ಈ ರಾಶಿಗೆ ಆಳ, ಅಂತ್ಯವಿಲ್ಲದ ಸಂಬಂಧವೇ ಇಷ್ಟ, ಸ್ಟ್ರಾಂಗ್ ಬಾಂಡಿಂಗ್ ಇವರ ಸ್ಟ್ರೆಂಥ್!
ಸಂಬಂಧಗಳು ಆಪ್ತವಾಗಿರಬೇಕು ಎನ್ನುವುದು ಎಲ್ಲರ ಬಯಕೆ. ನಮ್ಮವರ ಜತೆಗೆ ಉತ್ತಮ ಸಾಂಗತ್ಯವಿದ್ದರೆ ಬದುಕು ಸುಂದರ ಎನ್ನುವುದು ಎಲ್ಲರ ಪರಿಕಲ್ಪನೆಯೂ ಹೌದು. ಆದರೂ ಕೆಲವು ರಾಶಿಗಳ ಜನ ಮಾತ್ರ ಇನ್ನೂ ಹೆಚ್ಚಿನ ಆಳವಾದ ಸಂಬಂಧವನ್ನು ನಿರೀಕ್ಷೆ ಮಾಡುತ್ತಾರೆ. ಅರ್ಥಪೂರ್ಣವಾದ ಸಾಂಗತ್ಯದಲ್ಲಿ ಮಾತ್ರ ಅವರು ನೆಮ್ಮದಿ ಕಾಣುತ್ತಾರೆ.
ಸಂಬಂಧಗಳ ಕುರಿತಾಗಿ ಪ್ರತಿಯೊಬ್ಬರೂ ತಮ್ಮದೇ ಆದ ನಿಲುವು, ಹಂಬಲ ಹೊಂದಿರುತ್ತಾರೆ. ಬಹಳಷ್ಟು ಜನ ಮೇಲುಮೇಲಿನ ಸ್ನೇಹ ಸಂಬಂಧಗಳಿಗೆ ಆದ್ಯತೆ ನೀಡಿದರೆ, ಹಲವು ಜನರಿಗೆ ಎಲ್ಲ ಸಂಬಂಧಗಳೂ ಆಪ್ತವಾಗಿರಬೇಕು. ಅದರಲ್ಲೂ ತಮ್ಮವರು ಎನಿಸಿಕೊಂಡವರಿಗೆ ಆಳವಾದ ಸಾಂಗತ್ಯ ಬೇಕಾಗಿರುತ್ತದೆ. ಇವರ ಪ್ರಕಾರ, ಸಂಬಂಧಗಳು ಆಪ್ತವಾಗಿದ್ದರಷ್ಟೇ ಮನುಷ್ಯನ ಅಂತರಾಳದ ಹಸಿವು ನೀಗುತ್ತದೆ. ಮನುಷ್ಯನ ಈ ನಿಲುವು ರೂಪಿಸುವಲ್ಲಿ ನಮ್ಮ ರಾಶಿಚಕ್ರಗಳ ಪ್ರಭಾವ ಹೆಚ್ಚು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 5 ರಾಶಿಗಳ ಜನರಲ್ಲಿ ಈ ಗುಣ ಅಂತರ್ಗತವಾಗಿರುತ್ತದೆ. ಇವರು ಆಳವಾದ, ಅರ್ಥಪೂರ್ಣ ಸಂಬಂಧಗಳಿಗೆ ಬೆಲೆ ನೀಡುತ್ತಾರೆ. ಇವರನ್ನು ಹೊರತುಪಡಿಸಿದ ಬೇರೆ ರಾಶಿಗಳಿಗೆ ಸಂಬಂಧಗಳು ಬೇಕಾಗಿಲ್ಲ ಎಂದರ್ಥವಲ್ಲ. ಆದರೆ, ಅವರು ಹಗುರವಾದ, ಸುಲಭವಾದ ಮೇಲುಮೇಲಿನ ಸಂಬಂಧಗಳಲ್ಲೂ ಸುಖಿಯಾಗಿ ಇರಬಲ್ಲರು. ಅವರಿಗೆ ಆಳವಾದ ಬಾಂಧವ್ಯ ಇಲ್ಲದಿರುವುದು ಅಷ್ಟೇನೂ ಸಮಸ್ಯೆ ಎನಿಸುವುದಿಲ್ಲ. ಆದರೆ, ಕೆಲ ರಾಶಿಚಕ್ರಗಳ ಜನ ಹಾಗಲ್ಲ. ಅವರು ಆಳವಾದ ಬಾಂಧವ್ಯಕ್ಕೇ ಹಾತೊರೆಯುತ್ತಾರೆ.
• ಕರ್ಕಾಟಕ (Cancer)
ಆಳವಾದ ಭಾವನಾತ್ಮಕ ಸಾಂಗತ್ಯಕ್ಕೆ (Deep Emotional Relationship) ಬಯಸುವ ಕರ್ಕಾಟಕ ರಾಶಿಯ ಜನ ತೀವ್ರವಾದ ಭಾವನೆಗಳು, ಅಂತಃದೃಷ್ಟಿ (Intuition) ಮತ್ತು ಅಂತರಂಗದ ವಿಚಾರಗಳನ್ನು ಹೊಂದಿರುತ್ತಾರೆ. ಇತರರ ಭಾವನಾತ್ಮಕ ಅಗತ್ಯಗಳನ್ನೂ ಅರಿತುಕೊಳ್ಳುವುದರಲ್ಲಿ ಇವರು ಮುಂದಿರುತ್ತಾರೆ. ಇವರು ಸುಮ್ಮನೆ ಮೇಲುಮೇಲಿನ ಕ್ಷಣಗಳನ್ನು, ಆಳವಿಲ್ಲದ ಮಾತುಕತೆಗಳನ್ನು ಇಷ್ಟಪಡುವುದಿಲ್ಲ. ತಮ್ಮ ದೌರ್ಬಲ್ಯಗಳನ್ನು, ಭಯ (Fear), ಕನಸುಗಳನ್ನು (Dreams) ಮುಕ್ತವಾಗಿ ಹಂಚಿಕೊಳ್ಳಬಹುದಾದ ಆಳವಾದ ಸಾಂಗತ್ಯ ಬಯಸುತ್ತಾರೆ. ಮುಖವಾಡವಿಲ್ಲದೆ (Mask) ಎಲ್ಲವನ್ನೂ ಬಹಿರಂಗಪಡಿಸಿಕೊಳ್ಳಲು ಸಾಧ್ಯವಾಗುವ ಸಂಬಂಧವನ್ನು ಬಯಸುತ್ತಾರೆ.
ಶನಿ ದೋಷ ಇದ್ರೆ ಭಯ ಬೇಡ, ಈ ಸಿಂಪಲ್ ಪರಿಹಾರ ಮಾಡಿ
• ಕುಂಭ (Aquarius)
ಎಲ್ಲರಿಂದ ಪ್ರತ್ಯೇಕವಾದ (Different) ಮನಸ್ಥಿತಿ ಹೊಂದಿರುವಂತೆ ಭಾಸವಾಗುವ ಕುಂಭ ರಾಶಿಯ ಜನರಿಗೆ ಆಳವಾದ ಬಾಂಧವ್ಯದ ಅಗತ್ಯವಿರುತ್ತದೆ. ಮೇಲ್ನೋಟಕ್ಕೆ ಅವರು ವಿಸ್ತಾರವಾದ ಸಮೂಹದೊಂದಿಗೆ, ಬುದ್ಧಿಜೀವಿಗಳೊಂದಿಗೆ, ಸಾಮಾಜಿಕ ವಿಚಾರಗಳೊಂದಿಗೆ ಕನೆಕ್ಟ್ (Connect) ಆಗಿರುವಂತೆ ಕಂಡುಬಂದರೂ ಇವರ ಅಂತರಾಳ (Inner Self) ಆಳವಾದ ಸಾಂಗತ್ಯವನ್ನು ಬಯಸುತ್ತಿರುತ್ತದೆ. ಅರ್ಥಪೂರ್ಣ (Meaningful) ಹಾಗೂ ಪ್ರಾಮಾಣಿಕ (Prompt) ಸಂಬಂಧ ಇರಬೇಕು ಎನ್ನುತ್ತಾರೆ. ಆಪ್ತವಾದ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ಜೀವನದ ಬಗ್ಗೆ ತಮ್ಮ ಅಸಾಂಪ್ರದಾಯಿಕ ನಿಲುವುಗಳನ್ನು ಅರ್ಥಮಾಡಿಕೊಳ್ಳಬಲ್ಲ ಸಂಗಾತಿಯನ್ನು (Partner) ಬಯಸುತ್ತಾರೆ. ಭಾವನಾತ್ಮಕ ವಿಚಾರಗಳಿಗಷ್ಟೇ ಅಲ್ಲ, ಮಾನಸಿಕ ಉತ್ತೇಜನ ಮತ್ತು ವಿಚಾರಗಳ ವಿನಿಮಯಕ್ಕಾಗಿಯೂ ಇವರಿಗೆ ಆಳವಾದ ಸಾಂಗತ್ಯ ಬೇಕು.
• ವೃಶ್ಚಿಕ (Scorpio)
ತೀವ್ರತೆಯ ಪ್ಲೂಟೋ ಗ್ರಹ ಅಧಿಪತಿಯಾಗಿರುವ ವೃಶ್ಚಿಕ ಜನ ನಿಗೂಢತೆಯನ್ನು (Mystery) ಮೈಗೂಡಿಸಿಕೊಂಡಿರುತ್ತಾರೆ ಹಾಗೂ ಆಳವಾದ ಭಾವನೆಗಳನ್ನು ಹೊಂದಿರುತ್ತಾರೆ. ಮೇಲ್ನೋಟಕ್ಕೆ ವೃಶ್ಚಿಕ ರಾಶಿಯ ಜನ ದ್ವೇಷದಿಂದ ಕೂಡಿರುವಂತೆ ಕಂಡುಬಂದರೂ ಇವರ ಅಂತರಾತ್ಮ ಆಳವಾದ ಬಾಂಧವ್ಯವನ್ನೇ ಬಯಸುತ್ತಿರುತ್ತದೆ. ತೀವ್ರತೆ (Intense) ಮತ್ತು ಆಳವನ್ನು ಬಯಸುವ ವೃಶ್ಚಿಕ ಜನರಿಗೆ ಮೇಲುಮೇಲಿನ ಸಂಪರ್ಕಗಳು ಇಷ್ಟವಾಗುವುದಿಲ್ಲ. ಮಾನವ ಸ್ಥಿತಿಗತಿಯ (Human Situation) ನಿಗೂಢತೆಯನ್ನು ಅರಿಯಲು ಸಾಧ್ಯವಾಗುವ ಸಂಬಂಧಗಳು ಇವರ ಮನತಣಿಸುತ್ತವೆ.
• ಮಿಥುನ (Gemini)
ಮಿಥುನ ರಾಶಿಯ ಜನರಿಗೆ ಆಳವಾದ ಸಂಬಂಧಗಳ ಅಗತ್ಯವಿರುತ್ತದೆ ಎಂದರೆ ಅಚ್ಚರಿಯಾಗಬಹುದು. ಸೋಷಿಯಲ್ ಬಟರ್ ಫ್ಲೈ ಎಂದು ಕರೆಸಿಕೊಳ್ಳುವ ಮಿಥುನ ರಾಶಿಯ ಜನ ಫ್ಲರ್ಟ್ (Flirt) ಗೂ ಹೆಸರು. ಮಾತುಕತೆಯನ್ನು ಭಾರೀ ಇಷ್ಟಪಡುತ್ತಾರೆ. ಹಲವು ವಿಚಾರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು ಅತ್ಯಂತ ಖುಷಿಯಾಗಿ (Happy) ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಆದರೆ, ಇವರ ಪ್ಲೇಫುಲ್ (Playful) ಬಾಹ್ಯ ಚಟುವಟಿಕೆಯಿಂದಾಗಿ ಇವರು ಮೇಲಿಮೇಲಿನ ಸಂಬಂಧಗಳನ್ನು ಇಷ್ಟಪಡುತ್ತಾರೆ ಎಂದೆನಿಸಿಬಿಡುತ್ತದೆ. ಆದರೆ, ಇವರ ಅಂತರಾತ್ಮ ಅರ್ಥಪೂರ್ಣ ಸಾಂಗತ್ಯವನ್ನು ಬಯಸುತ್ತದೆ. ಅವು ಕೇವಲ ಸಂಬಂಧವಷ್ಟೇ ಆಗಿರಬೇಕೆಂದಿಲ್ಲ, ಅನುಭವ, ಉತ್ತಮ ಮಾತುಕತೆಗಳೂ ಆಗಬಹುದು.
ಮೇಷ ರಾಶಿಯವರು ಮದುವೆಯಾಗುವುದಾದರೆ ಈ ರಾಶಿಯವರನ್ನೇ ಆಗಿ..! ನಿಮ್ಮ ರಾಶಿಗೆ ಪಕ್ಕಾ ಮ್ಯಾಚ್
• ವೃಷಭ (Taurus)
ವೃಷಭ ರಾಶಿಯ ಜನ ಮೇಲ್ನೋಟಕ್ಕೆ ಕಂಫರ್ಟ್, ಸ್ಥಿರತೆ ಮತ್ತು ವಸ್ತುಗಳನ್ನು ಬಯಸುವ ಜನ ಎನಿಸುತ್ತಾರೆ. ವೀನಸ್ ಗ್ರಹಾಧಿಪತಿಯಾಗಿರುವ ಇವರು, ಅಂತ್ಯವಿಲ್ಲದ (Endless), ಆಳವಾದ ಸಂಬಂಧ ಹೊಂದಿರಲು ಇಷ್ಟಪಡುತ್ತಾರೆ. ಒಮ್ಮೆ ಬದ್ಧರಾದರೆ ಅದು ಎಂದಿಗೂ ಬದಲಾಗುವುದಿಲ್ಲ.