Asianet Suvarna News Asianet Suvarna News

Dream Interpretation: ನೀವು ಬೆತ್ತಲಾದಂತೆ ಕಾಣುವ ಕನಸು ಯಾವ ಸಂಕೇತ ನೀಡುತ್ತೆ?

ಕನಸಿಗೆ ನಾನಾ ಅರ್ಥವಿದೆ. ಕೆಲ ಕನಸಿಗೆ ಅರ್ಥವೇ ಇಲ್ಲ. ಯಾವ ಕನಸು, ಯಾವಾಗ ಬಿದ್ರೆ ಅದಕ್ಕೆ ಅರ್ಥವಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸ್ವಪ್ನಶಾಸ್ತ್ರದಲ್ಲಿ ಕನಸಿನ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಬೆತ್ತಲೆ ಕನಸು ಬೀಳಲು ಕಾರಣವೇನು ಎಂಬುದನ್ನು ವಿವರಿಸಲಾಗಿದೆ. 
 

Seeing Yourself Naked In Dream Meaning
Author
First Published Mar 11, 2023, 2:42 PM IST | Last Updated Mar 11, 2023, 2:42 PM IST

ನಿದ್ರೆ ಮಾಡಿದಾಗ ವ್ಯಕ್ತಿ ವಾಸ್ತವ ಜಗತ್ತಿನಿಂದ ಸ್ವಪ್ನದ ಜಗತ್ತಿಗೆ ಹೋಗಿರ್ತಾನೆ. ಅಲ್ಲಿ ನಮಗೆ ಅನೇಕ ಸಂಗತಿಗಳು ಕಾಣಿಸುತ್ತವೆ. ಕೆಲವೊಮ್ಮೆ ಭಯ ಹುಟ್ಟಿಸುವ ಸ್ವಪ್ನ ಬಿದ್ದು ನಮ್ಮ ನಿದ್ರೆ ಹಾಳಾಗಿರುತ್ತದೆ. ಅನೇಕರಿಗೆ ಒಂದೇ ಸ್ವಪ್ನ ಪದೇ ಪದೇ ಬೀಳುವುದಿದೆ. ಇನ್ನು ಕೆಲ ಕನಸುಗಳು ನಮಗೆ ಸಂತೋಷವನ್ನು ನೀಡುತ್ತವೆ. ನಾವು ನಿದ್ರೆಯಲ್ಲಿಯೇ ಸಂತೋಷವನ್ನು ಅನುಭವಿಸಿರುತ್ತೇವೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿಗೂ ನಮ್ಮ ಜೀವನಕ್ಕೂ ಇರುವ ಸಂಬಂಧವನ್ನು ಹೇಳಲಾಗಿದೆ. 

ನಮಗೆ ಬೀಳುವ ಒಂದೊಂದು ಸ್ವಪ್ನ (Dream) ವೂ ಭಿನ್ನವಾಗಿರುತ್ತದೆ. ಒಂದು ಭಯಾನಕ ಅಥವಾ ಸಂತೋಷ (Happiness) ದ ಕನಸು ಬೀಳಲು ನಾನಾ ಕಾರಣವಿರಬಹುದು. ಹಾಗೆಯೇ ಎಲ್ಲ ಸ್ವಪ್ನಕ್ಕೂ ಒಂದು ಅರ್ಥವಿದೆ ಎನ್ನಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಸಿನಿಮಾ ನೋಡಿ ಮಲಗಿದ್ದರೆ ಅಥವಾ ಮಲಗುವ ಮುನ್ನ ಯಾರ ಬಳಿಯೋ ವಾದ ಮಾಡಿ, ಮಾತನಾಡಿ ಮಲಗಿದ್ದರೆ ಅದೇ ವಿಷ್ಯ ಸ್ವಪ್ನದಲ್ಲಿ ಬರುವ ಸಾಧ್ಯತೆಯಿರುತ್ತದೆ. ಆದ್ರೆ ಕೆಲವೊಂದು ಸ್ವಪ್ನಗಳ ಹಿಂದೆ ಮಹತ್ತರ ಉದ್ದೇಶವಿರುತ್ತದೆ. ನಾವು ಬಗೆ ಬಗೆಯ ಸ್ವಪ್ನಗಳನ್ನು ಕಾಣುತ್ತೇವೆ. ಅನೇಕ ಬಾರಿ ನಮ್ಮ ಕನಸಿನಲ್ಲಿ ನಾವೇ ಬೆತ್ತಲಾದಂತೆ ಕಾಣಿಸುತ್ತದೆ. ಸ್ವಪ್ನ ಶಾಸ್ತ್ರ (Dream Science ) ದಲ್ಲಿ ಇದ್ರ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ರಾಶಿಗನುಗುಣವಾಗಿ ವಿದ್ಯಾರ್ಥಿಗಳು ಯಾವ ವಿಷಯ ಆರಿಸಿಕೊಳ್ಳಬೇಕು?

ಹದಗಡುತ್ತೆ ಆರ್ಥಿಕ ಸ್ಥಿತಿ:  ಕನಸಿನಲ್ಲಿ ನಾವು ಬೆತ್ತಲಾಗಿರುವಂತೆ ಕಂಡ್ರೆ ಭವಿಷ್ಯದಲ್ಲಿ ಆರ್ಥಿಕ ಸ್ಥಿತಿ ಹದಗೆಡುವ ಸಂಕೇತವಾಗಿದೆ. ಬೆತ್ತಲೆಯಾಗಿರುವುದು ಭವಿಷ್ಯದಲ್ಲಿ ನೀವು ಹಣದ ನಷ್ಟ ಅಥವಾ ಇತರ ಯಾವುದೇ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ನೀವು ಹೊಸ ವ್ಯವಹಾರ ಅಥವಾ ಉದ್ಯೋಗ ಪ್ರಾರಂಭಿಸಲು ಮುಂದಾಗಿದ್ದು, ಆ ಸಮಯದಲ್ಲಿ ನಿಮಗೆ ಇಂಥ ಕನಸು ಬಿದ್ರೆ ಸ್ವಲ್ಪ ಜಾಗರೂಕರಾಗಿರಿ.  ಏಕೆಂದರೆ ಮುಂದಿನ ದಿನಗಳಲ್ಲಿ ಈ ವ್ಯವಹಾರ ನಿಮಗೆ ನಷ್ಟ ತರಬಹುದು. ಹಾಗಾಗಿ ಯೋಚನೆ ಮಾಡದೆ ಯಾವುದೇ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಡಿ.

ಬೇರೆಯವರಿಂದ ಏನನ್ನೋ ಮುಚ್ಚಿಡ್ತಿದ್ದೀರಿ ಎಂದರ್ಥ: ನಿಮ್ಮ ಕನಸಿನಲ್ಲಿ ನೀವು ಬೆತ್ತಲಾದಂತೆ ಕಂಡ್ರೆ ಅದು ನಿಮ್ಮ ಮನಸ್ಥಿತಿಯನ್ನು ಕೂಡ ಸೂಚಿಸುತ್ತದೆ. ನೀವು ಯಾವುದೋ ವಿಷ್ಯವನ್ನು ನಿಮ್ಮ ಆಪ್ತರಿಂದ ಮುಚ್ಚಿಟ್ಟಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ. ನಿಮಗೆ ಪದೇ ಪದೇ ಇಂಥ ಕನಸು ಬೀಳ್ತಿದ್ದರೆ ನೀವು ತಕ್ಷಣ ಮುಚ್ಚಿಟ್ಟ ಗುಟ್ಟನ್ನು ಬಹಿರಂಗ ಮಾಡಿ. ಇಲ್ಲವೆಂದರೆ ಸಮಸ್ಯೆ ಸುತ್ತಿಕೊಳ್ಳುವ ಸಾಧ್ಯತೆಯಿರುತ್ತದೆ.

ಮಾನಸಿಕ ಒತ್ತಡವೂ ಕಾರಣವಿರಬಹುದು: ಕನಸಿನಲ್ಲಿ ಬೆತ್ತಲಾಗಿರುವಂತೆ ಕಾಣುವುದು ನಿಮ್ಮ ಮನಸ್ಥಿತಿಯನ್ನು ಸೂಚಿಸುತ್ತದೆ. ನೀವು ಯಾವುದೋ ಮಾನಸಿಕ ಒತ್ತಡದಲ್ಲಿದ್ದೀರಿ ಎಂಬುದನ್ನು ಇದು ಒತ್ತಿ ಹೇಳುತ್ತದೆ. ನಿಮಗೆ ಈ ಕನಸು ಬೀಳ್ತಿದ್ದರೆ ಮಾನಸಿಕ ಒತ್ತಡದಿಂದ ಹೊರಬರಲು ಮುಂದಾಗಿ. ಮನಸ್ಸನ್ನು ಸರಿಪಡಿಸಿಕೊಳ್ಳುವತ್ತ ನಿಮ್ಮ ಪ್ರಯತ್ನ ಮುಂದುವರೆಸಿ.

ಆತ್ಮವಿಶ್ವಾಸ ಹೆಚ್ಚಿಸಲು, ಈ ವಾಸ್ತು ಟಿಪ್ಸ್ ಅನುಸರಿಸಿ!

ಬೆತ್ತಲೆ ಕನಸು ಅಭದ್ರತೆಯ ಸೂಚಕ: ಬಟ್ಟೆ ನಿಮ್ಮ ದೇಹವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ನೀವು ಬೆತ್ತಲೆಯಾದಂತೆ ಕನಸು ಕಂಡರೆ ನೀವು ಅಸುರಕ್ಷಿತರಾಗಿದ್ದೀರಿ ಎಂದರ್ಥ. ಈ ಕನಸು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಅಸುರಕ್ಷಿತ ಭಾವನೆಯಿಂದ ನೀವು ಹೊರಬರಬೇಕು ಎಂಬುದನ್ನು ಹೇಳುತ್ತದೆ. ನಿಮ್ಮ ಆಪ್ತರ ಜೊತೆ ನೀವು ಈ ಬಗ್ಗೆ ಮಾತನಾಡಿ. ನಿಮಗೆ ಯಾವುದ್ರಲ್ಲಿ ಅಭದ್ರತೆ ಕಾಡ್ತಿದೆಯೋ ಅದರ ಬಗ್ಗೆ ಚರ್ಚೆ ನಡೆಸಿ.

ಈ ಕನಸಿನಿಂದ ಮಿಶ್ರಫಲ: ಬೆತ್ತಲೆಯಾಗಿರುವಂತೆ ಕಾಣುವುದು ಮಿಶ್ರ ಫಲ ನೀಡುತ್ತದೆ. ಕೆಲವೊಮ್ಮೆ ಇಂಥ ಕನಸು ಶುಭಕರವಾಗಿದ್ದರೆ ಕೆಲವೊಮ್ಮೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಹಾಗಾಗಿ ನೀವು ಇದ್ರ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಚಿತ್ತ ಹರಿಸಿ.

Latest Videos
Follow Us:
Download App:
  • android
  • ios