- Home
- Astrology
- Festivals
- Chanakya Niti: ಚಾಣಕ್ಯರ ಪ್ರಕಾರ ಈ 5 ಜನರಿಗೆ ಸಹಾಯ ಮಾಡಿದರೆ ನಿಮಗೇ ನಷ್ಟ! ಯಾರು ಆ ವ್ಯಕ್ತಿಗಳು?
Chanakya Niti: ಚಾಣಕ್ಯರ ಪ್ರಕಾರ ಈ 5 ಜನರಿಗೆ ಸಹಾಯ ಮಾಡಿದರೆ ನಿಮಗೇ ನಷ್ಟ! ಯಾರು ಆ ವ್ಯಕ್ತಿಗಳು?
Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಪ್ರತಿಯೊಬ್ಬರಿಗೂ ಯೋಚಿಸದೆ ಸಹಾಯ ಮಾಡುವುದು ಸರಿಯಲ್ಲ. ಕೆಲವರು ನಿಮ್ಮ ಒಳ್ಳೆಯತನವನ್ನೇ ದುರುಪಯೋಗ ಪಡಿಸಿಕೊಳ್ಳಬಹುದು. ಹಾಗಿದ್ರೆ ಯಾವ ಐದು ಜನರಿಗೆ ಸಹಾಯ ಮಾಡಬಾರದು ಎಂದು ಚಾಣಕ್ಯ ತಿಳಿಸಿದ್ದಾರೆ ತಿಳಿಯಿರಿ.

ಈ ಜನರಿಗೆ ತಪ್ಪಿಯೂ ಸಹಾಯ ಮಾಡಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ, ದಯೆ, ಕರುಣೆ ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳು ಮನುಷ್ಯನಲ್ಲಿರಬೇಕಾದ ಅತ್ಯುತ್ತಮ ಗುಣಗಳಾಗಿವೆ. ಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯ ಧರ್ಮ. ಆದರೆ ಪ್ರತಿಯೊಬ್ಬರಿಗೂ ಯಾವುದೇ ಯೋಚನೆಯಿಲ್ಲದೆ ಸಹಾಯ ಮಾಡುವುದು ಸರಿಯೇ? ಕೆಲವರು ನಮ್ಮ ಒಳ್ಳೆಯತನವನ್ನೇ ದೌರ್ಬಲ್ಯವೆಂದು ಭಾವಿಸಿ ದುರುಪಯೋಗಪಡಿಸಿಕೊಳ್ಳಬಹುದು. ಅಂತಹ ಜನರಿಂದ ದೂರ ಉಳಿಯುವುದು ಉತ್ತಮ ಎನ್ನುತ್ತಾರೆ. ಹಾಗಿದ್ರೆ ಅಂತಹ ಐದು ರೀತಿಯ ಜನರು ಯಾರು ಎಂಬುದನ್ನು ತಿಳಿಯೋಣ.
ನಿಮ್ಮನ್ನು ಅಪಮಾನ ಮಾಡಿದವರಿಗೆ ಸಹಾಯ ಮಾಡಬೇಡಿ
ಈ ಹಿಂದೆ ನಿಮ್ಮನ್ನು ಅವಮಾನಿಸಿದ ಅಥವಾ ನಿಮ್ಮ ಆತ್ಮಗೌರವಕ್ಕೆ ಧಕ್ಕೆ ತಂದ ವ್ಯಕ್ತಿಗೆ ಸಹಾಯ ಮಾಡುವ ಮೊದಲು ಯೋಚಿಸಿ. ಇಂತಹವರಿಗೆ ಪದೇಪದೇ ನೆರವು ನೀಡುವುದರಿಂದ ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗಬಹುದು. ಕೆಲವರು ತಮ್ಮ ಅಗತ್ಯವಿದ್ದಾಗ ಮಾತ್ರ ಸಿಹಿಯಾಗಿ ಮಾತನಾಡುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ಹಳೆಯ ವರ್ತನೆಯನ್ನೇ ಮುಂದುವರಿಸುತ್ತಾರೆ.
