Food

ಚಾಕೊಲೇಟ್ ಬಾಳೆಹಣ್ಣಿನ ಮಫಿನ್ ಕೇಕ್

ಚಾಕೊಲೇಟ್ ಹಾಗೂ ಬಾಳೆಹಣ್ಣಿನಿಂದ ರೆಡಿಯಾದ ಮಫಿನ್‌ ಕೇಕ್‌ ನೈಸರ್ಗಿಕ ರುಚಿಯನ್ನು ಹೊಂದಿರುವ ತಿನಿಸಾಗಿದ್ದು,  ಎಲ್ಲಾ ವಯಸ್ಸಿನವರು ಇಷ್ಟಪಡುತ್ತಾರೆ. ಇದರ ಪಾಕ ವಿಧಾನ ಇಲ್ಲಿದೆ. 

Image credits: Freepik

ಮೊದಲ ಹಂತ

ನೀವು ಒವೆನ್ ಅನ್ನು 180°C (350°F) ಗೆ ಹೊಂದಿಸಿ ಮತ್ತು ಮಫಿನ್ ಟ್ರೇ ಅನ್ನು ಪೇಪರ್ ಲೈನರ್‌ಗಳಿಂದ ಜೋಡಿಸಿ. ಇದು ಸಮ ಬೇಕಿಂಗ್ ಅನ್ನು ಖಚಿತಪಡಿಸುತ್ತದೆ ಮತ್ತು ಅಂಟಿಕೊಳ್ಳುವುದನ್ನು ತಡೆಯುತ್ತದೆ

Image credits: Pixabay

ಹಂತ 2

2 ಮಾಗಿದ ಬಾಳೆಹಣ್ಣನ್ನು ಪೂರ್ತಿ ಪೇಸ್ಟ್ ಆಗುವಂತೆ ಸ್ಮ್ಯಾಶ್ ಮಾಡಿ. ಬಾಳೆಹಣ್ಣುಗಳು  ಮಫಿನ್‌ಗಳಿಗೆ ತೇವಾಂಶ ಮತ್ತು ನೈಸರ್ಗಿಕ ಮಾಧುರ್ಯವನ್ನು ನೀಡುತ್ತವೆ. 

Image credits: Pixabay

ಹಂತ 3

1.5 ಕಪ್ ಹಿಟ್ಟು, 1/3 ಕಪ್ ಕೋಕೋ ಪೌಡರ್, 1 ಟೀಸ್ಪೂನ್ ಬೇಕಿಂಗ್ ಪೌಡರ್ ಮತ್ತು ಒಂದು ಪಿಂಚ್ ಉಪ್ಪನ್ನು ಸೇರಿಸಿ. ಇದು ಮೆತ್ತನೆಯ ಮಫಿನ್‌ಗಳಿಗೆ ಬೇಕಾದ ಒಣ ಸಾಮಗ್ರಿಗಳು.

Image credits: Freepik

ಹಂತ -4

ಬಾಳೆಹಣ್ಣು, 1/2 ಕಪ್ ಸಕ್ಕರೆ, 1/3 ಕಪ್ ಕರಗಿದ ಬೆಣ್ಣೆ, 1 ಮೊಟ್ಟೆ ಮತ್ತು 1 ಟೀಸ್ಪೂನ್ ವೆನಿಲ್ಲಾ ಸಾರವನ್ನು  ಒಟ್ಟಿಗೆ ಸೇರಿಸಿ  ಬ್ಲೆಂಡ್ ಮಾಡಿ

Image credits: Freepik

ಹಂತ -5

ಈಗ ಈ ಪದಾರ್ಥಗಳನ್ನು ಡ್ರೈ ಆಗಿರುವ ಮಿಶ್ರಣಕ್ಕೆ ನಿಧಾನವಾಗಿ ಸೇರಿಸಿ ಬಳಿಕ  1/2 ಕಪ್ ಚಾಕೊಲೇಟ್ ಚಿಪ್ಸ್ ಸೇರಿಸಿ. ಹಿಟ್ಟನ್ನು ಲೈನರ್‌ಗಳಲ್ಲಿ ಇಡಿ. ಮತ್ತು 20 ನಿಮಿಷಗಳ ಕಾಲ ಬೇಯಿಸಿ. ಬಡಿಸುವ ಮೊದಲು ತಣ್ಣಗಾಗಿಸಿ

Image credits: Freepik

ನೀವು ಕುಡಿಯುವ ಈ ಪಾನೀಯಗಳು ನಿಮ್ಮ ಲಿವರ್‌ಗೆ ಹಾನಿಕಾರಕ!

ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುವ 7 ಸಮೃದ್ಧ ಪಾನೀಯ

ನೇರಳೆ ಎಲೆಕೋಸಿನ 7 ಅದ್ಭುತ ಆರೋಗ್ಯ ಪ್ರಯೋಜನಗಳು

ಮೂಲಂಗಿಯೊಂದಿಗೆ ಈ 5 ಆಹಾರಗಳನ್ನು ಸೇವಿಸಲೇಬೇಡಿ