Asianet Suvarna News Asianet Suvarna News

Zodiac Sign: ಪ್ರಬಲ ಸಂಗಾತಿಯ ನಿಯಂತ್ರಣದಲ್ಲಿ ಈ ರಾಶಿಯವರು ಸುಖವಾಗಿರ್ತಾರೆ

ಸಂಬಂಧದಲ್ಲಿ ನಿಯಂತ್ರಣ ಇರಕೂಡದು ಎನ್ನುವುದು ಸಾಮಾನ್ಯ ನಂಬುಗೆ. ಅದರಿಂದ ಇಬ್ಬೊಬ್ಬರ ಸ್ವಾತಂತ್ರ್ಯ ಕಸಿದಂತಾಗುತ್ತದೆ ಎಂದುಕೊಳ್ಳುತ್ತೇವೆ. ಆದರೆ, ಕೆಲವು ರಾಶಿಗಳ ಜನ ತಮ್ಮ ಸಂಗಾತಿ ತಮ್ಮನ್ನು ನಿಯಂತ್ರಿಸಿದರೆ ಸುರಕ್ಷಿತ ಭಾವನೆ ಅನುಭವಿಸುತ್ತಾರೆ. ಸಂಗಾತಿಯ ಪ್ರಾಬಲ್ಯದಲ್ಲಿ ನೆಮ್ಮದಿಯಿಂದಿರಲು ಇಷ್ಟಪಡುತ್ತಾರೆ.  
 

Some zodiac sings desire for controlling partner
Author
First Published Dec 5, 2022, 6:10 PM IST

ಸಂಗಾತಿ ತಮ್ಮನ್ನು ನಿಯಂತ್ರಿಸುತ್ತಿದ್ದರೆ ಬಹಳಷ್ಟು ಜನ ಇನ್ನೊಬ್ಬರ ನಿರ್ದೇಶನದಂತೆ ಬದುಕು ಸಾಗಿಸುತ್ತಿದ್ದೇನೆ ಎನ್ನುವ ಹತಾಶೆಗೆ ಬೀಳುತ್ತಾರೆ. ಬದುಕು ಅವರಿಗೆ ದುರ್ಬರವೆನಿಸುತ್ತದೆ. ತಮ್ಮನ್ನು ನಿಯಂತ್ರಣ ಮಾಡುವ ಸಂಗಾತಿಯನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ, ಸಂಗಾತಿ ತಮ್ಮನ್ನು ಸ್ವಲ್ಪವಾದರೂ ನಿಯಂತ್ರಣ ಮಾಡಲಿ, ಬೇಕು-ಬೇಡಗಳ ಕುರಿತು ಹೇಳುತ್ತಿರಲಿ ಎಂದು ಆಸೆ ಪಡುವವರೂ ಇದ್ದಾರೆ. ಅವರು ಸಂಗಾತಿ ತಮ್ಮ ಮೇಲೆ ಸ್ವಲ್ಪವಾದರೂ ಅಧಿಕಾರ ಚಲಾಯಿಸಲಿ ಎಂದು ಇಷ್ಟಪಡುತ್ತಾರೆ. ಕೆಲವೊಮ್ಮೆ ಈ ನಿಯಂತ್ರಣದ ಗುಣವನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಇದು ದೌರ್ಜನ್ಯದಂತೆಯೂ ಭಾಸವಾಗಬಹುದು. ಹಾಗೆಯೇ, ಅತಿಯಾದ ಕಾಳಜಿ-ಪ್ರೀತಿ ಎಂಬಂತೆಯೂ ತೋರಬಹುದು. ಆದರೆ, ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿದ್ದೇ ಇವೆ, ಅವುಗಳನ್ನು ಗುರುತಿಸಬೇಕಷ್ಟೆ. ಅದಿರಲಿ, ಕೆಲವು ರಾಶಿಯ ಜನ ತಮ್ಮ ಸಂಗಾತಿ ತಮ್ಮನ್ನು ನಿರ್ದೇಶಿಸಲಿ, “ಹಾಗೆ ಮಾಡು, ಹೀಗೆ ಬೇಡʼ ಎನ್ನುವ ದಾರಿ ತೋರಲಿ ಎಂದು ಬಯಸುತ್ತಾರೆ. ಹೀಗೆ ನಿಯಂತ್ರಣ ಮಾಡುವುದು ಪ್ರೀತಿ, ಕಾಳಜಿಯ ಸಂಕೇತ ಎಂಬುದಾಗಿ ಅವರು ಭಾವಿಸುತ್ತಾರೆ. ಸಂಗಾತಿ ತಮ್ಮನ್ನು ಸ್ವಲ್ಪ ನಿಯಂತ್ರಿಸಿದರೆ ಅವರು ಸುರಕ್ಷಿತ ಭಾವನೆ ಅನುಭವಿಸುತ್ತಾರೆ. 

•    ಮೇಷ (Aries)
ಮೇಷ ರಾಶಿಯ ಜನಕ್ಕೆ ಪ್ರೇರಣೆ ನೀಡಬಲ್ಲ ಸಂಗಾತಿ (Partner) ಅಗತ್ಯ. ಆಗಾಗ್ಗೆ ಅವರು ತಮ್ಮ ಸಂಗಾತಿ ತಮ್ಮನ್ನು ನಿಯಂತ್ರಣ (Control) ಮಾಡಲಿ ಎಂದು ಬಯಸುತ್ತಾರೆ. ಅಸಲಿಗೆ, ಮೇಷ ರಾಶಿಯವರಲ್ಲೇ ಈ ಗುಣ ಕಂಡುಬರುತ್ತದೆ. ತಮ್ಮ ಪತಿ (Husband) ಅಥವಾ ಪತ್ನಿಯನ್ನು (Wife) ನಿಯಂತ್ರಿಸಲು ಇವರು ಇಷ್ಟಪಡುತ್ತಾರೆ. ಅದೇ ಗುಣವನ್ನು ಸಂಗಾತಿಯಿಂದಲೂ ನಿರೀಕ್ಷೆ ಮಾಡುತ್ತಾರೆ. ಇದರಿಂದಾಗಿ ಅವರು ಸುರಕ್ಷಿತ (Secure) ಭಾವನೆ ಅನುಸರಿಸುತ್ತಾರೆ ಹಾಗೂ ಖುಷಿಯಲ್ಲಿ ಇರುತ್ತಾರೆ. ಸಂಗಾತಿಯ ಗಮನ (Attention) ತಮ್ಮ ಮೇಲೆ ಇರುವುದಕ್ಕೆ ಸಂತೋಷ ಪಡುತ್ತಾರೆ. ಹೀಗಾಗಿ, ತಮ್ಮ ಮೇಲೆ ಪ್ರಾಬಲ್ಯ (Dominance) ತೋರುವ ಸಂಗಾತಿಯ ಬಗ್ಗೆ ಚೂರೂ ಬೇಸರ ಪಡುವುದಿಲ್ಲ. 

Shukra Gochar 2022: ಮೇಷದಿಂದ ಕುಂಭದವರೆಗೆ 4 ರಾಶಿಗೆ 'ಶುಕ್ರ ದೆಸೆ'

