Asianet Suvarna News Asianet Suvarna News

ಇಂದು ಪಾಶ್ವ ಸೂರ್ಯಗ್ರಹಣ: ಬರಿಗಣ್ಣಿನಿಂದ ನೋಡಲೇಬೇಡಿ

ಸಂಜೆ 5ರಿಂದ ರಾಜ್ಯದ ವಿವಿಧೆಡೆ ಖಗೋಳ ಕೌತುಕ, 27 ವರ್ಷ ಬಳಿಕ ದೀಪಾವಳಿ ಹಬ್ಬದ ವೇಳೆ ಗ್ರಹಣ

Solar Eclipse will Be Across the Karnataka on October 25th grg
Author
First Published Oct 25, 2022, 7:00 AM IST

ಬೆಂಗಳೂರು(ಅ.25):  ರಾಜ್ಯಾದ್ಯಂತ ಮಂಗಳವಾರ ಸಂಜೆ ಸೂರ್ಯಗ್ರಹಣ ಘಟಿಸಲಿದೆ. ಆದರೆ ನೇರವಾಗಿ ವೀಕ್ಷಿಸುವುದು ಕಣ್ಣಿಗೆ ಅಪಾಯಕಾರಿ ಎಂದು ನೆಹರು ತಾರಾಲಯದ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯನಿಗೆ ಚಂದ್ರ ಪೂರ್ಣಪ್ರಮಾಣದಲ್ಲಿ ಅಡ್ಡವಾಗಿ ಬಂದರೆ ಖಗ್ರಾಸ ಸೂರ್ಯಗ್ರಹಣವಾಗುತ್ತದೆ. ಆದರೆ, ಈ ಬಾರಿ ಸೂರ್ಯನ ಒಂದು ಭಾಗ ಗೋಚರಿಸುತ್ತಿದ್ದು, ಪಾಶ್ರ್ವ ಸೂರ್ಯಗ್ರಹಣ ಇದಾಗಿದೆ. ಈ ಗ್ರಹಣ ಬೆಂಗಳೂರಿನಲ್ಲಿ ಸಂಜೆ 5.12 ರಿಂದ 5.49ವರೆಗೂ ಗೋಚರಿಸಲಿದೆ. ರಾಜ್ಯದಲ್ಲಿ ಸ್ಥಳದಿಂದ ಸ್ಥಳಕ್ಕೆ ಗ್ರಹಣದ ಸಮಯವು ಭಿನ್ನವಾಗಿರಲಿದೆ.

1995ರಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಹಣ ಉಂಟಾಗಿತ್ತು. ಅದಾದ 27 ವರ್ಷದ ಬಳಿಕ ಬೆಳಕಿನ ಹಬ್ಬದ ಸಂದರ್ಭದಲ್ಲೇ ಗ್ರಹಣ ಘಟಿಸುತ್ತಿದೆ.

ದೀಪಾವಳಿ ಲಕ್ಷ್ಮಿ ಪೂಜೆಗೆ ಗ್ರಹಣ: ಗೊಂದಲಗಳಿಗೆ ಬ್ರಹ್ಮಾಂಡ ಗುರೂಜಿ ತೆರೆ

ಸೌರ ಕನ್ನಡಕ ಮಾತ್ರ ಬಳಸಿ:

‘ಪಶ್ಚಿಮದ ದಿಕ್ಕಿನಲ್ಲಿ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಗ್ರಹಣ ಸಂದರ್ಭದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕಾರಿಯಾಗಿದೆ. ಹಾಗೆಯೇ, ಟೆಲಿಸ್ಕೋಪ್‌, ದುರ್ಬಿನ್‌, ಎಕ್ಸ್‌ರೇ ಹಾಳೆ ಹಾಗೂ ಕ್ಯಾಮೆರಾಗಳಿಂದಲೂ ವೀಕ್ಷಿಸುವುದು ಸುರಕ್ಷಿತವಲ್ಲ. ಸೌರ ಕನ್ನಡಕದ ಬಳಕೆ ಹೆಚ್ಚು ಸೂಕ್ತ. ದೂರದರ್ಶಕವನ್ನು ಬಳಸುವವರು ಪರದೆ ಮೇಲೆ ಸೂರ್ಯನ ಬಿಂಬ ಮೂಡುವಂತೆ ವ್ಯವಸ್ಥೆಯನ್ನು ಮಾಡಿ ವೀಕ್ಷಿಸಬೇಕು’ ಎಂದು ನೆಹರು ತಾರಾಲಯ ವಿಜ್ಞಾನಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶೇ.10ರಷ್ಟು ಗ್ರಹಣ ಗೋಚರ:

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದ ವ್ಯತ್ಯಾಸದಿಂದ ಸ್ಥಳದಿಂದ ಸ್ಥಳಕ್ಕೆ ಗ್ರಹಣ ಗೋಚರ ಪ್ರಮಾಣ ವ್ಯತ್ಯಾಸವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.55.74 ರಷ್ಟು, ಭಾರತದ ಉತ್ತರ ತುದಿಯಲ್ಲಿರುವ ಲಡಾಖ್‌ನ ಲೇಹ್‌ ಪ್ರದೇಶದಲ್ಲಿ ಸೂರ್ಯಗ್ರಹಣ ಶೇ.54.7 ರಷ್ಟುಗೋಚರಿಸಲಿದೆ. ಅಲ್ಲಿ ಸೂರ್ಯಗ್ರಹಣ ಸಂಜೆ 4:16 ರಿಂದ 5:34 ರವರೆಗೆ ಗೋಚರಿಸಲಿದೆ. ಇನ್ನು ಬೆಂಗಳೂರಿನಲ್ಲಿ ಶೇ.10.02, ಮೈಸೂರಿನಲ್ಲಿ ಶೇ.9.16, ಬಳ್ಳಾರಿಯಲ್ಲಿ ಶೇ.14.82 ರಷ್ಟು, ಆಗುಂಬೆಯಲ್ಲಿ ಶೇ.12.11ರಷ್ಟುಗೋಚರಿಸಲಿದೆ. ರಷ್ಯಾದ ಯುಗರ ಪ್ರದೇಶದಲ್ಲಿ ಶೇ.82 ಗೋಚರಿಸಲಿದೆ.

Surya Grahan 2022: ಅನೇಕ ವಿಕೋಪಗಳನ್ನು ಸೃಷ್ಟಿ ಮಾಡುತ್ತೆ: ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಶ್ರೀ ಭವಿಷ್ಯ

ಯೂಟ್ಯೂಬ್‌ ಚಾನೆಲ್‌ನಲ್ಲಿ ವ್ಯವಸ್ಥೆ:

ನೆಹರು ತಾರಾಲಯವು ವೆಬ್‌ಸೈಟ್‌/ಯುಟ್ಯೂಬ್‌ ಲಡಾಖ್‌ನಲ್ಲಿ ಸಂಭವಿಸುವ ಗ್ರಹಣದ ವೀಕ್ಷಣೆಗೆ ನೇರ ಪ್ರಸಾರ ವ್ಯವಸ್ಥೆ ಮಾಡಿದೆ. ಮಧ್ಯಾಹ್ನ 2.30ರಿಂದ ವೀಕ್ಷಣೆ ಮಾಡಬಹುದಾಗಿದೆ. www.taralaya.org ಆಸಕ್ತರು ಭೇಟಿ ನೀಡಬಹುದು.

ರಾಜ್ಯದ ವಿವಿಧೆಡೆ ಗ್ರಹಣ ಸಮಯ

ಬೆಂಗಳೂರು- ಸಂಜೆ 5.12 ರಿಂದ 5.49
ಮೈಸೂರು - ಸಂಜೆ 5.13 ರಿಂದ 5.51
ಧಾರವಾಡ - ಸಂಜೆ 5.01 ರಿಂದ 5.47
ರಾಯಚೂರು - ಸಂಜೆ 5.01 ರಿಂದ 5.47
ಬಳ್ಳಾರಿ - ಸಂಜೆ 5.04 ರಿಂದ 5.48
ಬಾಗಲಕೋಟೆ - ಸಂಜೆ 5.00ರಿಂದ 5.47
ಮಂಗಳೂರು - ಸಂಜೆ 5.10 ರಿಂದ 5.50
ಕಾರವಾರ - ಸಂಜೆ 5.03 ರಿಂದ 5.48
 

Follow Us:
Download App:
  • android
  • ios