ನಂದಿಯ ಕಿವಿಯಲ್ಲಿ ಹೇಳೋ ಆಶಯ ಈಡೇರುತ್ತೆ ನಿಜ, ಆದ್ರೆ ನಿಯಮಗಳು ಗೊತ್ತಾ?

ಎಲ್ಲ ಶಿವ ದೇವಾಲಯಗಳಲ್ಲೂ ಶಿವನ ಎದುರು ಅವನಿಗೆ ಅಭಿಮುಖವಾಗಿ ನಂದಿ ಇರುತ್ತಾನೆ. ಈ ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನು ಹೇಳಿದರೆ ಅವು ಬೇಗ ಈಡೇರುತ್ತವೆ. ಆದರೆ, ಹೀಗೆ ಹೇಳುವಾಗ ಕೆಲ ನಿಯಮಗಳು ತಿಳಿದಿರಬೇಕು.

Speak in Nandis ears like this to get your wishes fulfilled skr

ಶಿವನಿಗೆ ಅತ್ಯಂತ ಪ್ರಿಯವಾದ ಗಣಗಳಲ್ಲಿ ನಂದಿ(Nandi)ಯೂ ಸೇರಿದೆ. ಅವನನ್ನು ಕೈಲಾಸ ಪರ್ವತದ ದ್ವಾರಪಾಲಕ ಎನ್ನಲಾಗುತ್ತದೆ. ಯಾವುದೇ ಶಿವ ದೇವಾಲಯದಲ್ಲಿ, ಶಿವನ ಎದಿರು ಅವನಿಗೆ ಅಭಿಮುಖವಾಗಿ ಕೊಂಚ ದೂರದಲ್ಲಿ ನಂದಿ ಕುಳಿತುಕೊಳ್ಳುತ್ತಾನೆ. ಶಿವ ಚರಿತ್ರೆಯಲ್ಲಿ ನಂದಿಯ ಪ್ರಾಮುಖ್ಯತೆ ಹೇಳಲಾಗಿದೆ. 

ಈ ನಂದಿಯ ಕಿವಿಯಲ್ಲಿ ಯಾವುದೇ ಆಶಯವನ್ನು ಹೇಳಿದರೆ, ಶಿವನು ಖಂಡಿತವಾಗಿಯೂ ಅದನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಆದರೆ, ನಂದಿಯ ಕಿವಿಯಲ್ಲಿ ಏನಾದರೂ ಹೇಳುವ ಮುನ್ನ ಕೆಲ ನಿಯಮಗಳನ್ನು ಪಾಲಿಸಬೇಕು. ಅವೇನು ನೋಡೋಣ.

ಎಡಕಿವಿಯಲ್ಲಿ ಹೇಳಿ

  • ಯಾವುದೇ ಇಚ್ಛೆಯನ್ನು ಹೇಳುವ ಮೊದಲು ನಂದಿಯನ್ನು ಆರಾಧಿಸಿ. 
  • ಬಳಿಕ ನಿಮ್ಮ ಇಚ್ಛೆಯನ್ನು ಯಾವಾಗಲೂ ನಂದಿಯ ಎಡ ಕಿವಿಯಲ್ಲಿ ಹೇಳಿ. 
  • ನಿಮ್ಮ ಆಶಯವನ್ನು ಹೇಳುವಾಗ, ನಿಮ್ಮ ಕೈಗಳಿಂದ ನಿಮ್ಮ ತುಟಿಗಳನ್ನು ಗುಟ್ಟು ಹೇಳುವಂತೆ ಮುಚ್ಚಿ. 
  • ನಂದಿಯ ಕಿವಿಯಲ್ಲಿ ಹೇಳುವ ಆಶಯದಲ್ಲಿ ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದು.
  • ನಂದಿಯ ಮುಂದೆ ನಿಮ್ಮ ಇಷ್ಟಾರ್ಥಗಳನ್ನು ಹೇಳಿದ ನಂತರ, ಅವನ ಮುಂದೆ ಹಣ್ಣು ಅಥವಾ ಏನನ್ನಾದರೂ ಅರ್ಪಿಸಿ.

    Vastu Tips: ಆನೆಯನ್ನು ಬಳಸಿ, ಮನೆಯ ಸಮೃದ್ಧಿ ನೆಮ್ಮದಿ ಹೆಚ್ಚಿಸುವುದು ಹೀಗೆ..

ಏಕೆ ನಂದಿಯ ಕಿವಿಯಲ್ಲಿ ಹೇಳುವುದು?
ಶಾಸ್ತ್ರಗಳ ಪ್ರಕಾರ, ಶಿವನು ಯಾವಾಗಲೂ ತನ್ನ ತಪಸ್ಸಿನಲ್ಲಿ ಇರುತ್ತಾನೆ ಮತ್ತು ನಂದಿಯು ಶಿವನ ತಪಸ್ಸಿಗೆ ಯಾರಿಂದಲೂ ತೊಂದರೆಯಾಗದಂತೆ ಕಾಯುತ್ತಾ ಇರುತ್ತಾನೆ. ಇಂಥ ಸಂದರ್ಭದಲ್ಲಿ ಶಿವನ ದರ್ಶನಕ್ಕೆ ಬಂದ ಭಕ್ತರು ನೇರವಾಗಿ ಶಿವನಲ್ಲಿ ಬೇಡಿಕೆ ಇಟ್ಟರೆ ಆತನ ತಪಸ್ಸಿಗೆ ಭಂಗವಾಗುತ್ತದೆ. ಹೀಗಾಗಿ ಅವರು ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿ ತೆರಳುತ್ತಾರೆ. ಶಿವನ ತಪಸ್ಸು ಮುಗಿದ ಬಳಿಕ, ನಂದಿಯ ಕಿವಿಯಿಂದ ಕೇಳಿದ ಮಾತು ಶಿವನಿಗೆ ತಲುಪುತ್ತದೆ. 

