ಜ್ಯೋತಿಷ್ಯ: ಬೆಂಕಿಯಂಥ ಕುಜನ ವಕ್ರದೃಷ್ಟಿ ಬಿದ್ದರೆ, ಮನುಷ್ಯ ಥರ ಥರ...!
ಜ್ಯೋತಿಷ್ಯದಲ್ಲಿ ನವ ಗ್ರಹಗಳು ಮನುಷ್ಯನ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತವೆ. ಶನಿ ಕಂಡರೆ ಮಾತ್ರ ಮನುಷ್ಯನಿಗೆ ತುಸು ಭಯ. ಆದರೆ, ಗುರು, ಕುಜ ಗ್ರಹಗಳೂ ಮನುಷ್ಯನ ಏಳು ಬೀಳಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಾವಿಲ್ಲಿ ಹೇಳ್ತಾ ಕುಜ ಗ್ರಹ, ಅದು ಮನುಷ್ಯನ ಮೇಲೆ ಬೀರೋ ಪ್ರಭಾವ ಹಾಗೂ ಪರಿಹಾರದ ಬಗ್ಗೆ.
ನವಗ್ರಹಗಳಲ್ಲಿ ಅತ್ಯಂತ ಪ್ರಭಾವೀ ಗ್ರಹವೆಂದರೆ ಅದು ಕುಜ ಗ್ರಹ. ಆತನನ್ನು ಅಂಗಾರಕ ಅಂತಲೂ ಕರೀತಾರೆ. ಕುಜನ ದೃಷ್ಟಿಗೆ ಒಳಪಟ್ಟ ರಾಶಿಗಳಿಗೆ ಕಂಟಕ-ಸಂಕಟಗಳು ತಪ್ಪಿದ್ದಲ್ಲ. ಶಾಸ್ತ್ರ ಹೇಳುವ ಹಾಗೆ 'ಕ್ರೂರ ದೃಕ್' ಅಂತಲೇ ಆತನಿಗೆ ಹೆಸರು. ಕ್ರೂರ ದೃಷ್ಟಿಯವನು ಅಂತ ಅರ್ಥ. ಬೆಂಕಿಯಂಥವನು ಈ ಕುಜ. ಹೀಗಾಗಿಯೇ ಜನ ಕುಜ ಅಂದ್ರೆ ಸಾಕು ಥರಥರ ನಡುಗ್ತಾರೆ. ಆದರೆ ಯಾರಾದರೂ ಕುಜನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದರೆ ಅವರು ಮುಟ್ಟಿದ್ದೆಲ್ಲಾ ಬಂಗಾರವಾಗುವುದರಲ್ಲಿ ಸಂಶಯವೇ ಇಲ್ಲ. ಬಂಗಾರ, ಭೂಮಿ, ಅಧಿಕಾರ ಇತ್ಯಾದಿ ಸಮೃದ್ಧ ಫಲವನ್ನು ಕೊಡುವುರದಲ್ಲಿ ಮಹಾ ಉದಾರಿಯೆನಿಸುತ್ತಾನೆ ಈ ಕುಜ. ಇಂಥ ಕುಜ ಸ್ಥಾನ ಪಲ್ಲಟ ಮಾಡಿದ್ದಾನೆ. ಇಷ್ಟುದಿನ ಶತ್ರುವಿನ ರಾಶಿಯಾದ ಕನ್ಯಾರಾಶಿಯಲ್ಲಿದ್ದ. ಈಗ ಸಮ ಮನಸ್ಸಿನ ತುಲಾ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇಂಥ ಕುಜ ಯಾವ ರಾಶಿಗೆ ಬಂಗಾರವಾಗಲಿದ್ದಾನೆ, ಯಾವ ರಾಶಿಗೆ ಬೆಂಕಿಯುಂಡೆಯಾಗಲಿದ್ದಾನೆ ನೋಡೋಣ.
ಈ ರಾಶಿಯವರಿಗೆ ಬಂತು ಗುರು ಬಲ
ಮೇಷ - ಇಷ್ಟು ದಿನ ಕುಜ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತಿದ್ದ, ಈಗ ನಿಮ್ಮ ಮಡದಿಯ ಅಥವಾ ಗಂಡನ ಆರೋಗ್ಯವನ್ನು ಹರಣ ಮಾಡುತ್ತಾನೆ. ಹೆಚ್ಚಿನ ಪ್ರಯಾಣವನ್ನು ಮಾಡಬೇಕಾಗುತ್ತದೆ, ವೃಥಾ ಸುತ್ತಾಟ, ವ್ಯಾಪಾರದಲ್ಲಿ ಕಲಹ ಸಂಭವ, ಆದರೆ ಹೆದರಬೇಡಿ ಭಾಗ್ಯದಲ್ಲಿ ಗುರುವಿದ್ದಾನೆ. ಅನುಕೂಲ ಮಾಡಿಕೊಡುತ್ತಾನೆ. ಆದರೆ ತತ್ಕಾಲದಲ್ಲಿ ಸ್ವಲ್ಪ ಅಂಜಿಕೆಯಂತೂ ಉಂಟುಮಾಡುತ್ತಾನೆ ಕುಜ.
ಪರಿಹಾರ : ಸುಬ್ರಹ್ಮಣ್ಯ ಅಷ್ಟೋತ್ತರ ಹೇಳಿಕೊಳ್ಳಿ
ವೃಷಭ - ಕುಜ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶವಾಗಿರುವುದರಿಂದ ಸಜ್ಜನರಲ್ಲಿ ಕಲಹವುಂಟುಮಾಡುತ್ತಾನೆ, ವೃಥಾ ದ್ವೇಷ ಕಟ್ಟಿಕೊಳ್ಳುವ ಮನಸ್ಸಾಗುತ್ತದೆ, ಇನ್ನೊಬ್ಬರಿಂದ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನಿಮ್ಮ ರಾಶಿಯನ್ನು ಕುಜ ಎಂಟನೇ ಮನೆಯಿಂದ ವೀಕ್ಷಿಸುವುದರಿಂದ ಅಪಘಾತಗಳಿಗೆ ತುತ್ತಾಗುವ ಸಾಧ್ಯತೆ, ಶರೀರ ಗಾಯ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಗಂಡ- ಹೆಂಡಿರಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆಯೂ ಇದೆ, ಕಣ್ಣಿನ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಎಚ್ಚರಿಕೆ ಬೇಕು.
ಪರಿಹಾರ : ತೊಗರಿ ಬೇಳೆ ದಾನ ಮಾಡಿ
ಮಿಥುನ : ನಿಮ್ಮ ರಾಶಿಯಿಂದ ಪಂಚಮಕ್ಕೆ ಬಂದಿರುವ ಕುಜ ಮಕ್ಕಳಲ್ಲಿ ಉತ್ಸಾಹ ಶಕ್ತಿಯನ್ನು ಹೆಚ್ಚಿಸುತ್ತಾನೆ, ಯುವಕರಲ್ಲಿ ಹುಂಬತನ ಉಂಟಾಗುತ್ತದೆ, ಸ್ವಲ್ಪ ಹೆಚ್ಚಿನ ಹಣ ವ್ಯಯವೂ ಆಗಲಿದೆ, ಶತ್ರುಗಳು ಮಿತ್ರರಾಗುತ್ತಾರೆ. ಶುಭ ಫಲವೇ ಇದೆ, ಗುರುವೂ ಸಪ್ತಮದಲ್ಲಿರುವ ಕಾರಣ ಶುಭ ಫಲವನ್ನು ಕಾಣಲಿದ್ದಿರಿ.
ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕರ್ಕಟಕ - ನಿಮ್ಮ ರಾಶಿಯವರಿಗೆ ಕರ್ಮಾಧಿಪತಿ ಹಾಗೂ ಪಂಚಮಾಧಿಪತಿಯಾದ ಅಂಗಾರಕ ಅತ್ಯಂತ ಶುಭಫಲವನ್ನು ತರುತ್ತಾನೆ. ಭೂಮಿ ಖರೀದಿ ಸಾಧ್ಯತೆ ಇದೆ, ಹೊಸ ಉದ್ಯೋಗ ಭರವಸೆ ಹಾಗೂ ಉದ್ಯೋಗದಿಂದ ಸಂತೋಷ ಸಮೃದ್ಧವಾಗಲಿದೆ. ತಾಯಿಯ ಕಡೆಯಿಂದ ಆಸ್ತಿ ಬರಲಿದೆ, ಹೆಚ್ಚಿನ ಅನುಕೂಲ ಸಾಧ್ಯವಿದೆ. ಅತ್ಯಂತ ಶುಭ ಫಲಗಳನ್ನು ಕಾಣಿತ್ತೀರಿ.
ಪರಿಹಾರ - ದುರ್ಗಾ ದೇವಸ್ಥಾನಕ್ಕೆ ದೀಪ ದಾನ ಮಾಡಿ
ಸಿಂಹ : ಸಹೋದರರಿಂದ ಹೆಚ್ಚಿನ ಸಹಕಾರ, ಭೂ ಸಂಬಂಧೀ ಅನುಕೂಲ, ಗುಣ ವೃದ್ಧಿಯಾಗುತ್ತದೆ, ರಕ್ಷಣಾ ಕಾರ್ಯಗಳಲ್ಲಿ ಜಯಗಳಿಸುತ್ತೀರಿ, ಸೈನಿಕರಿಗೆ, ಆರಕ್ಷಕರಿಗೆ, ಆಡಳಿತ ವರ್ಗದವರಿಗೆ ಅತ್ಯಂತ ಮಹತ್ವದ ದಿನಗಳಿದ್ದಾವೆ. ಆಡಳಿತ ಮಟ್ಟದ ಅಧಿಕಾರಿಗಳಿಗೆ ಸಾಧನೆಯ ದಿನ, ರೋಗದಿಂದ ಮುಕ್ತರಾಗುತ್ತೀರಿ, ದಾನಿಗಳಿಗೆ ಉದಾರ ಬುದ್ಧಿ ಬರಲಿದೆ. ಶುಭದಿನಗಳಿದ್ದಾವೆ.
ಇಲ್ಲಿ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದರೆ ತುಪ್ಪವಾಗುತ್ತೆ
ಪರಿಹಾರ : ದುರ್ಗಾ ಸಪಸ್ತಶತಿ ಪಾರಾಯಣ ಮಾಡಿ
ಕನ್ಯಾ : ನಿಮ್ಮ ರಾಶಿಗೆ ಕುಜ ತೃತೀಯಾಧಿಪತಿಯೂ ಹೌದು, ಅಷ್ಟಮಾಧಿಪತಿಯೂ ಹೌದು. ಹೀಗಾಗಿ ಬೇಸರದ ದಿನಗಳು ನಿಮ್ಮ ಮುಂದಿವೆ, ಪರಾಕ್ರಮದಲ್ಲಿ ಅಂಜಿಕೆ ಬರಲಿದೆ, ಆರೋಗ್ಯ ಹಾಳಾಗಲಿದೆ, ಶಸ್ತ್ರ ಚಿಕಿತ್ಸೆಯಂಥ ಸಮಸ್ಯೆಗಳಿಗೆ ಬಲಿಯಾಗಬೇಕಾಗುತ್ತದೆ, ಅಂಜಿಕೆ ಮನೋಭಾವ ಹೆಚ್ಚಾಕುತ್ತದೆ, ಮಾತಿನಿಂದ ಹೆಚ್ಚು ನಷ್ಟ ಸಂಭವವಾಗುತ್ತದೆ, ಚಾಡಿ ಕೋರರಿಗೆ ಸರಿಯಾದ ಪೆಟ್ಟುಬಿಳಲಿದೆ. ಎಚ್ಚರಿಕೆ ಬೇಕು.
