Asianet Suvarna News Asianet Suvarna News

ವಿವಾಹಿತ ಮಹಿಳೆಯರು ಮಂಗಳಸೂತ್ರವನ್ನು ಏಕೆ ಧರಿಸಬೇಕು?

ಕತ್ತಲ್ಲಿ ಕರಿಮಣಿ ಇದೆ ಎಂದರೆ ಆಕೆ ವಿವಾಹಿತೆ ಎಂಬುದು ತಿಳಿದು ಹೋಗುತ್ತದೆ. ಇಷ್ಟಕ್ಕೂ ವಿವಾಹದಲ್ಲಿ ಮಹಿಳೆಗೆ ಮಂಗಳ ಸೂತ್ರ ತೊಡಿಸುವುದೇಕೆ? ಅದರ ಮಹತ್ವವೇನು? ಸಾಂಪ್ರದಾಯಿಕ ಮಂಗಳಸೂತ್ರವು ಗಂಡ ಮತ್ತು ಹೆಂಡತಿ ಇಬ್ಬರಿಗೂ ಕೆಲವು ಅದ್ಭುತ ಪ್ರಯೋಜನಗಳನ್ನು ಹೊಂದಿದೆ ಎಂಬುದು ನಿಮಗೆ ಗೊತ್ತೇ?

Why Married Women Should Wear A Mangalsutra Everyday Here Are The Benefits skr
Author
First Published Apr 24, 2023, 3:02 PM IST | Last Updated Apr 24, 2023, 3:02 PM IST

ಮಂಗಳಸೂತ್ರವನ್ನು ವರನು ವಧುವಿಗೆ ಕಟ್ಟಿದ ಸಮಯದಿಂದ ವಿವಾಹವಾಯಿತು ಎನ್ನುತ್ತೇವೆ, ಆಕೆಗೆ ವಿವಾಹಿತೆ ಎಂಬ ಪಟ್ಟ ಬರುತ್ತದೆ. ಇಷ್ಟಕ್ಕೂ ಮಂಗಳಸೂತ್ರವನ್ನು ವಿವಾಹದಲ್ಲಿ ಏಕೆ ಕಟ್ಟಲಾಗುತ್ತದೆ? ಇದರ ಲಾಭಗಳೇನು? ವಿವಾಹಿತೆ ಏಕೆ ಇದನ್ನು ಪ್ರತಿ ದಿನ ಧರಿಸಬೇಕು?

ಮದುವೆಯಲ್ಲಿ ಮಂಗಳಸೂತ್ರದ ಮಹತ್ವ
ಕಾಲುಂಗುರಗಳು, ಕುಂಕುಮ, ಬಳೆಗಳು ಮತ್ತು ಮೂಗುತಿ ಸೇರಿದಂತೆ ವೈವಾಹಿಕ ಸ್ಥಿತಿಯ ಇತರ ಚಿಹ್ನೆಗಳೊಂದಿಗೆ ಮಹಿಳೆ ಧರಿಸಬೇಕಾದ 5 ವಿಷಯಗಳಲ್ಲಿ ಮಂಗಳಸೂತ್ರವೂ ಒಂದಾಗಿದೆ. ಹೊಸದಾಗಿ ಮದುವೆಯಾದ ಮಹಿಳೆಯ ಇತರ ಎಲ್ಲಾ ಆಭರಣಗಳಲ್ಲಿ ಮಂಗಳಸೂತ್ರವು ಅತ್ಯಂತ ಮಹತ್ವದ್ದಾಗಿದೆ. ಮಂಗಳ ಎಂದರೆ ಪವಿತ್ರ, ಒಳ್ಳೆಯದು ಎಂದರ್ಥ ಮತ್ತು ಸೂತ್ರ ಎಂದರೆ ದಾರ. ಆದ್ದರಿಂದ, ಮಂಗಳಸೂತ್ರವು ಹಿಂದೂ ಸಂಪ್ರದಾಯಗಳ ಪ್ರಕಾರ ಪ್ರತಿ ವಿವಾಹಿತ ಹುಡುಗಿ / ಮಹಿಳೆ ಧರಿಸಬೇಕಾದ ಪವಿತ್ರ ದಾರವಾಗಿದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಹಿಳೆಯು ಪವಿತ್ರ ದಾರವನ್ನು ಧರಿಸಿದಾಗ, ಅದು ಅವಳ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಅವಳಲ್ಲಿ ಅರಿವು ಮೂಡಿಸುತ್ತದೆ. ಅದೇ ರೀತಿಯಲ್ಲಿ, ಅವಳ ಪತಿ ಪತ್ನಿಯ ಕಡೆಗೆ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಾನೆ. ಇಬ್ಬರ ಪರಸ್ಪರ ನಿಷ್ಠೆಯ ಪ್ರತಿಜ್ಞೆಯಂತೆ ವರ್ತಿಸುತ್ತದೆ ಮಂಗಳಸೂತ್ರ.

ಮೇಷದಿಂದ ಕುಂಭದವರೆಗೆ; 6 ರಾಶಿಗಳಿಗೆ ಗುರು ಉದಯದಿಂದ ಭಾಗ್ಯೋದಯ

ಮಂಗಳಸೂತ್ರವು ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿಯ ಭರವಸೆ. ಮಳೆ ಮಂಗಳಸೂತ್ರವನ್ನು ಧರಿಸಿದಾಗ, ಅವಳು ತನ್ನ ವೈವಾಹಿಕ ಜೀವನವನ್ನು ಎಲ್ಲ ತೊಂದರೆಗಳಿಂದ ರಕ್ಷಿಸುತ್ತಾಳೆ ಎಂದು ಹೇಳಲಾಗುತ್ತದೆ.

ಮಂಗಳಸೂತ್ರದಲ್ಲಿ ಕರಿಮಣಿ
ಮಂಗಳಸೂತ್ರದಲ್ಲಿ ಆ ಕಪ್ಪು ಮಣಿಗಳು ಏಕೆ ಇರುತ್ತವೆ ಎಂದು ನಿಮಗೆ ತಿಳಿದಿದೆಯೇ? ಈ ಮಣಿಗಳಿಲ್ಲದೆ ಪವಿತ್ರ ದಾರವು ಅಪೂರ್ಣವಾಗಿದೆ. ಇದನ್ನು ಶಿವ ಮತ್ತು ಅವನ ಪತ್ನಿ ಪಾರ್ವತಿಯ ನಡುವಿನ ಬಾಂಧವ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಮಂಗಳಸೂತ್ರದಲ್ಲಿರುವ ಚಿನ್ನವು ಪಾರ್ವತಿ ದೇವಿಯನ್ನು ಸಂಕೇತಿಸುತ್ತದೆ ಮತ್ತು ಕಪ್ಪು ಮಣಿಗಳು ಶಿವನನ್ನು ಸಂಕೇತಿಸುತ್ತದೆ.

ಸಾಂಪ್ರದಾಯಿಕವಾಗಿ, ಮಂಗಳಸೂತ್ರದಲ್ಲಿ 9 ಮಣಿಗಳಿರುತ್ತವೆ, ಇದು 9 ವಿಭಿನ್ನ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಈ ಶಕ್ತಿಗಳು ಪತಿಪತ್ನಿಯನ್ನು ಯಾವುದೇ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತವೆ. ಈ ಮಣಿಗಳು ಗಾಳಿ, ನೀರು, ಭೂಮಿ ಮತ್ತು ಬೆಂಕಿಯ ಎಲ್ಲಾ ಅಂಶಗಳ ಶಕ್ತಿಯನ್ನು ಹೊಂದಿರುತ್ತವೆ. ಈ ಅಂಶಗಳು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಗಟ್ಟಿಯಾಗಿಡಲು ಸಹಾಯ ಮಾಡುತ್ತದೆ.

4 ರಾಶಿಗಳಿಗೆ ಸನ್ಮಂಗಳವನ್ನುಂಟು ಮಾಡುವ Mangal Gochar 2023

ಮಂಗಳಸೂತ್ರ ಧಾರಣೆ ಪ್ರಯೋಜನಗಳು
ಮಂಗಳಸೂತ್ರವು ದೈವಿಕ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಚಿನ್ನ ಮತ್ತು ಕರಿಮಣಿಗಳ ಸಂಯೋಜನೆಯು ಗಂಡ ಮತ್ತು ಹೆಂಡತಿಯನ್ನು ಯಾವುದೇ ದುಷ್ಟ ಶಕ್ತಿಯಿಂದ ರಕ್ಷಿಸುತ್ತದೆ. ಮಹಿಳೆ ಪ್ರತಿ ದಿನ ಮಂಗಳಸೂತ್ರವನ್ನು ಧರಿಸಿದಾಗ, ಅವಳು ತನ್ನ ಗಂಡನೊಂದಿಗಿನ ಸಂಬಂಧವನ್ನು ಯಾವುದೇ ನಕಾರಾತ್ಮಕತೆಯಿಂದ ರಕ್ಷಿಸುತ್ತಾಳೆ ಎಂದು ಹೇಳಲಾಗುತ್ತದೆ.

ನಿಮಗೆ ಗೊತ್ತಾ, ಮಂಗಳಸೂತ್ರವನ್ನು ಧರಿಸುವುದರಿಂದ ಕೆಲವು ಅದ್ಭುತವಾದ ಆರೋಗ್ಯ ಪ್ರಯೋಜನಗಳೂ ಇವೆ.
ಮಂಗಳಸೂತ್ರವು ಚಿನ್ನ ಮತ್ತು ಕರಿಮಣಿಗಳ ಸಂಯೋಜನೆಯಾಗಿದೆ. ಚಿನ್ನವು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದ ಲೋಹವಾಗಿದೆ. ಮಂಗಳಸೂತ್ರವನ್ನು ಹೃದಯಕ್ಕೆ ಹತ್ತಿರವಾಗಿ ಧರಿಸಿದಾಗ, ಅದು ಕಾಸ್ಮಿಕ್ ಅಲೆಗಳನ್ನು ಆಕರ್ಷಿಸುತ್ತದೆ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಈ ತರಂಗಗಳು ಪತಿ ಮತ್ತು ಪತ್ನಿ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮಂಗಳಸೂತ್ರವನ್ನು ಧರಿಸುವುದರಿಂದ ಮಹಿಳೆಯ ದೇಹದ ರಕ್ತದೊತ್ತಡ ನಿಯಂತ್ರಣವಾಗುತ್ತದೆ.
ಮಂಗಳಸೂತ್ರದಲ್ಲಿರುವ ಕಪ್ಪು ಮಣಿಗಳು ನಕಾರಾತ್ಮಕ ಶಕ್ತಿಯನ್ನು ದೂರ ಇರಿಸುತ್ತವೆ ಮತ್ತು ನೋವು ಮತ್ತು ಚಡಪಡಿಕೆಯನ್ನು ಕಡಿಮೆ ಮಾಡುತ್ತದೆ. ಇದು ಮಹಿಳೆಯನ್ನು ಧನಾತ್ಮಕವಾಗಿ ಮತ್ತು ಸಂತೋಷವಾಗಿರಿಸುತ್ತದೆ.
ಮಂಗಳಸೂತ್ರವನ್ನು ಧರಿಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆ ಅಭಿವೃದ್ಧಿಗೊಳ್ಳುತ್ತದೆ.
ತಾಳಿಯು ಮಹಿಳೆಯ ದೇಹದಲ್ಲಿ ರಕ್ತ ಪರಿಚಲನೆಯನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಇಡೀ ದಿನ ಅವಳನ್ನು ಸಕ್ರಿಯವಾಗಿರಿಸುತ್ತದೆ.

Latest Videos
Follow Us:
Download App:
  • android
  • ios