ದುಷ್ಟ ಸ್ವಭಾವದ ಜನರಿಂದ ದೂರವಿರಿ
ಯಾವಾಗಲೂ ಕೋಪ ಮಾಡಿಕೊಳ್ಳುವ, ಇತರರನ್ನು ಕೀಳಾಗಿ ಕಾಣುವ ಮತ್ತು ಸಣ್ಣ ವಿಷಯಕ್ಕೂ ಕೆಟ್ಟ ಪದಗಳನ್ನು ಬಳಸುವ ಜನರು ನಿಮ್ಮ ಒಳ್ಳೆಯತನವನ್ನು ಗೌರವಿಸದೇ ಇರಬಹುದು. ನೀವು ಕಷ್ಟದ ಸಮಯದಲ್ಲಿ ಸಹಾಯ ಮಾಡಿದರೂ ಅವರು ಕೃತಜ್ಞತೆ ತೋರಿಸದೇ ಇರಬಹುದು. ಕೆಲವರು ತಮ್ಮ ಕೆಲಸವಾದ ನಂತರ ಸಹಾಯ ಮಾಡಿದವರ ವಿರುದ್ಧವೇ ತಿರುಗಿಬೀಳುತ್ತಾರೆ. ಆದ್ದರಿಂದ ಇಂತಹವರ ಸ್ವಭಾವ ತಿಳಿಯದೆ ಸಹಾಯ ಮಾಡಲು ಮುಂದಾಗಬೇಡಿ.
ಯಾವಾಗಲೂ ತಮ್ಮ ಸಮಸ್ಯೆಗಳನ್ನೇ ಹೇಳಿಕೊಳ್ಳುವವರು
ಕೆಲವರಿಗೆ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಮಸ್ಯೆಗೂ ಬೇರೆಯವರೇ ಕಾರಣ ಎಂಬ ಭಾವನೆ ಇರುತ್ತದೆ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಪರಿಸ್ಥಿತಿಯನ್ನು ದೂಷಿಸುತ್ತಾರೆ. ನೀವು ಎಷ್ಟೇ ಸಹಾಯ ಮಾಡಿದರೂ ಅವರಿಗೆ ತೃಪ್ತಿಯಾಗುವುದಿಲ್ಲ. ಒಂದು ಸಮಸ್ಯೆ ಮುಗಿದರೆ ಮತ್ತೊಂದು ಸಮಸ್ಯೆಯೊಂದಿಗೆ ನಿಮ್ಮ ಮುಂದೆ ಬರುತ್ತಾರೆ. ಇಂತಹವರಿಗೆ ಸಹಾಯ ಮಾಡುವಾಗ ತಮ್ಮ ಜೀವನ ಸುಧಾರಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಿ.
ತಮ್ಮ ತಪ್ಪುಗಳಿಂದ ಪಾಠ ಕಲಿಯದವರು
ಚಾಣಕ್ಯ ನೀತಿಯಲ್ಲಿ ಬುದ್ಧಿ ಮತ್ತು ವಿವೇಚನೆಗೆ ಹೆಚ್ಚಿನ ಮಹತ್ವವಿದೆ. ಯೋಚಿಸದೆ ನಿರ್ಧಾರ ತೆಗೆದುಕೊಳ್ಳುವ ಮತ್ತು ಪದೇಪದೇ ತಪ್ಪುಗಳನ್ನು ಮಾಡುತ್ತಿದ್ದರೂ ಅದರಿಂದ ಪಾಠ ಕಲಿಯದವರ ಸಹಾಯ ಮಾಡುವುದು ಕೆಲವೊಮ್ಮೆ ನಿಮಗೇ ಸಮಸ್ಯೆ ತರಬಹುದು.
ಅಹಂಕಾರ ಹೊಂದಿರುವ ವ್ಯಕ್ತಿಗಳು
ಚಾಣಕ್ಯ ನೀತಿಯ ಪ್ರಕಾರ, ಅಹಂಕಾರ ಮನುಷ್ಯನ ದೊಡ್ಡ ಶತ್ರು. ಅಹಂಕಾರ ಹೊಂದಿರುವವರು ಬೇರೆಯವರ ಸಹಾಯ ಮತ್ತು ಒಳ್ಳೆಯತನವನ್ನು ತಮ್ಮ ಹಕ್ಕು ಎಂಬಂತೆ ಭಾವಿಸುತ್ತಾರೆ. ಸಹಾಯ ಪಡೆದರೂ ಕೃತಜ್ಞತೆ ತೋರಿಸುವುದಿಲ್ಲ. ತಾವು ಇತರರಿಗಿಂತ ಶ್ರೇಷ್ಠರು ಎಂದು ಭಾವಿಸುವ ಇಂತಹವರು ಸಹಾಯ ಮಾಡಿದವರನ್ನೇ ಕೆಲವೊಮ್ಮೆ ಅವಮಾನಿಸುತ್ತಾರೆ. ಹಾಗಾಗಿ ಅವರ ಮೆಚ್ಚುಗೆ ಪಡೆಯಲು ಅಥವಾ ನಿಮ್ಮ ಒಳ್ಳೆಯತನವನ್ನು ಸಾಬೀತುಪಡಿಸಲು ಪದೇಪದೇ ಸಹಾಯ ಮಾಡುವುದನ್ನು ತಪ್ಪಿಸಿ.













