MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ದೃಷ್ಟಿ ತಾಕದಿರಲೆಂದು ಮಗುವಿನ ಕೈ, ಕಾಲುಗಳಿಗೆ ಕಪ್ಪು ದಾರ ಕಟ್ಟೋದು ಸರಿಯೇ?

ದೃಷ್ಟಿ ತಾಕದಿರಲೆಂದು ಮಗುವಿನ ಕೈ, ಕಾಲುಗಳಿಗೆ ಕಪ್ಪು ದಾರ ಕಟ್ಟೋದು ಸರಿಯೇ?

ಭಾರತದಲ್ಲಿ, ಚಿಕ್ಕ ಮಕ್ಕಳಿಗೆ ಬಹಳ ಬೇಗನೆ ಕೆಟ್ಟ ದೃಷ್ಟಿ ಬೀಳುತ್ತೆ ಎಂದು ನಂಬಲಾಗಿದೆ, ಆದ್ದರಿಂದ ಬಹಳ ಹಿಂದಿನಿಂದಲೂ ದುಷ್ಟ ಕಣ್ಣು ಮತ್ತು ದುಷ್ಟ ಶಕ್ತಿಯಿಂದ ಅವರನ್ನು ರಕ್ಷಿಸಲು ದೃಷ್ಟಿ ದಾರ/ ಕಪ್ಪು ದಾರ ಧರಿಸುತ್ತಾರೆ. ಇದರಿಂದ ಎಲ್ಲಾ ಒಳ್ಳೆಯದಾಗುತ್ತೆ ಎಂದು ಜನ ನಂಬಿದ್ದಾರೆ. ಆದರೆ ಕೈ ಅಥವಾ ಕುತ್ತಿಗೆಯ ಮೇಲೆ ದೃಷ್ಟಿ ದಾರ ಧರಿಸೋದರಿಂದ ಕೆಲವು ಅನಾನುಕೂಲ ಸಂಭವಿಸಬಹುದು ಅನ್ನೋದು ಗೊತ್ತಾ?, ಬನ್ನಿ ಅವುಗಳ ಬಗ್ಗೆ ತಿಳಿಯಲು ಇಲ್ಲಿ ಓದಿ.

2 Min read
Author : Suvarna News
Published : Nov 01 2022, 04:07 PM IST
Share this Photo Gallery
  • FB
  • TW
  • Linkdin
  • Whatsapp
19

ಮನೆಯಲ್ಲಿ ಮಕ್ಕಳಿದ್ರೆ ಅನೇಕ ಜನರು ಪ್ರತಿದಿನ ಮಗುವನ್ನ ಭೇಟಿಯಾಗ್ತಾರೆ, ಪ್ರೀತಿಸ್ತಾರೆ ಮತ್ತು ವಾತ್ಸಲ್ಯವನ್ನು ತೋರಿಸ್ತಾರೆ. ಹಾಗಾಗಿ, ತಾಯಂದಿರು ಆಗಾಗ್ಗೆ ತಮ್ಮ ಮಗುವಿಗೆ ಯಾರ ದೃಷ್ಟಿ ಬೀಳುತ್ತೋ ಎಂದು ಚಿಂತಿಸುತ್ತಾರೆ. ಮಕ್ಕಳನ್ನು ದುಷ್ಟ ಕಣ್ಣಿನಿಂದ(Evil eye) ರಕ್ಷಿಸಬೇಕು ಎಂದು ಭಾರತದಲ್ಲಿ ಸಾಕಷ್ಟು ಮನ್ನಣೆ ಇದೆ. ಹಾಗಾಗಿ ಮಕ್ಕಳನ್ನು ದುಷ್ಟ ಕಣ್ಣಿನಿಂದ ರಕ್ಷಿಸಲು, ದೃಷ್ಟಿ ದಾರ ಅಥವಾ ಕಪ್ಪು ದಾರ ಧರಿಸ್ತಾರೆ, ಆದರೆ ದೃಷ್ಟಿ ದಾರ ಧರಿಸೋದು ನಿಜವಾಗಿಯೂ ಮಗುವನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿದ್ಯಾ?
 

