ಭಕ್ತರು ದೇವಸ್ಥಾನಕ್ಕೆ ಹೂವು, ಹಣ್ಣು,ಕಾಯಿ ನೈವೇದ್ಯವಾಗಿ ನೀಡಿ ಪ್ರಸಾದ ಸ್ವೀಕರಿಸುತ್ತಾರೆ. ಆದರೆ ಈ ದೇವಾಲದಲ್ಲಿ ಆಟಿಕೆ ವಿಮಾನ, ಮದ್ಯ, ಸಿಗರೇಟು ಸೇರಿದಂತೆ ವಿಚಿತ್ರ ನೈವೇದ್ಯ ನೀಡಲಾಗುತ್ತದೆ. ಏನಿದು ಸಂಪ್ರದಾಯ, ಎಲ್ಲಿದೆ ದೇವಸ್ಥಾನ
ಜಲಂಧರ್ (ನ.20) ದೇವಸ್ಥಾನ, ಗುರದ್ವಾರ ಸೇರಿದಂತೆ ಮಂದಿರಗಳಿಗೆ ಭಕ್ತರು ಕಾಣಿಕೆ ನೀಡುತ್ತಾರೆ, ನೈವೇದ್ಯ ಅರ್ಪಿಸುತ್ತಾರೆ. ಸಾಮಾನ್ಯವಾಗಿ ಹೂವು, ಹಣ್ಣು, ಕಾಯಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಆದರೆ ಪಂಜಾಬ್ ಜಲಂಧರ್ ಸಮೀಪದ ತಲ್ಹಾನ್ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ನೈವೇದ್ಯ ವಿಶೇಷ. ಇಲ್ಲಿಗೆ ಬರವು ಭಕ್ತರು ಆಟಿಕೆ ವಿಮಾನಗಳನ್ನು ನೈವೇದ್ಯವಾಗಿ ನೀಡುತ್ತಾರೆ. ಈ ರೀತಿ ಆಟಿಕೆ ವಿಮಾನಗಳನ್ನು ಕಾಣಿಕೆಯಾಗಿ ನೈವೇದ್ಯವಾಗಿ ಅರ್ಪಿಸಲು ಪ್ರಮುಖ ನಂಬಿಕೆ ಇದೆ.
ಆಟಿಕೆ ವಿಮಾನ ಅರ್ಪಿಸುವುದೇಕೆ
ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರದಲ್ಲಿ ಭಕ್ತರಿಗೆ ವಿಶೇಷ ನಂಬಿಕೆ ಇದೆ. ವಿದೇಶಕ್ಕೆ ಹೋಗುವ ಕನಸು ಕಾಣುವವರು ವೀಸಾ ಸಿಗಲಿ ಎಂದು, ವಿದೇಶದಲ್ಲಿ ಕೆಲಸ ಸಿಗಲಿ ಎಂದು, ವಿದೇಶಿ ಪ್ರವಾಸ ಬಯಸುವವರು, ಸುರಕ್ಷಿತ ಪ್ರಯಾಣಕ್ಕಾಗಿ ಸೇರಿದಂತೆ ಹಲವು ಕಾರಣಕ್ಕಾಗಿ ಆಟಿಕೆ ವಿಮಾನಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಒಂದು ಹಂತದಲ್ಲಿ ಪ್ರತಿ ದಿನ ಸಾವಿರಾರು ಆಟಿಕೆ ವಿಮಾನಗಳು ನೈವೇದ್ಯವಾಗಿ ಗುರುದ್ವಾರ ತುಂಬಿಕೊಳ್ಳುತ್ತಿತ್ತು.
ಗುರುದ್ವಾರದ ಪಕ್ಕದಲ್ಲಿ ಆಟಿಕೆ ವಿಮಾನಗಳ ಸ್ಟಾಲ್ಗೆ ಹೆಚ್ಚಾಯಿತು. ಪ್ಲಾಸ್ಟಿಕ್ ವಿಮಾನ ಗುರುದ್ವಾರ ತುಂಬಿಕೊಳ್ಳಲು ಆವರಿಸಿತು. ಇದು ಗುರುದ್ವಾರಕ್ಕೂ ಸಮಸ್ಯೆಯಾಗಿ ಪರಿಣಮಿಸಿತು. ಹೀಗಾಗಿ ತುರ್ತು ಸಭೆ ಸೇರಿದ ಗುರುದ್ವಾರ ಆಡಳಿತ ಮಂಡಳಿ ಮಹತ್ವದ ಘೋಷಣೆ ಮಾಡಿತು.
2023ರಿಂದ ಹೊಸ ನಿಯಮ
ಗುರುದ್ವಾರಕ್ಕೆ ಆಟಿಕೆ ವಿಮಾನ ಕಾಣಿಕೆಯಾಗಿ ಸಲ್ಲಿಸುವ ಯಾವುದೇ ಪದ್ಧತಿ ಇರಲಿಲ್ಲ. ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ಕಾರಣಕ್ಕೆ ಆಟಿಕೆ ವಿಮಾನ ಸೇರಿದಂತೆ ಇತರ ವಸ್ತುಗಳ ಕಾಣಿಕೆಯಾಗಿ ಸಲ್ಲಿಸುತ್ತಿದ್ದರು. ಬಳಿಕ ಇದು ಪದ್ಧತಿಯಾಗಿ ನಡೆದುಕೊಂಡು ಬಂದಿತ್ತು. 2023ರಿಂದ ಆಟಿಕೆ ವಿಮಾನ ಸ್ವೀಕರಿಸುವ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಿತ್ತು.
ಕಾಮಾಕ್ಯ ಹಾಗೂ ಮುತ್ತಪ್ಪ ದೇವಸ್ಥಾನದ ವಿಶೇಷತೆ
ಭಾರತದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪದ್ಧತಿ, ನಂಬಿಕೆಗಳಿವೆ. ಈ ಪೈಕಿ ಅಸ್ಸಾಂನ ಕಾಮಾಕ್ಯ ದೇಗುಲ ಅತ್ಯಂತ ಪ್ರಸಿದ್ಧಿಯಾಗಿದೆ. ಕಾಮಾಕ್ಯ ದೇಗುಲ ಹಾಗೂ ಕೇರಳದ ಪರಸಿನಕಡವು ಮುತ್ತಪ್ಪ ದೇವಸ್ಥಾನ ಹಲವು ವಿಶೇಷತೆಗಳಿವೆ. ಇಲ್ಲಿ ಭಕ್ತರಿಗೆ ನೀಡುವ ಪ್ರಸಾದ ಒಣ ಮೀನು ಅವಲಕ್ಕಿ ಹಾಗೂ ತೆಂಗಿನ ಮರದ ನೀರು. ಇದೇ ರೀತಿ ಭಾರತದ ಹಲವು ದೇವಸ್ಥಾನದಲ್ಲಿ ವಿಶೇಷ ಪ್ರಸಾದ, ನೈವೇದ್ಯಗಳನ್ನು ನೀಡಲಾಗುತ್ತದೆ.















