Asianet Suvarna News Asianet Suvarna News

ಹೊಳೆಯುವ ಚರ್ಮ ಹೊಂದಬೇಕೆ? ಜ್ಯೋತಿಷ್ಯಶಾಸ್ತ್ರದ ಟಿಪ್ಸ್ ಫಾಲೋ ಮಾಡಿ

ಹೊಳಪಿನ ಅಂದವಾದ, ಆರೋಗ್ಯಕರ ತ್ವಚೆ ಹೊಂದುವುದು ಎಲ್ಲರ ಬಯಕೆಯಾದರೂ ಎಲ್ಲರಿಗೂ ಅದು ಸುಲಭಸಾಧ್ಯವಿಲ್ಲ. ಚರ್ಮದ ಸೌಂದರ್ಯಕ್ಕೂ, ಜನ್ಮರಾಶಿಗೂ ಸಂಬಂಧವಿದೆ. ಹೀಗಾಗಿ, ಚರ್ಮದ ಬಗ್ಗೆ ಕಾಳಹಿ ವಹಿಸುವಾಗ ಈ ಅಂಶವನ್ನೂ ಪರಿಗಣಿಸಿದರೆ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯ.

Some astrological tips for skin care in life
Author
First Published Jan 25, 2024, 5:01 PM IST

ಹೊಳಪಿನ, ಎಂದಿಗೂ ಕಳೆಗುಂದದ ಆರೋಗ್ಯಕರವಾಗಿರುವಂತಹ ತ್ವಚೆಯನ್ನು ಹೊಂದಬೇಕು ಎನ್ನುವುದು ಎಲ್ಲರ ಬಯಕೆ. ಆದರೆ, ಕೆಲವರು ಮಾತ್ರ ಈ ವಿಚಾರದಲ್ಲಿ ಭಾರೀ ಅದೃಷ್ಟವಂತರಾಗಿರುತ್ತಾರೆ. ಅವರು ಚರ್ಮದ ಸೌಂದರ್ಯಕ್ಕಾಗಿ ಯಾವ ಪ್ರಯತ್ನ ಮಾಡದಿದ್ದರೂ ಅವರ ಚರ್ಮ ಹೊಳೆಯುತ್ತಿರುತ್ತದೆ. ಅವರ ಸೌಂದರ್ಯದ ಗುಟ್ಟು ಅವರ ಜನ್ಮರಾಶಿಯಲ್ಲಿರುತ್ತದೆ. ಜನ್ಮರಾಶಿಗೂ ಚರ್ಮದ ಆರೋಗ್ಯಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡಬಹುದು. ಜೀವನದ ಪ್ರಮುಖ ಎಲ್ಲ ವಿಚಾರಗಳೊಂದಿಗೆ ಜನ್ಮರಾಶಿಯ ಸಂಬಂಧವಿದೆ ಎಂದಾದಾಗ ಸೌಂದರ್ಯವೊಂದು ಅದರಿಂದ ಹೊರಗುಳಿಯಲು ಸಾಧ್ಯವಿಲ್ಲ. ಚರ್ಮವೂ ಸಹ ನಮ್ಮ ಜನ್ಮರಾಶಿಯ ಅಧಿಪತಿಯಾಗಿರುವ ನಿರ್ದಿಷ್ಟ ಗ್ರಹಕ್ಕೆ ನೇರವಾದ ಸಂಬಂಧ ಹೊಂದಿರುತ್ತದೆ. ಚರ್ಮದ ಆರೈಕೆ ವಿಚಾರದಲ್ಲಿ ಈ ಅಂಶವನ್ನು ಗಮನಕ್ಕೆ ತೆಗೆದುಕೊಂಡರೆ ಹೊಳೆಯುವ ಚರ್ಮವನ್ನು ಎಲ್ಲರೂ ಹೊಂದಲು ಸಾಧ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಳಪಿನ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಮುಖ್ಯವಾಗಿ ನಾಲ್ಕು ಮಾರ್ಗಗಳನ್ನು ಸೂಚಿಸಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಚರ್ಮದ ಕಾಳಜಿ ಮಾಡಿದರೆ ಕೆಲವೇ ದಿನಗಳಲ್ಲಿ ಅದರ ಲಾಭ ಗೋಚರಿಸುವುದು ನಿಶ್ಚಿತ. 

