Auspicious Signs : ದಾರಿಯಲ್ಲಿ ಈ ವಸ್ತುಗಳು ಕಣ್ಣಿಗೆ ಬಿದ್ರೆ ಮಂಗಳ ಎಂದರ್ಥ

ಜಾತಕ, ಜ್ಯೋತಿಷ್ಯವನ್ನು ಎಲ್ಲರೂ ನಂಬಬೇಕಾಗಿಲ್ಲ. ಇದನ್ನು ನಂಬಿ ಪಾಲನೆ ಮಾಡುವ ಜನರು ಕೆಲವೊಂದು ಗೊಂದಲದಲ್ಲಿರುತ್ತಾರೆ. ದಾರಿಯಲ್ಲಿ ಯಾವುದು ಅಡ್ಡ ಬಂದರೆ ಮಂಗಳಕರ ಎಂಬುದು ಗೊತ್ತಿಲ್ಲದವರಿಗೆ ಇಲ್ಲಿದೆ ಮಾಹಿತಿ. 

Seeing These Things On Road Is Considered inauspicious

ಪ್ರಯಾಣ (Travel) ಸುಖಕರವಾಗಿರಲಿ ಎಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಒಳ್ಳೆಯ ಕೆಲಸಕ್ಕೆ ಹೊರಡುವ ಮೊದಲು ದೇವರಿ(God)ಗೆ ನಮಸ್ಕಾರ ಮಾಡಿ ಹೋಗುವವರಿದ್ದಾರೆ. ಕೆಲವರು ಹಿರಿಯರ ಆಶೀರ್ವಾದ ಪಡೆದು, ಸಿಹಿ ತಿಂದು ಮನೆ ಬಿಡುತ್ತಾರೆ. ಕೆಲವೊಮ್ಮೆ ಇನ್ನೇನು ಮನೆಯಿಂದ ಹೊರಗೆ ಹೋಗಬೇಕು ಎನ್ನುವಾಗ ಬೆಕ್ಕು (cat) ಕಾಣಿಸಿಕೊಳ್ಳುತ್ತದೆ. ಇಲ್ಲವೆ ಒಂಟಿ ಸೀನು ಬರುತ್ತದೆ. ಆಗ ಮನೆಯ ಹಿರಿಯರು ಸ್ವಲ್ಪ ಕುಂತೆದ್ದು ಹೋಗು ಎನ್ನುತ್ತಾರೆ. ಹಿಂದಿನಿಂದಲೂ ನಡೆದು ಬಂದ ನಂಬಿಕೆಯಿದು. ಹಾಗಾಗಿ ಅನೇಕರು ಈಗಲೂ ಇದನ್ನು ಪಾಲಿಸುತ್ತಾರೆ. ದಾರಿಗೆ ಅಡ್ಡವಾಗಿ ಕೆಲ ಪ್ರಾಣಿ ಅಥವಾ ಕೆಲವರು ಬಂದಲ್ಲಿ ಹೋಗುವ ಕೆಲಸ ಆಗುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿದೆ.  ಯಾವುದು ಅಡ್ಡ ಬಂದರೆ ಶುಭ (Good), ಯಾವುದು ಅಶುಭ(inauspicious) ಎಂಬ ಬಗ್ಗೆ ಅನೇಕರಿಗೆ ಇನ್ನೂ ತಿಳಿದಿಲ್ಲ. ಕೆಲವರಿಗೆ ಇದರ ಬಗ್ಗೆ ಗೊಂದಲವಿದೆ. ಇಂದು ಶುಭ ಕೆಲಸಕ್ಕೆಂದು ಮನೆಯಿಂದ ಹೊರಡುವಾಗ ಅಥವಾ ದಾರಿ ಮಧ್ಯೆ ಯಾವುದು ಸಿಕ್ಕರೆ ಶುಭ,ಯಾವುದು ಅಶುಭ ಎಂಬುದನ್ನು ಇಂದು ಹೇಳ್ತೆವೆ.

ದಾರಿಯಲ್ಲಿ ಯಾವುದು ಸಿಕ್ಕರೆ ಮಂಗಳ :  

ಹಸು (Cow) : ಧರ್ಮಗ್ರಂಥಗಳ ಪ್ರಕಾರ, ಮನೆಯಿಂದ ಹೊರಡುವಾಗ ಅಥವಾ ಪ್ರಯಾಣ ಶುರು ಮಾಡಿದ ವೇಳೆ ದಾರಿಯಲ್ಲಿ ಹಸು ಕಂಡರೆ ಶುಭಕರ. ಪ್ರಯಾಣ ಮಂಗಳಕರವಾಗಿರುತ್ತದೆ. ಸಗಣಿ ನೋಡುವುದು ಕೂಡ ಶುಭಕರ.   

ಅಂತಿಮ ಯಾತ್ರೆ : ಪ್ರಯಾಣದ ಸಮಯದಲ್ಲಿ ಅಂತಿಮ ಯಾತ್ರೆ ಕಣ್ಣಿಗೆ ಬಿದ್ದರೆ ಅದು ಶುಭಕರ. ಶವವನ್ನು ನೋಡುವುದು ಅಶುಭವಲ್ಲ. ಇದು ಯಶಸ್ಸಿನ ಸಂಕೇತ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಂತಿಮ ಯಾತ್ರೆ ಕಣ್ಣಿಗೆ ಬಿದ್ದರೆ ಇಷ್ಟಾರ್ಥಗಳು ಈಡೇರಲಿವೆ.

ಶಂಖ ಅಥವಾ ಗಂಟೆಯ ಶಬ್ದ :  ಪ್ರಯಾಣ ಮಾಡುವಾಗ ಅಥವಾ ಪ್ರಯಾಣಕ್ಕಾಗಿ ಮನೆಯಿಂದ ಹೊರಡುವಾಗ, ಶಂಖ ಅಥವಾ ಗಂಟೆಯ ಶಬ್ದ ಕೇಳಿದರೆ ಪ್ರಯಾಣ ಯಶಸ್ವಿಯಾಗಲಿದೆ.   

ನೀರು (Water) ತುಂಬಿದ ಮಡಿಕೆ  : ಪ್ರಯಾಣಿಸುವಾಗ ಅಥವಾ ಮನೆಯಿಂದ ಹೊರಗೆ ಬೀಳುವಾಗ ನೀರು ತುಂಬಿದ ಪಾತ್ರ ಕಾಣಿಸಿದರೆ ಅದು ಒಳ್ಳೆಯದು. ಹೋಗುವ ಕೆಲಸ ಆಗಲಿದೆ ಎಂಬ ಸಂಕೇತ. 

ದಾರಿಯಲ್ಲಿ ಪ್ರಾಣಿ (Animal) : ಕುದುರೆ, ಆನೆ ಅಥವಾ ಮುಂಗುಸಿಯನ್ನು ಕಂಡರೆ ಖುಷಿ ಪಡಿ. ಇದು ಶುಭ ಸೂಚನೆಯಾಗಿದೆ. ಇದರಿಂದ ಲಾಭವಾಗಲಿದೆ. 

7 Gods for 7 days: ಯಾವ ದಿನ ಯಾವ ದೇವರನ್ನು ಪೂಜಿಸಬೇಕು?

ಇದಲ್ಲದೆ, ಪ್ರಯಾಣ ಶುರು ಮಾಡುವ ಮೊದಲು,ಬ್ರಾಹ್ಮಣ,  ಹಣ್ಣು, ಅನ್ನ, ಹಾಲು, ಮೊಸರು, ಸಾಸಿವೆ, ಕಮಲ ಇವುಗಳನ್ನು ಎದುರಿಗೆ ಕಂಡರೆ ಶುಭ ಫಲ ಸಿಗುತ್ತದೆ.  ಶುಭ್ರವಾದ ಬಟ್ಟೆ, ಹೂವು, ಕಬ್ಬು ತುಂಬಿದ ಪಾತ್ರೆಗಳು ಕಂಡರೂ ಒಳ್ಳೆಯದು.  ಛತ್ರಿ, ಒದ್ದೆ ಮಣ್ಣು, ಅವಿವಾಹಿತ ಹುಡುಗಿ, ರತ್ನ, ಪೇಟ, ಬಿಳಿ ಬಣ್ಣದ ಗೂಳಿ, ದ್ರಾಕ್ಷಾರಸ, ಗಂಡು ಮಗುವನ್ನು ಎತ್ತಿಕೊಂಡಿರುವ ಮಹಿಳೆ, ಕನ್ನಡಿ, ತೊಳೆದ ಬಟ್ಟೆಗಳು ಪ್ರಯಾಣದ ಯಶಸ್ಸನ್ನು ಸೂಚಿಸುತ್ತವೆ.ಸಿಂಹಾಸನ, ಧ್ವಜ, ಜೇನುತುಪ್ಪ, ಮೇಕೆ ಕಾಣಿಸಿಕೊಂಡರೂ ಸಫಲತೆ ಪ್ರಾಪ್ತಿಯಾಗುತ್ತದೆ.

ದಾರಿಯಲ್ಲಿ ಇವು ಕಂಡರೆ ಅಶುಭ :
ಪ್ರಯಾಣಕ್ಕೆ ಹೋಗುವಾಗ ಚರ್ಮ, ಹುಲ್ಲು, ಎಲುಬು, ಹಾವು, ಉಪ್ಪು, ಕಲ್ಲಿದ್ದಲು ಇತ್ಯಾದಿಗಳು ಕಣ್ಣಿಗೆ ಬೀಳಬಾರದು. ಜೊತೆಗೆ ಹುಚ್ಚ, ಔಷಧಿ, ಶತ್ರು, ಮಿಡತೆ, ರೋಗಿ, ಬೆತ್ತಲೆ ಪುರುಷ ಮತ್ತು ಮಗು, ಕಸ ಹಿಡಿದ ವ್ಯಕ್ತಿಗಳು,ಕೂದಲು ಕಟ್ಟದ ಮಹಿಳೆ ಕಾಣಿಸಿಕೊಂಡರೆ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. 

Numerology: ನಿಮ್ಮ ಜನ್ಮದಿನ ಆಧರಿಸಿ 2022ರಲ್ಲಿ ನಿಮ್ಮ ಭವಿಷ್ಯ ಹೀಗಿರುತ್ತೆ!

ರಕ್ತ (Blood )ಕಂಡರೂ ಪ್ರಯಾಣ ಬೆಳೆಸಬೇಡಿ. ಊಸರವಳ್ಳಿ, ಬೆಕ್ಕು ಜಗಳವಾಡುವುದು ಕಂಡರೆ ಅಥವಾ ಯಾರಾದರೂ ಒಂಟಿ ಸೀನು ಸೀನಿದರೆ ಸ್ವಲ್ಪ ಸಮಯ ಬಿಟ್ಟು ಪ್ರಯಾಣ ಶುರು ಮಾಡಿ.  ಎಮ್ಮೆ ಕಾಳಗ, ಎಳ್ಳು, ಕಪ್ಪು ಧಾನ್ಯಗಳು, ಹತ್ತಿ,ಬಲಭಾಗದಿಂದ ಕತ್ತೆಯ ಕೂಗು, ತಲೆ ಬೋಳಿಸಿಕೊಂಡ ವ್ಯಕ್ತಿ, ಒದ್ದೆ ಬಟ್ಟೆಯಲ್ಲಿರುವ ವ್ಯಕ್ತಿ ಕಂಡರೆ ಅಶುಭ.  
  

Latest Videos
Follow Us:
Download App:
  • android
  • ios