ಸಿಟ್ಟಿನ ನಿಯಂತ್ರಣಕ್ಕೆ ಜ್ಯೋತಿಷ್ಯ ಮಂತ್ರ
ಸಿಟ್ಟು ಬಹುತೇಕ ಎಲ್ಲರಿಗೂ ಬರುತ್ತದೆ. ಕೆಲವೇ ಕೆಲವರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವರು ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಬಹಳಷ್ಟು ಸಾರಿ ಅಂದುಕೊಳ್ಳುತ್ತಾರೆ. ಆದರೆ, ಆಗುವುದಿಲ್ಲ. ಇದಕ್ಕೆ ಗ್ರಹಗತಿಗಳೂ ಕಾರಣವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಸಿಟ್ಟಿನ ನಿಯಂತ್ರಣಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರಗಳನ್ನು ಮಾಡಿ ಶಾಂತ ಸ್ವಭಾವವನ್ನು ಹೊಂದಿ. ಅವುಗಳ ಬಗ್ಗೆ ತಿಳಿಯೋಣ...
ವೈದಿಕ ಜ್ಯೋತಿಷ್ಯದಲ್ಲಿ (Astrology) ವ್ಯಕ್ತಿಯ ಜೀವನಕ್ಕೆ (Life) ಅನುಕೂಲವಾಗುವಂತ ಅನೇಕ ಉಪಾಯಗಳನ್ನು ತಿಳಿಸಿದ್ದಾರೆ. ಅಂತಹ ಉಪಾಯಗಳ (Idea) ಸರಿಯಾದ ಪಾಲನೆಯಿಂದ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಬಹುದು. ವ್ಯಕ್ತಿಯ ಜೀವನಕ್ಕೆ ಮುಳುವಾಗುವ ಪ್ರಮುಖ ಸ್ವಭಾವಗಳಲ್ಲಿ (Nature) ಸಿಟ್ಟು (Angry) ಕೂಡಾ ಒಂದು. ಸಿಟ್ಟು ಮನುಷ್ಯನ ವ್ಯಕ್ತಿತ್ವವನ್ನೇ (Personality) ಹಾಳು ಮಾಡುವಷ್ಟು ಕೆಟ್ಟದ್ದಾಗಿದೆ. ನಾವ್ ಅಂದುಕೊಂಡದ್ದು ಆಗದೇ ಇದ್ದಾಗ ಸಹಜವಾಗಿ ನೋವಾಗುತ್ತದೆ. ಅದೇ ಸಿಟ್ಟಿಗೆ ಕಾರಣವಾಗುತ್ತದೆ. ಕೆಲವರಿಗೆ ಸಿಟ್ಟು ಬಂದರೆ ಅದನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಜೀವನದಲ್ಲಿ ಜವಾಬ್ದಾರಿಗಳು (Responsibility) ಹೆಚ್ಚುತ್ತಾ ಹೋದಂತೆ ಒತ್ತಡಗಳು (Pressure) ಆರಂಭವಾಗುತ್ತವೆ. ಇದೇ ಒತ್ತಡ ನಂತರ ಸಿಟ್ಟಿಗೆ ಕಾರಣವಾಗುತ್ತದೆ. ಹೀಗೆ ಬಂದ ಸಿಟ್ಟನ್ನು ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಕೆಟ್ಟ ಮಾತುಗಳು ಬಾಯಿಗೆ ಬರುತ್ತದೆ. ಸಿಟ್ಟು ತೀವ್ರ ರೂಪಕ್ಕೆ ತಿರುಗಿದಾಗ ಅನೇಕ ತಪ್ಪುಗಳು ಸಂಭವಿಸುವ ಸಾಧ್ಯತೆ ಸಹ ಇರುತ್ತದೆ. ಮೇಲ್ನೋಟಕ್ಕೆ ಇವು ಒತ್ತಡದಿಂದ ಬಂದಂದು ಎಂದು ಅನ್ನಿಸಿದರೂ, ಇದಕ್ಕೆ ಗ್ರಹ (Planet) ದೋಷಗಳು ಸಹ ಕಾರಣವಾಗಿರುತ್ತವೆ.
ಸಿಟ್ಟಿನ ವಿಚಾರವನ್ನು ಕೆಲವೊಮ್ಮೆ ಜ್ಯೋತಿಷೀಯ ದೃಷ್ಟಿಕೋನದಿಂದ ಸಹ ನೋಡಬೇಕಾಗುತ್ತದೆ. ಗ್ರಹಗಳ ಸ್ಥಾನ ಮತ್ತು ಸ್ಥಿತಿ ಸಿಟ್ಟಿನ ಸ್ವಭಾವಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಸಿಟ್ಟು ಕೇವಲ ವ್ಯವಹಾರ ಮತ್ತು ಬುದ್ಧಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ಅದಕ್ಕೆ ರಾಹು (Rahu) ಮತ್ತು ಮಂಗಳ ಗ್ರಹದ (Mars) ದೋಷವು ಸಹ ಕಾರಣವಾಗಿರುತ್ತದೆ. ಈ ದೋಷವು ಹೆಚ್ಚು ಸಿಟ್ಟಿನ ಗುಣಕ್ಕೆ ಕಾರಣವಾಗುತ್ತದೆ. ಈ ದೋಷವನ್ನು (Dosha) ನಿವಾರಣೆ ಮಾಡಿಕೊಂಡರೆ, ಸಿಟ್ಟಿನ ಮೇಲಿನ ನಿಯಂತ್ರಣವು ಸಾಧ್ಯ, ಕ್ರಮೇಣವಾಗಿ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಗ್ರಹ ದೋಷವನ್ನು ನಿವಾರಿಸಿಕೊಳ್ಳುವ ಮೂಲಕ ಸಿಟ್ಟಿನ ನಿಯಂತ್ರಣವಾಗುವುದು (Control) ಹೇಗೆ? ಅದಕ್ಕಿರುವ ಜ್ಯೋತಿಷ್ಯ ಉಪಾಯದ ಬಗ್ಗೆ ತಿಳಿಯೋಣ...