•    ಮೀನ (Pisces)
ಈ ರಾಶಿಯ ಜನ ಕೆಲವೊಮ್ಮೆ ತಮಗೆ ಖುಷಿಯಾಗುವಂಥ (Happy) ಏನನ್ನಾದರೂ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ, ಏನು ಮಾಡಬೇಕೆಂದು ತಿಳಿಯದೇ ಗೊಂದಲದಲ್ಲಿರುತ್ತಾರೆ. ಹೀಗಾಗಿ, ಅವರು ತಮಗಿಂದ ಹೆಚ್ಚು ಸ್ಟ್ರಾಂಗ್‌ (Strong) ಆಗಿರುವ ಸಂಗಾತಿಯನ್ನು ಬಯಸುತ್ತಾರೆ. ಜೀವನದ ಅನೇಕ ಹಂತಗಳಲ್ಲಿ ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಂಗಾತಿಯ ನೆರವನ್ನು ನಿರೀಕ್ಷಿಸುತ್ತಾರೆ. ಸಂಗಾತಿಯಲ್ಲಿರುವ ಆಂತರಿಕ ಶಕ್ತಿಯನ್ನು ನಂಬುತ್ತಾರೆ. ಸಂಗಾತಿಗೆ ಸಹಕಾರ (Help) ನೀಡುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಾರೆ. ಅಂತಹ ಬದ್ಧತೆ (Commit) ಹಾಗೂ ಗಮನವನ್ನೇ ಸಂಗಾತಿಯಿಂದಲೂ ನಿರೀಕ್ಷೆ ಮಾಡುತ್ತಾರೆ. ಕೆಲವು ಕಷ್ಟಕರ ಸಂದರ್ಭಗಳಲ್ಲಿ ಸಂಗಾತಿ ತಮ್ಮ ಜತೆಯಿರಬೇಕು ಎಂದು ಭಾವಿಸುತ್ತಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವ ನಿರ್ದೇಶನ (Direction) ನೀಡಬೇಕೆಂದು ಆಶಿಸುತ್ತಾರೆ. ಏಕೆಂದರೆ, ಮೀನ ರಾಶಿಯವರು ಸಾಮಾನ್ಯವಾಗಿ ಕನಸುಗಳ (Dreams) ವಿಶ್ವದಲ್ಲಿ ಕಳೆದು ಹೋಗುವುದು ಹೆಚ್ಚು. 

•    ವೃಷಭ (Taurus)
ವೃಷಭ ರಾಶಿಯ ಜನ ತಮ್ಮನ್ನು ನಿರ್ದೇಶಿಸುವ, ನಿಯಂತ್ರಿಸುವ, ತಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಂಗಾತಿ ಇರಬೇಕು ಎಂದು ಬಯಸುತ್ತಾರೆ. ಇದರಿಂದ ಸುರಕ್ಷಿತ ಭಾವನೆ ಅನುಭವಿಸುತ್ತಾರೆ. ದೃಢವಾಗಿರುವ (Stable) ಸಂಗಾತಿಯನ್ನು ಇಷ್ಟಪಡುತ್ತಾರೆ. ತಮ್ಮ ಸಂಗಾತಿ ತಮ್ಮನ್ನು ಮೆಚ್ಚಿಕೊಳ್ಳಲಿ, ಹೊಗಳಲಿ (Compliment), ಗಮನ ನೀಡಲಿ ಎಂದು ಬಯಸುತ್ತಾರೆ. 

ಪ್ರೇಮಿಗೆ ಗಿಫ್ಟ್ ಕೊಟ್ಟು ಇಂಪ್ರೆಸ್‌ ಮಾಡೋದ್ರಲ್ಲಿ ಈ ರಾಶಿಯವರು ಎತ್ತಿದ ಕೈ!

•    ಕರ್ಕಾಟಕ (Cancer)
ಭಾವನಾತ್ಮಕ (Emotional) ರಾಶಿಗಳಲ್ಲಿ ಕರ್ಕಾಟಕವೂ ಒಂದು. ಕೆಲವು ಸನ್ನಿವೇಶಗಳಲ್ಲಿ ನೋವಾದರೆ ಅದನ್ನು ಹಂಚಿಕೊಳ್ಳಲು, ತಮ್ಮನ್ನು ಸಮಾಧಾನಪಡಿಸಲು ಸೂಕ್ತ ಜನರಿಗಾಗಿ ನಿರಂತರವಾಗಿ ಹುಡುಕಾಡುತ್ತಾರೆ. ಜೀವನದ (Life) ಪ್ರತಿ ಹಂತದಲ್ಲೂ ತಮ್ಮ ಸಂಗಾತಿಯ ಪ್ರಾಬಲ್ಯವನ್ನು ನಿರೀಕ್ಷೆ ಮಾಡುತ್ತಾರೆ. ಅವರೇ ತಮ್ಮನ್ನು ಮುನ್ನಡೆಸಲಿ (Lead) ಎಂದು ಬಯಸುತ್ತಾರೆ. 

Follow Us:
Download App:
  • android
  • ios