29

ವೈದ್ಯರು ಅಂತಹ ವಸ್ತುಗಳನ್ನು ನಂಬೋದು ಕಡಿಮೆ. ಅವರು ಅಂತಹ ವಸ್ತುಗಳನ್ನು ಮಕ್ಕಳು ಧರಿಸಲು ನಿರಾಕರಿಸೋದಿಲ್ಲ ಅಥವಾ ಶಿಫಾರಸು ಕೂಡ ಮಾಡೋದಿಲ್ಲ. ಮಗುವಿನ ಬಗ್ಗೆ ಹೆಚ್ಚು ಗಮನ ಹರಿಸೋದರಿಂದ ದುರಾದೃಷ್ಟ ಉಂಟಾಗುತ್ತೆ ಅಥವಾ ಕೆಟ್ಟ ದೃಷ್ಟಿ ಉಂಟಾಗುತ್ತೆ ಎಂದು ನೀವು ಭಾವಿಸಿದರೆ, ಆಗ ಮಗುವಿನ ಕುತ್ತಿಗೆ ಅಥವಾ ಕೈಗೆ ಕಪ್ಪು ದಾರ ಧರಿಸಲು ಕೇಳಲಾಗುತ್ತೆ. ಈ ದಾರವು ಮಗುವನ್ನು ನೆಗೆಟಿವ್ ಅಟ್ರಾಕ್ಷನಿಂದ(Negative attraction) ರಕ್ಷಿಸುತ್ತೆ ಎಂದು ನಂಬಲಾಗಿದೆ.

39

ನೀವು ಸಹ ನಿಮ್ಮ ಮಗುವಿಗೆ ದೃಷ್ಟಿ ದಾರ ಧರಿಸಿದರೆ, ಅದು ಎಷ್ಟು ಸುರಕ್ಷಿತ ಎಂದು ತಿಳಿಯಲು ಮುಂದೆ ಓದಿ.
ನೋವುಂಟು(Pain) ಮಾಡಬಹುದು
ದೃಷ್ಟಿ ದಾರ ಧರಿಸೋದರಿಂದ ಮಗುವಿಗೆ ಗಾಯವಾಗುವ ಸಾಧ್ಯತೆ ಹೆಚ್ಚು. ಮಗುಗೆ ಬಟ್ಟೆ ಧರಿಸುವಾಗ ಮತ್ತು  ತೆಗೆಯುವಾಗ ದಾರ ಎಳೆಯಬಹುದು. ಮಗು ಈ ದಾರವನ್ನು ಅಗಿಯಲು ಪ್ರಾರಂಭಿಸಬಹುದು, ಮತ್ತು ಅದನ್ನು ಎಲ್ಲಾ ಸಮಯದಲ್ಲೂ ಧರಿಸೋದರಿಂದ ನೈರ್ಮಲ್ಯದ ಪ್ರಶ್ನೆಯೂ ಉದ್ಭವಿಸುತ್ತೆ .

49

ಚರ್ಮದ ಸೋಂಕು(SKin infection) ಉಂಟಾಗಬಹುದು
ಮಗು ದೃಷ್ಟಿ ದಾರ ಎಳೆಯದಂತೆ ಅಥವಾ ಅಗಿಯದಂತೆ ದಾರವನ್ನು ತುಂಬಾ ಬಿಗಿಯಾಗಿ ಕಟ್ಟಿದರೆ, ಅದು  ಮಗುವಿನ ಚರ್ಮಕ್ಕೆ ಕಿರಿಕಿರಿ ಉಂಟುಮಾಡಬಹುದು ಅಥವಾ ರಕ್ತ ಪರಿಚಲನೆಯ ಸಮಸ್ಯೆ ಸಹ ಉಂಟುಮಾಡಬಹುದು. 

59

ದೃಷ್ಟಿ ದಾರ ಕಟ್ಟುವಾಗ ಬಿಗಿಯಾಗಿರದಿದ್ದರೂ, ಮಗು ಬೆಳೆದಂತೆ ಮತ್ತು ತೂಕ ಹೆಚ್ಚಾದಂತೆ, ದಾರ ಮಗುವಿಗೆ ತುಂಬಾ ಬಿಗಿಯಾಗಬಹುದು ಮತ್ತು ದಾರ ಒದ್ದೆಯಾದಾಗ,ಅಥವಾ  ದೀರ್ಘಕಾಲದವರೆಗೆ ಒದ್ದೆಯಾಗಿದ್ದಾಗ, ಅಂದರೆ ಮಗುವಿಗೆ ಸ್ನಾನ (Bath)ಮಾಡಿದ ನಂತರ ಅಥವಾ ಬೇಸಿಗೆಯಲ್ಲಿ ನಿಮ್ಮ ಮಗು ಬೆವರಿದಾಗ, ಇದು ದದ್ದು ಅಥವಾ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು.

69

ದೃಷ್ಟಿದಾರವನ್ನು ಎಲ್ಲಿ ಧರಿಸಬೇಕು
ಮಗುವಿಗೆ ಕಪ್ಪು ದಾರವನ್ನು(Black thread) ಕಟ್ಟುವುದು ತುಂಬಾ ಜನಪ್ರಿಯ ಸಂಪ್ರದಾಯವಾಗಿದೆ, ಅದನ್ನು ಮಾಡದಿರಲು ನಿಮಗೆ ಕಷ್ಟವಾಗಬಹುದು. ಆದ್ದರಿಂದ ನೀವು ಕೈ ಅಥವಾ ಕುತ್ತಿಗೆಯ ಬದಲು ನಿಮ್ಮ ಮಗುವಿನ ಪಾದದ ಸುತ್ತಲೂ ಕಾಲ್ಗೆಜ್ಜೆಯಂತಹ ದಾರವನ್ನು ಕಟ್ಟಿ. 

79

 ಮಗುವಿನ ಕಾಲಿಗೆ ದೃಷ್ಟಿ ದಾರ ಕಟ್ಟೋದರಿಂದ, ಮಗುವಿಗೆ ಅದು ಮುಟ್ಟಲು ಮತ್ತು ಎಳೆಯಲು ಕಷ್ಟವಾಗುತ್ತೆ, ಅಥವಾ ಬಾಯಿಯನ್ನು ಪಾದದ ಹತ್ತಿರ ತೊಗೊಂಡೋಗಲು  ಕಷ್ಟವಾಗುತ್ತೆ, ಹಾಗೆ ಡ್ರೆಸ್ ಧರಿಸುವಾಗ ಅಥವಾ ತೆಗೆಯುವಾಗ ಗಾಯಗೊಳ್ಳೋದಿಲ್ಲ. ಇದರಿಂದ ನೀವು ಅಂದುಕೊಂಡಂತೆ ಮಗುವಿಗೆ ದೃಷ್ಟಿಯಾಗೋದು ತಪ್ಪುತ್ತದೆ.

89

ಇವುಗಳನ್ನು ಸಹ ಧರಿಸಬಹುದು
ಇದಲ್ಲದೆ,  ಪ್ಲಾಸ್ಟಿಕ್ ನಿಂದ ಮಾಡಿದ ಕಪ್ಪು ಬಳೆಗಳನ್ನು(Black Bangle) ಸಹ ಧರಿಸಬಹುದು. ಆದರೆ, ನಿಮ್ಮ ಮಗುವು ಕೆಲವೊಮ್ಮೆ ಸಮಸ್ಯೆ ಅನುಭವಿಸಬಹುದು.ಆದುದರಿಂದ  ಪ್ಲಾಸ್ಟಿಕ್ ಫುಡ್ ಗ್ರೇಡ್ ಗುಣಮಟ್ಟದ ಬಳೆಗಳು ಅಥವಾ ಕಡ್ಗ ಧರಿಸೋದು ಉತ್ತಮ. ಯಾಕಂದ್ರೆ ಮಗು ಖಂಡಿತವಾಗಿಯೂ ಅದನ್ನು ಅಗಿಯುತ್ತೆ ಮತ್ತು ಅದನ್ನು ಟೀಥರ್ ಆಗಿ ಬಳಸುತ್ತೆ.  

99

ಕಪ್ಪು ಬೊಟ್ಟು 
ಮಗುವಿನ ಹಣೆ ಅಥವಾ ಕಾಲಿಗೆ ಕಪ್ಪು ಬೊಟ್ಟು ಹಚ್ಚುವ ಮೂಲಕ ದುಷ್ಟ ಕಣ್ಣಿನಿಂದ ರಕ್ಷಿಸಬಹುದು. ಚರ್ಮದ ಮೇಲೆ ನೀವು ಬಳಸುತ್ತಿರುವ ಕಾಡಿಗೆಯ(Kajol) ರಿಯಾಕ್ಷನ್ ಬಗ್ಗೆ ಕಾಳಜಿ ವಹಿಸಿ. ಮಗುವಿನ ಕಣ್ಣಿಗೆ ಕಾಡಿಗೆ ಹಾಕುವ ಮೊದಲು, ಅದು ಸುರಕ್ಷಿತವೇ ಅಥವಾ ಅಲ್ಲವೇ ಎಂದು ತಿಳಿದ ನಂತರವೇ ಉಪಯೋಗಿಸಿ.

About the Author

SN
Suvarna News
ಜ್ಯೋತಿಷ್ಯ

Latest Videos
Recommended Stories
Recommended image1
ಬಾಲದಲ್ಲಿ ನವಿಲು ಗರಿ: ಶ್ರೀಕೃಷ್ಣನ ನಗರಿ ದ್ವಾರಕೆಯ ಗೋಮತಿ ನದಿಯಲ್ಲಿ ಕಾಣಿಸಿಕೊಂಡ ವಿಶೇಷ ಮೀನು
Recommended image2
ನಾಳೆ ಫೆಬ್ರವರಿ 26 ಈ 5 ರಾಶಿ ಜನರಿಗೆ ಸಂಪತ್ತೇ ಸಂಪತ್ತು, ಗಜಕೇಸರಿ ರಾಜಯೋಗದಿಂದ ಬಂಪರ್‌ ಅದೃಷ್ಟ
Recommended image3
ಈ 3 ರಾಶಿಗೆ 5 ದಿನದಲ್ಲಿ ಯು ಟರ್ನ್, 30 ವರ್ಷ ನಂತರ ಪವಾಡ- ದೊಡ್ಡ ಲಾಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved