Vastu Tips: ಆನೆಯನ್ನು ಬಳಸಿ, ಮನೆಯ ಸಮೃದ್ಧಿ ನೆಮ್ಮದಿ ಹೆಚ್ಚಿಸುವುದು ಹೀಗೆ..
ಆನೆಗೆ ಜ್ಯೋತಿಷ್ಯದಲ್ಲಿ, ಫೆಂಗ್‌ಶುಯ್‌ನಲ್ಲಿ ಹಾಗೂ ವಾಸ್ತುಶಾಸ್ತ್ರದಲ್ಲಿ ಕೂಡಾ ಬಹಳಷ್ಟು ಮಹತ್ವವಿದೆ. ಆನೆಯನ್ನು ಮನೆಯಲ್ಲಿ ಎಲ್ಲಿಟ್ಟರೆ ಸಮೃದ್ಧಿ, ಸಂತೋಷ ಹೆಚ್ಚುತ್ತದೆ ಗೊತ್ತಾ?
ಆನೆಗಳನ್ನು ಪೇಂಟಿಂಗ್(Painting) ರೂಪದಲ್ಲಿ, ವಿಗ್ರಹಗಳು(idols) ಸೇರಿದಂತೆ ವಿವಿಧ ರೂಪದಲ್ಲಿ ಮನೆಯಲ್ಲಿ ಬಳಸಿದಾಗ ಮನೆಯ ಅಂದ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಅವು ಮನೆಗೆ ಒಂದು ರೀತಿಯ ಪ್ರತಿಷ್ಠೆ ತರುತ್ತವೆ. ಅಷ್ಟೇ ಅಲ್ಲ, ಆನೆಗಳಿಗೆ(Elephants) ವಾಸ್ತುಶಾಸ್ತ್ರದಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದೆ. ಪುರಾತನ ದೇವಾಲಯಗಳ ಎದುರಿನ ಪ್ರಾಂಗಣದಲ್ಲಿ ಕೂಡಾ ಎರಡು ಆನೆಗಳನ್ನು ನಿಲ್ಲಿಸಿರುವುದನ್ನು ನೀವು ಕಾಣಬಹುದು. ಅವು ಸ್ಥಳದ ಗಾಂಭೀರ್ಯತೆ ಹೆಚ್ಚಿಸುತ್ತವೆ. ಜೊತೆಗೆ, ತಾವಿರುವಲ್ಲಿಗೆ ಸಕಾರಾತ್ಮಕ ಕಳೆ(positive energy) ತರುತ್ತವೆ.
ಫೆಂಗ್ ಶುಯ್‌ನಲ್ಲಿ ಆನೆಯು ಬುದ್ಧ(Buddha)ನನ್ನು ಸಂಕೇತಿಸಿದರೆ, ಜ್ಯೋತಿಷ್ಯದಲ್ಲಿ ವಿಘ್ನ ನಿವಾರಕ ಗಣಪತಿಯನ್ನು ಸಂಕೇತಿಸುತ್ತದೆ. ಆನೆಯು ಬಹಳ ಬುದ್ಧಿವಂತ ಮತ್ತು ಪ್ರಬುದ್ಧ ನಡೆಯ ಪ್ರಾಣಿಯಾಗಿದ್ದು, ಅದು ಮನೆಗೆ ಸಕಾರಾತ್ಮಕ ಶಕ್ತಿ ತರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಈ ಮೂಲಕ ಆನೆಯು ಮನೆಯ ಅದೃಷ್ಟ(luck) ಹೆಚ್ಚಿಸುತ್ತದೆ, ಸಂಬಂಧಗಳ ನಡುವೆ ಸಾಮರಸ್ಯ ತರುತ್ತದೆ, ಈ ಮೂಲಕ ನೆಮ್ಮದಿ ಸಂತೋಷ ಹೆಚ್ಚುತ್ತದೆ. ಆದರೆ, ನೆನಪಿಡಿ, ಆನೆಯ ಪ್ರತಿಮೆ ಅಥವಾ ಚಿತ್ರಗಳನ್ನು ಕೆಲವು ದಿಕ್ಕುಗಳು ಮತ್ತು ಸ್ಥಳಗಳಲ್ಲಿ ಸರಿಯಾದ ಮತ್ತು ನಿರ್ದಿಷ್ಟ ರೀತಿಯಲ್ಲಿ ಬಳಸಿಕೊಳ್ಳುವವರೆಗೆ ಈ ಎಲ್ಲಾ ಸಕಾರಾತ್ಮಕ ಪರಿಣಾಮಗಳನ್ನು ಸಾಧಿಸಬಹುದು.
ವಾಸ್ತು ಪ್ರಕಾರ, ಮನೆಯಲ್ಲಿ ಆನೆಯ ವರ್ಣಚಿತ್ರ ಎಲ್ಲಿ ಇಡಬೇಕು?
ವಾಸ್ತು ಶಾಸ್ತ್ರದಲ್ಲಿ ಆನೆಗಳು ಸಂರಕ್ಷಕರಾಗಿ ಕಾರ್ಯ ನಿರ್ವಹಿಸುತ್ತವೆ. ಆನೆಯ ಪ್ರತಿಮೆಗಳನ್ನು ಮುಂಭಾಗದ ಪ್ರವೇಶದ್ವಾರ(entrance)ದಲ್ಲಿ ಇರಿಸುವುದು ಅದೃಷ್ಟವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಒಳಮುಖವಾಗಿ ನೋಡುವಂತೆ ಜೋಡಿ ಆನೆಗಳನ್ನು ಇರಿಸಿ. ನಿಮ್ಮ ಮನೆಯನ್ನು ದುಷ್ಟ ಅಥವಾ ಋಣಾತ್ಮಕ ಶಕ್ತಿ(negative energy)ಯಿಂದ ರಕ್ಷಿಸಲು ನೀವು ಬಯಸಿದರೆ, ನೀವು ಅದನ್ನು ತತ್ವಕ್ಕೆ ಅನುಗುಣವಾಗಿ ಹೊರಮುಖವಾಗಿ ಇಡಿ.
ವಾಸ್ತು ಪ್ರಕಾರ, ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ(relationship)ವನ್ನು ಬಲಪಡಿಸಲು ಮಲಗುವ ಕೋಣೆಯಲ್ಲಿ ಆನೆಗಳ ವರ್ಣಚಿತ್ರವನ್ನು ನೇತು ಹಾಕಿ. ನೀವು ಒಂದು ಜೋಡಿ ಆನೆಗಳ ಪ್ರತಿಮೆ ಅಥವಾ ಪೇಂಟಿಂಗ್ ಹಾಕಿ. ಅಥವಾ ಕುಶನ್ ಕವರ್‌ಗಳಲ್ಲಿ ಆನೆ ಚಿತ್ರವನ್ನು ಕೂಡಾ ಬಳಸಬಹುದು. ಆನೆಗಳಲ್ಲಿ ಒಂದು ಆನೆ ಮಾತ್ರ ದಂತವನ್ನು ಹೊಂದಿದ್ದರೆ ಮತ್ತು ಇನ್ನೊಂದು ದಂತವನ್ನು ಹೊಂದಿಲ್ಲದಿದ್ದರೆ, ಇದು ಗಂಡು ಮತ್ತು ಹೆಣ್ಣಿ ನಡುವಿನ ಆರೋಗ್ಯಕರ ಸಂಬಂಧವನ್ನು ಸೂಚಿಸುತ್ತದೆ. ಅಂತಹ ಪ್ರತಿಮೆಗಳನ್ನು ಮಲಗುವ ಕೋಣೆಯೊಳಗೆ ಇರಿಸಿದರೆ ದಂಪತಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
30 ವರ್ಷಗಳ ಬಳಿಕ ಕುಂಭದಲ್ಲಿ ಶನಿ ಜಯಂತಿ; ಈ ಮೂರು ರಾಶಿಗೆ ಮಂಗಳಕರ
ಮಕ್ಕಳ ಕೋಣೆ(Kids room)ಯಲ್ಲಿ
ನಿಮ್ಮ ಮಕ್ಕಳ ಕೋಣೆಗಾಗಿ ಅಮ್ಮ ಮತ್ತು ಮರಿಯಾನೆ ಇರುವಂಥ ಸಂಯೋಜನೆಯನ್ನು ಆರಿಸಿ. ಮಕ್ಕಳ ಜ್ಞಾನವನ್ನು ಬಲಪಡಿಸಲು ಮತ್ತು ಅವರ ಗಮನ ಮಟ್ಟವನ್ನು ಸುಧಾರಿಸಲು ನೀವು ಈ ಆನೆಗಳ ಆಕೃತಿಯನ್ನು ವಾಲ್‌ಪೇಪರ್ ಅಥವಾ ಆಟಿಕೆಗಳ ಪ್ರಕಾರದಲ್ಲಿ ಕೂಡಾ ಇರಿಸಬಹುದು. ಅಧ್ಯಯನದ ಮೇಜಿನ ಮೇಲೆ ಆನೆಯ ಚಿತ್ರಕಲೆ ಅಥವಾ ಪ್ರತಿಮೆಯನ್ನು ಇಡಿ. ಎರಡು ಮರಿಯಾನೆಗಳು ಸೊಂಡಿಲನ್ನು ಒಂದರತ್ತ ಒಂದು ಚಾಚಿದ್ದಂತ ಪೇಂಟಿಂಗ್ ಕೂಡಾ ಉತ್ತಮ. ಅದು ಉತ್ತಮ ಗೆಳೆತನ, ಸಂಬಂಧದ ಸೂಚಕವಾಗಿದೆ. ಇದರಿಂದ ಸಂಬಂಧ ಕಾಪಾಡಿಕೊಳ್ಳಬಹುದು.
ದಿಕ್ಕು(direction)
ಆನೆಯ ವರ್ಣಚಿತ್ರಗಳು ಅಥವಾ ಪೇಂಟಿಂಗ್ ಹಾಕಲು ಕೋಣೆಯ ಉತ್ತರ ಮತ್ತು ಪೂರ್ವ ದಿಕ್ಕನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.
ವೃತ್ತಿ ಸ್ಥಳದಲ್ಲಿ
ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆಯನ್ನು ಕಂಡುಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ, ಕಾರ್ಯಸ್ಥಳದಲ್ಲಿ ಆನೆಯ ಪ್ರತಿಮೆಯನ್ನು ಇರಿಸಿ. ನಿಮ್ಮ ನಾಯಕತ್ವದ ಗುಣಗಳನ್ನು ಬಲಪಡಿಸಲು ಮತ್ತು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ, ಆನೆಯ ಪ್ರತಿಮೆಯನ್ನು ವ್ಯಾಪಾರ ಸ್ಥಳದ ಬಾಗಿಲಿನ ಮುಂದೆ ಇರಿಸಿ. ಕೆಲಸದ ವಾತಾವರಣದಲ್ಲಿ ಇರಿಸಿದಾಗ ಆನೆ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಇದರ ಉಪಸ್ಥಿತಿಯು ನಿಮ್ಮ ವೃತ್ತಿ(Career) ಮತ್ತು ವ್ಯವಹಾರಕ್ಕೆ ಶಕ್ತಿ ನೀಡುತ್ತದೆ.
ತುಳಸಿ ಒಣಗುತ್ತಿದೆಯೇ? ಇದು ಎಚ್ಚರಿಕೆ ಗಂಟೆಯಾಗಿರಬಹುದು, ಹುಷಾರ್!
ವಾಸ್ತುತತ್ತ್ವದ ಪ್ರಕಾರ, ಆನೆಯ ಸೊಂಡಿಲು ಮೇಲೆತ್ತಿದ್ದರೆ ಅದು ಉತ್ತಮ ಮನಸ್ಥಿತಿಯನ್ನು ಕಾಪಾಡುತ್ತದೆ. ಜೊತೆಗೆ ಅದೃಷ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ. ಇವು ಕುಟುಂಬದಲ್ಲಿ ಸಂತೋಷ ತರುತ್ತವೆ. ಕೆಳಮುಖವಾಗಿದ್ದರೆ ಅದು ಗಮನ ಮತ್ತು ಇಂದ್ರಿಯತೆಯನ್ನು ಸೂಚಿಸುತ್ತದೆ. ಕೆಳಮುಖವಾಗಿರುವ ಸೊಂಡಿಲು ಸವಾಲುಗಳನ್ನು ಬಿಚ್ಚಿಡುವ ಸಾಮರ್ಥ್ಯವನ್ನು ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತದೆ. ಆನೆಯ ಸೊಂಡಿಲು ಮೇಲಿದ್ದ ಅದರಲ್ಲಿ ಚೆಂಡು ಅಥವಾ ಮತ್ಯಾವುದೋ ವಸ್ತು ಎಸೆಯಲು ಸಿದ್ಧವಾದಂತೆ ಇದ್ದರೆ, ಅದು ನೆಗೆಟಿವ್ ಎನರ್ಜಿಯನ್ನು ದೂರ ಹಾಕುತ್ತದೆ.