Asianet Suvarna News Asianet Suvarna News

ಸಂಗಾತಿಯೊಂದಿಗೆ ಆಳವಾದ ಸಂಬಂಧ ಬಯಸುವ ರಾಶಿಚಕ್ರಗಳಿವು..

ಎಲ್ಲರ ಸಂಬಂಧವೂ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವರ ಒಡನಾಟ ಆಪ್ತವಾಗಿದ್ದರೆ, ಕೆಲವರದ್ದು ಮೇಲ್ನೋಟದ ಸಂಬಂಧವಾಗಿರುತ್ತದೆ. ಆಳವಾದ ಸಾಂಗತ್ಯ ಹೊಂದುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕೆಲವು ರಾಶಿಗಳ ಜನ ಮಾತ್ರ ತಮ್ಮ ಸಂಬಂಧ ಆಳವಾಗಿರಬೇಕು ಎಂದು ತೀವ್ರವಾಗಿ ಬಯಸುತ್ತಾರೆ ಹಾಗೂ ಪ್ರೀತಿ, ಕಾಳಜಿ ಮಾಡುವ ಸಂಗಾತಿಗಾಗಿ ಹುಡುಕಾಟ ನಡೆಸುತ್ತಾರೆ. 
 

Some zodiac sign wants to have deep relationship
Author
First Published Dec 7, 2022, 11:57 AM IST

ಎಲ್ಲ ಸಂಬಂಧಗಳೂ ತೀವ್ರವಾಗಿರುವುದಿಲ್ಲ. ಕೆಲವೊಮ್ಮೆ ಸಂಬಂಧಗಳು ಜಾಳುಜಾಳಾಗಿ ಇರಬಹುದು. ಬಹಳಷ್ಟು ಜನ ರೂಢಿಗತವಾದ ಸಂಬಂಧಗಳಲ್ಲಿ ಹೆಚ್ಚೇನೂ ಹುಡುಕಲು ಹೋಗುವುದಿಲ್ಲ. ಹೆಚ್ಚಿನ ಸಾಂಗತ್ಯ, ಆಳವಾದ ಬಾಂಧವ್ಯಗಳನ್ನು ಅಪೇಕ್ಷಿಸುವುದೂ ಇಲ್ಲ. ಇವುಗಳ ಅರ್ಥವೂ ತಿಳಿಯದಂತೆ ಬದುಕುವವರು ಸಾಕಷ್ಟು ಜನರಿದ್ದಾರೆ. ಆದರೆ, ಕೆಲವು ಜನ ಹಾಗಲ್ಲ. ಅವರು ತಮ್ಮ ಸಂಬಂಧವನ್ನು ಭಾರೀ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಹಾಗೂ ತಮ್ಮ ಬಗ್ಗೆ ನಿಜವಾಗಿಯೂ ಪ್ರೀತಿ, ಕಾಳಜಿ ಬಯಸುವ ಸಂಗಾತಿಯನ್ನು ಬಯಸುತ್ತಾರೆ. ದೈಹಿಕವಾಗಿ ಸನಿಹದಲ್ಲಿ ಇಲ್ಲದೇ ಹೋದರೂ ಪರವಾಗಿಲ್ಲ, ಭಾವನಾತ್ಮಕವಾಗಿ ಒಂದಾಗಿರುವ ಸಂಬಂಧವನ್ನು ಅವರು ಇಷ್ಟಪಡುತ್ತಾರೆ. ಆಳವಾದ ಬಾಂಧವ್ಯಕ್ಕಾಗಿ ಹಾತೊರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಜನರಲ್ಲಿ ಮಾತ್ರ ಈ ಗುಣ ಹೆಚ್ಚಾಗಿ ಕಂಡುಬರುತ್ತದೆ. ಎಲ್ಲರೂ ಸಾಮಾನ್ಯವಾಗಿ ತಮ್ಮ ಸಂಗಾತಿ ತಮ್ಮನ್ನು ಪ್ರೀತಿಸಲಿ, ಇಷ್ಟಪಡಲಿ, ತಮ್ಮ ಸಂಸಾರ ಅಥವಾ ಸಂಬಂಧ ಚೆನ್ನಾಗಿರಲಿ ಎಂದು ಬಯಸುವುದು ಸಹಜ. ಆದರೆ, ಈ ರಾಶಿಗಳ ಜನ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅತ್ಯಂತ ಆಪ್ತವಾದ, ಆಳವಾದ ಸಾಂಗತ್ಯವನ್ನು ಹೊಂದಲು ಇಷ್ಟಪಡುತ್ತಾರೆ. 

•    ವೃಷಭ (Taurus)
ಈ ರಾಶಿಯ ಜನ ಅತ್ಯಂತ ಭಾವನಾತ್ಮಕ (Emotional) ಮನೋ ಜಗತ್ತನ್ನು ಹೊಂದಿರುತ್ತಾರೆ. ಸಂಗಾತಿಯ (Partner) ಬಗ್ಗೆ ಅತ್ಯದ್ಭುತ ಎನ್ನಿಸುವಂತಹ ಬದ್ಧತೆ, ನಿಷ್ಠೆ (Commit) ಹೊಂದಿರುತ್ತಾರೆ. ಸಾಂಗತ್ಯಕ್ಕೆ (Relationship) ಒಳಪಟ್ಟ ಕ್ಷಣದಿಂದ ಅವರೊಂದಿಗೆ ಆಳವಾದ ಸಂಪರ್ಕ ಹೊಂದುತ್ತಾರೆ. ಇವರಲ್ಲಿ ಸಂಗಾತಿಯ  ಕುರಿತು ಮೊದಲು ಸ್ಫುರಿಸುವುದೇ ಈ ಭಾವನೆ. ಸಹಾನುಭೂತಿ ಹಾಗೂ ಆತ್ಮೀಯತೆ ಇವರಲ್ಲಿ ಕಂಡುಬರುವ ಸಾಮಾನ್ಯ ಗುಣ. ಪರಸ್ಪರ ಆಪ್ತತೆಯಿಂದ ಪ್ರೀತಿ (Love) ಮೂಡುತ್ತದೆ ಎಂದು ನಂಬುತ್ತಾರೆ. 

New Year 2023: ಹೊಸ ವರ್ಷದಲ್ಲಿ ಈ 5 ರಾಶಿಗಳಿಗೆ ಆಸ್ತಿ ಮಾಡುವ ಅದೃಷ್ಟ

•    ತುಲಾ (Libra)
ಈ ರಾಶಿಯ ಜನ ಗಂಭೀರವಾದ (Serious) ಸಾಂಗತ್ಯವನ್ನಷ್ಟೇ ಇಷ್ಟಪಡುತ್ತಾರೆ. ಅತಿ ಸಾಮಾನ್ಯ ಎನಿಸುವಂತಹ, ಆಪ್ತತೆಯಿಲ್ಲದ (Intimacy) ಸಂಗಾತಿಯಿಂದ ದೂರ ಓಡಲು ಯತ್ನಿಸುತ್ತಾರೆ. ಸಂಗಾತಿಯ ಗುಣಾವಗುಣಗಳನ್ನು  ಅರಿತುಕೊಳ್ಳುವ ಮುನ್ನವೇ ತಮ್ಮ ಆತ್ಮಸಂಗಾತಿ (Soul Mate) ದೊರೆತ ಭಾವನೆ ಅನುಭವಿಸುತ್ತಾರೆ. ಒಮ್ಮೆ ಸಂಬಂಧ ಏರ್ಪಟ್ಟರೆ ಜೀವನವಿಡೀ ಅದನ್ನು ಕಾಪಾಡುತ್ತಾರೆ. ಆ ಒಂದು ವ್ಯಕ್ತಿಗೆ ಜೀವನವನ್ನೇ ಅರ್ಪಿಸುವ ರೀತಿಯಲ್ಲಿ ಸಮರ್ಪಣಾ (Devote) ಭಾವ ಹೊಂದಿರುತ್ತಾರೆ. 

