Vastu Tips : ಹೀಗೆ ಮಾಡಿದ್ರೆ ವ್ಯವಹಾರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
ವ್ಯವಹಾರದ ಬೆಳವಣಿಗೆ ಮತ್ತು ಯಶಸ್ಸಿಗೆ ಜನರು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಕೆಲಸದಲ್ಲಿನ ದೋಷದಿಂದಾಗಿ ಅಥವಾ ವಾಸ್ತುವಿನಲ್ಲಿನ ದೋಷದಿಂದಾಗಿ ಜನ ಯಶಸ್ಸನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಹಾಗಾದರೆ ವಾಸ್ತುವನ್ನು ಸರಿ ಮಾಡುವ ಮೂಲಕ ಹೇಗೆ ಯಶಸ್ಸನ್ನು ಪಡೆಯಬಹುದು ನೋಡೋಣ.
ವಾಸ್ತು
ವಾಸ್ತು(Vaastu) ದೋಷ
ವ್ಯವಹಾರದಲ್ಲಿ ಲಾಭವನ್ನು ಪಡೆಯಲು ಸಾಧ್ಯವಾಗದಿದ್ದರೆ, ಇದಕ್ಕೆ ಕಾರಣ ವಾಸ್ತು ದೋಷವಾಗಿರಬಹುದು. ಅಂದರೆ ಅಂಥ ಪರಿಸ್ಥಿತಿಯಲ್ಲಿ, ಈ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು, ಇದು ವ್ಯವಹಾರದ ಪ್ರಗತಿಗೆ ಕಾರಣವಾಗಬಹುದು.
ವಾಸ್ತು
ವೃದ್ಧಿ ಯಂತ್ರ
ವ್ಯವಹಾರದಲ್ಲಿ(Business) ಯಶಸ್ಸನ್ನು ಸಾಧಿಸಲು ವೃದ್ಧಿ ಯಂತ್ರವನ್ನು ಪೂಜಿಸಬಹುದು. ಆದರೆ, ಶುಭ ಮಹೂರ್ತ ನೋಡಿದ ನಂತರವೇ ಅದನ್ನು ಸ್ಥಾಪಿಸಬೇಕು. ಮನೆಯಲ್ಲಿ ವೃದ್ಧಿ ಯಂತ್ರ ಸ್ಥಾಪಿಸಿದ ನಂತರ ನಿಯಮಿತವಾಗಿ ಅದನ್ನು ಪೂಜಿಸಬೇಕು, ಹಾಗಿದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.
ವಾಸ್ತು
ಉತ್ತರ ದಿಕ್ಕು (North Direction)
ಮನೆಯ ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ನಂಬಲಾಗಿದೆ. ಈ ದಿಕ್ಕನ್ನು ಅಪರಾಧ ಮುಕ್ತವಾಗಿಡುವುದು ಬಹಳ ಮುಖ್ಯ. ಅಥವಾ ಯಾವುದೇ ಕೆಟ್ಟ ಅಥವಾ ಅನುಪಯುಕ್ತ ವಸ್ತುಗಳನ್ನು ಇಡುವುದರಿಂದ ಮುಕ್ತಗೊಳಿಸಬೇಕು. ಇದರಿಂದ ಯಶಸ್ಸು ಸಾಧ್ಯವಾಗುತ್ತದೆ.
ವಾಸ್ತು
ಗಿಳಿಯ(Parrot) ಫೋಟೋ
ಮನೆಯ ಉತ್ತರ ದಿಕ್ಕಿನಲ್ಲಿ ಹಸಿರು ಗಿಳಿಯ ಚಿತ್ರವನ್ನು ಹಾಕುವುದರಿಂದ ವ್ಯವಹಾರದಲ್ಲಿ ನಿಮಗೆ ಲಾಭವಾಗಬಹುದು. ಗಿಳಿಯನ್ನು ಶುಭ ಶಕುನದ ಹಕ್ಕಿ ಎಂದು ನಂಬಲಾಗಿದೆ. ಆದುದರಿಂದ ಈ ಹಕ್ಕಿಯ ಫೋಟೋವನ್ನು ಹಾಕುವುದರಿಂದ ವ್ಯವಹಾರ ಉತ್ತಮವಾಗಿ ಮೂಡಿ ಬರಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ವಾಸ್ತು
ಶ್ವೇತಾರ್ಕ ಗಣಪತಿ(Lord Ganesh)
ವ್ಯಾಪಾರ ಸ್ಥಳದಲ್ಲಿ ಶ್ವೇತಾರ್ಕ ಗಣಪತಿ ಮತ್ತು ಏಕಾಕ್ಷಿ ಶ್ರೀಫಲವನ್ನು ಪ್ರತಿಷ್ಠಾಪಿಸಿ ನಿಯಮಿತವಾಗಿ ಪೂಜೆ ಮಾಡಿ. ಶ್ವೇತಾರ್ಕ ಗಣಪತಿ ಅಥವಾ ಶ್ರೀಫಲ ಶುಭವಾದ ಸಂಕೇತವಾಗಿದೆ. ಇವುಗಳನ್ನು ಇತ್ತು ಪೂಜಿಸುವುದರಿಂದ ಎಲ್ಲವೂ ಶುಭವಾಗುತ್ತದೆ ಎಂದು ನಂಬಲಾಗಿದೆ.
ವಾಸ್ತು
ಮಲಗುವ ಕೋಣೆ(Bed room)
ಮಲಗುವ ಕೋಣೆಯಲ್ಲಿ ಹಸುವಿನ ವಿಗ್ರಹವನ್ನು ಹಾಕುವುದರಿಂದ ನಿಮಗೆ ವ್ಯವಹಾರದಲ್ಲಿ ಲಾಭವೂ ಆಗಬಹುದು. ಅಷ್ಟೇ ಅಲ್ಲದೆ ಲೋಹದಿಂದ ಮಾಡಿದ ಆಮೆಯನ್ನು ಕಚೇರಿಯಲ್ಲಿ ಇಡುವುದು ಸಹ ಪ್ರಯೋಜನಕಾರಿಯಾಗಿದೆ. ಇದರಿಂದ ವ್ಯಾಪಾರದಲ್ಲಿ ಯಶಸ್ಸು ಲಭಿಸುವುದು ಸಾಧ್ಯವಾಗುತ್ತದೆ.