ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರ ವಿಶೇಷ ಗುಣ ಅರಿಯಿರಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರ ಮತ್ತು ಗ್ರಹಗಳಿಗೆ ವಿಶೇಷವಾದ ಸ್ಥಾನವಿದೆ. ಇವುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು  ತಿಳಿಯಲಾಗುತ್ತದೆ. ಇಲ್ಲಿ ನಾವು ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....
 

Shravana Dhanishta Shatabisha Zodiac Starts people nature

ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ (Vedic Astrology) ನಕ್ಷತ್ರಗಳಿಗೆ (Star) ಹೆಚ್ಚಿನ ಮಹತ್ವವಿದೆ. ವ್ಯಕ್ತಿಯ ಗುಣ ಸ್ವಭಾವಗಳು (Nature) ನಕ್ಷತ್ರದ ಆಧಾರದ ಮೇಲೆ ತಿಳಿಯಬಹುದಾಗಿರುತ್ತದೆ. ಜಾತಕವನ್ನು (Horoscope) ಮಾಡುವಾಗ ಸಹ ವ್ಯಕ್ತಿಯ ನಕ್ಷತ್ರ ಮುಖ್ಯವಾಗಿ ಬೇಕಾಗುತ್ತದೆ. 

ಒಂದು ಮನೆಯಲ್ಲಿ ಐವರು ಇದ್ದಾರೆಂದರೆ ಅವರ ಸ್ವಭಾವಗಳು ಒಂದೇ ಆಗಿರಬೇಕೆಂದೇನೂ ಇಲ್ಲ. ಕಾರಣ, ಅವರು ಹುಟ್ಟುವ ಘಳಿಗೆ, ನಕ್ಷತ್ರಗಳಿಗೆ ಅನುಸಾರವಾಗಿ ಗ್ರಹಗತಿಗಳು ಪರಿಣಾಮವನ್ನು ಬೀರುತ್ತವೆ. ಇದುವ ಅವರ ಗುಣ ಸ್ವಭಾವಗಳನ್ನು ನಿರ್ಧರಿಸುತ್ತವೆ. ಹಾಗಾಗಿ ನಕ್ಷತ್ರಗಳ ಪಾತ್ರ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. 

ಇದನ್ನು ಓದಿ: ಪಿತೃಪಕ್ಷ ಆಚರಣೆ ಹಿಂದಿನ ಕರ್ಣ ರಹಸ್ಯ - ಹೀಗಿದೆ ಪೌರಾಣಿಕ ಕಥೆ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಇಪ್ಪತ್ತೇಳು ನಕ್ಷತ್ರಗಳಿವೆ (Stars). ಅವುಗಳಲ್ಲಿ ಶ್ರವಣ, ಧನಿಷ್ಠಾ, ಶತಭಿಷಾ (Shravana, Dhanishta, Shatabisha Nakshatra) ನಕ್ಷತ್ರದಲ್ಲಿ ಜನಿಸಿದವರ ವಿಶೇಷ ಗುಣಗಳ ಬಗ್ಗೆ ತಿಳಿಯೋಣ....

ಶ್ರವಣ ನಕ್ಷತ್ರ 
ಇಪ್ಪತ್ತೇಳು ನಕ್ಷತ್ರಗಳಲ್ಲಿ ಶ್ರವಣ ನಕ್ಷತ್ರವು ಇಪ್ಪತ್ತೆರಡನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಚಂದ್ರ (Moon) ದೇವನಾಗಿದ್ದಾನೆ. ತಂದೆ- ತಾಯಿಗಾಗಿ (Parents) ತನ್ನ ಸರ್ವಸ್ವನ್ನೇ ತ್ಯಾಗ ಮಾಡಿದ ಶ್ರವಣ ಕುಮಾರನ (Shravana Kumara) ಪ್ರತೀಕವಾಗಿ ನಕ್ಷತ್ರಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಲ್ಲಿ ಅನೇಕ ವಿಶೇಷತೆಗಳಿವೆ. ಈ ವ್ಯಕ್ತಿಗಳು ಪ್ರಾಮಾಣಿಕರಾಗಿರುತ್ತಾರೆ. ಅತ್ಯಂತ ಜವಾಬ್ದಾರಿಯುತ ನಡವಳಿಕೆ ಇವರದ್ದಾಗಿರುತ್ತದೆ. ಕರ್ತವ್ಯ (Duty)  ಪರಿಪಾಲನೆಯಲ್ಲಿ ಈ ವ್ಯಕ್ತಿಗಳು ಹೆಸರುವಾಸಿಯಾಗಿರುತ್ತಾರೆ. ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಯಾವ ಕೆಲಸಕ್ಕೆ ಕೈಹಾಕಿದರೂ ಸಫಲತೆಯನ್ನು ಕಾಣುತ್ತಾರೆ. ಅನಾವಶ್ಯಕ ಖರ್ಚುಗಳನ್ನು ಈ ವ್ಯಕ್ತಿಗಳು ಮಾಡುವುದಿಲ್ಲ. ಹಾಗಾಗಿ ಹಲವರು ಇವರನ್ನು ಕಂಜೂಸ್‌ಗಳೆಂದು ಭಾವಿಸುತ್ತಾರೆ. ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಸೂಕ್ಮ ಸ್ವಭಾವದವರಾಗಿರುತ್ತಾರೆ. 

ಇದನ್ನು ಓದಿ: ಜಾತಕದ ಈ ಸ್ಥಾನದಲ್ಲಿ ಶನಿ ಇದ್ದರೆ ಆಗುವ ಕೆಲಸವೂ ಆಗುವುದಿಲ್ಲ..!

ಧನಿಷ್ಠಾ ನಕ್ಷತ್ರ 
ಧನಿಷ್ಠಾ ನಕ್ಷತ್ರವು ನಕ್ಷತ್ರಗಳ ಕೂಟದಲ್ಲಿ ಇಪ್ಪತ್ಮೂರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು (God) ಮಂಗಳ (Mars) ಗ್ರಹವಾಗಿದೆ (Planet). ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಅತ್ಯಂತ ಉತ್ಸಾಹಿಗಳು ಆಗಿರುತ್ತಾರೆ. ಸುಮ್ಮನೆ ಕೂರುವುದೆಂದರೆ ಧನಿಷ್ಠಾ ನಕ್ಷತ್ರದಲ್ಲಿ ಜನಿಸಿದವರಿಗೆ ಆಗೋದಿಲ್ಲ. ಸದಾ ಚಟುವಟಿಕೆಯಿಂದ ಇರುವುದು ಇವರ ಸ್ವಭಾವ.  ಈ ವ್ಯಕ್ತಿಗಳು ಪರಿಶ್ರಮ ಮತ್ತು ಛಲದಿಂದ ತಮ್ಮ ಗುರಿಯನ್ನು (Goal) ಸಾಧಿಸುವಲ್ಲಿ ಸಫಲರಾಗುತ್ತಾರೆ. ಇತರರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಅಧಿಕಾರವನ್ನು ಚಲಾಯಿಸುವ ಅವಕಾಶಕ್ಕಾಗಿ ಕಾಯುತ್ತಾರೆ. ಜೀವನದಲ್ಲಿ ನೆಮ್ಮದಿಯಿಂದ ಶಾಂತಿಯಿಂದ (Peace) ಬದುಕಲು ಇಚ್ಛಿಸುತ್ತಾರೆ.

ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಶತಭಿಷ ನಕ್ಷತ್ರ 
ನಕ್ಷತ್ರಗಳ ಪಟ್ಟಿಯಲ್ಲಿ ಇಪ್ಪತ್ನಾಲ್ಕನೆಯ ನಕ್ಷತ್ರ ಶತಭಿಷ ನಕ್ಷತ್ರವಾಗಿದೆ. ನಕ್ಷತ್ರದ ಅಧಿಪತಿ ದೇವರು ರಾಹುಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಶಾರೀರಿಕ ಶ್ರಮದ ಮೇಲೆ ಹೆಚ್ಚು ವಿಶ್ವಾಸ (Confidence) ಇಟ್ಟುಕೊಳ್ಳುವುದಿಲ್ಲ. ಬದಲಾಗಿ ಬುದ್ಧಿಯನ್ನು (Intilligence) ಹೆಚ್ಚು ಉಪಯೋಗಿಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಸ್ವತಂತ್ರರಾಗಿರಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಉದ್ಯೋಗ ಮಾಡಲು ಸಹ ಬಯಸುತ್ತಾರೆ. ಸದಾ ದುಡಿಯುತ್ತಾ ಯಂತ್ರದ ರೀತಿಯಲ್ಲಿ ಜೀವನ (Life) ನಡೆಸುವುದು ಇವರಿಗೆ ಇಷ್ಟವಿರುವುದಿಲ್ಲ. ಶತ್ರುಗಳ ವಿರುದ್ಧ ಸದಾ ಜಯಗಳಿಸುತ್ತಾರೆ. ಹತ್ತಿರದವರಿಂದ ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ. ಅಂದರೆ, ಅಣ್ಣ-ತಮ್ಮಂದಿರಿಂದಲೇ ಹೆಚ್ಚು ಸಮಸ್ಯೆಗಳು ಉಂಟಾಗುತ್ತವೆ. ಆದರೂ ಅವರಿಗೆ ಅವಶ್ಯಕತೆ ಇದ್ದರೂ ಅವರಿಗೆ ಸಹಾಯ ಮಾಡುವ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. ಇದರ ಜೊತೆಗೆ ಇವರ ತಂದೆಯೂ ಸಹ ಇವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದಿಲ್ಲ. ತಾಯಿ ಪ್ರೀತಿ (Mother's Love) ಮಾತ್ರ ಇವರಿಗೆ ಸದಾ ಸಿಗುತ್ತದೆ. ಇವರ ವೈವಾಹಿಕ ಜೀವನ ಅಷ್ಟು ಆನಂದಕರವಾಗಿರದಿದ್ದರೂ, ಪತ್ನಿಯಾದವರು ಗೃಹಿಣಿಗೆ (house Wife) ಇರಬೇಕಾದ ಎಲ್ಲ ಒಳ್ಳೆ ಗುಣಗಳನ್ನು ಹೊಂದಿರುತ್ತಾರೆ.
 

Latest Videos
Follow Us:
Download App:
  • android
  • ios