ಈ ರಾಶಿಗಳ ಹುಡುಗಿಯನ್ನು ಮದುವೆಯಾದರೆ ಜೀವನವಿಡೀ ಬಡತನವಿಲ್ಲ!
ಗಂಡನ ಮನೆ ಶ್ರೀಮಂತಿಕೆ, ಕಳೆ ತರುವ ಹೆಣ್ಣುಮಕ್ಕಳು ಯಾರು ನಿಮಗೆ ಗೊತ್ತೆ? ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ನಿಮ್ಮ ಮನೆ ಹೊಸಿಲು ತುಳಿದರೆ ಸದಾ ಸುಖ ಗ್ಯಾರೆಂಟಿ.
ಕೆಲವು ರಾಶಿಗಳು ಹುಟ್ಟುತ್ತಲೇ ಅದೃಷ್ಟವಂತರು. ಅದರಲ್ಲೂ ಹೆಣ್ಣು ಮಕ್ಕಳು ತನ್ನ ತವರು ಮನೆಗೂ ಗಂಡನ ಮನೆಗೂ ಅದೃಷ್ಟವನ್ನು ತರುವವರು. ಅದರಲ್ಲೂ 12 ರಾಶಿಗಳಲ್ಲಿ ತುಲಾ ರಾಶಿ ಮತ್ತು ವೃಷಭ ರಾಶಿ ವಿಶೇಷವಾದ ರಾಶಿಗಳಾಗಿವೆ. ಕಾರಣ ಈ ಎರಡು ರಾಶಿಗಳಿಗೆ ಶುಕ್ರನು ಅಧಿಪತಿಯಾಗಿರುತ್ತಾನೆ. ಈ ಎರಡು ರಾಶಿಗಳ ಹೆಣ್ಣು ಮಕ್ಕಳಿಗೆ ಹಾಗೂ ಅವರನ್ನು ಮದುವೆಯಾದ ಪುರುಷರಿಗೆ ಏನು ಫಲ? ನೋಡೋಣ.
ತುಲಾ ರಾಶಿ
ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರಾಗಿರುತ್ತಾರೆ. ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಶುಕ್ರದೆಸೆ ಇರುತ್ತದೆ. ಹಾಗೇ ಇವರ ಲಗ್ನವು ಕೂಡ ತುಲಾ ಲಗ್ನದಲ್ಲಿ ಇದ್ದು ತುಲಾ ರಾಶಿ ಆಗಿದ್ದರೆ ಖಂಡಿತವಾಗಿಯೂ ಅವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತೀರ ಬಡತನದಲ್ಲಿ ಇರುವ ಹುಡುಗರನ್ನು ಮದುವೆ ಆದರೂ ಇಂತಹ ಹುಡುಗಿಯರನ್ನು ಮದುವೆಯಾದ ಮೇಲೆ ಆ ಹುಡುಗರು ಜೀವನದಲ್ಲಿ ಹಂತಹಂತವಾಗಿ ಮೇಲೇರಿ ಅಥವಾ ಅದೃಷ್ಟದ ಬಲದಿಂದ ದಿಡೀರನೆ ಶ್ರೀಮಂತರೂ ಆಗಬಹುದು. ಅಂದರೆ ಆ ಹೆಣ್ಣಿನಿಂದ ಆತನ ಅದೃಷ್ಟ ಕೂಡ ಖುಲಾಯಿಸುತ್ತದೆ. ಈ ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಬುದ್ಧಿವಂತರು ಆಗಿರುತ್ತಾರೆ, ಅಧ್ಯಯನದಿಂದ ಜ್ಞಾನವನ್ನು ಸಂಪಾದಿಸುತ್ತಾರೆ. ಎಲ್ಲ ವಿಷಯಗಳಲ್ಲಿ ಸಹ ಇವರು ತುಂಬಾ ಧೈರ್ಯವನ್ನು ಹೊಂದಿರುತ್ತಾರೆ. ಸಾಹಸಗಳನ್ನು ಮಾಡಬಲ್ಲರು. ಇದರ ಜೊತೆಗೆ ವಾಹನಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಇವರು ಹೊಂದಿರುತ್ತಾರೆ. ಇವರು ತುಂಬಾ ಆಭರಣ ಪ್ರಿಯರು ಸಹ. ಒಳ್ಳೆಯ ರೂಪಸೌಂದರ್ಯವನ್ನು ಇವರು ಹೊಂದಿದ್ದರೆ ಅಚ್ಚರಿಯೇನಿಲ್ಲ. ಈ ರಾಶಿಯ ಹುಡುಗಿಯರು ಅದ್ಭುತವಾದ ಕಲಾವಿದರೂ ಆಗಬಹುದು. ಇದಕ್ಕೆ ಕಾರಣ ಶುಕ್ರ ಗ್ರಹ ತುಂಬಾ ಶಕ್ತಿಶಾಲಿ. ಈ ಶುಕ್ರ ಬಿಳಿ ಬಣ್ಣದಿಂದ ಕೂಡಿರುತ್ತದೆ. ಹಾಗೇ ಅದು ಕಲಾತ್ಮಕ ಹಾಗೂ ಧನಾತ್ಮಕತೆಯಿಂದ ಕೂಡಿರುತ್ತದೆ. ಈ ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ರಾಶಿ ಲಗ್ನ ಎಲ್ಲವೂ ತುಲಾ ಲಗ್ನವಾಗಿದ್ದು ಅಧಿಪತಿ ಶುಕ್ರನಿದ್ದರೆ ಇವರು ಮದುವೆ ಆಗಿ ಹೋಗುವ ಮನೆ ತುಂಬಾ ಅದೃಷ್ಟವನ್ನು ಪಡೆಯುತ್ತದೆ, ಇವರ ಕಾಲ್ಗುಣದಿಂದ ಗಂಡನ ಮನೆ ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯುತ್ತದೆ.
ಈ ಶಿವರಾತ್ರಿ ಬಳಿಕ ಈ ರಾಶಿಯವರಿಗೆ ಭರ್ಜರಿ ಧನಲಾಭ ...
ವೃಷಭ ರಾಶಿ
ವೃಷಭ ರಾಶಿ ಹಾಗೂ ಲಗ್ನದಲ್ಲಿ ಶುಕ್ರ ಗ್ರಹವನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ತಂದೆಯ ಮನೆಗೂ ಗಂಡನ ಮನೆಗೂ ಅದೃಷ್ಟವನ್ನು ರಾಶಿ ರಾಶಿ ತಂದು ಸುರಿಯುತ್ತಾರೆ. ಇವರು ಜನಿಸಿದ ಕ್ಷಣದಿಂದ ತಂದೆಯ ಮನೆಯಲ್ಲಿ ಹಣಕಾಸಿನ ಸಮೃದ್ಧಿಯನ್ನು, ಆರೋಗ್ಯದ ನಿರ್ಮಲತೆಯನ್ನು ಕಾಣಬಹುದು. ಕುಟುಂಬದ ಎಲ್ಲರ ಆರೋಗ್ಯವೂ ವೃದ್ಧಿಸುತ್ತಾ ಹೋಗುತ್ತದೆ. ನಿಜಕ್ಕೂ ಇವರನ್ನು ಮದುವೆ ಮಾಡಿ ಕಳಿಸಿಕೊಡುವುದು ಎಂದರೆ ಲಕ್ಷ್ಮೀದೇವತೆಯನ್ನು ಮನೆಯಿಂದ ಆಚೆಗೆ ಕಳಿಸುವುದು ಎಂದೇ ಅರ್ಥ. ಹಾಗೇ, ಇಂಥವರನ್ನು ಮದುವೆಯಾಗುವ ಪುರುಷರು ಕೂಡ ಅದೃಷ್ಟವಂತರು. ಇವರ ಮನೆಯ ಹೊಸ್ತಿಲಿನಲ್ಲಿ ಈ ಹೆಣ್ಣುಮಕ್ಕಳು ಸೇರಕ್ಕಿ ಒದ್ದು ಒಳಗೆ ಬಂದ ಕ್ಷಣದಿಂದಲೇ ಆ ಮನೆಯಲ್ಲಿ ಧನಧಾನ್ಯ ತಾಂಡವವಾಡಲು ಆರಂಭಿಸುತ್ತದೆ. ಉಣ್ಣಲು ಉಡಲು ಯಾವುದೇ ಕಾರಣದಿಂದಲೂ ಯಾವಾಗಲೂ ತೊಂದರೆ ಆಗುವುದೇ ಇಲ್ಲ.
ಎಷ್ಟೊಂದು ಸುಲಭವಾಗಿ ಒಲಿಯುವವನು ಈ ಶಿವ! ...
ಇವರು ಸುಮ್ಮಸುಮ್ಮನೆ ಇನ್ನೊಬ್ಬರ ತಂಟೆಗೆ ಹೋಗುವುದಿಲ್ಲ, ಹಾಗೇ ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ. ತಮ್ಮ ಗಂಡಂದಿರನ್ನು ತಮ್ಮ ಮುಷ್ಟಿಯಲ್ಲಿ ಹಿಡಿದು ಇಟ್ಟುಕೊಂಡಿರುತ್ತಾರೆ. ಇವರ ಮುಖದಲ್ಲಿ ಒಂದು ತೇಜಸ್ಸು ಜೊತೆಗೆ ಲಕ್ಷ್ಮೀ ಕಳೆ ಕೂಡ ಇರುತ್ತದೆ. ಇವರು ಒಣಬೀಜವನ್ನು ಸುಮ್ಮನೇ ಎಡಗೈಯಲ್ಲಿ ಬಿಸಾಡಿದರೂ ಅದು ಹುಟ್ಟಿ ಬೆಳೆದು ಫಲ ಕೊಡುತ್ತದೆ. ಇವರು ಕಾಲಿಟ್ಟ ಗಳಿಗೆ ಸಮೃದ್ಧಿಯ ಸಮಯ. ಇವರನ್ನು ಚೆನ್ನಾಗಿ ನೋಡಿಕೊಳ್ಳುವ ಗಂಡನು ಏಳಿಗೆ ಕಾಣುತ್ತಾನೆ. ಕಡೆಗಣಿಸಿದರೆ ಅವನತಿ ಗ್ಯಾರೆಂಟಿ.
ಪರಶಿವನ ಈ ಹೆಸರುಗಳ ಪ್ರಭಾವ ಏನು ನಿಮಗೆ ಗೊತ್ತೇ? ...