Asianet Suvarna News Asianet Suvarna News

ಇಂದು ಶಂಕರಾಚಾರ್ಯ ಜಯಂತಿ; ಅಲ್ಪಾಯುಷ್ಯದಲ್ಲಿ ಅಗಾಧ ಸಾಧನೆ ಮಾಡಿದ ಭಗವದ್ಪಾದರು

ವೈಶಾಖ ಮಾಸದ ಶುಕ್ಲ ಪಕ್ಷ ಪಂಚಮಿ ತಿಥಿಯಂದು ಶಂಕರಾಚಾರ್ಯ ಜಯಂತಿ ಬರುತ್ತದೆ. ಈ ದಿನದಂದು, ಭಕ್ತರು ದೇಶದ ನಾಲ್ಕು ಭಾಗಗಳಲ್ಲಿ ಆದಿಶಂಕರರ ದೇವಾಲಯಗಳು ಮತ್ತು ಶಂಕರಾಚಾರ್ಯ ಪೀಠಗಳಿಗೆ ಭೇಟಿ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ.

Shankaracharya Jayanti 2023 Significance of birth anniversary of Jagatguru skr
Author
First Published Apr 25, 2023, 10:55 AM IST

ಪ್ರಾಚೀನ ಭಾರತದ ಇತಿಹಾಸವು ಅನೇಕ ಪ್ರಸಿದ್ಧ ತತ್ವಜ್ಞಾನಿಗಳ ಹೆಸರನ್ನು ಒಳಗೊಂಡಿದೆ. ಅವರಲ್ಲಿ ಆದಿ ಶಂಕರಾಚಾರ್ಯರೂ ಒಬ್ಬರು. ಅವರು ಆ ಕಾಲದ ಶ್ರೇಷ್ಠ ಋಷಿಗಳಲ್ಲಿ ಒಬ್ಬರು. ಅವರ ಜನ್ಮದಿನವನ್ನು ದೇಶದಾದ್ಯಂತ ಶಂಕರಾಚಾರ್ಯ ಜಯಂತಿ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೇರಳದ ಕಾಲಡಿ ಪ್ರದೇಶದಲ್ಲಿ 8ನೇ ಶತಮಾನದಲ್ಲಿ ಜನಿಸಿದ ಶಂಕರ್ ಭಗವದ್ಪಾದರು 32 ವರ್ಷಕ್ಕೇ ಮರಣ ಹೊಂದಿದರೂ, ಅವರು ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾದುದು. 

ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷ ಪಂಚಮಿ ತಿಥಿಯಂದು ಶಂಕರಾಚಾರ್ಯ ಜಯಂತಿ ಬರುತ್ತದೆ. ಅಂದರೆ, ಈ ಬಾರಿ 25ರಂದು ಶಂಕರಾಚಾರ್ಯ ಜಯಂತಿ. ಈ ದಿನದಂದು, ಭಕ್ತರು ದೇಶದ ನಾಲ್ಕು ಭಾಗಗಳಲ್ಲಿ ಆದಿಶಂಕರರ ದೇವಾಲಯಗಳು ಮತ್ತು ಶಂಕರಾಚಾರ್ಯ ಪೀಠಗಳಿಗೆ ಭೇಟಿ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ.

ಆದಿ ಶಂಕರಾಚಾರ್ಯರ ಜೀವನ ಕಥೆ
ಆದಿ ಶಂಕರಾಚಾರ್ಯರು ಕೇರಳದ ಮಲಬಾರ್ ಪ್ರದೇಶದ ಕಾಲಡಿಯಲ್ಲಿ ನಂಬೂದಿರಿ ಬ್ರಾಹ್ಮಣ ಶಿವಗುರು ಮತ್ತು ಆರ್ಯಾಂಬ ದಂಪತಿಗಳಿಗೆ 788 AD ನಲ್ಲಿ ಜನಿಸಿದರು. ಆದಿ ಶಂಕರಾಚಾರ್ಯರ ಪೋಷಕರು ಶಿವನ ಆರಾಧಕರು. ಒಮ್ಮೆ ಶಿವನು ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು ವರವನ್ನು ಕೇಳುವಂತೆ ಹೇಳಿದನು. ಶಂಕರಾಚಾರ್ಯರ ತಂದೆ ಸರ್ವಜ್ಞ ಮತ್ತು ಸತ್ಯುವಿನಂಥ ಪುತ್ರನನ್ನು ಕೊಡುವಂತೆ ಕೋರಿದರು. ಹೀಗೆ ಶಿವನೊಲುಮೆಯಿಂದ ಜನಿಸಿದ ಭಗವತ್ಪಾದರು ಕೇವಲ ಮೂರು ವರ್ಷದವರಾಗಿದ್ದಾಗ ತಂದೆಯನ್ನು ಕಳೆದುಕೊಂಡರು. ಮಗು ಶಂಕರ ಸನ್ಯಾಸಿಯಾಗುವತ್ತ ಒಲವು ತೋರಿದನು. ಆದರೆ ತಾಯಿ ಇದಕ್ಕೆ ಒಪ್ಪಲಿಲ್ಲ. ಒಮ್ಮೆ 8 ವರ್ಷದ ಶಂಕರರು ಸ್ನಾನ ಮಾಡುವಾಗ ಮೊಸಳೆ ಅವರ ಕಾಲಿಗೆ ಬಾಯಿ ಹಾಕಿತು. ಆಗ ಅವರು ತಾಯಿಯನ್ನು ಕೂಗಿ ಹೇಳಿದರು- ನಾನು ಬದುಕಬೇಕೆಂದರೆ ಸನ್ಯಾಸಿಯಾಗಲು ಅನುಮತಿ ನೀಡಿ ಎಂದು. ಬೆದರಿದ್ದ ಅವರ ತಾಯಿ ಮಗನ ಜೀವ ಉಳಿದರೆ ಸಾಕೆಂದು ಅನುಮತಿಸಿದರು. 

ಗ್ರಹ ಅಸ್ತವಾಗುವುದು ಅಂದರೇನರ್ಥ? ಅದರ ಪರಿಣಾಮವೇನು?

ಶಂಕರಾಚಾರ್ಯರು ತಮ್ಮ 8ನೇ ವಯಸ್ಸಿನಲ್ಲಿ ವೇದ, ಪುರಾಣ, ಉಪನಿಷತ್ತು, ರಾಮಾಯಣ, ಮಹಾಭಾರತ ಸೇರಿದಂತೆ ಎಲ್ಲ ಗ್ರಂಥಗಳನ್ನು ಕಂಠಪಾಠ ಮಾಡಿದ್ದರು. ಶಂಕರಾಚಾರ್ಯರು 16 ಮತ್ತು 32ರ ವಯಸ್ಸಿನ ನಡುವೆ ಭಾರತದಾದ್ಯಂತ ಪ್ರಯಾಣಿಸಿದರು. ಅವರು ಪ್ರಯಾಣದ ಸಮಯದಲ್ಲಿ ವೇದಗಳ ಸಂದೇಶವನ್ನು ಜನರನ್ನು ತಲುಪುವಂತೆ ಮಾಡಿದರು. ಹಿಂದೂ ಧರ್ಮದ ಬಗ್ಗೆ ಜನರಿಗೆ ಅರಿವು ಮೂಡಿಸಿದರು, ನಮ್ಮ ಧರ್ಮಗ್ರಂಥಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಶಂಕರಾಚಾರ್ಯರ ಬೋಧನೆಗಳು ಪ್ರಪಂಚದಾದ್ಯಂತದ ಜನರಿಗೆ ಇನ್ನೂ ಸ್ಫೂರ್ತಿಯ ಮೂಲವಾಗಿದೆ.

ಮಠಗಳ ಸ್ಥಾಪನೆ
ಬದ್ರಿನಾಥ, ದ್ವಾರಕ, ಶೃಂಗೇರಿ ಮತ್ತು ಪುರಿ ದೇವಾಲಯಗಳನ್ನು ಶಂಕರಾಚಾರ್ಯರು ನಿರ್ಮಿಸಿದ್ದಾರೆ. 
ಪೂರ್ವದಲ್ಲಿ ಗೋವರ್ಧನ, ಜಗನ್ನಾಥಪುರಿ ​​(ಒರಿಸ್ಸಾ), ಪಶ್ಚಿಮದಲ್ಲಿ ದ್ವಾರಕಾ, ಶಾರದಾ ಮಠ (ಗುಜರಾತ್), ಉತ್ತರದಲ್ಲಿ ಜ್ಯೋತಿರ್ಮಠ, ಬದರಿಧಾಮ (ಉತ್ತರಾಖಂಡ), ದಕ್ಷಿಣದಲ್ಲಿ ರಾಮೇಶ್ವರಂ (ತಮಿಳುನಾಡು), ಶೃಂಗೇರಿ ಮಠ ಸೇರಿದಂತೆ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮಠ ಸ್ಥಾಪಿಸಿದವರು ಆದಿ ಗುರು ಶಂಕರಾಚಾರ್ಯರು. ಈ ನಾಲ್ಕು ಮಠಗಳಲ್ಲಿ ಅತ್ಯಂತ ಅರ್ಹ ಶಿಷ್ಯರನ್ನು ಮಠಾಧೀಶರನ್ನಾಗಿ ನೇಮಿಸುವ ಸಂಪ್ರದಾಯವನ್ನು ಪ್ರಾರಂಭಿಸಿದ್ದು ಆದಿ ಶಂಕರಾಚಾರ್ಯರು.

ವಿವಾಹಿತ ಮಹಿಳೆಯರು ಮಂಗಳಸೂತ್ರವನ್ನು ಏಕೆ ಧರಿಸಬೇಕು?

ಬರಹ
ಆದಿ ಶಂಕರರು 18 ಭಾಷ್ಯ ಗ್ರಂಥಗಳು, 22 ಪ್ರಕರಣ ಗ್ರಂಥಗಳು, 22 ಧ್ಯಾನ, ಪ್ರಾರ್ಥನಾ ಶ್ಲೋಕಗಳನ್ನು ರಚಿಸಿದ್ದಾರೆ. ಕೆಲವು ಭಕ್ತಿ ಸ್ತೋತ್ರಗಳಲ್ಲಿ ಶಿವಾನಂದ ಲಹರಿ, ಸೌಂದರ್ಯ ಲಹರಿ, ನಿರ್ವಾಣ ಶಲ್ಕಂ ಮತ್ತು ಮನೀಶಾ ಪಂಚಕಂ ಸೇರಿವೆ. ಕೇವಲ 32 ವರ್ಷ ಬದುಕಿದ್ದ ಅವರು ಇಷ್ಟೊಂದನ್ನು ರಚಿಸಲು ಸಾಧ್ಯವಾಗಿದ್ದಾದರೂ ಹೇಗೆ ಎಂಬುದು ವಿದ್ವಾಂಸರಿಗೆ ಅಚ್ಚರಿಯಾಗಿದೆ. 

 

Follow Us:
Download App:
  • android
  • ios