ಪರಿಹಾರ : ಕುಜ ಪೀಡಾ ಪರಿಹಾರ ಸ್ತೋತ್ರ ಪಠಿಸಿ
ತುಲಾ : ಹೆಂಡತಿಯ ಮಾತುಗಳಿಗೆ ಬಲಿಯಾಗಬೇಕಾಗುತ್ತದೆ, ಅಥವಾ ಗಂಡನ ಮಾತುಗಳಿಗೆ ಹೆದರಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಪರ ಸ್ತ್ರೀಯರಲ್ಲಿ ಆಸಕ್ತಿ, ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹೆಚ್ಚಿನ ಹಣ ಸಂಪಾದನೆಗೆ ದಾರಿಯಾಗುತ್ತದೆ, ಪೆಟ್ರೋಲ್, ಡೀಸೆಲ್ ವ್ಯಾಪಾರಿಗಳಿಗೆ ಲಾಭದ ದಿನ, ಜಿಪುಣತನ ಹೆಚ್ಚಾಗಲಿದೆ, ಮತ್ತೊಬ್ಬರ ಕಾರ್ಯಗಳನ್ನು ಮಾಡುವುದರಲ್ಲಿ ಸಮಯ ಕಳೆದುಹೋಗುತ್ತದೆ. ನಿಮಗೆ ನೀವೇ ಮೋಸ ಮಾಡಿಕೊಳ್ಳುವ ದಿನಗಳಿದ್ದಾವೆ. ಎಚ್ಚರಿಕೆ ಬೇಕು.
ದುಡ್ಡು ಬೇಕೆಂದರೆ ಈ ರೀತಿ ಮಾಡಿ ನೋಡಿ
ಪರಿಹಾರ : ಹುತ್ತಕ್ಕೆ 11 ಪ್ರದಕ್ಷಿಣೆ ಹಾಕಿ
ವೃಶ್ಚಿಕ : ಆರೋಗ್ಯದಲ್ಲಿ ತೀವ್ರವಾದ ವ್ಯತ್ಯಾಸ ಕಾಣುವ ಸಾಧ್ಯತೆ ಇದೆ, ಧನ ವ್ಯಯವಾಗುತ್ತದೆ, ಅಲ್ಪ ಸುಖ, ಧನ ಸ್ಥಾನದ ಗುರುವಿನಿಂದ ಹೆಚ್ಚಿನ ಅನುಕೂಲವಿದೆ ಹೆದರುವ ಅವಶ್ಯಕತೆ ಇಲ್ಲ, ಆದರೆ ಮಾನಸಿಕ ಬೇಸರ, ಕೊರಗುಗಳಿಂದ ತುಂಬ ನಷ್ಟ ಹೊಂದುತ್ತೀರಿ. ಪರ ಸ್ಥಳದಲ್ಲಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಲೂ ಬಹುದು, ಕೊಮಚ ಎಚ್ಚರಿಕೆ ಬೇಕು.
ಪರಿಹಾರ : ಕೆಂಪು ವಸ್ತ್ರ, ತೊಗರಿ ಬೇಳೆ ದಾನ ಮಾಡಿ
ಧನಸ್ಸು : ವ್ಯಾಪಾರಿಗಳಿಗೆ ಹೆಚ್ಚಿನ ಕಂಟಕವಿದೆ, ಲಾಭಾಂಶದಲ್ಲಿ ಹೆಚ್ಚಿನ ಪಾಲು ವ್ಯಯವಾಗುತ್ತದೆ, ನಿಮ್ಮ ದಕ್ಷತೆಯಿಂದ, ಹಾಗೂ ಪ್ರತಿಭಾ ಶಕ್ತಿಯಿಂದ ಹೆಚ್ಚಿನ ಲಾಭಗಳಿಸುವ ಸಾಧ್ಯತೆಯೂ ಇದೆ. ಮಕ್ಕಳಿಂದ ಲಾಭಗಳಿಸುವ ಸಾಧ್ಯತೆ ಇದೆ. ಶುಭಾಶುಭ ಮಿಶ್ರಫಲ.
ಈ ರಾಶಿಯವರೊಡನೆ ಡೇಟಿಂಗ್ ಹೋಗೋ ಮುನ್ನ ಹುಷಾರ್
ಪರಿಹಾರ : ನಗರ ಕಟ್ಟೆಗೆ ನಮಸ್ಕಾರ ಹಾಕಿ
ಮಕರ : ಅದ್ಭುತ ಫಲಗಳಿದ್ದಾವೆ. ಶಾಸಕರು, ಮಂತ್ರಿಗಳಿಂದ ಪೂಜಿಸಲ್ಪಡುತ್ತಾರೆ, ನಿಮ್ಮ ಅಧಿಕಾರದಲ್ಲಿ ಸಾಧನೆ, ಯಶಸ್ಸು ನಿಮ್ಮದಾಗಲಿದೆ, ಕೆಲಸದಲ್ಲಿ ಕೀರ್ತಿ ಲಾಭಗಳಿಸುವ ಸಾಧ್ಯತೆ ಇದೆ, ಉನ್ನತ ಹುದ್ದೆಗೆ ತಲುಪುತ್ತೀರಿ, ಪರೋಪಕಾರದ ಮನಸ್ಸಾಗುತ್ತದೆ, ದಾನ ಸ್ವಭಾವ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಿದೆ ಶನಿಯ ಕಾರಣದಿಂದ. ಉಳಿದಂತೆ ಜೀವನ ವೃದ್ಧಿಯಾಗುತ್ತದೆ.
ಪರಿಹಾರ : ದೀಪ ನಮಸ್ಕಾರ ಮಾಡಿ
ಕುಂಭ : ತಂದೆ-ಮಕ್ಕಳಲ್ಲಿ ಕೊಂಚ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ ಇದೆ, ವೃತ್ತಿಯಲ್ಲಿ ಅದೃಷ್ಟವನ್ನು ಕಾಣುತ್ತೀರಿ, ಲಾಭದ ಗುರುವೂ ಶನಿಯೂ ಕೂಡ ಶುಭಫಲವನ್ನು ತಂದುಕೊಡಲಿದ್ದಾರೆ, ಮಂಗಳ ಕಾರ್ಯಗಳಿಗೆ ಕೊಂಚ ಅಡೆತಡೆಯಾಗಬಹುದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ ಇಲ್ಲದಾಗುತ್ತದೆ. ಮಿಶ್ರಫಲಗಳಿದ್ದಾವೆ. ಹೆಚ್ಚಿನ ಓಡಾಟ, ಹಾಗೂ ಶ್ರಮದಾಯಕ ಕೆಲಸಗಳು ಮನಸ್ಥಿತಿಯನ್ನು ಏರುಪೇರು ಮಾಡುತ್ತವೆ.
ಪರಿಹಾರ : ಸ್ಕಂದ ಪ್ರಾರ್ಥನೆ ಮಾಡಿ
ಗ್ರಹಕ್ಕೂ, ಶನಿ ಪ್ರದೋಷಕ್ಕೂ ಏನು ಸಂಬಂಧ?
ಮೀನ : ಶತ್ರುಗಳಿಂದ ಧನ ಹಾನಿ, ಕಾಲಿಗೆ ಪೆಟ್ಟುಬೀಳುವ ಸಾಧ್ಯತೆ, ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ, ಆರೋಗ್ಯದ ಕಡೆ ಗಮನ ಬೇಕು, ಪ್ರಯಾಣದಲ್ಲಿ ತೊಂದರೆ ಸಾಧ್ಯತೆ, ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ, ಭಾಗ್ಯ ಹೀನತೆ, ಅದೃಷ್ಟದ ಕುರಿತು ಚಿಂತೆ ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಭಯದ ವಾತಾವರಣವೂ ಇರಲಿದೆ. ಎಚ್ಚರಿಕೆ ಬೇಕು.
ಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿಸಿ