Asianet Suvarna News Asianet Suvarna News

Shiv Parvati Vivah: ಪಾರ್ವತಿಯನ್ನು ವಿವಾಹವಾಗಲು ಭಯಂಕರ ವೇಷದೊಂದಿಗೆ ದೆವ್ವಗಳೊಂದಿಗೆ ಮೆರವಣಿಗೆ ಬಂದಿದ್ದ ಶಿವ!

ಶಿವ-ಪಾರ್ವತಿಯ ವಿವಾಹದ ಕಥೆ ಅನನ್ಯವಾಗಿದೆ. ಶಿವನು ಪಾರ್ವತಿಯನ್ನು ಮದುವೆಯಾಗಲು ಭೂತಪ್ರೇತಗಳು ಮತ್ತು ಮಾಟಗಾತಿಯರೊಂದಿಗೆ ವಿಶಿಷ್ಟವಾದ ಮೆರವಣಿಗೆಯನ್ನು ತಂದಿದ್ದನು!

Shiv Parvati Vivah What happened when Shiv arrived in his procession with ghosts and witches skr
Author
First Published Jun 25, 2023, 2:24 PM IST | Last Updated Jun 25, 2023, 2:24 PM IST

ಪಾರ್ವತಿ ರಾಜ ಹಿಮವಂತ ಮತ್ತು ರಾಣಿ ಮೈನಾವತಿಯ ಮಗಳು. ಪಾರ್ವತಿ ಎಂದರೆ ಪರ್ವತಗಳ ರಾಣಿ ಎಂದರ್ಥ. ತಾಯಿ ಪಾರ್ವತಿ ಶಿವನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಶಿವನನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ತಾಯಿ ಪಾರ್ವತಿ ಕಠೋರ ತಪಸ್ಸು ಆರಂಭಿಸಿದಳು. ಪಾರ್ವತಿಯ ತಪಸ್ಸಿನಿಂದಾಗಿ ಮೂರು ಲೋಕಗಳಲ್ಲಿಯೂ ಕಲರವ ಉಂಟಾಯಿತು. ದೊಡ್ಡ ಪರ್ವತಗಳೂ ಅಲ್ಲಾಡತೊಡಗಿದವು. ಎಲ್ಲಾ ದೇವತೆಗಳು ಶಿವನನ್ನು ತಲುಪಿ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡರು.

ಪಾರ್ವತಿ ತಾಯಿಯ ತಪಸ್ಸಿಗೆ ಶಿವ ಸಂತಸಗೊಂಡು ಆಕೆಗೆ ಕಾಣಿಸಿಕೊಂಡು ಯುವರಾಜನನ್ನು ಮದುವೆಯಾಗುವಂತೆ ಕೇಳಿಕೊಂಡ. ಆದರೆ ಪಾರ್ವತಿ ಸಾರಾಸಗಟಾಗಿ ನಿರಾಕರಿಸಿದಳು. ಮನಸ್ಸಿನಲ್ಲಿ ಶಿವನನ್ನು ಪತಿಯಾಗಿ ಸ್ವೀಕರಿಸಿದ್ದೇನೆ, ಇಂತಹ ಪರಿಸ್ಥಿತಿಯಲ್ಲಿ ಬೇರೆಯವರೊಂದಿಗೆ ಬಾಳುವುದು ಸುಲಭವಲ್ಲ ಎಂದಳು. ಪಾರ್ವತಿಯ ಮೇಲಿನ ಅಪಾರ ಪ್ರೀತಿಯನ್ನು ಕಂಡು ಶಿವನ ಹೃದಯ ಕರಗಿ ಪಾರ್ವತಿಯನ್ನು ಮದುವೆಯಾಗಲು ಒಪ್ಪಿದನು.

ವಿಶಿಷ್ಟವಾದ ಮೆರವಣಿಗೆ
ಶಿವ-ಪಾರ್ವತಿಯ ವಿವಾಹಕ್ಕೆ ಸಂಬಂಧಿಸಿದ ದಂತಕಥೆಯ ಪ್ರಕಾರ, ಶಿವನು ತಾಯಿ ಪಾರ್ವತಿಯನ್ನು ಮದುವೆಯಾಗಲು ಆಗಮಿಸಿದಾಗ, ಅವನು ತನ್ನೊಂದಿಗೆ ಪ್ರೇತಗಳು ಮತ್ತು ಮಾಟಗಾತಿಯರನ್ನು ಮೆರವಣಿಗೆಗೆ ತಂದನು. ಅವರೆಲ್ಲ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದರು. ಅವರೇ ಶಿವನ ಮೇಕಪ್ ಕೂಡ ಮಾಡಿದ್ದರು. ಮದುವೆಗೆ ಶಿವನನ್ನು ಭಸ್ಮದಿಂದ ಅಲಂಕರಿಸಲಾಗಿತ್ತು ಮತ್ತು ಅಸ್ಥಿಗಳ ಮಾಲೆಯನ್ನು ಧರಿಸಲಾಗಿತ್ತು. ಜಟೆಯ ಕೂದಲ ಭಯ ಹುಟ್ಟಿಸುವಂತಿತ್ತು.  ಆನೆಯ ತಾಜಾ ಚರ್ಮವನ್ನು ಧರಿಸಿದ್ದ. ಅದರಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಅಂತಹ ವಿಶಿಷ್ಟ ಮೆರವಣಿಗೆಯೊಂದಿಗೆ ಶಿವ ಪಾರ್ವತಿಯ ಮನೆಯ ಬಾಗಿಲನ್ನು ತಲುಪಿದಾಗ, ಎಲ್ಲರಿಗೂ ಭಯ ಮತ್ತು ಆಶ್ಚರ್ಯವಾಯಿತು.

ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ಪಾರ್ವತಿಯ ತಾಯಿ ಮೈನಾವತಿ ಶಿವನ ವೇಷಭೂಷಣ ನೋಡಿ ಮದುವೆಗೆ ನಿರಾಕರಿಸಿದರು. ಆಗ ಪಾರ್ವತಿಯು ಶಿವನನ್ನು ಪ್ರಾರ್ಥಿಸಿ, ನೀವು ಹೇಗಿದ್ದೀರೋ ಹಾಗೆ ನನಗೆ ಒಪ್ಪಿಗೆ ಇದೆ. ಆದರೆ ಇಂದು ತನ್ನ ತಾಯಿಗಾಗಿ ಮದುವೆಯ ಪದ್ಧತಿಯಂತೆ ಸಿದ್ಧನಾಗಬೇಕೆಂದು ಹೇಳಿದಳು. ಶಿವ ಒಪ್ಪಿದನು ಮತ್ತು ಆ ನಂತರ ಶಿವನನ್ನು ದೇವರುಗಳು ವರನನ್ನಾಗಿ ಸಿದ್ಧಪಡಿಸಿದರು. ಶಿವ ಮದುಮಗನಾಗಿ ತಯಾರಾದಾಗ ಅವರ ದಿವ್ಯ ರೂಪವನ್ನು ಕಂಡು ಎಲ್ಲರೂ ಬೆರಗಾದರು. ಅಷ್ಟು ಸುಂದರನನ್ನು ಜಗತ್ತು ಕಂಡಿರಲಿಲ್ಲ. 9 ಅಡಿ ಎತ್ತರವಿದ್ದ ಆತ. ರಾಣಿ ಮೈನಾವತಿ ಕೂಡ ಮದುವೆಗೆ ಒಪ್ಪಿದಳು.

ಆದರೆ, ಪದ್ಧತಿಯಂತೆ ಹುಡುಗ ಹುಡುಗಿ ಕಡೆಯವರು ಎದುರು ಬದುರು ಕುಳಿತಾಗ ಅವರ ಕುಟುಂಬದ ಬಗ್ಗೆ ವಿಚಾರಣೆ ನಡೆಯಿತು. ಪಾರ್ವತಿಯ ತಂದೆ ಹಿಮವಂತ ಇಡೀ ಹಿಮಾಲಯಕ್ಕೆ ರಾಜನಾಗಿದ್ದ. ಅವರ ತಲೆಮಾರುಗಳ ಕತೆ ದೊಡ್ಡದಿತ್ತು. ಆದರೆ, ಶಿವನ ತಂದೆತಾಯಿ ಮತ್ತಿತರೆ ಕುಟುಂಬದ ಬಗ್ಗೆ ಕೇಳಿದಾಗ ಹೇಳಲು ಅಲ್ಲಿ ಯಾರೂ ಇರಲಿಲ್ಲ. ಶಿವನ ಜೊತೆ ಬಂದ ವಿಚಿತ್ರ ಜೀವಿಗಳ ಭಾಷೆ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಆಗ ಹಿಮವಂತನಿಗೆ ಕೋಪ ಬಂದಿತು. ಯಾವುದೋ ಭಿಕಾರಿಗೆ ಮಗಳನ್ನು ಕೊಡುವುದಿಲ್ಲ ಎಂದ. ಆಗ ನಾರದರು ಮುಂದೆ ಬಂದು ಏಕತಾರಿ ಸದ್ದು ಮಾಡಿದರು. ಹಿಮವಂತನ ಕೋಪ ಹೆಚ್ಚಿತು. ಏನಿದು ಹುಚ್ಚಾಟ ಎಂದರು.

Guru Purnima 2023ಯಂದು 3 ಶುಭಯೋಗಗಳು; ಹೊಸ ಕಾರ್ಯ ಕೈಗೊಳ್ಳಲು ಶುಭ ದಿನ

ಆಗ ನಾರದರು, ಶಿವ ಸ್ವಯಂಭು. ಆತ ಏಕತಾರಿ ನಾದದಿಂದ ಹೊಮ್ಮಿದವನು. ಆತನಿಗೆ ತಂದೆತಾಯಿ ಯಾರೂ ಇಲ್ಲ, ಅವನೇ ಮೂಲ, ಅವನಿಗಿಂತ ಮೂಲಪುರುಷ ಇಲ್ಲ ಎಂದು ವಿವರಿಸಿದರು. 

ಇದಾದ ನಂತರ, ಶಿವ- ಪಾರ್ವತಿಯರ ವಿವಾಹವು ಪ್ರೇತಗಳು, ಎಲ್ಲಾ ದೇವತೆಗಳು ಮತ್ತು ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನ ಉಪಸ್ಥಿತಿಯಲ್ಲಿ ನಡೆಯಿತು. ಮಹಾ ಶಿವರಾತ್ರಿಯ ಶುಭ ದಿನದಂದು ಶಿವ- ಪಾರ್ವತಿ ವಿವಾಹವಾದರು.
 

Latest Videos
Follow Us:
Download App:
  • android
  • ios