Asianet Suvarna News Asianet Suvarna News

Shukra Gochar 2022: ಈ ರಾಶಿಗಳು ಎಚ್ಚರ, ಶುಕ್ರನನ್ನು ಒಲಿಸಲು ಹೀಗೆ ಮಾಡಿ..

ಆಗಸ್ಟ್‌ನಲ್ಲಿ ಶುಕ್ರನು ತನ್ನ ಮಿತ್ರ ರಾಶಿಚಕ್ರದಿಂದ ಶತ್ರು ರಾಶಿಚಕ್ರಕ್ಕೆ ಸಂಚರಿಸುತ್ತಿದ್ದಾನೆ. ಈ ಸಮಯದಲ್ಲಿ ಕೆಲ ರಾಶಿಗಳು ಉತ್ತಮ ಫಲ ಅನುಭವಿಸಿದರೆ ಹೆಚ್ಚಿನ ರಾಶಿಗಳು ಸಂಕಷ್ಟ, ಹಣಕಾಸಿನ ಕೊರತೆ ಎದುರಿಸುತ್ತವೆ. ಶುಕ್ರನನ್ನು ಮೆಚ್ಚಿಸಲು ಈ ಕಾರ್ಯಗಳನ್ನು ಮಾಡುವುದರಿಂದ ಈ ಸಂಚಾರದ ನಕಾರಾತ್ಮಕ ಪರಿಣಾಗಳಿಂದ ತಪ್ಪಿಸಿಕೊಳ್ಳಬಹುದು. 

Shukra Gochar 2022 THESE Zodiac Signs Need to be Careful And Remedies to Calm Venus skr
Author
Bangalore, First Published Aug 4, 2022, 10:45 AM IST

ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ, ಐಷಾರಾಮಿ ಮತ್ತು ಪ್ರೀತಿಯ ಗ್ರಹವೆಂದು ಪರಿಗಣಿಸಲಾಗಿದೆ. ಇದು ವೃಷಭ ಮತ್ತು ತುಲಾ ರಾಶಿಯ ಮುಖ್ಯ ಅಧಿಪತಿ. ಎಂದರೆ ಶುಕ್ರನು ಅವರ ಕುಂಡಲಿಯಲ್ಲಿ ಬಲವಾಗಿದ್ದರೆ, ಎಲ್ಲಾ ಸಂತೋಷ ಮತ್ತು ಸಮೃದ್ಧಿ ಅವರ ಜೀವನದಲ್ಲಿ ಬರುತ್ತದೆ. ಶುಕ್ರನು ಜಾತಕದಲ್ಲಿ ಬಲವಾಗಿಲ್ಲದಿದ್ದರೆ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಬೇಕು. ಪ್ರೀತಿಯ ಕೊರತೆ, ಒಂಟಿತನ ಕಾಡುತ್ತದೆ. ಹಣಕಾಸಿನ ತೊಂದರೆಯೂ ತಪ್ಪಿದ್ದಲ್ಲ. ಇಂಥ ಶುಕ್ರನು ಈಗ ಅಂದರೆ, ಆಗಸ್ಟ್ 7, 2022ರಂದು ಭಾನುವಾರ ಬೆಳಿಗ್ಗೆ 05:12ಕ್ಕೆ ತನ್ನ ಮಿತ್ರ ಗ್ರಹವಾದ ಬುಧದ ಚಿಹ್ನೆಗೆ ಸಂಬಂಧಿಸಿದ ಮಿಥುನ ರಾಶಿಯಿಂದ  ಶತ್ರು ಗ್ರಹ ಚಂದ್ರನ ಚಿಹ್ನೆಯಾದ ಕರ್ಕಾಟಕಕ್ಕೆ ಸಾಗುತ್ತಿದೆ. ಈ ತಿಂಗಳ ಅಂತ್ಯದವರೆಗೆ ಶುಕ್ರ ಅಲ್ಲಿಯೇ ಇರಲಿದ್ದಾನೆ. ಶತ್ರುಗ್ರಹದ ರಾಶಿಯಲ್ಲಿ ಶುಕ್ರ ಸಂಚಾರದಿಂದಾಗಿ ಕೆಲ ರಾಶಿಗಳು ಸಂತೋಷ ಅನುಭವಿಸಿದರೆ ಬಹಳಷ್ಟು ರಾಶಿಗಳು ತೊಂದರೆ ಅನುಭವಿಸಬೇಕಾಗಿದೆ. 

ರಾಶಿಗಳ ಮೇಲೆ ಶುಕ್ರ ಗೋಚಾರದ ಪರಿಣಾಮ
ಕರ್ಕಾಟಕದಲ್ಲಿ ಶುಕ್ರನ ಸಂಚಾರ(Venus transit in Cancer)ವು ಈ ರಾಶಿಯ ವೈವಾಹಿಕ ಜೀವನದಲ್ಲಿ ತೊಂದರೆ ಉಂಟುಮಾಡುತ್ತದೆ. ರಾಶಿಚಕ್ರದ ಚಿಹ್ನೆಗಳಾದ ಮೇಷ, ಮಿಥುನ, ಮಕರ ಮತ್ತು ಕನ್ಯಾರಾಶಿಯ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಪಡೆಯುವ ಸಾಧ್ಯತೆಯಿದೆ. ವೃಷಭ, ಸಿಂಹ ರಾಶಿಗೆ ಹೆಚ್ಚು ಲಾಭವಿರಲಿದೆ. ಮತ್ತೊಂದೆಡೆ, ತುಲಾ, ಕರ್ಕ, ಧನು ರಾಶಿ ಮತ್ತು ಕುಂಭ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಇವರ ಲವ್ ಲೈಫ್‌ನಲ್ಲಿ ಸಮಸ್ಯೆಗಳು ಬರಬಹುದು.

ವರಮಹಾಲಕ್ಷ್ಮಿ ಹಬ್ಬ ಹೀಗೆ ಆಚರಿಸಿದರೆ ಪೂರ್ಣ ಫಲ ಸಿದ್ಧಿ

ಸಣ್ಣ ಸಣ್ಣ ಸಮಸ್ಯೆಗಳು ಎದುರಾಗಲಿವೆ. ಶುಕ್ರನ ಅವಕೃಪೆಯಿದ್ದರೆ ನಿರಂತರ ಹಣಕಾಸಿನ ಸಮಸ್ಯೆಗಳು, ಮದುವೆಗೆ ಸಂಗಾತಿಯನ್ನು ಹುಡುಕುವಲ್ಲಿ ಅಡೆತಡೆಗಳು, ಸಮಸ್ಯಾತ್ಮಕ ವೈವಾಹಿಕ ಜೀವನ, ಸ್ವಚ್ಛತೆಯ ಕೊರತೆ, ಮುಟ್ಟಿನ ಸಮಸ್ಯೆಗಳು, ಜೀವನದಲ್ಲಿ ಸಂತೋಷದ ಕೊರತೆ, ಬಹು ಸಾಲಗಳು, ಕಣ್ಣು ಅಥವಾ ಚರ್ಮದ ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಶುಕ್ರನನ್ನು ಶಾಂತಗೊಳಿಸಲು ಅನುಸರಿಸಲು ಸುಲಭ ಪರಿಹಾರಗಳು(remedies)

  • 11 ಶುಕ್ರವಾರದಂದು ಉಪವಾಸ ಆಚರಿಸಿ. ಈ ಸಂದರ್ಭದಲ್ಲಿ ಉಪ್ಪನ್ನು ಸೇವಿಸಬೇಡಿ. 
  • ಜಾತಕದಲ್ಲಿ ದುರ್ಬಲ ಶುಕ್ರ ಸ್ಥಾನ ಹೊಂದಿರುವ ಸ್ಥಳೀಯರು ಪ್ರತಿ ಶುಕ್ರವಾರ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಇವು ಹಾಲು, ಅನ್ನ, ಅಥವಾ ಖೀರ್‌ನಂತಹ ಆಹಾರ ಪದಾರ್ಥಗಳಾಗಿರಬಹುದು. ನೀವು ಅಗತ್ಯವಿರುವವರಿಗೆ ಬಿಳಿ ಬಟ್ಟೆಗಳನ್ನು ಸಹ ದಾನ ಮಾಡಬಹುದು.
  • ಶೃಂಗಾರದ ಕೊರತೆಯು ವ್ಯಕ್ತಿಯ ಜಾತಕದಲ್ಲಿ ದುರ್ಬಲ ಶುಕ್ರನನ್ನು ಹೊಂದಿರುವ ದೊಡ್ಡ ಚಿಹ್ನೆಗಳಲ್ಲಿ ಒಂದಾಗಿದೆ. ಹೀಗಾಗಿ, ನಿಯಮಿತವಾಗಿ ವೈಯಕ್ತಿಕ ನೈರ್ಮಲ್ಯ ಮತ್ತು ಸೌಂದರ್ಯ ಕಾಪಾಡಿಕೊಳ್ಳುವುದು ಕೂಡಾ ಮುಖ್ಯ. ಉಗುರು, ಕೂದಲು ಎಲ್ಲವೂ ಸ್ವಚ್ಛವಾಗಿರಬೇಕು. ಸ್ವಚ್ಛ ಬಟ್ಟೆಗಳನ್ನು ಧರಿಸಬೇಕು. ಸುಗಂಧದ್ರವ್ಯಗಳನ್ನು ಬಳಸಬೇಕು. 

    ಈ ನಾಲ್ಕು ರಾಶಿಯವ್ರು ಸಿಕ್ಕಾಪಟ್ಟೆ ಶಾರ್ಪ್, ಬುಧ ಶನಿ ಕರುಣೆ ಇವರಿಗೆ ಜನ್ಮಜಾತಸ್ಯ ವರ!
     
  • ಶುಕ್ರವಾರದಂದು ಬಿಳಿ ಬಟ್ಟೆಗಳನ್ನು ಧರಿಸಿ. ಬಿಳಿ ವಸ್ತುಗಳನ್ನು ಸಾಧ್ಯವಾದಷ್ಟು ಬಳಸಿ. 
  • ಶುಕ್ರವಾರದಂದು 11/ 21/ 51/ 108 ಬಾರಿ ಶುಕ್ರ ಬೀಜ ಮಂತ್ರಗಳನ್ನು ಪಠಿಸಿ. ಮಂತ್ರ ಹೀಗಿದೆ- "ಓಂ ದ್ರಂ ದ್ರೀಂ ದ್ರೌನ್ ಸಹ ಶುಕ್ರಾಯ ನಮಃ".
  • ಶುಕ್ರನಿಗೆ ಸಂಬಂಧಿಸಿದ ಸಕ್ಕರೆ, ಅಕ್ಕಿ, ಹಾಲು, ಮೊಸರು ಮತ್ತು ತುಪ್ಪದಿಂದ ಮಾಡಿದ ಆಹಾರ ಪದಾರ್ಥಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಿ.
  • ನೀವು ಚಿಕ್ಕ ಹುಡುಗಿಯರಿಗೆ ಮೇಕಪ್, ಕರ್ಪೂರ, ಸಕ್ಕರೆ ಮಿಠಾಯಿ, ಮೊಸರು ಇತ್ಯಾದಿಗಳನ್ನು ದಾನ ಮಾಡಬಹುದು.
  • ಎಲ್ಲಾ ಮಹಿಳೆಯರನ್ನು ಗೌರವಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
  • ಗುಲಾಬಿ ಸುಗಂಧದ ಪರಿಮಳವನ್ನು ಬಳಸುವುದು ಶುಕ್ರನ ಪರಿಣಾಮಗಳನ್ನು ವರ್ಧಿಸಲು ಸಹಾಯ ಮಾಡುತ್ತದೆ. 
Follow Us:
Download App:
  • android
  • ios