Asianet Suvarna News Asianet Suvarna News

ಈ ರಾಶಿಯವರಿಗೆ ತಪ್ಪಲಿದೆ Shani ಕಾಟ, ತೆರೆಯಲಿದೆ ಅದೃಷ್ಟದ ಬಾಗಿಲು

ಗ್ರಹಗಳ ರಾಶಿ ಬದಲಾವಣೆ ರಾಶಿಗಳ ಮೇಲಾಗುತ್ತದೆ. ಪ್ರತಿ ಬಾರಿ ಗ್ರಹಗಳು ರಾಶಿ ಬದಲಿಸಿದಾಗಲೂ ಅದ್ರ ಕಷ್ಟ,ಸುಖವನ್ನು ಆಯಾ ರಾಶಿಯವರು ಅನುಭವಿಸಬೇಕು. ಈ ಬಾರಿ ಶನಿ ರಾಶಿ ಬದಲಿಸಲಿದ್ದಾನೆ. ಆತನ ರಾಶಿ ಬದಲಾವಣೆ ಮೂರು ರಾಶಿಯವರ ಜೀವನದಲ್ಲಿ ಬೆಳಕು ತರಲಿದೆ. 
 

Saturn Transit In Aquarius bring luck in coming days
Author
Bangalore, First Published Mar 11, 2022, 5:39 PM IST

ಶನಿದೇವನ (Shani Deva) ದೃಷ್ಟಿಯಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶನಿಯ ಕೋಪ (Anger)ಕ್ಕೆ ಗುರಿಯಾದವರು ಸಾಕಷ್ಟು ಸಮಸ್ಯೆ (Problem)ಗಳನ್ನು ಎದುರಿಸಬೇಕಾಗುತ್ತದೆ. ಶನಿಯನ್ನು ನ್ಯಾಯ (Justice) ದೇವ ಎಂದು ಕರೆಯಲಾಗುತ್ತದೆ. ಶನಿ ಮುನಿಸಿಕೊಂಡ್ರೆ ಯಾವುದೇ ಕೆಲಸ ನೆರವೇರುವುದಿಲ್ಲ ಹಾಗೆ ಶನಿ ಕೃಪ ತೋರಿದರೆ ಎಲ್ಲ ಕೆಲಸ ಹೂವಿನಂತೆ ಮುಗಿದು ಹೋಗುತ್ತದೆ. ಶನಿಯ ವಕ್ರದೃಷ್ಟಿಕೆ ಕಂಗೆಟ್ಟಿದ್ದ ಮೂರು ರಾಶಿಯವರಿಗೆ ಖುಷಿ ಸುದ್ದಿಯಿದೆ. ಶನಿಯಿಂದ ಮೂರು ರಾಶಿಯವರು ಮೋಕ್ಷ ಪಡೆಯಲಿದ್ದಾರೆ. ಈ ವರ್ಷ ಅಂದರೆ 2022ರಲ್ಲಿ ಶನಿ ರಾಶಿ ಬದಲಿಸಲಿದ್ದಾನೆ. ಸದ್ಯ ಮಿಥುನ ರಾಶಿ, ತುಲಾ ರಾಶಿಯಲ್ಲಿ ಶನಿಯ ಧೈಯ ನಡೆಯುತ್ತಿದ್ದು, ಧನು, ಮಕರ, ಕುಂಭ ರಾಶಿಗಳಲ್ಲಿ ಸಾಡೇ ಸಾಥ್ ಶನಿ ನಡೆಯುತ್ತಿದೆ. ಇದ್ರಿಂದಾಗಿ ಈ ರಾಶಿಯವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಶನಿ ಸಂಕ್ರಮಣ 2022 :  ಪಂಚಾಂಗದ ಪ್ರಕಾರ, ಏಪ್ರಿಲ್ 29, 2022 ರಂದು ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಅಂದರೆ ಈ ದಿನದಿಂದ ಶನಿಯು ಕುಂಭ ರಾಶಿಯಲ್ಲಿ ನಡೆಯಲಿದ್ದಾನೆ. ಶನಿಯ ಈ ರಾಶಿ ಬದಲಾವಣೆ  ಎಲ್ಲಾ 12 ರಾಶಿಗಳ  ಮೇಲೆ ಪರಿಣಾಮ ಬೀರಲಿದೆ. ಆದರೆ ಮೂರು ರಾಶಿಗಳ ಮೇಲೆ ಹೆಚ್ಚಿನ ಪ್ರಭಾವವಾಗಲಿದೆ. ಆ ರಾಶಿಯವರ ಅದೃಷ್ಟ ಬದಲಾಗಲಿದೆ. ಈಗಿದ್ದ ನೋವು,ಅತೃಪ್ತಿ ದೂರವಾಗಲಿದೆ. ಇಂದು ಶನಿ ರಾಶಿ ಬದಲಾವಣೆಯಿಂದ ಯಾರಿಗೆ ಶುಭವಾಗಲಿದೆ ಎಂಬುದನ್ನು ನಾವು ನೋಡೋಣ.

ಶನಿ ರಾಶಿ ಬದಲಾವಣೆಯಿಂದ ಈ ರಾಶಿಯವರಿಗಾಗಲಿದೆ ಲಾಭ :

ಮಿಥುನ : ಶನಿ ರಾಶಿ ಬದಲಾಯಿಸುತ್ತಿದ್ದರೆ  ಮಿಥುನ ರಾಶಿಯವರಿಗೆ ಶನಿಯ ಬಾಧೆಯಿಂದ ಮುಕ್ತಿ ಸಿಗಲಿದೆ. ಧೈಯಾ ಮುಗಿದ ತಕ್ಷಣ, ಮಿಥುನ ರಾಶಿಯ ಕಷ್ಟಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಲಿವೆ. ಆರ್ಥಿಕ ಲಾಭವನ್ನು ಈ ರಾಶಿಯವರು ಕಾಣಲಿದ್ದಾರೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ, ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಮಿಥುನ ರಾಶಿಯವರಿಗೆ ಏಪ್ರಿಲ್ 29ರಿಂದ ಮಂಗಳಕರ ದಿನ ಶುರುವಾಗಲಿದೆ.

Holi 2022: ಈ ನಗರದಲ್ಲಿ 12 ದಿನ ನಡೆಯುತ್ತೆ ಬಣ್ಣದೋಕುಳಿ, ಇಲ್ಲಾಗಲೇ ಶುರುವಾಗಿದೆ ಹೋಳಿ!

ತುಲಾ : ರಾಶಿಚಕ್ರದ ಪ್ರಕಾರ ತುಲಾವನ್ನು ಏಳನೇ ರಾಶಿ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ತುಲಾ ರಾಶಿಯಲ್ಲೂ ಶನಿಯ ಧೈಯಾ ನಡೆಯುತ್ತಿದೆ. ಏಪ್ರಿಲ್ 29 ರ ನಂತರ ಇದು ಕೊನೆಗೊಳ್ಳಲಿದೆ. ಧೈಯಾ ಮುಗಿದ ತಕ್ಷಣ ತುಲಾ ರಾಶಿಯವರ ಅದೃಷ್ಟ ಬದಲಾಗಲಿದೆ.  ಅಡೆತಡೆಗಳು ಮತ್ತು ಸವಾಲುಗಳಿಂದ ಮುನ್ನಡೆ ಸಾಧಿಸಲು ಸಾಧ್ಯವಾಗದ ಎಲ್ಲ ಕೆಲಸಗಳೂ ಈಗ ಸರಾಗವಾಗಿ ನಡೆಯಲಿವೆ.   ಆರೋಗ್ಯ ಸಂಬಂಧಿ ಸಮಸ್ಯೆಗಳೂ ದೂರವಾಗಲಿವೆ. ಶನಿಯ ಈ ಬದಲಾವಣೆಯು ಹಣದ ವಿಷಯದಲ್ಲಿ ವಿಶೇಷ ಲಾಭವನ್ನು ನೀಡಲಿದೆ. ಅನೇಕ ವಿಷ್ಯದಲ್ಲಿ ತುಲಾ ರಾಶಿಯವರು ಸಂತೋಷ ಕಾಣಲಿದ್ದಾರೆ. ಎಲ್ಲ ರೀತಿಯ ವಿವಾದಗಳು ಕೊನೆಯಾಗಿ ಜೀವನದಲ್ಲಿ ಸುಖ-ಶಾಂತಿ,ನೆಮ್ಮದಿ ಸಿಗಲಿದೆ.

VASTU TIPS : ಹೀಗೆ ಮಾಡಿದ್ರೆ ವ್ಯವಹಾರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ಧನು ರಾಶಿ : ಧನು ರಾಶಿಯಲ್ಲಿ ಶನಿಯ ಅರ್ಧಶತಕವು ನಡೆಯುತ್ತಿದೆ.  ಏಪ್ರಿಲ್ 29, 2022 ರಂದು ಶನಿಯು ರಾಶಿ ಬದಲಾವಣೆ ಮಾಡ್ತಿದ್ದ ತಕ್ಷಣ ಶನಿಯ ಈ ದಶಾ ಕೊನೆಗೊಳ್ಳುತ್ತದೆ. ಅದರ ನಂತರ ಧನು ರಾಶಿಯವರಿಗೆ ಶುಭವಾಗಲಿದೆ. ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಸಮಯದಲ್ಲಿ ಧನಲಾಭದ ಜೊತೆಗೆ ಗೌರವವೂ ಹೆಚ್ಚಾಗಲಿದೆ. ಸ್ಥಗಿತಗೊಂಡ ಕೆಲಸ-ಕಾರ್ಯಗಳು ಪೂರ್ಣಗೊಳ್ಳಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆಗಳಿಂದ  ಮುಕ್ತಿ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಹೊಸ ಜನರ ಭೇಟಿಯಾಗಲಿದೆ. ಇದು ವೃತ್ತಿಜೀವನದಲ್ಲಿ ವಿಶೇಷ ಪ್ರಯೋಜನವನ್ನು ನೀಡಲಿದೆ.

Follow Us:
Download App:
  • android
  • ios