ಈ ರಾಶಿಯ ಹುಡುಗರು good husband ಎನಿಸಿಕೊಳ್ಳಲಿದ್ದಾರೆ, ನಿಮ್ಮ ಪಾರ್ಟ್ನರ್ ಈ ರಾಶಿಯವರಾ ನೋಡಿ..
ಕೆಲ ರಾಶಿಯ ಹುಡುಗರು ಹುಟ್ಟಾ ಹಸ್ಬೆಂಡ್ ಮೆಟೀರಿಯಲ್. ಹುಡುಗಿ ತನ್ನ ಪತಿಯಲ್ಲಿ ಏನೆಲ್ಲ ಇರಬೇಕೆಂದು ಬಯಸುತ್ತಾಳೋ, ಅವೆಲ್ಲ ಅವರ ಸ್ವಭಾವದಲ್ಲಿ ಇರುತ್ತದೆ.
ಪ್ರತಿಯೊಬ್ಬರಿಗೂ ಕಷ್ಟ ಪಟ್ಟು ದುಡಿದು ಸುಖ ಜೀವನ ಕಾಣಬೇಕೆಂಬ ಆಸೆ ಇರುತ್ತದೆ. ಜೊತೆಗೆ, ತಮ್ಮ ವಿವಾಹ ಜೀವನ ಬಹಳ ಚೆಂದವಿರಬೇಕು, ಇರುತ್ತದೆ ಎಂಬ ಕಲ್ಪನೆ ಕೂಡಾ ಎಲ್ಲರಲ್ಲಿರುತ್ತದೆ. ಇದಕ್ಕೆ ಪತಿ ಪತ್ನಿ ಇಬ್ಬರಲ್ಲೂ ಹೊಂದಿಕೆ ಗುಣ, ಅರ್ಥ ಮಾಡಿಕೊಳ್ಳುವ ಸ್ವಭಾವ, ತಾಳ್ಮೆ, ಪ್ರಾಮಾಣಿಕತೆ ಇರಬೇಕು.
ಕೆಲ ರಾಶಿಯ ಹುಡುಗರು ತಮ್ಮ ಸಂಗಾತಿಯ ಭಾವನೆಗಳಿಗೆ ಬಹಳ ಬೆಲೆ ಕೊಡುತ್ತಾರೆ, ಅವರ ಕಷ್ಟಸುಖವನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಪತ್ನಿಯ ಸಂತೋಷದಲ್ಲಿ ತಮ್ಮ ಸುಖ ಕಾಣುತ್ತಾರೆ.. ಆಕೆಯ ನಗು ಇವರ ಬದುಕಿಗೆ ಇಂಧನ, ಅವಳೇ ಪ್ರಪಂಚ ಎಂದುಕೊಳ್ಳುತ್ತಾರೆ.. ಇಂಥ ಸ್ವಭಾವ ಈ ಕೆಲ ರಾಶಿಗಳ ಹುಟ್ಟು ಗುಣ. ಇಂಥ ಹುಡುಗ ಯಾರಿಗೆ ತಾನೇ ಬೇಡ? ಎಲ್ಲ ಹುಡುಗಿಯರು ಬಯಸುವಂಥ ಈ ಗುಣಗಳ ಸರದಾರರು ಯಾವ ರಾಶಿಯವರಾಗಿರುತ್ತಾರೆ ಗೊತ್ತಾ?
ವೃಷಭ(Taurus)
ವೃಷಭ ರಾಶಿಯ ಹುಡುಗನ ಜಾತಕ ಸಿಕ್ಕರೆ ಹುಡುಗಿ ಕಣ್ಣು ಮುಚ್ಚಿ ಒಪ್ಪಬಹುದು. ಏಕೆಂದರೆ ವೃಷಭ ರಾಶಿಯ ಹುಡುಗನಲ್ಲಿ ಒಳ್ಳೆಯ ಪತಿ(good husband) ಯ ಲಕ್ಷಣಗಳಿರುತ್ತವೆ. ಅವರು ತಮ್ಮ ಮನೆಯ ಸಂಪೂರ್ಣ ಜವಾಬ್ದಾರಿ(responsibility)ಯನ್ನು ತೆಗೆದುಕೊಳ್ಳುವ ಜೊತೆಗೆ, ಕುಟುಂಬದ ಆರ್ಥಿಕ ಭದ್ರತೆಯನ್ನೂ ಕಾಯಬಲ್ಲರು. ವೃಷಭ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಶುಕ್ರ ಗ್ರಹವು ಲಕ್ಷುರಿ ಹಾಗೂ ಆಕರ್ಷಣೆಗೆ ಕಾರಣವಾಗಿರುತ್ತದೆ. ಹಾಗಾಗಿಯೇ ವೃಷಭ ರಾಶಿಯ ಹುಡುಗರು ಹಾಗೂ ಹುಡುಗಿಯರು ಬಹಳ ಆಕರ್ಷಕವಾಗಿರುತ್ತಾರೆ. ಜೊತೆಗೆ ಲಕ್ಷುರಿ ಬದುಕನ್ನೂ ನಡೆಸುತ್ತಾರೆ. ಈ ರಾಶಿಯ ಯುವಕರು ತಮ್ಮ ಪತ್ನಿಯಾಗುವವಳನ್ನು ವಿಪರೀತ ಪ್ರೀತಿಸುತ್ತಾರೆ. ಅವರಿಗೆ ಹೆಚ್ಚು ಸಮಯ ಕೊಡುತ್ತಾರೆ. ಪತ್ನಿಯಾದವಳ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳುತ್ತಲೇ ಇರುತ್ತಾರೆ.
Purpose of life: ಪುರುಷಾರ್ಥ- ಹಾಗೆಂದರೇನು ಗೊತ್ತಾ?
ಕಟಕ(Cancer)
ಕಟಕ ರಾಶಿಯ ಅಧಿಪತಿ ಚಂದ್ರ. ಚಂದ್ರನ ಪ್ರಭಾವದ ಕಾರಣ ಈ ರಾಶಿಯ ಹುಡುಗರು ಸೌಮ್ಯ ಸ್ವಭಾವ ಹೊಂದಿರುತ್ತಾರೆ. ತಾಳ್ಮೆ, ಸಹನೆ ಇವರ ಹುಟ್ಟು ಗುಣ. ಹಾಗಾಗಿಯೇ ಇವರ ವಿವಾಹ ಜೀವನ ಹೆಚ್ಚು ಸಂತೋಷದಿಂದ ಕೂಡಿರುತ್ತದೆ. ತಮ್ಮ ಪತ್ನಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ ಕಟಕದ ಹುಡುಗರು. ಅಷ್ಟೇ ಅಲ್ಲ, ಎಲ್ಲ ವಿಷಯಗಳಲ್ಲೂ ಪತ್ನಿಯ ಅಭಿಪ್ರಾಯ, ಸಲಹೆ(advice) ಕೇಳುತ್ತಾರೆ. ಅವಳ ಮಾತಿಗೆ ಮನ್ನಣೆ ನೀಡುತ್ತಾರೆ. ಯಾವಾಗಲೂ ಜಗಳವನ್ನು ಬಗೆ ಹರಿಸಲು ಮುಂದಾಗುತ್ತಾರೆ. ಸದಾ ತಮ್ಮ ಸಂಗಾತಿಯ ಖುಷಿಗಾಗಿ ಹೊಸತನ್ನು ಮಾಡಲು ಬಯಸುತ್ತಾರೆ. ಪತ್ನಿ ಮುನಿಸು, ಒರಟು ಸ್ವಭಾವ ತೋರಿದರೆ ಅದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಾರೆ. ಆಕೆಯ ಹಟ ಸ್ವಭಾವ, ಸಿಟ್ಟು ಸೆಡವುಗಳನ್ನು ಸಹನೆಯಿಂದಲೇ ಕಾಣುತ್ತಾರೆ.
Sex and Star Signs: ಯಾವ ರಾಶಿಯ ಲೈಂಗಿಕಾಸಕ್ತಿ ಹೇಗಿರುತ್ತದೆ ತಿಳಿಯಿರಿ..
ಧನು(Sagittarius)
ಧನು ರಾಶಿಗೆ ಗುರು ಗ್ರಹ ಅಧಿಪತಿ. ಇದರಿಂದಾಗಿ ಈ ರಾಶಿಯ ಯುವಕರು ಆಧ್ಯಾತ್ಮದ ಕಡೆ ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ, ಅವರು ದಾರಿ ತಪ್ಪುವ ಸಂಭವ ಕಡಿಮೆ. ಗುರು ಬೃಹಸ್ಪತಿಯ ಅನುಗ್ರಹದಿಂದಾಗಿ ಜ್ಞಾನಿಗಳಾಗಿರುವ ಇವರು, ಪ್ರತಿ ಸನ್ನಿವೇಶದಲ್ಲಿ ಹೇಗೆ ನಡೆಯಬೇಕೆಂಬ ಪ್ರಜ್ಞೆ ಹೊಂದಿದವರು. ಗಂಭೀರ ಸ್ವಭಾವದವರಾದ ಧನು ರಾಶಿಯವರು, ಒಳಗಿನಿಂದಲೂ, ಹೊರಗಿನಿಂದಲೂ ಬಹಳ ಜೆಂಟಲ್ ಮ್ಯಾನ್. ಇನ್ನೊಬ್ಬರನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಇದೇ ಕಾರಣಕ್ಕೆ ಸಂಗಾತಿಯ ಮನಸ್ಸನ್ನು ಸಂಪೂರ್ಣ ಅರಿಯಬಲ್ಲರು. ಆದರೆ, ಸಂಗಾತಿಯ ಕೆಟ್ಟ ಗುಣಗಳನ್ನು ಮಾತ್ರ ಸಹಿಸಿಕೊಂಡಿರುವುದು ಇವರಿಂದ ಸಾಧ್ಯವಿಲ್ಲ. ಆಕೆಯಲ್ಲಿ ತಪ್ಪಿದ್ದರೆ ಅದರಿಂದ ನಿರಾಶರಾಗುತ್ತಾರೆ. ಅವಮಾನವಾಗದಂತೆ ಅವಳಿಂದ ದೂರ ಸರಿಯುತ್ತಾರೆ. ಆದರೆ ಉತ್ತಮ ಪತ್ನಿಗೆ ಅತ್ಯುತ್ತಮ ಪತಿಯಾಗಬಲ್ಲರು. ಹುಡುಗಿ ಅಪರಂಜಿಯಾದರೆ, ಧನು ರಾಶಿಯ ಹುಡುಗರು ಆಕೆಯನ್ನು ಅಪರಂಜಿಗಿಂತ ಹೆಚ್ಚು ಆಪ್ತವಾಗಿ ನೋಡಿಕೊಳ್ಳುತ್ತಾರೆ.