MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಆತ್ಮವಿಶ್ವಾಸ ಹೆಚ್ಚಿಸಲು, ಈ ವಾಸ್ತು ಟಿಪ್ಸ್ ಅನುಸರಿಸಿ!

ಆತ್ಮವಿಶ್ವಾಸ ಹೆಚ್ಚಿಸಲು, ಈ ವಾಸ್ತು ಟಿಪ್ಸ್ ಅನುಸರಿಸಿ!

ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮದ ಜೊತೆಗೆ ಆತ್ಮವಿಶ್ವಾಸದಿಂದ ತುಂಬಿರೋದು ಬಹಳ ಮುಖ್ಯ. ಹಾಗಾಗಿ, ಆತ್ಮವಿಶ್ವಾಸವನ್ನು ಹೆಚ್ಚಿಸಲು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ತಿಳಿಯಿರಿ.

2 Min read
Author : Suvarna News
Published : Mar 08 2023, 05:43 PM IST
Share this Photo Gallery
  • FB
  • TW
  • Linkdin
  • Whatsapp
18

ಒಬ್ಬ ವ್ಯಕ್ತಿ ಯಶಸ್ವಿಯಾಗೋದರ (Successful) ಜೊತೆಗೆ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿರಬೇಕಾದ್ರೆ, ಅವನು ಬಲಶಾಲಿಯಾಗಿರೋದು ಬಹಳ ಮುಖ್ಯ . ಅನೇಕ ಬಾರಿ ಸಾಕಷ್ಟು ಕಠಿಣ ಪರಿಶ್ರಮದ ನಂತರವೂ ಯಶಸ್ಸನ್ನು ಪಡೆಯೋದಿಲ್ಲ. ಯಾಕೆ ಹೀಗಾಗುತ್ತೆ ಎಂದು ನೀವು ಯೋಚ್ನೆ ಮಾಡಿದ್ದೀರಾ? ಆತ್ಮವಿಶ್ವಾಸವು ನಿಮ್ಮ ವೈಫಲ್ಯಕ್ಕೆ ಕಾರಣವಾಗಿರಬಹುದು. 

28

ಆತ್ಮವಿಶ್ವಾಸವಿದ್ದರೆ(Self confidence), ಒಬ್ಬ ವ್ಯಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಜಯಶಾಲಿಯಾಗಬಹುದು. ನೀವು ಸಹ ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದರೆ, ಈ ವಾಸ್ತು ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸಲು ಯಾವ ವಾಸ್ತು ಪರಿಹಾರಗಳು ಪ್ರಯೋಜನಕಾರಿ ಎಂದು ತಿಳಿಯಿರಿ.

38

ಹವಳ(Coral) ರತ್ನದ ಕಲ್ಲುಗಳನ್ನು ಧರಿಸಿ
ಒಬ್ಬ ವ್ಯಕ್ತಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಹವಳದ ರತ್ನಗಳನ್ನು ಧರಿಸಬಹುದು. ಹವಳ ರತ್ನದ ಕಲ್ಲಿನ ಅಧಿಪತಿ ಮಂಗಳ. ಆದ್ದರಿಂದ, ಈ ರತ್ನವನ್ನು ಧರಿಸೋದರಿಂದ ಮಂಗಳ ಗ್ರಹವನ್ನು ಬಲಪಡಿಸುತ್ತೆ. ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ.  
 

48

ಲಿವಿಂಗ್ ರೂಮಿನಲ್ಲಿ ಈ ಚಿತ್ರಗಳನ್ನು ಇರಿಸಿ
ಲಿವಿಂಗ್ ರೂಮಿನಲ್ಲಿ ಉದಯಿಸುತ್ತಿರುವ ಸೂರ್ಯ ಅಥವಾ ಓಡುತ್ತಿರುವ ಕುದುರೆಯ(Running horse) ಚಿತ್ರವನ್ನು ನೀವು ಹಾಕಬಹುದು. ಹೀಗೆ ಮಾಡೋದರಿಂದ ಮನೆಯ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತೆ. ಇದರೊಂದಿಗೆ, ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.
 

58

ಹಸುವಿಗೆ(Cow) ಆಹಾರ ನೀಡಿ
ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸೋದು ಬುಧ ಗ್ರಹದ ಸ್ಥಾನವನ್ನು ಬಲಪಡಿಸುತ್ತೆ. ಇದರೊಂದಿಗೆ, ಮನಸ್ಸು ಶಾಂತವಾಗಿರುತ್ತೆ . ಇದು ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸಲು ಸಹಾಯ ಮಾಡುತ್ತೆ.

68

ಸೂರ್ಯನನ್ನು(Sun) ಪೂಜಿಸಿ
ಆತ್ಮವಿಶ್ವಾಸವನ್ನು ಹೆಚ್ಚಿಸಲು, ಬೆಳಿಗ್ಗೆ ಬೇಗನೆ ಎದ್ದು ಉದಯಿಸುವ ಸೂರ್ಯನನ್ನು ಪೂಜಿಸಿ. ಇದರೊಂದಿಗೆ, 'ಆದಿತ್ಯ ಹೃದಯ ಸೂತ್ರ'ವನ್ನು ನಿಯಮಿತವಾಗಿ ಪಠಿಸಿ. ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸೋದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೆ.
 

78

ಕಿಟಕಿಗಳನ್ನು(Windows) ತೆರೆದಿಡಿ.  
ನಿಮ್ಮ ಮನೆಯ ಕಿಟಕಿಗಳನ್ನು ತೆರೆದಿಡಲು ಪ್ರಯತ್ನಿಸಿ. ಹಾಗೆ ಮಾಡೋದರಿಂದ ಸಕಾರಾತ್ಮಕ ಶಕ್ತಿ ಬರುತ್ತೆ. ಇದರೊಂದಿಗೆ, ಕಿಟಕಿಯ ಮುಂದೆ ನೇರವಾಗಿ ಕುಳಿತುಕೊಳ್ಳಬೇಡಿ ಎಂಬುದನ್ನು ನೆನಪಿನಲ್ಲಿಡಿ, ಏಕೆಂದರೆ ಇದು ಶಕ್ತಿಯನ್ನು ತೆಗೆದುಹಾಕುತ್ತೆ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತೆ.
 

88

ಗಾಯತ್ರಿ ಮಂತ್ರ(Gayatri Mantra) ಪಠಿಸಿ
ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಪಠಿಸಿ. ನಿಮ್ಮ ಆಸನದ ಹಿಂದೆ ಪರ್ವತದ ಚಿತ್ರವನ್ನು ಇರಿಸಿ. ಈ ಟಿಪ್ಸ್ ಫಾಲೋ ಮಾಡೋದ್ರಿಂದ ಹೇಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ ನೀವೇ ನೋಡಿ!

About the Author

SN
Suvarna News

Latest Videos
Recommended Stories
Recommended image1
Vastu Tips: ಮನೆ ಕ್ಲೀನ್ ಮಾಡುವಾಗ ಈ ತಪ್ಪುಗಳನ್ನ ಮಾಡಬೇಡಿ.. ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ
Recommended image2
Vastu tips: ನೀವು ಮರೆತೂ ಸಹ ಈ 3 ವಸ್ತುಗಳನ್ನ ಬೆಡ್‌ ರೂಂನಲ್ಲಿ ಇಡ್ಬೇಡಿ
Recommended image3
ಮನೆಯಲ್ಲಿ ಶಾಂತಿ ಇಲ್ವಾ? ಈ ಗಿಡವನ್ನಿಟ್ಟು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved