Solar Eclipse 2022 ಪ್ರಭಾವ ಯಾವ ರಾಶಿಗೆ ಏನು?
ಪ್ರಸಕ್ತ ಸಾಲಿನಲ್ಲಿ ಸೂರ್ಯಗ್ರಹಣವು ಏ. 30ರ ಮಧ್ಯರಾತ್ರಿ 12:15ಕ್ಕೆ ಪ್ರಾರಂಭವಾಗಲಿದೆ. ಆದರೆ, ಬಹುಬೇಗನೆ ಗ್ರಹಣ ಬಿಡಲಿದೆ. ಅಂದರೆ, ಮುಂಜಾನೆ 04:07ಕ್ಕೆ ಮುಕ್ತಾಯವಾಗಲಿದೆ. ಗ್ರಹಣವು ಒಟ್ಟಾರೆಯಾಗಿ 3 ಗಂಟೆ 52 ನಿಮಿಷ ಹಿಡಿದಿರುತ್ತದೆ. ಭಾರತಕ್ಕೆ ಇದರ ಪ್ರಭಾವ ಇಲ್ಲದಿದ್ದರೂ ರಾಶಿಗಳ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ...
ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಏಪ್ರಿಲ್ 30ರಂದು ಮೊದಲ ಸೂರ್ಯಗ್ರಹಣವು (Solar Eclipse) ಕಾಣಿಸಿಕೊಳ್ಳಲಿದೆ. ಗ್ರಹಣಕ್ಕೆ ವೈಜ್ಞಾನಿಕವಾಗಿ ಹೇಗೆ ಮಹತ್ವವಿದೆಯೋ ಹಾಗೇ ಧಾರ್ಮಿಕ ಪ್ರಾಮುಖ್ಯತೆಯೂ ಇದೆ. ಈ ಸಂದರ್ಭದಲ್ಲಿ ಕಠಿಣ ಅನುಷ್ಠಾನಗಳನ್ನು ಮಾಡುವ ಮೂಲಕ ದೈವಾನುಗ್ರಹವನ್ನು ಪಡೆಯಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ, ಗ್ರಹಣಗಳನ್ನು ಶುಭ ಎಂದು ಪರಿಗಣಿಸಲಾಗಿಲ್ಲ. ಹಾಗಂತ ಎಲ್ಲರಿಗೂ ಅಶುಭವಾಗಲಿದೆ ಎಂದಲ್ಲ. ಆದರೆ, ಗ್ರಹಣದ ಸಂದರ್ಭದಲ್ಲಿ ಶುಭ ಕಾರ್ಯಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಹೇಳುತ್ತದೆ ಶಾಸ್ತ್ರ.
ಆದರೆ, ಈ ಬಾರಿ ಭಾರತದಲ್ಲಿ ಸೂರ್ಯಗ್ರಹಣ ಕಾಣಿಸಿಕೊಳ್ಳದಿದ್ದರೂ 12 ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ (Effect) ಉಂಟಾಗಲಿದೆ? ಯಾವ ರಾಶಿಗೆ ಶುಭ ಫಲ ಮತ್ತು ಯಾವ ರಾಶಿಗೆ ಅಶುಭ ಫಲ ಎಂಬುದನ್ನು ನೋಡೋಣ...
ಮೇಷ ರಾಶಿ (Aries)
ಸೂರ್ಯಗ್ರಹಣದ ದಿನ ಮೇಷ ರಾಶಿಯ ವ್ಯಕ್ತಿಗಳು ಹಣಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ವಹಿವಾಟನ್ನು (Transaction) ಮಾಡಬಾರದು. ಅಂದರೆ, ಈ ಸಮಯದಲ್ಲಿ (Time) ಮೇಷ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳು ಎದುರಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಆ ಕಾರಣದಿಂದಾಗಿ ಈ ರಾಶಿಯವರು ಸ್ವಲ್ಪ ಜಾಗ್ರತೆವಹಿಸುವುದು ಒಳ್ಳೆಯದು.
