Asianet Suvarna News Asianet Suvarna News

ಆದ್ರಾ ನಕ್ಷತ್ರಕ್ಕೆ ಸೂರ್ಯ ಪ್ರವೇಶ, ಈ 3 ರಾಶಿಯವರಿಗೆ ಸಖತ್ ಲಕ್

ಆದ್ರಾ ನಕ್ಷತ್ರಕ್ಕೆ ಸೂರ್ಯನ ಪ್ರವೇಶವಾಗಿದ್ದು, ಹಾಲಿ ಮಿಥುನ ರಾಶಿಯಲ್ಲಿ ಸ್ಥಿತವಾಗಿರಲಿದ್ದಾನೆ. ಇದರಿಂದ ಇನ್ನು 15 ದಿನಗಳ ಕಾಲ ಮೂರು ರಾಶಿಯ ವ್ಯಕ್ತಿಗಳಿಗೆ ವೃತ್ತಿ ಕ್ಷೇತ್ರದಲ್ಲಿ ಬಹಳವೇ ಯಶಸ್ಸು ಸಿಗಲಿದ್ದು, ಇದರಿಂದ ಅವರ ಆರ್ಥಿಕ ಸ್ಥಿತಿ ಗತಿಯೂ ಬದಲಾವಣೆಯಾಗುತ್ತದೆ. ಹಾಗಾದರೆ ಆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ....

Sun Planet entre into Aadra nakshatra good luck for these 3 zodiac signs
Author
Bangalore, First Published Jun 23, 2022, 4:57 PM IST

ಸೂರ್ಯ ಗ್ರಹವು (Sun Planet) ಜೂನ್ 22 ರಂದು ಬೆಳಗ್ಗೆ 11.42ಕ್ಕೆ ಆದ್ರಾ ನಕ್ಷತ್ರವನ್ನು (Aadra Nakshtra) ಪ್ರವೇಶ ಮಾಡಿದ್ದಾನೆ. ಈ ನಕ್ಷತ್ರದಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದ್ದಾನೆ. ಅಲ್ಲದೆ, ಆದ್ರಾ ನಕ್ಷತ್ರದಲ್ಲಿ ಸೂರ್ಯನು ಜುಲೈ (July) 6ರ ವರೆಗೆ ಅಂದರೆ 15 ದಿನಗಳ ಕಾಲ ಸ್ಥಿತವಾಗಿ ಇರಲಿದ್ದಾನೆ. ಹಾಲಿ ಸೂರ್ಯನು ಮಿಥುನ ರಾಶಿಯಲ್ಲಿ (Gemini) ಸ್ಥಿತವಾಗಿದ್ದು, ಸೂರ್ಯನ ಈ ನಕ್ಷತ್ರ (Star) ಬದಲಾವಣೆಯು ಅನೇಕರ ಅದೃಷ್ಟವನ್ನು (Luck) ಬದಲಾಯಿಸಲಿದೆ. ಬುಧ ಗ್ರಹವು (Mercury Planet) ಮಿಥುನ ರಾಶಿಯ ಅಧಿಪತಿ ಗ್ರಹವಾಗಿದೆ. ಎಲ್ಲ ರೀತಿಯಿಂದಲೂ ಈ ಬಾರಿಯ ಸೂರ್ಯನ ಪ್ರವೇಶ ಅನೇಕರಿಗೆ ಶುಭಕಾರಕವಾಗಿದೆ. ಬಹುಮುಖ್ಯವಾಗಿ ಮೂರು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದ್ದು, 15 ದಿನಗಳೊಳಗೆ ಇವರಿಗೆ ಆರ್ಥಿಕ ಲಾಭವು ಬಹಳವೇ ಆಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. 

ಬದಲಾವಣೆಯ ಮಹತ್ವ
ಹಿಂದೂ ಧರ್ಮದಲ್ಲಿ (Hindu Religion) ಆದ್ರಾ ನಕ್ಷತ್ರಕ್ಕೆ ಸೂರ್ಯ ದೇವನ ಪ್ರವೇಶವನ್ನು ಮುಖ್ಯವಾಗಿ ಪರಿಗಣಿಸಲಾಗಿದ್ದು, ವಿಶೇಷ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಈ ಸಮಯದಲ್ಲಿ ಭಗವಾನ್ ಶಿವ (Lord Shiva) ಮತ್ತು ಭಗವಾನ್ ವಿಷ್ಣುವನ್ನು (Lord Vishnu) ಪೂಜಿಸಬೇಕಿದ್ದು, ಇದರಿಂದ ಇವರ ಕೃಪೆಗೆ ಪಾತ್ರರಾಗಿ ಅನೇಕ ಪ್ರಯೋಜನಗಳು ಅರಸಿ ಬರುತ್ತವೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ದೇವರಿಗೆ ಸಿಹಿ ಖಾದ್ಯಗಳು (Sweet), ಮಾವಿನ (Mango) ಹಣ್ಣಿನ ನೈವೇದ್ಯಗಳನ್ನು ಅರ್ಪಿಸಿದರೆ ಭಗವಂತನು ಸಂತುಷ್ಟಗೊಳ್ಳುತ್ತಾನೆ ಎಂದು ಹೇಳಲಾಗಿದೆ. 

ಹೀಗಾಗಿ ಈ ಬಾರಿಯ ಸೂರ್ಯನ ನಕ್ಷತ್ರ ಬದಲಾವಣೆಯು ಮೂರು ರಾಶಿಯ ವ್ಯಕ್ತಿಗಳಿಗೆ ಆರ್ಥಿಕವಾಗಿ ಸಹಿತ ವೃತ್ತಿ ಕ್ಷೇತ್ರದಲ್ಲಿ ಬಹಳವೇ ಪ್ರಯೋಜನಗಳನ್ನು ನೀಡಲಿದ್ದು, ಹೊಸ ಹೊಸ ಲಾಭಗಳನ್ನು ತಂದುಕೊಡಲಿದೆ. ಹಾಗಾದರೆ ಆ ಮೂರು ರಾಶಿಯವರು ಯಾರು..? ಅವರಿಗೆ ಯಾವ ಯಾವ ಪ್ರಯೋಜನಗಳು ಲಭಿಸಲಿದೆ ಎಂಬುದನ್ನು ತಿಳಿಯೋಣ.... 

ನಿಮ್ಮ ಹಸ್ತ ರೇಖೆ ಪ್ರಕಾರ ಪೂಜಿಸಿ ಈ ದೇವರ, ಪಡೆಯಿರಿ ಅನುಗ್ರಹ!

ಮಿಥುನ ರಾಶಿ (Gemini)
ಸೂರ್ಯನ ಈ ನಕ್ಷತ್ರ ಬದಲಾವಣೆಯು ಮಿಥುನ ರಾಶಿಯ ವ್ಯಕ್ತಿಗಳಿಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ಇವರ ಆರ್ಥಿಕ ಪ್ರಗತಿಯ (Economic Growth) ಹಾದಿ ಬಹಳ ಉತ್ತಮವಾಗಿ ಇರಲಿದ್ದು, ಮತ್ತಷ್ಟು ಬಲಗೊಳ್ಳುತ್ತದೆ. ಹೊಸ ಕೆಲಸವನ್ನು ಆರಂಭಿಸಬೇಕು ಎಂದು ಯೋಜನೆಗಳನ್ನು ಹಾಕಿಕೊಂಡಿದ್ದರೆ ಇದು ಪ್ರಶಸ್ತವಾದ ಸಮಯವಾಗಿದೆ. ಉದ್ಯೋಗ (Job) ಕ್ಷೇತ್ರದಲ್ಲಿ ಪ್ರಶಂಸೆಗೆ ಪಾತ್ರವಾಗಲಿದ್ದು, ಬಡ್ತಿ (Promotion) ಸಿಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ವೇತನ ಹೆಚ್ಚಳವೂ ಆಗಬಹುದಾಗಿದೆ.

ಸಿಂಹ ರಾಶಿ (Leo)
ಸಿಂಹ ರಾಶಿಯ ವ್ಯಕ್ತಿಗಳಿಗೆ ಸೂರ್ಯನ ನಕ್ಷತ್ರ ಬದಲಾವಣೆಯು ಫಲಪ್ರದವಾಗಿದೆ. ಈ ರಾಶಿಯವರ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸ - ಕಾರ್ಯಗಳು ಈ ವೇಳೆ ಪೂರ್ಣಗೊಳ್ಳುತ್ತವೆ. ಕಾರ್ಯ ಕ್ಷೇತ್ರದಲ್ಲಿ ಬಡ್ತಿ ಮತ್ತು ಅಭಿನಂದನೆಗಳು ಲಭ್ಯವಾಗಲಿದ್ದು, ಹೊಸ ಕೆಲಸ ಆರಂಭಕ್ಕೆ, ಹೊಸ ವಾಹನ ಖರೀದಿಗೆ ಇದು ಸಕಾಲ. ಒಂದು ವೇಳೆ ಶತ್ರುಗಳು (Enemies) ನಿಮ್ಮ ಮೇಲೆ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದರೂ ಅದು ವಿಫಲಗೊಳ್ಳುತ್ತದೆ. 

ಸಿಟ್ಟಿನ ನಿಯಂತ್ರಣಕ್ಕೆ ಜ್ಯೋತಿಷ್ಯ ಮಂತ್ರ

ಕನ್ಯಾ ರಾಶಿ (Virgo)
ಸೂರ್ಯನ ನಕ್ಷತ್ರ ಬದಲಾವಣೆಯು ಕನ್ಯಾ ರಾಶಿಯ ವ್ಯಕ್ತಿಗಳಿಗೆ ಶುಭ ಫಲವನ್ನು ತಂದುಕೊಡಲಿದೆ. ಕಾರಣ, ಇವರ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಇವರು ಕಠಿಣ ಪರಿಶ್ರಮಿಗಳಾಗಿದ್ದು, ಅದರ ಸಾಕಷ್ಟು ಫಲಗಳನ್ನು ಈ ವೇಳೆ ಪಡೆಯಲಿದ್ದಾರೆ. ಉದ್ಯೋಗ - ವ್ಯವಹಾರದಲ್ಲಿ ಉನ್ನತಿಯನ್ನು ಪಡೆಯಬಹುದಾಗಿದ್ದು, ಒಂದು ವೇಳೆ ಸರ್ಕಾರಿ ಉದ್ಯೋಗಗಳಿಗೆ (Government Job) ಸಿದ್ಧತೆ ನಡೆಸಿದ್ದರೆ ಇದು ಉತ್ತಮ ಫಲಿತಾಂಶ ತಂದುಕೊಡುವ ಸಮಯವಾಗಿದೆ. 

Follow Us:
Download App:
  • android
  • ios