ನಂದಿಯ ಮುಂದೆ ದೀಪ ಹಚ್ಚಿ
ಶಿವನನ್ನು ಪೂಜಿಸಿದ ನಂತರ ನಂದಿಯ ಮುಂದೆ ದೀಪವನ್ನು ಹಚ್ಚಬೇಕು. ಇದಾದ ನಂತರ ನಂದಿಗೆ ಆರತಿ ಮಾಡಬೇಕು. ನಂದಿಯ ಬಳಿ ಕೋರಿದ ಇಷ್ಟಾರ್ಥವನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು.  

ಶಿವಲಿಂಗದ ನಂತರ ನಂದಿಯನ್ನು ಪೂಜಿಸಬೇಕು
ಬಹಳಷ್ಟು ಜನರು ಶಿವನಿಗೆ ನಮಿಸಿ, ಪ್ರಾರ್ಥನೆ ಸಲ್ಲಿಸಿ, ಹಾಗೆಯೇ ಮನೆಗೆ ತೆರಳುತ್ತಾರೆ. ಆದರೆ ಇದು ಸರಿಯಲ್ಲ. ಶಾಸ್ತ್ರಗಳ ಪ್ರಕಾರ, ಶಿವನನ್ನು ಪೂಜಿಸಿದ ನಂತರ, ನಂದಿಯನ್ನು ಪೂಜಿಸಬೇಕು. ಶಿವಲಿಂಗವನ್ನು ಪೂಜಿಸಿದ ನಂತರ ನೇರ ಮನೆಗೆ ಬಂದರೆ ಶಿವನನ್ನು ಪೂಜಿಸಿದ ಪೂರ್ಣ ಪುಣ್ಯವು ಸಿಗುವುದಿಲ್ಲ. ಹೀಗಾಗಿ, ಶಿವನನ್ನು ಪೂಜಿಸಿದ ಬಳಿಕ ನಂದಿಗೆ ಗೌರವ ಸಲ್ಲಿಸಿಯೇ ಹಿಂದಿರುಗಬೇಕು.

ಎಂಥ ಒತ್ತಡದ ಸಂದರ್ಭವನ್ನೂ ಸಮಾಧಾನದಿಂದ ನಿಭಾಯಿಸುವ ರಾಶಿಗಳಿವು..

ಇಷ್ಟಾರ್ಥ ಸಿದ್ಧಿ
ಸತಿಯನ್ನು ಕಳೆದುಕೊಂಡ ಶಿವನು ಜೀವನದಲ್ಲಿ ವೈರಾಗ್ಯ ಹೊಂದಿ ಗುಹೆಯೊಂದರೊಳಗೆ ಸೇರಿ ತಪಸ್ಸಿನಲ್ಲಿ ಮುಳುಗಿ ಹೋಗುತ್ತಾನೆ. ಆಗ ನಂದಿ ಕೂಡಾ ಗುಹೆಯ ಹೊರಗೆ ಶಿವನಿಗಾಗಿ ಕಾದು ಕುಳಿತುಕೊಳ್ಳುತ್ತಾನೆ. ಸಾವಿರಾರು ವರ್ಷಗಳ ಕಾಲ ನಂದಿಯು ಕಲ್ಲಿನ ರೂಪ ತಾಳಿ ಶಿವನಿಗಾಗಿ ತಾಳ್ಮೆಯಿಂದ ಕಾಯುತ್ತಾನೆ. ಶಿವನು ಕಡೆಗೊಂದಿ ದಿನ ಗುಹೆಯಿಂದ ಹೊರ ಬಂದಾಗ ಅಲ್ಲಿ ತನಗಾಗಿ ಕಾಯುತ್ತಿರುವ ನಂದಿಯ ಭಕ್ತಿಗೆ ಮೆಚ್ಚಿ, ಆತನನ್ನು ಇನ್ನು ಮುಂದೆ ಶಿವ ಸನ್ನಿಧಾನದಲ್ಲಿ ಪೂಜಿಸಲಾಗುವುದು ಎಂದು ತಿಳಿಸುತ್ತಾನೆ. ಅಷ್ಟೇ ಅಲ್ಲ, ಯಾರೇ ನಂದಿಯ ಕಿವಿಯಲ್ಲಿ ಏನೇ ಕೋರಿಕೊಂಡರೂ ತಾನದನ್ನು ಈಡೇರಿಸುವುದಾಗಿ ಹೇಳುತ್ತಾನೆ. ಸಾಮಾನ್ಯವಾಗಿ ಜನರು ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾರೆ. ಹೀಗೆ ಕೋರಿದ ಬಯಕೆಯು ಶೀಘ್ರ ಈಡೇರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios