ಇಂಗ್ಲೆಂಡ್ ಪ್ರಧಾನಿ ಕೂಡಾ ಗುರುವಾರ ಮಾಡ್ತಾರೆ ಉಪವಾಸ; ಏನು ಈ ದಿನದ ಉಪವಾಸ ಮಹತ್ವ?

ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಗೆ ಗುರುವಾರ ಅಂದ್ರೆ ವಿಶೇಷ ಪ್ರೀತಿ ಅಂತೆ. ಅಷ್ಟೇ ಅಲ್ಲ, ಅವರ ಅಳಿಯ ರಿಷಿ ಸುನಾಕ್ ಪ್ರತಿ ಗುರುವಾರ ಉಪವಾಸ ಆಚರಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಗುರುವಾರದ ಉಪವಾಸ ಆಚರಣೆಯ ಮಹತ್ವವೇನು ನೋಡೋಣ.

Rishi Sunak fasts every Thursday know the benefits of fasting skr

ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಗೆ ಗುರುವಾರ ಅಂದ್ರೆ ವಿಶೇಷ ಪ್ರೀತಿ ಅಂತೆ. ಅವರೇನೇ ಉತ್ತಮ ಕೆಲಸ ಮಾಡಿದ್ರೂ ಗುರುವಾರವೇ ಅದಕ್ಕಾಗಿ ಆಯ್ದುಕೊಳ್ಳುವುದು. ಇನ್ಫೋಸಿಸ್ ಕೂಡಾ ಗುರುವಾರವೇ ಶುರು ಮಾಡಿದ್ದು ಅವರು. ಅಷ್ಟೇ ಅಲ್ಲ, ಅವರ ಅಳಿಯ ರಿಷಿ ಸುನಾಕ್, ಪಂಜಾಬಿ ಮೂಲವಾದರೂ ಇಂಗ್ಲೆಡಿನಲ್ಲಿಯೇ ಹುಟ್ಟಿ ಬೆಳೆದವರು. ಹಾಗಿದ್ದೂ, ಅವರು ಪ್ರತಿ ಗುರುವಾರ ಉಪವಾಸ ಆಚರಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಇವರಿಬ್ಬರೂ ಮಂತ್ರಾಲಯ ರಾಯರ ಭಕ್ತರು.

ಸಾಮಾನ್ಯವಾಗಿ ಯಶಸ್ಸು ಪಡೆದವರು ಉಪವಾಸ ಮಾಡುತ್ತಾರೆ ಎಂದರೆ ಡಯಟ್ ಕಾರಣಕ್ಕೆ ಇರುತ್ತದೆ. ಆದರೆ, ಇವರು ಉಪವಾಸ ಆಚರಿಸುವುದು ಧಾರ್ಮಿಕ ಕಾರಣಕ್ಕೆ, ತಮ್ಮ ನಂಬಿಕೆಯ ಕಾರಣಕ್ಕೆ. ಕೇವಲ ನಾರಾಯಣಮೂರ್ತಿ, ರಿಷಿ ಸುನಾಕ್ ಮಾತ್ರವಲ್ಲ, ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ನಂಬಿಕೆಗಾಗಿ ವಾರದ ಕೆಲ ದಿನ ಉಪವಾಸ ಆಚರಿಸುತ್ತಾರೆ. ಅದರಲ್ಲೂ ಸಾಯಿಬಾಬಾರನ್ನು ನಂಬಿದವರು, ರಾಘವೇಂದ್ರ ಗುರುರಾಯರ ಭಕ್ತರು, ವಿಷ್ಣುವಿನ ಭಕ್ತರು ಅಲ್ಲದೆ, ಗುರು ಗ್ರಹದ ಅನುಗ್ರಹಕ್ಕಾಗಿ ಕಾಯುತ್ತಿರುವವರು ಗುರುವಾರ ಉಪವಾಸ ಆಚರಿಸುತ್ತಾರೆ. 

ಗುರುವಾರದ ಉಪವಾಸ ಆಚರಣೆಯ ವಿಶೇಷತೆ ಏನು? ಈ ದಿನ ಜನ ಏತಕ್ಕಾಗಿ ಉಪವಾಸ ಆಚರಿಸುತ್ತಾರೆ, ನಂಬಿಕೆಗಳೇನು ಎಂಬ ವಿವರಗಳನ್ನು ನೋಡೋಣ ಬನ್ನಿ.

ಗುರುವಾರದಂದು ಉಪವಾಸದ ಮಹತ್ವ
ಗುರುವಾರ, ಬೃಹಸ್ಪತಿಯ ವಾರ. ಈ ದಿನವು ಎಲ್ಲಾ ದೇವರುಗಳ ಗುರುವಾದ ಬೃಹಸ್ಪತಿ, ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಗ್ರಹಗಳ ಸ್ಥಾನಗಳ ಪ್ರಕಾರ, ಗುರುವಾರ ಗುರುವನ್ನು ಪೂಜಿಸುವ ದಿನ. ನಾವು ಕುಂಡಲಿ ಅಥವಾ ಜಾತಕದ ಬಗ್ಗೆ ಮಾತನಾಡಿದರೆ, ಗುರುಗ್ರಹದ ದುರ್ಬಲ ಸ್ಥಾನವು ನಿಮ್ಮ ವೈಯಕ್ತಿಕ ಜೀವನ, ಆರೋಗ್ಯ, ವಿವಾಹ ಸೇರಿದಂತೆ ಹೆಚ್ಚಿನದರ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಗುರುವಾರದಂದು ಗುರು/ವಿಷ್ಣುವಿನ ಆರಾಧನೆಯು ಪ್ರಯೋಜನಕಾರಿಯಾಗಿದೆ.

ಗುರುವಾರ ಉಪವಾಸ, ಅಥವಾ ಬೃಹಸ್ಪತಿ ವಾರ ವ್ರತವು ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಪ್ರಾರಂಭವಾಗುತ್ತದೆ ಮತ್ತು ಸಂಜೆಯವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಕೆಲವರು ಹಣ್ಣುಹಂಪಲು ಸೇವನೆ ಮಾಡುತ್ತಾರೆ. ಭಕ್ತರು ಗುರು ಅಥವಾ ಬೃಹಸ್ಪತಿ ಅಥವಾ ಭಗವಾನ್ ದಕ್ಷಿಣಾಮೂರ್ತಿಯ ಪ್ರಾರ್ಥನೆಯಲ್ಲಿ ದಿನವನ್ನು ಕಳೆಯುತ್ತಾರೆ. ಹಳದಿ ಬೃಹಸ್ಪತಿಯ ನೆಚ್ಚಿನ ಬಣ್ಣವಾಗಿರುವುದರಿಂದ, ಭಕ್ತರು ಹಳದಿ ಬಣ್ಣದ ಉಡುಪನ್ನು ಧರಿಸುತ್ತಾರೆ ಮತ್ತು ಹಳದಿ ಹೂವುಗಳು, ಬೇಳೆ, ಹಳದಿ ಶ್ರೀಗಂಧ, ಅರಿಶಿನ ಮತ್ತು ಹಳದಿ ಅಕ್ಕಿಯನ್ನು ಆತನಿಗಾಗಿ ಅರ್ಪಿಸುತ್ತಾರೆ. ಕೆಲವರು ಬಾಳೆ ಗಿಡಕ್ಕೂ ಪೂಜೆ ಮಾಡುತ್ತಾರೆ. 

ಕಪ್ಪೆ, ಕತ್ತೆ, ಗೊಂಬೆಗಳ ಮದುವೆ, ಇನ್ನಾದ್ರೂ ಬರುತ್ತಾ ಮಳೆ?

ಇನ್ನು, ಕರ್ನಾಟಕ, ಆಂಧ್ರದಲ್ಲಿ ಹೆಚ್ಚಿನ ಹಿಂದೂಗಳು ಮಂತ್ರಾಲಯ ಗುರು ರಾಘವೇಂದ್ರರ ಸ್ಮರಣೆ, ಆರಾಧನೆಗಾಗಿ ಗುರುವಾರ ಉಪವಾಸ ಮಾಡುತ್ತಾರೆ. ರಾಘವೇಂದ್ರ ಸ್ವಾಮಿ ಕೂಡಾ ತಮ್ಮ ಬೃಂದಾವನದಲ್ಲಿ ಇನ್ನೂ ನೆಲೆಸಿದ್ದು, ಭಕ್ತರಿಗೆ ಶೀಘ್ರ ಒಲಿಯುತ್ತಾರೆ. ಅವರ ಪವಾಡದ ಕತೆಗಳು ಭಕ್ತರ ಬತ್ತಳಿಕೆಯಲ್ಲಿ ಸದಾ ಇರುತ್ತವೆ. ಡಾ. ರಾಜಕುಮಾರ್, ಜಗ್ಗೇಶ್ ಸೇರಿದಂತೆ ಬಹಳಷ್ಟು ದಿಗ್ಗಜರು ರಾಯರನ್ನು ನಂಬಿದ್ದಾರೆ. ಅವರ ಪವಾಡಗಳಿಗೆ ಸಾಕ್ಷಿಯಾಗಿದ್ದಾರೆ. 

ಶಿರಡಿಯ ಸಾಯಿಬಾಬಾಗೆ ಕೂಡಾ ಜಗತ್ತಿನಾದ್ಯಂತ ಭಕ್ತರಿದ್ದಾರೆ. ಸಾಯಿಬಾಬಾ ಭಕ್ತರು ಕೂಡಾ ಗುರುವಾರವೇ ಉಪವಾಸ ಆಚರಣೆ ಮಾಡುತ್ತಾರೆ. 

ಗುರುವಾರ ಉಪವಾಸ ನಿಯಮಗಳು ಮತ್ತು ಆಚರಣೆಗಳು
ಗುರುವಾರ ಉಪವಾಸ ಮಾಡುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮಾರ್ಗಸೂಚಿಗಳು ಅಥವಾ ನಿಯಮಗಳನ್ನು ನೋಡೋಣ. ಇವು ಈ ಕೆಳಗಿನಂತಿವೆ:

ಬೇಗ ಎದ್ದು ಸ್ನಾನ ಮಾಡಬೇಕು.
ಹೆಚ್ಚುವರಿಯಾಗಿ, ವಿಷ್ಣುವನ್ನು ಅಥವಾ ಇಷ್ಟ ದೈವವನ್ನು ಪೂಜಿಸುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸಬೇಕು.
ಪೂಜೆಯ ಸಮಯದಲ್ಲಿ ಭಗವಾನ್ ವಿಷ್ಣುವಿಗೆ ನೈವೇದ್ಯವಾಗಿ ಬೇಳೆಕಾಳು, ಬೆಲ್ಲ, ಅರಿಶಿನ ಮತ್ತು ಬಾಳೆಹಣ್ಣುಗಳನ್ನು ಬಳಸಬೇಕು. 
ಉಪವಾಸವನ್ನು ಬೆಳಗಿನ ಜಾವದಿಂದ ಆರಂಭಿಸಿ ಮುಸ್ಸಂಜೆಯವರೆಗೆ ಮುಂದುವರಿಸಬೇಕು.
ಕೊನೆಯದಾಗಿ, ಉಪವಾಸವನ್ನು ಮುಗಿಸುವ ಮೊದಲು, ತಯಾರಿಸಿದ ಆಹಾರವನ್ನು ವಿಷ್ಣುವಿಗೆ/ ಇಷ್ಟದೇವರಿಗೆ ನೈವೇದ್ಯ ಅರ್ಪಿಸಬೇಕು ಮತ್ತು ಉಳಿದವುಗಳನ್ನು ಪ್ರಸಾದವಾಗಿ ಸೇವಿಸಬೇಕು.

ಗುರುವಾರ ಉಪವಾಸದ ಪ್ರಯೋಜನಗಳು
ಗುರುವಾರದ ಉಪವಾಸವು ಒಬ್ಬ ವ್ಯಕ್ತಿಗೆ ಅತ್ಯಂತ ಪ್ರಯೋಜನಕಾರಿ. ಇವು ಈ ಕೆಳಗಿನಂತಿವೆ:

ಕಷ್ಟದ ಮೇಲೆ ಕಷ್ಟ ಬರಲಿ, ಗೆದ್ದೇಗೆಲ್ತೀವಿ ಅನ್ನೋ ಛಲದಂಕ ಮಲ್ಲರು ಈ ರಾಶಿಯವ್ರು; ಅವರಿಗೆ ಗೆಲುವು ಶತಸಿದ್ಧ

ತಮ್ಮ ಜೀವನದಲ್ಲಿ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ.
ಇದರೊಂದಿಗೆ, ವಿಷ್ಣುವು ತನ್ನ ಭಕ್ತರಿಗೆ ಉತ್ತಮ ಸಂಗಾತಿಯನ್ನು ಆಶೀರ್ವದಿಸುತ್ತಾನೆ ಮತ್ತು ಹೀಗಾಗಿ, ವ್ಯಕ್ತಿಯು ಸಂತೋಷದ ವೈವಾಹಿಕ ಜೀವನವನ್ನು ನಡೆಸುತ್ತಾನೆ.
ಇದಲ್ಲದೆ, ಮದುವೆಯಾಗಲು ವಿಳಂಬ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಗುರುವಾರದ ಉಪವಾಸವು ಪ್ರಯೋಜನಕಾರಿಯಾಗಿದೆ. 
ಗುರುವಾರದ ಉಪವಾಸವು ವ್ಯಕ್ತಿಯ ಕುಂಡಲಿಯಲ್ಲಿ ಗುರುವನ್ನು ಬಲಪಡಿಸುತ್ತದೆ.
ಇದಲ್ಲದೆ, ಇದು ವ್ಯಕ್ತಿಯ ಜೀವನದಲ್ಲಿ ದುಷ್ಕೃತ್ಯ ಗುರುಗ್ರಹದ ಕೆಟ್ಟ ಮತ್ತು ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ಕೊನೆಯದಾಗಿ, ಗುರುವಾರದಂದು ಉಪವಾಸವು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳನ್ನು ಆಶೀರ್ವದಿಸುತ್ತದೆ.

ಉಪವಾಸದ ಆರೋಗ್ಯ ಪ್ರಯೋಜನಗಳು 
ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಉಪವಾಸ ಆಚರಣೆಯು ಹೆಚ್ಚುವರಿ ಪ್ರಯೋಜನವಾಗಿದೆ. ವೇದಗಳ ಕಾಲದಿಂದಲೂ ಏಕಾದಶಿ ಸೇರಿದಂತೆ ಹಲವು ವ್ರತಗಳ ಹೆಸರಿನಲ್ಲಿ ಉಪವಾಸ ಆಚರಣೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ಇಷ್ಟದೈವವನ್ನು ಒಲಿಸಿಕೊಡುವ ಜೊತೆಗೆ, ದೇಹದ ಜೀರ್ಣಾಂಗಗಳಿಗೆ ಆಗಾಗ ವಿಶ್ರಾಂತಿ ತರುತ್ತದೆ. ಇದರಿಂದ ಅವು ಹೆಚ್ಚು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಉಪವಾಸ ಆಚರಣೆಗೆ ಗಟ್ಟಿಯಾದ ಮನೋಬಲ ಬೇಕು. ಆ ಮನೋಬಲ ಸಾಧನೆಯು ನಮಗೆ ಹೆಚ್ಚಿನದನ್ನು ಸಾಧಿಸಲು ಪ್ರೇರಣೆಯಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ನಂಬಿದ ದೇವರಿಗಾಗಿ ನಾವೇನನ್ನೋ ಮಾಡಿದಾಗ ಅದರಿಂದ ಒಳಿತಾಗುವ ಭರವಸೆ ನಮ್ಮಲ್ಲಿ ಸದಾ ಕಾಲ ಸಕಾರಾತ್ಮಕ ಯೋಚನೆ, ಭರವಸೆಗಳನ್ನು ತುಂಬುತ್ತದೆ. 

Latest Videos
Follow Us:
Download App:
  • android
  • ios