ಶ್ರೀಗಂಧ (Sandalwood)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೆಚ್ಚು ಸಿಟ್ಟಿನ ಸ್ವಭಾವವನ್ನು ಹೊಂದಿರುವವರು ಶ್ರೀಗಂಧವನ್ನು ಹೆಚ್ಚು ಉಪಯೋಗಿಸಬೇಕು. ಶ್ರೀಗಂಧವು ಮನಸ್ಸಿಗೆ ಶಾಂತತೆಯನ್ನು (Mind Relax) ನೀಡುವುದಲ್ಲದೇ, ಇದರಿಂದ ರಾಹು ದೋಷವು ಸಹ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಸಿಟ್ಟಿನ ನಿಯಂತ್ರಣ ಸಾಧ್ಯವಾಗುತ್ತದೆ.
ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ಜಾತಕ ಹೇಳುತ್ತೆ ಕೇಳಿ
ಬೆಳ್ಳಿ ಬಳಕೆ (Silver)
ಬೆಳ್ಳಿಯು ಮನಸ್ಸಿಗೆ ಶಾಂತತೆಯನ್ನು ನೀಡುತ್ತದೆ. ಮಾತು ಮಾತಿಗೆ ಸಿಟ್ಟು ಬರುವ ವ್ಯಕ್ತಿಗಳು ಬೆಳ್ಳಿಯ ಉಂಗುರ (Silver Ring) ಅಥವಾ ಪೆಂಡೆಂಟ್‌ಗೆ ದೊಡ್ಡ ಗಾತ್ರದ ಅಸಲಿ ಮುತ್ತನ್ನು (Pearl) ಹಾಕಿಕೊಂಡು ಧರಿಸಬೇಕು. ಜಾತಕದಲ್ಲಿ (Horoscope) ಚಂದ್ರದೋಷವಿದ್ದರೂ ಸಹ ಈ ಉಪಾಯದಿಂದ ದೋಷ ನಿವಾರಣೆಯಾಗುತ್ತದೆ.
ಸೂರ್ಯನಿಗೆ ಅರ್ಘ್ಯ
ಸಿಟ್ಟಿನ ಸ್ವಭಾವವನ್ನು ನಿಯಂತ್ರಣ ಮಾಡಿಕೊಳ್ಳಲು ಬಯಸುವವರು ಪ್ರತಿನಿತ್ಯ ಉದಯಕಾಲದಲ್ಲಿ ಸ್ನಾನ ಮಾಡಿ, ಶುಚಿರ್ಭೂತರಾಗಿ ಸೂರ್ಯದೇವನಿಗೆ (Sun) ಅರ್ಘ್ಯವನ್ನು ನೀಡಬೇಕು. ಅಷ್ಟೇ ಅಲ್ಲದೆ ಸೂರ್ಯನ ಧ್ಯಾನ ಮಾಡುವುದರಿಂದ ಸಹ ಸಿಟ್ಟು ನಿಯಂತ್ರಣಕ್ಕೆ ಬರುತ್ತದೆ.
ಕೋಪವೂ ಜಾಸ್ತಿ, ಪ್ರೀತಿಯೂ ಹೆಚ್ಚು.. ಕರ್ಕಾಟಕ ರಾಶಿಯ ಸ್ವಭಾವ ಹೀಗೆ..
ಕೆಂಪು ಬಣ್ಣದ ಬಳಕೆ ಕಡಿಮೆ ಇರಲಿ (Red)
ಕೆಂಪು ಉಗ್ರ (Cruel) ಸ್ವಭಾವದ ಪ್ರತೀಕವಾಗಿದೆ. ಹಾಗಾಗಿ ಕೆಂಪು ಬಣ್ಣವನ್ನು ಹೆಚ್ಚು ಬಳಸದಿರುವುದು ಉತ್ತಮ. ಕೆಂಪಿನ ಬಳಕೆಯು ಸಹ ಸಿಟ್ಟನ್ನು ಪ್ರಚೋದಿಸುತ್ತದೆ. ಹಾಗಾಗಿ ಆದಷ್ಟು ಕ್ರೀಮ್ ಅಥವಾ ಬಿಳಿ (White) ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಕೆಂಪು ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಕೆಂಪು ಬಣ್ಣದ ವಸ್ತ್ರವನ್ನು ಹೆಚ್ಚು ಬಳಸಬಾರದು.
ಹನುಮಾನ್ ಚಾಲೀಸಾ ಪಠಣ (Hanuman Chalisa)
ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಮಂಗಳ ಗ್ರಹ ಶಾಂತವಾಗುವುದಲ್ಲದೇ, ಸಿಟ್ಟು ಸಹ ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಪೂರ್ವ (East) ದಿಕ್ಕಿನಲ್ಲಿ ದೀಪವನ್ನು ಹಚ್ಚಬೇಕು ಇದರಿಂದ ಸಿಟ್ಟು (Anger ) ಕಡಿಮೆಯಾಗುತ್ತದೆ.