ಶುಕ್ರ ದೆಸೆ ಅಂದರೆ ಅದೃಷ್ಟ ಖುಲಾಯಿಸಿದೆ ಅಂತಲೇ ದೃಢವಾದ ನಂಬಿಕೆ. ಇದು ಅನಾದಿ ಕಾಲದಿಂದಲೇ ನಮ್ಮ ನಮ್ಮ ನಂಬಿಕೆಗಳಲ್ಲಿ ಬೇರೂರಿದೆ. ಇದೀಗ ಮೀನರಾಶಿಗೆ ಶುಕ್ರನ ಆಗಮನವಾಗಿದೆ. ನಾಲ್ಕು ರಾಶಿಗಳಿಗೆ ಶುಕ್ರ ದೆಸೆ ಪ್ರಾಪ್ತವಾಗಿದೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು? ಅವರಿಗೆ ಏನೆಲ್ಲ ಫಲಪ್ರಾಪ್ತಿಯಿದೆ ನೋಡೋಣ.

1. ಕಟಕ ರಾಶಿ

ಔದ್ಯೋಗಿಕ ರಂಗದಲ್ಲಿ ಉನ್ನತಿ ಪ್ರಾಪ್ತವಾಗಲಿದೆ. ಹೊಸ ಉದ್ಯೋಗಾವಕಾಶ ನಿಮ್ಮನ್ನು ಅರಸಿಕೊಂಡು ಬರಬಹುದು. ಯಾವಾಗಲೂ ಸೇಫ್ ಗೇಮ್ ಆಡುವ ನೀವು ಈ ಬಾರಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲೇ ಬೇಕು. ಹೊಸ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಈಗ ಕೆಲಸ ಬದಲಾಯಿಸಿದರೆ ಹೊಸ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹೂಡಿಕೆಗಳಲ್ಲಿ ತೊಡಗಿಸಿಕೊಂಡರೆ ಲಾಭವಾಗಲಿದೆ. ಅದೃಷ್ಟ ನಿಮ್ಮ ಅಂಗೈಯಲ್ಲಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬನ್ನಿ. ಸದಾ ಗೊಂದಲದಲ್ಲಿರುವ ನೀವು ಮನಸ್ಸನ್ನು ಏಕಾಗ್ರಗೊಳಸಿ ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ. ಆರ್ಥಿಕವಾಗಿ ಸಬಲರಾಗುವಿರಿ. ಪುಣ್ಯ ಕ್ಷೇತ್ರಗಳ ದರ್ಶನ ಪಡೆಯಲಿದ್ದೀರಿ.

2. ಕನ್ಯಾ ರಾಶಿ

ಸದಾ ನಿಮ್ಮ ಏಳಿಗೆಯ ಬಗ್ಗೆಯೇ ಯೋಚಿಸುವ, ಸ್ವತಂತ್ರವಾಗಿ ಬದುಕ ಬಯಸುವ ನಿಮಗೆ ಈಗ ಬಯಸಿದ್ದು ಸಿಗುವ ಕಾಲ. ಮೊದಲಿಂದಲೂ ನಿಮ್ಮದು ಖರ್ಚು ಮಾಡುವುದರಲ್ಲಿ ಎತ್ತಿದ ಕೈ. ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನುವ ಮನಸ್ಥಿತಿ ನಿಮ್ಮದು. ಬದುಕಿನ ವಿವಿಧ ಘಟ್ಟಗಳಲ್ಲಿ ನಿಮ್ಮ ಈ ಮನಸ್ಥಿತಿಯಿಂದ ಅಧಿಕ ಖರ್ಚು ಬಂದಿರಬಹುದು. ಸಾಲದಿಂದ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿರಬಹುದು. ಕಷ್ಟದಿಂದ ಪಾರಾಗುವ ಬಗೆ ತಿಳಿಯದೇ ಒದ್ದಾಡಿರಬಹುದು. ಆದರೆ ನಿಮ್ಮ ಆ ಎಲ್ಲ ಸಮಸ್ಯೆಗೆ ಈಗ ಪರಿಹಾರ ಸಿಗಲಿದೆ. ನಿಮಗೀಗ ಒಳ್ಳೆಯ ದಿನಗಳು ಬಂದಿವೆ. ಶುಕ್ರದೆಸೆಯಿಂದ ನಿಮ್ಮ ಬದುಕು ಹಸನಾಗುವುದು. ಹಳೆಯ ಸಾಲಗಳೆಲ್ಲ ತೀರುವವು. ನಿಮ್ಮ ಕೈಯಲ್ಲೂ ಹಣ ಓಡಾಡುವುದು. ನೀವೇ ಹಣ ನೀಡುವ ಸ್ಥಿತಿಗೆ ಬರಲಿದ್ದೀರಿ. ಉದ್ಯೋಗದಲ್ಲಿ ಉನ್ನತ ಹುದ್ದೆ ಪ್ರಾಪ್ತವಾಗಲಿದೆ.

ಈ ರಾಶಿಗಳ ಹುಡುಗಿಯನ್ನು ಮದುವೆಯಾದರೆ ಜೀವನವಿಡೀ ಬಡತನವಿಲ್ಲ! ...

3. ಧನು ರಾಶಿ

ಪ್ರೇಮ ಪ್ರಯತ್ನದಲ್ಲಿ ಶುಭವಿದೆ. ಹೊಸ ಕನಸುಗಳಿಗೆ ನೀರೆರೆಯುವಿರಿ. ನಿಮ್ಮ ಪ್ರೇಮ ಜೀವನ ಹೆಚ್ಚು ತೀವ್ರವಾಗುತ್ತಾ ಹೋಗುತ್ತದೆ. ತಂದೆ ತಾಯಿಗಳ ಆಶೀರ್ವಾದದೊಂದಿಗೆ ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುವುದು. ನಿಮ್ಮಿಷ್ಟದ ಕೆಲಸಗಳಲ್ಲಿ ಬಹಳ ಹೊತ್ತು ಕಳೆಯುವುದರಿಂದ ಮನಸ್ಸಿನ ಖುಷಿ ವೃದ್ಧಿಸುವುದು. ವಿವಾಹಿತರಿಗೆ ಶುಭ ವಾರ್ತೆ ಬರಬಹುದು. ಪತಿ ಪತ್ನಿಯರ ನಡುವೆ ಅನುರಾಗ ಹೆಚ್ಚಬಹುದು. ಮನಸ್ಸಿಗೆ ಶಾಂತಿ ತರುವ ಸಂಗತಿಗಳಿಂದ ಬದುಕು ಬಹಳ ಸುಂದರವಾಗಿ ಕಾಣಲಿದೆ. ಇತರರಿಗೆ ಸಹಾಯ ಮಾಡುವುದರಿಂದಲೂ ನಿಮ್ಮ ಮನಸ್ಸಿನ ಸಂತಸ ಹೆಚ್ಚುವುದು. ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುವಂಥಾ ಸನ್ನಿವೇಶಗಳು ಎದುರಾಗುತ್ತವೆ. ದೇವರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಿಂದ ಎಲ್ಲವೂ ಶುಭವಾಗುವುದು.

ಎಸ್, ಸ ಅಕ್ಷರದಿಂದ ಆರಂಭವಾಗುವ ಹೆಸರಿನವರು ಪ್ರಣಯ ಪ್ರಿಯರಂತೆ! ...

4. ಕುಂಭ ರಾಶಿ

ಬಹಳ ಕಾಲದಿಂದ ನಿಮ್ಮನ್ನು ಕಂಗೆಡಿಸುತ್ತಿರುವುದು ಅನಾರೋಗ್ಯ. ಜೊತೆಗೆ ಆರ್ಥಿಕ ಹಿನ್ನಡೆ. ಎಷ್ಟೇ ಉತ್ತಮ ಸ್ಥಿತಿ ಇದ್ದರೂ ಹಣದ ಉಳಿತಾಯ ಕಷ್ಟವಾಗುವ ಸಂದರ್ಭ ನಿಮ್ಮನ್ನು ಹೈರಾಣಾಗಿಸಿರಬಹುದು. ಏನೇ ಮಾಡಿದರೂ ಬದುಕಿನ ನಿರ್ವಹಣೆಗೆ ಬೇಕಾದಷ್ಟು ಹಣ ಸಿಗದೇ ಹೋಗುವುದು ನಿಮ್ಮನ್ನು ಖಿನ್ನತೆಗೆ ನೂಕಿರಬಹುದು. ಆದರೆ ಈ ಶುಕ್ರದೆಸೆಯನ್ನು ನೀವು ಸರಿಯಾಗಿ ಬಳಸಿಕೊಂಡರೆ ನೀವು ಬದುಕಲ್ಲಿ ಮುಂದೆ ಬರುವಿರಿ. ವೃಥಾ ಹಿಂಜರಿಕೆ ಬೇಡ. ಹಣ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಿದರೆ ಉತ್ತಮ ಪ್ರಯೋಜನವಿದೆ. ನೀವು ಊಹಿಸಿಯೂ ಇರದ ಕಡೆಯಿಂದ ಹಣ ಬರುತ್ತದೆ. ನಿಮ್ಮ ಬದುಕು ಹಿಂದಿಗಿಂತ ಹೆಚ್ಚು ಉತ್ತಮವಾಗಿ ಮುನ್ನಡೆಯುತ್ತದೆ. ಸಂಗಾತಿಯ ಹುಡುಕಾಟದಲ್ಲಿದ್ದರೆ ಅನುರೂಪ ವ್ಯಕ್ತಿ ನಿಮ್ಮ ಬಾಳಲ್ಲಿ ಪ್ರವೇಶ ಮಾಡುವರು. ಅನೇಕ ಸಮಸ್ಯೆಗಳು ನೀರು ಕುಡಿದಷ್ಟು ಸಲೀಸಾಗಿ ಬಗೆಹರಿಯುತ್ತವೆ.

ಅತ್ಯುತ್ತಮ ದಾಂಪತ್ಯಕ್ಕಾಗಿ ಜ್ಯೋತಿಷ್ಯ ನೀಡೋ ಸಲಹೆಗಳಿವು, ಫಾಲೋ ಮಾಡೋಕೇನು ಅಲ್ವಾ? ...