ಆಸ್ತಿ, ಮನೆ ಖರೀದಿಗೆ ಯೋಗ ಬರಬೇಕು ಎನ್ನುತ್ತೇವೆ. ಯೋಗ ಅನ್ನೋದು ಒಳ್ಳೆಯದಾದ್ರೆ ಜೀವನದಲ್ಲಿ ಸುಖ ಕಾಣಬಹುದು. ಅದೇ ಅಶುಭ ಯೋಗ ಕಾಣಿಸಿಕೊಂಡ್ರೆ ಕಥೆ ಮುಗಿದಂತೆ. ಜೀವನ ಪರ್ಯಂತ ಕಷ್ಟದಲ್ಲಿ ಜೀವನ ನಡೆಸಬೇಕಾಗುತ್ತದೆ.
ನನ್ನ ಯೋಗ ಸರಿಯಾಗಿಲ್ಲ, ಹಾಗಾಗಿಯೇ ಈ ಘಟನೆ ನಡೀತು ಅಂತಾ ಕೆಲವರು ಹೇಳೋದನ್ನು ನೀವು ಕೇಳಿರ್ತೀರಿ. ಯೋಗ ಕೂಡಿ ಬಂದ್ರೆ ಮದುವೆ, ಮಕ್ಕಳೆಲ್ಲ ಎನ್ನುವ ಮಾತನ್ನು ಹಿರಿಯರು ಹೇಳ್ತಿರುತ್ತಾರೆ. ಹಿಂದೂ ಧರ್ಮ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಯೋಗಕ್ಕೆ ಮಹತ್ವದ ಸ್ಥಾನವಿದೆ. ಹಿಂಧೂ ಧರ್ಮಗ್ರಂಥಗಳಲ್ಲಿ ಎರಡು ರೀತಿಯ ಯೋಗವನ್ನು ವಿವರಿಸಲಾಗಿದೆ. ಒಂದು ಮಂಗಳಕರ ಯೋಗವಾದ್ರೆ ಇನ್ನೊಂದು ಅಶುಭ ಯೋಗ.
ಜ್ಯೋತಿಷ್ಯ (Astrology) ದಲ್ಲಿ ಯಾವುದೇ ವ್ಯಕ್ತಿಯ ಸ್ಥಿತಿಯನ್ನು ಅವನ ಜಾತಕ (Horoscope) ದ ಆಧಾರದ ಮೇಲೆ ಅರ್ಥ ಮಾಡಿಕೊಳ್ಳಲಾಗುತ್ತದೆ. ಜಾತಕ ಗ್ರಹಗಳು, ನಕ್ಷತ್ರಪುಂಜಗಳು ಮತ್ತು ರಾಶಿಚಕ್ರದ ಚಿಹ್ನೆಗಳ ಸ್ಥಾನವನ್ನು ವಿವರಿಸುವ ಚಾರ್ಟ್ ಆಗಿದೆ. ಜಾತಕದಲ್ಲಿ ಶುಭ ಮತ್ತು ಅಶುಭ ಯೋಗಗಳೆರಡೂ ಇರುತ್ತವೆ. ಶುಭ ಯೋಗಗಳ ಸಂಖ್ಯೆ ಹೆಚ್ಚಿದ್ದರೆ, ಸಾಮಾನ್ಯ ಸಂದರ್ಭಗಳಲ್ಲಿ ಜನಿಸಿದ ವ್ಯಕ್ತಿ ಕೂಡ ಶ್ರೀಮಂತ, ಸಂತೋಷ (Happiness) ಮತ್ತು ಪರಾಕ್ರಮಿಯಾಗುತ್ತಾನೆ. ಜೀವನದಲ್ಲಿ ಸದಾ ಸುಖವನ್ನು ಕಾಣ್ತಾನೆ. ಆದರೆ ಅಶುಭ ಯೋಗಗಳು ಹೆಚ್ಚು ಪ್ರಬಲವಾಗಿದ್ದರೆ, ವ್ಯಕ್ತಿಯು ಲಕ್ಷಾಂತರ ಪ್ರಯತ್ನಗಳ ನಂತರವೂ ಯಾವಾಗಲೂ ತೊಂದರೆಯಲ್ಲಿರುತ್ತಾನೆ. ಲಕ್ಷಾದಿಪತಿ ಕೂಡ ಭಿಕ್ಷಾದಿಪತಿಯಾಗ್ತಾನೆ. ಈ ಯೋಗ ವ್ಯಕ್ತಿಯನ್ನು ಸಂಪೂರ್ಣ ಬೀದಿಗೆ ತಳ್ಳುತ್ತದೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಪೈಸೆ ಪೈಸೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ನಾವಿಂದು ದರಿದ್ರ ಯೋಗದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ರಾಜ್ಯದ ಕೆಟ್ಟ ಮಂತ್ರಿ ಸೇರಿ ಇಂಥವು ಬೇಗ ನಾಶವಾಗುತ್ತೆ ಅಂದಿದ್ದಾನೆ ಚಾಣಕ್ಯ!
ದರಿದ್ರ ಯೋಗ ಅಂದ್ರೇನು? : ಅಶುಭ ಯೋಗವೇ ದರಿದ್ರ ಯೋಗ. ಜಾತಕದಲ್ಲಿ ದರಿದ್ರ ಯೋಗ ಶುರುವಾದ್ರೆ ಜೀವನದುದ್ದಕ್ಕೂ ತೊಂದರೆಗಳನ್ನು ಎದುರಿಸಬೇಕಾಗಬಹುದು. ಮಾಡಿದ ಎಲ್ಲ ಕೆಲಸ ಹಾಳಾಗುತ್ತದೆ. ಸಂತೋಷ ಮತ್ತು ಶಾಂತಿಯ ನಷ್ಟವಾಗುತ್ತದೆ. ಒತ್ತಡ, ನಿರಾಶೆ, ವೈಫಲ್ಯ ವ್ಯಕ್ತಿಯನ್ನು ಸುತ್ತುವರೆದಿರುತ್ತದೆ.
ದರಿದ್ರ ಯೋಗಕ್ಕೆ ಕಾರಣವೇನು? : ಇದನ್ನು ಅನೇಕ ಭಾಗಗಳಾಗಿ ವಿಂಗಡಿಸಲಾಗಿದೆ. ಗ್ರಹಣ ಯೋಗ, ಚಾಂಡಾಲ ಯೋಗ, ಪಿತೂರಿ ಯೋಗ, ಕುಜ ಯೋಗ, ವಿಷ ಯೋಗ ಸೇರಿದಂತೆ ಅನೇಕ ಯೋಗಗಳಿವೆ. ಈ ಯೋಗಕ್ಕೆ ನಾನಾ ಕಾರಣವಿದೆ. ಶುಭ ಗ್ರಹವು ಅಶುಭ ಗ್ರಹದ ಸಂಪರ್ಕಕ್ಕೆ ಬಂದಾಗ ದರಿದ್ರ ಯೋಗ ರೂಪುಗೊಳ್ಳುತ್ತದೆ. ಗುರು 6 ರಿಂದ 12 ನೇ ಮನೆಯಲ್ಲಿ ಕುಳಿತಾಗ ದರಿದ್ರ ಯೋಗ ರೂಪುಗೊಳ್ಳುತ್ತದೆ. ಶುಭ ಯೋಗವು ಕೇಂದ್ರದಲ್ಲಿದ್ದಾಗ ಮತ್ತು ಅಶುಭ ಗ್ರಹವು ಸಂಪತ್ತಿನ ಮನೆಯಲ್ಲಿ ಕುಳಿತಿದ್ದರೆ, ಜಾತಕದಲ್ಲಿ ಕಳಪೆ ಯೋಗದ ರಚನೆಯಾಗುತ್ತದೆ. ಚಂದ್ರನ ನಾಲ್ಕನೇ ಸ್ಥಾನದಲ್ಲಿ ದುಷ್ಟ ಗ್ರಹವಿದ್ದರೆ ಕಳಪೆ ಯೋಗ ಕಾಡುತ್ತದೆ.
ಯಾವುದೇ ಅಡೆತಡೆ ಇಲ್ಲದೇ ಮದುವೆ ಆಗಬೇಕು ಅಂದ್ರೆ ಶುಕ್ರವಾರ ಹೀಗ್ ಮಾಡಿ!
ದರಿದ್ರ ಯೋಗದಿಂದ ರಕ್ಷಣೆ ಹೇಗೆ? :
• ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ ಹಚ್ಚುವುದರಿಂದ ದರಿದ್ರ ಯೋಗದ ಪ್ರಭಾವ ಕಡಿಮೆಯಾಗುತ್ತದೆ.
• ತಾಯಿ ಲಕ್ಷ್ಮಿಯನ್ನು ಪ್ರತಿ ದಿನ ನಿಯಮಬದ್ಧವಾಗಿ ಪೂಜೆ ಮಾಡುವುದ್ರಿಂದ ಕಳಪೆ ಯೋಗದ ಪ್ರಭಾವ ಕಡಿಮೆಯಾಗುತ್ತದೆ.
• ಗಜೇಂದ್ರ ಮೋಕ್ಷವನ್ನು ಪಠಿಸುವುದರಿಂದ ದರಿದ್ರ ಯೋಗದ ಪರಿಣಾಮವು ಸಂಪೂರ್ಣವಾಗಿ ನಾಶವಾಗುತ್ತದೆ.
• ಭಗವದ್ಗೀತೆಯ ಪಠಣವು ದರಿದ್ರ ಯೋಗದ ಪರಿಣಾಮವನ್ನು ಶೂನ್ಯಗೊಳಿಸುವಲ್ಲಿ ಪರಿಣಾಮಕಾರಿ ಎಂದು ನಂಬಲಾಗಿದೆ.
• ಪ್ರತಿ ತಿಂಗಳ ಸಂಬಳದಲ್ಲಿ ಸ್ವಲ್ಪ ಹಣವನ್ನು ದಾನ ಮಾಡಿದರೂ ದರಿದ್ರ ಯೋಗದಿಂದ ಮುಕ್ತಿ ಪಡೆಯಬಹುದಾಗಿದೆ.
• ಗ್ರಹಣ ಯೋಗದ ಪರಿಣಾಮವನ್ನು ಕಡಿಮೆ ಮಾಡಲು ಸೂರ್ಯ ಮತ್ತು ಚಂದ್ರನ ಆರಾಧನೆ ಮಾಡ್ಬೇಕು. ಆದಿತ್ಯಹೃದಯಂ ಸ್ತೋತ್ರವನ್ನು ನಿಯಮಿತವಾಗಿ ಪಠಿಸಬೇಕು. ಸೂರ್ಯನಿಗೆ ನೀರನ್ನು ಅರ್ಪಿಸಬೇಕು.
• ಚಂಡಾಲ ಯೋಗಕಾಡಿದಾಗ ಗುರುವಾರದಂದು ಅಗತ್ಯವಿರುವವರಿಗೆ ಹಳದಿ ಬೇಳೆಗಳನ್ನು ದಾನ ಮಾಡಬೇಕು. ಗುರುವಿನ ಶಾಂತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗಣೇಶನಿಗೆ ಹಳದಿ ಸಿಹಿತಿಂಡಿಗಳನ್ನು ಅರ್ಪಿಸಬೇಕು.