•    ಜನ್ಮರಾಶಿ (Birth Sign) ಯಾವುದೆಂದು ತಿಳಿಯಿರಿ
ಮೊದಲೇ ಹೇಳಿದಂತೆ, ಜನ್ಮರಾಶಿಗೂ ತ್ವಚೆಯ (Skin) ಅಂದಕ್ಕೂ ಸಂಬಂಧವಿದೆ. ಪ್ರತಿಯೊಂದು ರಾಶಿಯೂ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಅವುಗಳ ಪ್ರಭಾವವನ್ನು (Effects) ಅರಿತುಕೊಂಡರೆ ಚರ್ಮವನ್ನು ಕಾಳಜಿ (Care) ಮಾಡಲು ಸುಲಭವಾಗುತ್ತದೆ.

ರಾಮಮಂದಿರದಿಂದ ತಂದ ಅಕ್ಷತೆ ಹೀಗೆ ಬಳಸಿದ್ರೆ ಶ್ರೀರಾಮನ ಅನುಗ್ರಹ ಪ್ರಾಪ್ತಿ

ಉದಾಹರಣೆಗೆ, ಮೇಷ, ಸಿಂಹ ಮತ್ತು ಧನು ರಾಶಿಗಳು ಅಗ್ನಿತತ್ವವನ್ನು (Fire Signs) ಹೊಂದಿವೆ. ಈ ರಾಶಿಗಳನ್ನು ಅಗ್ನಿರಾಶಿ ಎಂದೇ ಕರೆಯಲಾಗುತ್ತದೆ. ಈ ರಾಶಿಗಳಿಗೆ ಸೇರಿದ ಜನರು ಆಗಾಗ ತ್ವಚೆಯನ್ನು ತಂಪುಗೊಳಿಸುವ (Cooling) ವಿಧಾನ ಅನುಸರಿಸಬೇಕು. ಚರ್ಮವನ್ನು ತೇವಾಂಶಭರಿತವಾಗಿರಿಸುವ (Hydrating) ಹಾಗೂ ಹಿತವಾಗಿಸುವ ಅಲೋವೆರಾ ಅಥವಾ ಲೋಳೆಸರ, ಸೌತೆಕಾಯಿಗಳನ್ನು ಬಳಸಬೇಕು. ಇದರಿಂದ ಹೊಳಪಿನ ಮೈ ಬಣ್ಣ ಹೊಂದಲು ಸಾಧ್ಯವಾಗುತ್ತದೆ. ಆದರೆ, ಭೂಮಿ (Earth) ತತ್ವದ ವೃಷಭ, ಕನ್ಯಾ, ಮಕರ ರಾಶಿಯ ಜನ ಚರ್ಮವನ್ನು ಆರೈಕೆ ಮಾಡಲು ಜೇನುತುಪ್ಪ, ಓಟ್ಸ್ ಇಂತಹ ಪದಾರ್ಥಗಳನ್ನು ಬಳಕೆ ಮಾಡಬೇಕು. 

•    ಚಂದ್ರನ ಹಂತಗಳು (Moon Phases)
ಚಂದ್ರನ ಬಿಂಬಾವಸ್ಥೆ ಎಂದು ಕರೆಯಲ್ಪಡುವ ವಿವಿಧ ಹಂತಗಳು ನಮ್ಮ ಜೀವನದ (Life) ಮೇಲೆ ತುಂಬ ಪರಿಣಾಮ ಬೀರುತ್ತವೆ. ಭಾವನೆಗಳ ಮೇಲೂ ಅವುಗಳ ಪ್ರಭಾವವಿದೆ. ದೈನಂದಿನ ಚರ್ಮದ ಆರೈಕೆ ಸಮಯದಲ್ಲಿ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗಿನ ಸಮಯ ಚರ್ಮವನ್ನು ಡಿಟಾಕ್ಸ್ (Detoxification) ಹಾಗೂ ಶುದ್ಧೀಕರಿಸಿಕೊಳ್ಳಲು ಸಹಾಯಕ. ಆದರೆ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗಿನ ಸಮಯದಲ್ಲಿ ಚರ್ಮವು ಹೆಚ್ಚು ಪ್ರಮಾಣದಲ್ಲಿ ಪೌಷ್ಟಿಕಾಂಶ ಹೀರಿಕೊಳ್ಳಲು ಸಮರ್ಥವಾಗಿರುತ್ತದೆ. ಹೀಗಾಗಿ, ಈ ಅವಧಿಯಲ್ಲಿ ಚರ್ಮದ ಆರೈಕೆ ಮಾಡುವುದು ಸೂಕ್ತ. 

•    ಗ್ರಹಗಳ ಚಲನೆಗಳು (Planetary Movements)
ಗ್ರಹಗಳ ಚಲನೆ ನಮ್ಮ ಜೀವನದ ಮೇಲೆ ಪ್ರಭಾವ ಹೊಂದಿವೆ. ಚರ್ಮದ ಆರೋಗ್ಯವೂ ಇದಕ್ಕೆ ಹೊರತಲ್ಲ. ಜನ್ಮ ಕುಂಡಲಿಯ ಯಾವ ಸ್ಥಾನದಲ್ಲಿ ಯಾವ ಗ್ರಹವಿದೆ ಎನ್ನುವ ಅಂಶವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ಪಾತ್ರ ವಹಿಸುತ್ತದೆ. ಉದಾಹರಣೆಗೆ, ಸೌಂದರ್ಯಕ್ಕೆ ಸಂಬಂಧಿಸಿದ ಶುಕ್ರ ಗ್ರಹ ನಿಮ್ಮ ಜನ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ನೀವು ಹೊಳಪಿನ, ಆರೋಗ್ಯವಂತ ಚರ್ಮ ಹೊಂದುವುದು ನಿಶ್ಚಿತ. ಹಾಗೆಯೇ, ಒಂದೊಮ್ಮೆ ಶನಿ ಗ್ರಹ ಕೆಲವು ಸ್ಥಾನದಲ್ಲಿದ್ದರೆ ಹೊಳಪಿನ ಚರ್ಮ ಹೊಂದಲು ನೀವು ಹರಸಾಹಸ ಪಡಬೇಕಾಗುತ್ತದೆ. 

ಸೂರ್ಯ-ಶನಿ ಸಂಯೋಗ, ಒಂದು ತಿಂಗಳು ಈ 5 ರಾಶಿಗೆ ಜೀವನ ಕಷ್ಟ, ಜಾಗರೂಕರಾಗಿರಿ

•    ಸೌರಕಿರಣದಿಂದ (Sun Rays) ರಕ್ಷಣೆ ಹೇಗೆ?
ಸೌರಕಿರಣಗಳಿಂದ ರಕ್ಷಣೆ ಪಡೆಯುವುದಕ್ಕೂ ಜ್ಯೋತಿಷ್ಯ ಶಾಸ್ತ್ರ ನೆರವು ನೀಡುತ್ತದೆ. ಅಗ್ನಿತತ್ವದ ರಾಶಿಗಳು ಸೂರ್ಯನ ಕಿರಣಗಳಿಂದ ಹೆಚ್ಚು ರಕ್ಷಣೆ ಪಡೆಯಬೇಕಾಗುತ್ತದೆ. ಬೇಸಿಗೆ ದಿನಗಳಲ್ಲಿ ಇವರು ಸನ್ ಸ್ಕ್ರೀನ್ ಲೋಷನ್ ಬಳಕೆ ಮಾಡುವುದು ಸೂಕ್ತ. ಸೂಕ್ಷ್ಮವಾದ ತ್ವಚೆ ಹೊಂದಿರುವ ಜಲತತ್ವದ ರಾಶಿಗಳ ಜನರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿಕೊಳ್ಳಬೇಕಾದುದು ಅಗತ್ಯ. 

Follow Us:
Download App:
  • android
  • ios