ವೃಷಭ ರಾಶಿ (Taurus)
ವೃಷಭ ರಾಶಿಯ ವ್ಯಕ್ತಿಗಳಿಗೆ ಸೂರ್ಯಗ್ರಹಣದ ಸಮಯದಲ್ಲಿ ಆತ್ಮವಿಶ್ವಾಸ ತಗ್ಗಲಿದೆ. ಆದ ಕಾರಣ, ಇವರು ಈ ದಿನದಂದು (Day) ಮಾತ್ರ ಯಾವುದೇ ಅನಗತ್ಯ ಕೆಲಸಗಳಿಗೆ ಕೈಹಾಕಬಾರದು. ಜೊತೆಗೆ ಯಾವುದೇ ರೀತಿಯ ಒತ್ತಡಗಳನ್ನೂ ಸಹ ತೆಗೆದುಕೊಳ್ಳಬಾರದು. ಶಾಂತಚಿತ್ತರಾಗಿ (Calm) ಯೋಚಿಸಬೇಕು ಹಾಗೂ ವರ್ತಿಸಬೇಕು.
ಮಿಥುನ ರಾಶಿ (Gemini)
ಈ ದಿನದಂದು ಮಿಥುನ ರಾಶಿಯವರು ಜನ ಹೆಚ್ಚಿರುವ ಪ್ರದೇಶಗಳಿಗೆ ಹೋಗದಿರುವುದು ಒಳಿತು. ಈ ದಿನದಂದು ಸುತ್ತಲೂ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಟ್ಟುಕೊಳ್ಳಬೇಕು. ಜೊತೆಗೆ ಜಾಗ್ರತೆಯನ್ನೂ (Beware) ಸಹ ವಹಿಸಿಕೊಳ್ಳಬೇಕು.
ಕರ್ಕಾಟಕ ರಾಶಿ (Cancer)
ಈ ರಾಶಿಚಕ್ರದವರಿಗೆ ಸಿಹಿ ಸುದ್ದಿ. ಸೂರ್ಯಗ್ರಹಣವು ಇವರಿಗೆ ಶುಭಕಾರಕವಾಗಿದೆ. ಮದುವೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ಈ ಬಾರಿ ಪರಿಹಾರ ಕಾಣಲಿದೆ. ಅಲ್ಲದೆ, ಇವರು ಆರ್ಥಿಕ (Economic) ಸಮಸ್ಯೆಗಳಿಂದ (Problem) ಹೈರಾಣಾಗಿದ್ದರೆ ಪರಿಹಾರ ಸಿಗಲಿದೆ.
ಸಿಂಹ ರಾಶಿ (Leo)
ಸಿಂಹ ರಾಶಿಯವರು ಈ ದಿನ ಹೂಡಿಕೆ (Investment) ಮಾಡುವುದು ಬೇಡ. ಇವರು ವ್ಯಾಪಾರ – ವಹಿವಾಟಿನಲ್ಲಿ ಎಷ್ಟೇ ನಿಪುಣರಾದರೂ ಈ ದಿನ ಮಾತ್ರ ಹೂಡಿಕೆಗೆ ಯೋಗ್ಯವಲ್ಲ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಸೂರ್ಯಗ್ರಹಣವು ಉತ್ತಮ ಪರಿಣಾಮವನ್ನು (Effect) ಬೀರಲಿದೆ. ಆದರೆ, ಇವರು ಯಶಸ್ಸನ್ನು ಪಡೆಯಬೇಕೆಂದರೆ ಸ್ವಲ್ಪ ಕಠಿಣ ಪರಿಶ್ರಮವನ್ನು ಹಾಕಬೇಕಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಈ ಸಮಯದಲ್ಲಿ ಉದ್ಯೋಗ (Job) ಬದಲಿಸುವ ಪ್ರಯತ್ನಕ್ಕೆ ಕೈ ಹಾಕಬಾರದು.
ತುಲಾ ರಾಶಿ (Libra)
ತುಲಾ ರಾಶಿಯ ವ್ಯಕ್ತಿಗಳಿಗೆ ಸೂರ್ಯಗ್ರಹಣವು ನಕಾರಾತ್ಮಕ (Negetive) ಪರಿಣಾಮ ಬೀರಲಿದ್ದು, ಆರೋಗ್ಯದ (Health) ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಕಾನೂನಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದಾಗಿದೆ. ಜೊತೆಗೆ ವಿವಾದಗಳಿಂದ ದೂರ ಇರುವುದು ಉತ್ತಮ.
ಇದನ್ನು ಓದಿ: ಈ 3 ವಸ್ತುಗಳ ದಾನ ಮಾಡಿ ತೊಂದರೆಯಿಂದ ಪಾರಾಗಿ
ವೃಶ್ಚಿಕ ರಾಶಿ (Scorpio)
ಈ ರಾಶಿಯವರಿಗೆ ಉದ್ಯೋಗ ಹಾಗೂ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಎದುರಾಗಬಹುದಾಗಿದ್ದು, ತುಸು ಎಚ್ಚರ ವಹಿಸುವುದು ಮುಖ್ಯ. ಈ ಸಮಯದಲ್ಲಿ ಅಹಂಕಾರದ (Ego) ವರ್ತನೆ ಶುಭಕಾರಕ ಅಲ್ಲ. ತಾಳ್ಮೆಯಿಂದ, ವರ್ತಿಸಿದಲ್ಲಿ ಎಲ್ಲ ಸಮಸ್ಯೆಗಳಿಂದ ಪಾರಾಗಬಹುದಾಗಿದೆ.
ಧನು ರಾಶಿ (Sagittarius)
ಸೂರ್ಯಗ್ರಹಣದ ಸಂದರ್ಭದಲ್ಲಿ ಧನು ರಾಶಿಯವರ ಆರೋಗ್ಯವು ಉತ್ತಮವಾಗಿರುವುದಲ್ಲದೆ, ಶತ್ರುಗಳು (Enemy), ವಿರೋಧಿಗಳ ವಿರುದ್ಧ ಗೆಲುವಿನ ನಗೆ ಬೀರಬಹುದಾಗಿದೆ.
ಮಕರ ರಾಶಿ (Capricorn)
ಮಕರ ರಾಶಿಯ ಮಕ್ಕಳ ಆರೋಗ್ಯದ ಬಗ್ಗೆ ಗ್ರಹಣದ ಸಮಯದಲ್ಲಿ ವಿಶೇಷವಾದ ಕಾಳಜಿಯನ್ನು (Care) ವಹಿಸಬೇಕಿದೆ. ಇನ್ನೊಂದು ವಿಚಾರವೆಂದರೆ ಈ ಸಮಯದಲ್ಲಿ ಜೂಜಾಟದ ಗೋಜಿಗೆ ಹೋಗಬಾರದು.
ಇದನ್ನು ಓದಿ: ಸಿಹಿ ಮಾತಿಂದಲೇ ನಿಮ್ಮ Secrets ಬಾಯಿ ಬಿಡಿಸೋ ಚಾಣಾಕ್ಯರು ಈ ರಾಶಿಯವರು!
ಕುಂಭ ರಾಶಿ (Aquarius)
ಸೂರ್ಯಗ್ರಹಣದ ಸಮಯದಲ್ಲಿ ಕುಂಭ ರಾಶಿಯವರು ಹೂಡಿಕೆ ಮಾಡಲು ಹೋದರೆ ನಷ್ಟ ಆಗಲಿದೆ. ಕೌಟುಂಬಿಕ ಕಲಹಗಳ ಬಗ್ಗೆ ಎಚ್ಚರ ವಹಿಸಬೇಕು. ಅಪಘಾತದ ಸಂಭವವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರಯಾಣ ಮಾಡುವಾಗಲೂ ಸಾಕಷ್ಟು ಮುನ್ನೆಚ್ಚರಿಕೆಯನ್ನು ಹೊಂದಿರಬೇಕಾಗುತ್ತದೆ.
ಮೀನ ರಾಶಿ (Pisces)
ಮೀನ ರಾಶಿಯವರಿಗೆ ಈ ಸೂರ್ಯಗ್ರಹಣವು ಶುಭಕಾರಕ. ಈ ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವನ್ನು (Profit) ನಿರೀಕ್ಷೆ ಮಾಡಬಹುದಾಗಿದೆ. ಅಲ್ಲದೆ, ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಲಿವೆ.