Asianet Suvarna News Asianet Suvarna News

ಪಿತೃಪಕ್ಷ ಆಚರಣೆ ಹಿಂದಿನ ಕರ್ಣ ರಹಸ್ಯ - ಹೀಗಿದೆ ಪೌರಾಣಿಕ ಕಥೆ!

ಭಾದ್ರಪದ ಮಾಸದ ಹುಣ್ಣಿಮೆಯಿಂದ ಆರಂಭವಾಗಿ ಹದಿನಾರು ದಿನಗಳ ಕಾಲ ಪಿತೃಪಕ್ಷವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪಿತೃಗಳ ಸಂತೃಪ್ತಿಗಾಗಿ ತರ್ಪಣ ಬಿಡುವುದು, ಪಿಂಡ ಪ್ರದಾನ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ  ದಾನ ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಮಹಾಭಾರತದ ಕರ್ಣನ ಕಾರಣದಿಂದ ಸಹ ಪಿತೃಪಕ್ಷವನ್ನು ಆಚರಿಸಲಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಹಾಗಾದರೆ ಇದರ ಹಿಂದಿರುವ ಪೌರಾಣಿಕ ಕಥೆಯನ್ನು ತಿಳಿಯೋಣ.

Pitrupaksha ritual is doing because of Karna here is Mythical story
Author
Bangalore, First Published Oct 5, 2021, 4:54 PM IST
  • Facebook
  • Twitter
  • Whatsapp

ಹಿಂದೂ (Hindu) ಸಂಸ್ಕೃತಿಯಲ್ಲಿ ಅನೇಕ ಹಬ್ಬ (Festival) ಹರಿದಿನಗಳ ಆಚರಣೆಗಳಂತೆಯೇ, ಪಿತೃಗಳ ಸಂತೃಪ್ತಿಗಾಗಿ ಪಿತೃ ಪಕ್ಷದಲ್ಲಿ (Pitrupaksha) ತರ್ಪಣವನ್ನು ನೀಡಲಾಗುತ್ತದೆ. ಭಾದ್ರಪದ ಮಾಸದ ಹುಣ್ಣಿಮೆಯಂದು ಆರಂಭವಾಗಿ ಹದಿನಾರು ದಿನಗಳ ಕಾಲವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. 

ಇದನ್ನು ಓದಿ: ಜಾತಕದ ಈ ಸ್ಥಾನದಲ್ಲಿ ಶನಿ ಇದ್ದರೆ ಆಗುವ ಕೆಲಸವೂ ಆಗುವುದಿಲ್ಲ..!

ಈ ದಿನಗಳಲ್ಲಿ ಪಿತೃಗಳ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡುವುದು, ತರ್ಪಣ ಬಿಡುವುದು, ಪಿಂಡ ಪ್ರದಾನ ಮಾಡುವುದು ಇತ್ಯಾದಿ ಕಾರ್ಯಗಳನ್ನು ನಡೆಸುತ್ತಾರೆ. ಇದರಿಂದ ಪಿತೃಗಳು ಸಂತೃಪ್ತಿ ಹೊಂದಿ, ಆಶೀರ್ವಾದ ನೀಡುವುದಲ್ಲದೆ ಮನೆಯಲ್ಲಿ ಸುಖ - ಸಮೃದ್ಧಿ ನೆಲೆಸಿರುತ್ತದೆ. ಪಿತೃಗಳಿಗೆ ಮೋಕ್ಷ ಉತ್ತರಕ್ಕೆ ಪಿತೃಪಕ್ಷವನ್ನು ಮಹಾಭಾರತದ (Mahabharata) ಕರ್ಣನ ಕಾರಣದಿಂದ ಸಹ ಆಚರಿಸಲಾಗುತ್ತದೆ. ಹಾಗಾದರೆ ಕರ್ಣನ (Karna) ಕಾರಣಕ್ಕಾಗಿ ಆಚರಿಸಲಾಗುತ್ತಿರುವ ಪಿತೃ ಪಕ್ಷದ ಪೌರಾಣಿಕ ( Mythical) ಹಿನ್ನೆಲೆ ಏನಿದೆ ಎಂಬುದನ್ನು ತಿಳಿಯೋಣ.

ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಪಿತೃಪಕ್ಷದಲ್ಲಿ ದಾನಧರ್ಮಗಳನ್ನು ಮಾಡಿದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಪಿತೃಗಳ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ಸಹ ಹೇಳಲಾಗುತ್ತದೆ. 

ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಧರ್ಮ ಶಾಸ್ತ್ರಗಳು ತಿಳಿಸುವಂತೆ ಕರ್ಣನಿಗೆ ದಾನಶೂರ ಎಂದೇ ಕರೆಯಲಾಗುತ್ತದೆ. ಕರ್ಣನು ತನ್ನ ಜೀವನದಲ್ಲಿ ಅನೇಕ ದಾನ ಧರ್ಮಗಳನ್ನು ಮಾಡಿದ್ದಲ್ಲದೆ, ಧನ ಮತ್ತು ಸ್ವರ್ಣಾದಿಗಳನ್ನು ಸಹ ಅಗತ್ಯವಿರುವವರಿಗೆ ನೀಡಿರುತ್ತಾನೆ. ಕರ್ಣನು ತನ್ನ ಬಳಿ ಬಂದ ಯಾವ ವ್ಯಕ್ತಿಗೂ ಬರಿಗೈಯಲ್ಲಿ ಕಳುಹಿಸದೆ ಏನಾದರೊಂದು ದಾನ ನೀಡಿದ ಬಳಿಕವೇ ಕಳುಹಿಸುತ್ತಿದ್ದ. ಆದರೆ ಕರ್ಣನು ತನ್ನ ಜೀವಿತಾವಧಿಯಲ್ಲಿ ಅನ್ನವನ್ನಾಗಲಿ (Rice)  ಅಥವಾ  ಆಹಾರ (Food) ಪದಾರ್ಥಗಳನ್ನು ದಾನವಾಗಿ (Donate) ನೀಡಿರುವುದಿಲ್ಲ.

Pitrupaksha ritual is doing because of Karna here is Mythical story

ವೀರಮೃತ್ಯು ಪ್ರಾಪ್ತವಾದ ನಂತರ ಸ್ವರ್ಗ (Heaven) ಲೋಕಕ್ಕೆ ಹೋದಾಗ ಕರ್ಣನಿಗೆ ಅನೇಕ ಧನ (Money) ಸಂಪತ್ತು ಮತ್ತು ಸ್ವರ್ಣಾದಿಗಳನ್ನು ನೀಡಲಾಗುತ್ತದೆ. ಆದರೆ ಅನ್ನ ಅಥವಾ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ನೀಡುವುದಿಲ್ಲ. ಇದರಿಂದ ಬೇಸರಗೊಂಡ ಕರ್ಣ, ಇಂದ್ರನ ಬಳಿ ತನಗೆ ಕೇವಲ ಸ್ವರ್ಣಗಳನ್ನೇ ನೀಡಿದ್ದಕ್ಕೆ ಕಾರಣವನ್ನು ಕೇಳುತ್ತಾನೆ.

ಅದಕ್ಕೆ ಇಂದ್ರ (Indra) ಉತ್ತರಿಸುತ್ತಾ, ನೀನು ನಿನ್ನ ಜೀವನಪರ್ಯಂತ ಕೇವಲ ಧನ ಸಂಪತ್ತು ಮತ್ತು ಸ್ವರ್ಣಗಳನ್ನು ಮಾತ್ರವೇ ದಾನವಾಗಿ ನೀಡಿರುತ್ತೀಯ. ಪಿತೃಗಳ ಸಂತೃಪ್ತಿಗಾಗಿ ಅಥವಾ ಅಗತ್ಯವಿರುವವರಿಗೆ ಆಹಾರ ಪದಾರ್ಥಗಳನ್ನಾಗಲಿ ಎಂದೂ ನೀಡದಿರುವ ಕಾರಣ ಸ್ವರ್ಗಲೋಕದಲ್ಲಿ ನಿನಗೆ ಭೋಜನ (Meals) ನೀಡುವುದಿಲ್ಲ ಎಂದು ಹೇಳುತ್ತಾನೆ. ಆಗ ಕರ್ಣನು ಅನ್ನದಾನದಿಂದ ಸಿಗುವ ಪುಣ್ಯದ ಬಗ್ಗೆ ತಿಳಿದಿರಲಿಲ್ಲವೆಂದು ಪಶ್ಚಾತ್ತಾಪದಿಂದ ನುಡಿಯುತ್ತಾನೆ. ಆಗ ಕರ್ಣನನ್ನು 16 ದಿನಗಳ ಕಾಲ, ಆತನಿಗೆ ತಿಳಿಯದೇ ಆದ ತಪ್ಪನ್ನು ಸರಿ ಮಾಡಿಕೊಳ್ಳುವ ಸಲುವಾಗಿ ಭೂಮಿಗೆ ಕಳಿಸಲಾಗುತ್ತದೆ.  ಈ ಸಂದರ್ಭದಲ್ಲಿ ಕರ್ಣನು ತನ್ನ ಪಿತೃಗಳ ಸಂತೃಪ್ತಿಗಾಗಿ ತರ್ಪಣವನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ ಬಡವರಿಗೆ ಮತ್ತು ಹಸಿದವರಿಗೆ  ಆಹಾರ ಪದಾರ್ಥಗಳನ್ನು ನೀಡಿ, ಅನ್ನದಾನವನ್ನು ಮಾಡುತ್ತಾನೆ. ನಂತರ ಸ್ವರ್ಗಲೋಕಕ್ಕೆ ಹಿಂತಿರುಗುತ್ತಾನೆ.

ಹಾಗಾಗಿ ಅದಾದ ಬಳಿಕ ಹದಿನಾರು ದಿನಗಳ ಕಾಲ ಪಿತೃಪಕ್ಷವನ್ನು ಆಚರಿಸುವ ಪರಂಪರೆ ರೂಢಿಗೆ ಬಂದಿದೆ ಎಂದು ಹೇಳಲಾಗುತ್ತದೆ. ಈ ಹದಿನಾರು ದಿನಗಳ ಪಕ್ಷದ ಸಂದರ್ಭದಲ್ಲಿ ಪಿತೃಗಳ ಸಂತೃಪ್ತಿಗೆ ಶ್ರಾದ್ಧ ಕರ್ಮಗಳನ್ನು ಮಾಡುವುದಲ್ಲದೆ, ಹಸಿದವರಿಗೆ (Hungry) ಭೋಜನವನ್ನು ನೀಡುವುದು ಮುಖ್ಯವಾಗುತ್ತದೆ.  

ಇದನ್ನು ಓದಿ: ಅಡುಗೆ ಮನೆಯಲ್ಲಿ ಇವು ಖಾಲಿಯಾದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ..!!

ಅಷ್ಟೇ ಅಲ್ಲದೆ ಈ ದಿನಗಳಲ್ಲಿ ಭಿಕ್ಷೆಗಾಗಿ ಬಂದವರನ್ನು ಬರಿಗೈಯಲ್ಲಿ ಕಳಿಸುವುದನ್ನು ಪಾಪವೆಂದು ಹೇಳಲಾಗುತ್ತದೆ. ಹಾಗಾಗಿ ಜೀವಿತಾವಧಿಯಲ್ಲಿ ನೀಡುವ ಇತರ ಎಲ್ಲ ದಾನಕ್ಕಿಂತ ಅನ್ನದಾನವೇ ಶ್ರೇಷ್ಠವೆಂದು ಹೇಳಲಾಗುತ್ತದೆ. ಪಿತೃಪಕ್ಷದಲ್ಲಿ ಮಾಡಿದ ಅನ್ನದಾನ, ಮೋಕ್ಷ ಪ್ರಾಪ್ತಿಗೆ ಉತ್ತಮ ಮಾರ್ಗವಾಗಿರುತ್ತದೆ. ಮಹಾಭಾರತದ ಕರ್ಣನ ಪೌರಾಣಿಕ ಕಥೆಯೇ ಇದಕ್ಕೆ ಸಾಕ್ಷಿಯಾಗುತ್ತದೆ. ದಾನಶೂರ ಕರ್ಣನೆಂದು ಹೆಸರು ಸಿಕ್ಕಿದರೂ ಸಹ ಆತನಿಗೆ  ಅನ್ನದಾನದ ಪುಣ್ಯ ಪ್ರಾಪ್ತಿಯಾಗಿರುವುದಿಲ್ಲ. ಪಿತೃಪಕ್ಷದ ಆಚರಣೆಗೆ ಕರ್ಣ ಸಹ ಒಂದು ರೀತಿಯ ಕಾರಣವೆಂದು ಸಹ ಹೇಳಲಾಗುತ್ತದೆ. 

Follow Us:
Download App:
  • android
  • ios