Asianet Suvarna News

ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವ ಉಳಿಸಿಕೊಂಡ ಹೆಣ್ಣಿವಳು!

ವರ್ಜಿನಿಟಿ ಅಥವಾ ಕನ್ಯತ್ವದ ಬಗೆಗಿನ ಅಜ್ಞಾನ ಈ ಕಾಲದಲ್ಲಿರುವ ಹಾಗೆ ಪುರಾಣ ಕಾಲದಲ್ಲೂ ಇತ್ತು. ಅಲ್ಲೊಬ್ಬ ಹೆಣ್ಣಿಗೆ ಎಷ್ಟು ಜನ ಪುರುಷರ ಸಂಗ ಮಾಡಿದರೂ, ಮಕ್ಕಳಾದರೂ ಮತ್ತೆ ಕನ್ಯೆಯಾಗುವ ವರ ಇತ್ತು. ಆ ಹೆಣ್ಣು ಯಾರು ಗೊತ್ತಾ?

 

Story of Madhavi mother of foud but still virgin
Author
Bengaluru, First Published May 27, 2020, 4:05 PM IST
  • Facebook
  • Twitter
  • Whatsapp

ವರ್ಜಿನಿಟಿ ಅಥವಾ ಕನ್ಯತ್ವದ ಬಗ್ಗೆ ಇವತ್ತಿಗೂ ಏನೇನೋ ಕಲ್ಪನೆಗಳು, ನಂಬಿಕೆಗಳು ಇವೆ. ಅಜ್ಞಾನವೂ ಬಹಳ ಹೆಚ್ಚಿದೆ. ಕಳೆದ ವರ್ಷ ಅಮೆರಿಕಾದ ಪ್ರಸಿದ್ಧ ರ್ಯಾಪರ್ ಟಿ ಐ ತನ್ನ ಮಗಳ ಕನ್ಯತ್ವದ ಬಗ್ಗೆ ಮಾಡಿದ ಹೇಳಿಕೆ ವಿಶ್ವಾದ್ಯಂತ ಖಂಡನೆಗೆ ಗುರಿಯಾಯ್ತು. ತನ್ನ ಹದಿನೆಂಟು ವರ್ಷದ ಮಗಳನ್ನು ಪ್ರತೀವರ್ಷ ಗೈನಕಾಲಜಿಸ್ಟ್ ಬಳಿ ಕರೆದೊಯ್ದು ಆಕೆ ವರ್ಜಿನ್ ಹೌದೋ ಅಲ್ಲವೋ ಅಂತ ಟೆಸ್ಟ್‌ ಮಾಡಿಸುತ್ತಿದ್ದನಂತೆ. ಕನ್ಯಾಪೊರೆ ಇದ್ದರೆ ಆಕೆ ವರ್ಜಿನ್ ಇಲ್ಲವಾದರೆ ಬೇರೆ ಪುರುಷರ ಸಂಪರ್ಕ ಮಾಡಿದ್ದಳು ಅನ್ನೋ ತಪ್ಪು ಕಲ್ಪನೆ ನಮ್ಮಲ್ಲೂ ಇದೆ. ಉತ್ತರ ಭಾರತದಲ್ಲಂತೂ ಈ ಪ್ರಮಾಣ ಬಹಳ ಹೆಚ್ಚಿದೆ. ಆದರೆ ಹಿಂದಿನಿಂದ ಇಂದಿನ ತನಕವೂ ಈ ಕನ್ಯಾಪೊರೆಯ ಆಧಾರದ ಮೇಲೆ ಹೆಣ್ಣನ್ನು ಅನುಮಾನಿಸುವ, ಅವಮಾನಿಸುವ, ಅವಳನ್ನು ಜರ್ಝರಿತಳನ್ನಾಗಿ ಮಾಡುವ ಕೆಲಸ ನಡೆಯುತ್ತಲೇ ಇದೆ. ಅವಳು ಈ ಅಂಧ ನಂಬಿಕೆಗೆ ಬಲಿಬೀಳುತ್ತಲೇ ಇದ್ದಾಳೆ.

ಇಲ್ಲಿ ಒಬ್ಬ ಗಂಡಸೂ ಇಲ್ಲ, ಆದರೂ ಹೆಂಗಸರಿಗೆ ಮಕ್ಕಳಾಗುತ್ತವೆ
 

ಹಿಂದೆಯೂ ಕನ್ಯಾಪೊರೆ ಬಗ್ಗೆ ತಪ್ಪು ಕಲ್ಪನೆಗಳಿದ್ದವು ಅನ್ನುವುದು ಪುರಾಣ ಕತೆಗಳಿಂದ ತಿಳಿಯುತ್ತದೆ. ಯಯಾತಿ ರಾಜನ ಕತೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ನಹುಷನ ಮಗ, ಚಂದ್ರವಂಶದ ರಾಜ ಯಯಾತಿಗೆ ದೇವಯಾನಿ ಮತ್ತು ಶರ್ಮಿಷ್ಠೆ ಎಂಬ ಪತ್ನಿಯರು. ಜೊತೆಗೊಬ್ಬ ಅಪ್ಸರೆಯ ಸಂಗವೂ ಇತ್ತು. ಈತ ಶುಕ್ರಾಚಾರ್ಯರ ಶಾಪಕ್ಕೆ ತುತ್ತಾಗಿ ಅಕಾಲ ಮುಪ್ಪಿಗೆ ಒಳಗಾದದ್ದು, ಅದನ್ನು ಯಾರೂ ಸ್ವೀಕರಿಸಲು ಮುಂದೆ ಬರದೇ ಈತನಿಗೆ ಶರ್ಮಿಷ್ಠೆಯಿಂದ ಹುಟ್ಟಿದ ಮಗ ಪುರ ಈತನ ವೃದ್ಧಾಪ್ಯವನ್ನು ಸ್ವೀಕರಿಸಿದ್ದು ಇತ್ಯಾದಿ ದೊಡ್ಡ ಕತೆಯಿದೆ.
 

ಯಯಾತಿಗೆ ಶರ್ಮಿಷ್ಠೆಯಿಂದ ಇಬ್ಬರೂ ಹೆಂಡತಿಯರಿಂದ ಹುಟ್ಟಿದ ಏಕೈಕ ಹೆಣ್ಣು ಕುಡಿ ಮಾಧವಿ. ಇವಳಿಗೆ ಒಂದು ವರವಿತ್ತು. ಅದು ಹೆರಿಗೆಯಾದ ಮೇಲೂ ಮತ್ತೆ ಕನ್ಯೆಯಾಗುವ ವರ. ಯಯಾತಿ ಈಕೆಯನ್ನೂ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡ.
 

ವಿಶ್ವಾಮಿತ್ರನ ಶಿಷ್ಯ ಗಾಲವ ತನ್ನ ಗುರು ವಿಶ್ವಾಮಿತ್ರನಿಗೆ ಗುರು ದಕ್ಷಿಣೆ ನೀಡಬೇಕಾಗಿರುತ್ತದೆ. ಅದು ಒಂದು ಕಿವಿ ಕಪ್ಪಾದ, ಮೈಯೆಲ್ಲ ಬಿಳುಪಾದ ಎಂಟುನೂರು ಕುದುರೆಗಳ ಕಾಣಿಕೆ. ಇಲ್ಲಿ ಗಾಲವನ ಸಹಾಯಕ್ಕೆ ವಿಷ್ಣು ತನ್ನ ಗರುಡನನ್ನು ಕಳುಹಿಸುತ್ತಾನೆ. ಗರುಡ ಗಾಳವನನ್ನು ಯಯಾತಿ ರಾಜನ ಆಸ್ಥಾನಕ್ಕೆ ಕರೆತರುತ್ತಾನೆ. ಯಯಾತಿಯ ಬಳಿ ಗಾಲವ ತನ್ನ ಗುರು ದಕ್ಷಿಣೆಯ ವಿಷಯ ತಿಳಿಸಿ ಅಂಥಾ ಎಂಟುನೂರು ಕುದುರೆಗಳನ್ನು ನೀಡಲು ಕೇಳುತ್ತಾನೆ.


#Feelfree: ನಂಗೆ ಹೆಂಡತಿ ಸಂಗವೂ ಬೇಕು, ಅವನ ಜೊತೆಗೂ ಸೆಕ್ಸ್ ಬೇಕು!

 

ಯಯಾತಿಗೆ ಆಗ ಮಾಧವಿಯ ನೆನಪಾಗುತ್ತದೆ. ಅವಳನ್ನು ಗಾಲವನಿಗೆ ನೀಡಿ, ಅವಳಿಗಿರುವ ವಿಶೇಷ ವರದ ಬಗ್ಗೆ ತಿಳಿಸಿ 'ಈ ಮೂಲಕ ಬೇಕಾದಷ್ಟು ಕುದುರೆಗಳನ್ನು ತೆಗೆದುಕೋ' ಅನ್ನುತ್ತಾನೆ. ಗಾಲವ ಮಾಧವಿಯನ್ನು ಮೊದಲು ಇಕ್ಷ್ವಾಕು ರಾಜನಿಗೆ ಒಂದು ವರ್ಷದ ಅವಧಿಗೆ ನೀಡಿ ಅವನಿಂದ ಇನ್ನೂರು ಕುದುರೆ ಪಡೆಯುತ್ತಾನೆ. ಈ ರಾಜನಿಂದ ಮಾಧವಿಗೆ ವಸುಮಾನ ಎಂಬ ಮಗ ಜನಿಸುತ್ತಾನೆ. ಬಳಿಕ ಮತ್ತೆ ಕನ್ಯೆಯಾಗುವ ಮಾಧವಿಯನ್ನು ಗಾಲವ, ಕಾಶಿರಾಜನಿಗೆ ಒಂದು ವರ್ಷದ ಅವಧಿಗೆ ನೀಡುತ್ತಾನೆ. ಇವನಿಂದ ಮಾಧವಿಗೆ ಪ್ರತರ್ಧನ ಎಂಬ ಮಗ ಹುಟ್ಟುತ್ತಾನೆ. ಆ ಬಳಿಕ ಭೋಜರಾಜನಿಗೆ ನೀಡುತ್ತಾನೆ. ಅವನಿಂದ ಶಿಬಿ ಎಂಬ ಮಗ ಹುಟ್ಟುತ್ತಾನೆ. ಕೊನೆಯಲ್ಲಿ ಆರು ನೂರು ಕುದುರೆಗಳ ಜೊತೆಗೆ ಈಕೆಯನ್ನೂ ಗಾಲವ ವಿಶ್ವಾಮಿತ್ರನಿಗೆ ಒಪ್ಪಿಸುತ್ತಾನೆ. ಅಷ್ಟಕನೆಂಬ ಮಗ ಇವರಿಬ್ಬರಿಗೆ ಹುಟ್ಟುತ್ತಾನೆ.

 

ಒಬ್ಬಾಕೆ ಐವರ ಪತ್ನಿಯಾಗುವ ದ್ರೌಪದಿ ಪದ್ಧತಿ ನಿಜಕ್ಕೂ ಭಾರತದಲ್ಲಿದೆ!

 

ಇಷ್ಟೆಲ್ಲ ಆಗಿಯೂ ಮತ್ತೆ ಮತ್ತೆ ಕನ್ಯೆಯಾದ ಮಾಧವಿ ಮರಳಿ ಯಯಾತಿಯಲ್ಲಿಗೇ ಬರುತ್ತಾಳೆ. ಆಗ ಯಯಾತಿ ಈಕೆಗೆ ಮದುವೆ ಮಾಡುವ ಉದ್ದೇಶದಿಂದ ಸ್ವಯಂವರ ಏರ್ಪಡಿಸುತ್ತಾನೆ. ಆಗ ಎಲ್ಲ ರಾಜಕುಮಾರರನ್ನೂ ಮಾಧವಿ ತಿರಸ್ಕರಿಸುತ್ತಾಳೆ. ಈ ಬದುಕಿನ ಬಗೆಗೇ ಅವಳಿಗೆ ಜಿಗುಪ್ಸೆ ಮೂಡುತ್ತದೆ. ತನ್ನ ತಂದೆಯೂ ಸೇರಿದಂತೆ ಹಲವರ ಸಣ್ಣ ಬುದ್ಧಿ ಅವಳಿಗೆ ಬದುಕಿನ ಬಗೆಗೇ ವೈರಾಗ್ಯ ಮೂಡಿಸುತ್ತದೆ. 


ಮಾಧವಿ ಎಲ್ಲರನ್ನೂ, ಎಲ್ಲವನ್ನೂ ತ್ಯಜಿಸಿ ತಪಸ್ಸಿಗೆ ತೆರಳುತ್ತಾಳೆ. ಕನ್ಯತ್ವ ಅನ್ನುವ ಒಂದು ದೈಹಿಕ ಲಕ್ಷಣ ಹೆಣ್ಣಿಗೆ ಆ ಕಾಲದಲ್ಲೂ ಶಾಪವಾಗಿ, ಈ ಕಾಲದಲ್ಲೂ ಶಾಪವಾಗುತ್ತಿರುವುದಕ್ಕೆ ಸಾಕ್ಷಿ ಇದು.


ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು2...

Follow Us:
Download App:
  • android
  • ios