•    ಮಕರ (Capricorn) 
ಮಕರ ರಾಶಿಯ ಜನ ಬದ್ಧತೆಯುಳ್ಳ (Loyal) ಸಂಗಾತಿ ಆಗಿರುತ್ತಾರೆ. ಸಂಬಂಧಕ್ಕೆ ಒಳಗಾಗುವ ಮುನ್ನ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಒಮ್ಮೆ ಸಂಗಾತಿಗೆ ಬದ್ಧರಾದರೆ ಅದನ್ನು ಜೀವನವಿಡೀ ಕಾಯ್ದುಕೊಳ್ಳುತ್ತಾರೆ. ಮುದ್ದಾದ ರೀತಿಯಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ದೈಹಿಕ (Physical) ಸಾಮೀಪ್ಯದ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳುತ್ತಾರೆ. ಸಂಬಂಧದಲ್ಲಿ ನಂಬುಗೆ (Trust) ಹಾಗೂ ಲೈಂಗಿಕತೆ ಎರಡನ್ನೂ ಬಯಸುತ್ತಾರೆ.

Zodiac Sign: ಪ್ರಬಲ ಸಂಗಾತಿಯ ನಿಯಂತ್ರಣದಲ್ಲಿ ಈ ರಾಶಿಯವರು ಸುಖವಾಗಿರ್ತಾರೆ

•    ಸಿಂಹ (Leo)
ಈ ರಾಶಿಯ ಜನ ಹುಟ್ಟಾ ವಿಶ್ವಾಸಾರ್ಹ (Reliable) ಸ್ವಭಾವದವರು. ಇದನ್ನೇ ತಮ್ಮ ಸಂಗಾತಿಯಿಂದಲೂ ಬಯಸುತ್ತಾರೆ. ತಮ್ಮ ರೋಮ್ಯಾಂಟಿಕ್ (Romantic) ಉದ್ದೇಶ ಈಡೇರಿಸಿಕೊಳ್ಳಲು ಏನನ್ನಾದರೂ ಮಾಡಬಲ್ಲರು. ಸಂಗಾತಿಗಾಗಿ ಯಾವುದೇ ಕೆಲಸವನ್ನಾದರೂ ಮಾಡುವ ಧೈರ್ಯ ತೋರಬಲ್ಲವರು. ತಮ್ಮ ಪ್ರೀತಿಪಾತ್ರರ ಭಾವನಾತ್ಮಕ ಹಾಗೂ ಲೌಕಿಕ ಅಗತ್ಯಗಳನ್ನು (Need) ಈಡೇರಿಸಲು ತುದಿಗಾಲಿನಲ್ಲಿ ನಿಲ್ಲುವ ಇವರು ಸಂಗಾತಿಯನ್ನು ಸಂಪ್ರೀತಿಗೊಳಿಸುವಲ್ಲಿ ಖುಷಿ ಕಾಣುತ್ತಾರೆ. 

•    ಕರ್ಕಾಟಕ (Cancer)
ಈ ರಾಶಿಯ ಜನ ಪ್ರೀತಿ-ಪ್ರೇಮದ ವಿಚಾರಕ್ಕೆ ಭಾರೀ ಆದ್ಯತೆ (Prefer) ನೀಡುತ್ತಾರೆ. ಭಾವನಾತ್ಮಕ ವಿಚಾರಕ್ಕೆ ಪ್ರಾಧಾನ್ಯತೆ ನೀಡುವ ರಾಶಿ ಇವರದ್ದು. ಇವರ ಸಂಬಂಧಕ್ಕೆ ಆಪ್ತವಾದ ಮಾತುಕತೆ (Conversation) ಹಾಗೂ ಸದೃಢ ಭಾವನೆಗಳು (Strong Feelings) ಆಧಾರವಾಗಿರುತ್ತವೆ. ಸಂಗಾತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಆದರ್ಶ ಸಂಗಾತಿ (Ideal Mate) ಎನಿಸಿಕೊಳ್ಳುತ್ತಾರೆ. ಹೀಗಾಗಿ, ಪ್ಯಾಷನೇಟ್ (Passionate) ಎನಿಸುವ ಸಂಬಂಧ ಇವರದ್ದಾಗಿರುತ್ತದೆ.  
 
 

Follow Us:
Download App:
  • android
  • ios