದೇ ದಿನ!

ಸಿಂಹ ರಾಶಿ (Leo)
ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರದ ವ್ಯಕ್ತಿಗಳು ತುಂಬಾ ಅಸಡ್ಡೆ ಸ್ವಭಾವದವರು. ತಮ್ಮ ವಸ್ತುಗಳನ್ನು ಸಹ ಅವ್ಯವಸ್ಥಿತ ರೀತಿಯಲ್ಲಿ ಇಡುತ್ತಾರೆ. ಇವು ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ, ಈ ರಾಶಿಚಕ್ರದವರು ತುಂಬಾ ಪ್ರಾಮಾಣಿಕರಾಗಿರುವುದಲ್ಲದೆ, ಸತ್ಯವನ್ನೇ ನುಡಿಯುತ್ತಾರೆ. ಜೀವನದಲ್ಲಿ (Life) ಯಶಸ್ಸನ್ನು (Success) ಸಾಧಿಸಲು ಸಹ ಇವರು ಕಷ್ಟ ಪಡಬೇಕಿಲ್ಲ. ಆದರೆ ಅವರ ಅಜಾಗರೂಕತೆಯ ಸ್ವಭಾವವೇ ಇವರಿಗೆ ಶತ್ರುವಾಗಿ ಕಾಡಲಿದೆ. 

ಮೀನ ರಾಶಿ (Pisces)
ಮೀನ ರಾಶಿಯವರು ತುಂಬಾ ಭಾವನಾತ್ಮಕ (Emotional) ಸ್ವಭಾವವುಳ್ಳವರು. ಅಲ್ಲದೆ, ಇವರು ಆಶಾವಾದಿಗಳಾಗಿರುತ್ತಾರೆ. ಎಲ್ಲವೂ ತಮ್ಮ ಪರವಾಗಿಯೇ ಇರುತ್ತದೆ ಎಂಬ ಉಡಾಫೆಯಿಂದ ಜಾಗ್ರತೆ ತಪ್ಪುತ್ತಾರೆ. ಇದು ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗುತ್ತದೆ. 

ಇದನ್ನು ಓದಿ : Gemology: ರಾಹು ಗ್ರಹದ ಕೆಟ್ಟ ಪ್ರಭಾವದಿಂದ ಪಾರಾಗಲು ಧರಿಸಿ ಈ ರತ್ನ

ಮಿಥುನ ರಾಶಿ (Gemini)
ಈ ರಾಶಿಚಕ್ರದ ಜಾತಕರು ತುಂಬಾ ಮನೋಧರ್ಮವುಳ್ಳವರು. ಅವರು ತಮಗೆ ಅನಿಸಿದ್ದನ್ನು ಮಾಡುತ್ತಾರೆ. ಅವರು ಪರಿಣಾಮಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಅವರ ಅಸಡ್ಡೆ ಮನೋಭಾವವು ಕೆಲವೊಮ್ಮೆ ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ಈ ರಾಶಿಚಕ್ರದ ಜನರು ಮುಕ್ತ ಆಲೋಚನೆಯನ್ನು ಹೊಂದಿದ್ದರೂ ಇವರ ಅಸಡ್ಡೆ ಮನೋಭಾವವನ್ನು ಜನ ಇಷ್ಟಪಡುವುದಿಲ್ಲ. 

Latest Videos
Follow Us:
Download App:
  • android
  • ios