ನೆಮ್ಮದಿಯೇ ಇಲ್ಲವೆಂದರೆ ಈ ವಸ್ತು ತನ್ನಿ, ಪಾಸಿಟಿವ್ ವೈಬ್ಸ್ ಸೃಷ್ಟಿಯಾಗುತ್ತೆ!

ಉಪ್ಪು ಅಡುಗೆಯ ರುಚಿ ಹೆಚ್ಚಿಸಲು ಮಾತ್ರವಲ್ಲ, ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನೂ ಹೋಗಲಾಡಿಸುತ್ತೆ. ಮನೆಯಲ್ಲಿ ನೆಮ್ಮದಿಯೇ ಇಲ್ಲವೆಂದಾಗ ಕೆಲವು ವಸ್ತುಗಳನ್ನು ತಂದಿಟ್ಟರೆ ಸಾಕು. ಎಲ್ಲವೂ ಒಳ್ಳೇಯದಾಗುತ್ತೆ.

Salt Removes Negative Energy and bring positive vibes

ಉಪ್ಪಿಗಿಂತ ರುಚಿ ಮತ್ತೊಂದಿಲ್ಲ. ಎಲ್ಲಾ ಪದಾರ್ಥಕ್ಕೂ ಉಪ್ಪು ಪ್ರಮುಖವಾದ ವಸ್ತು. ಕೇವಲ ಅಡುಗೆಗಷ್ಟೇ(Cooking) ಅಲ್ಲದೆ ಶಾಸ್ತçದ ಪ್ರಕಾರವೂ ಉಪ್ಪಿಗೆ ತನ್ನದೇ ಆದ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ  ಉಪ್ಪಿನ ಬಗ್ಗೆ ಏನು ಹೇಳಿದ್ದಾರೆ ಇಲ್ಲಿದೆ ಮಾಹಿತಿ. ಉಪ್ಪು ಎನ್ನುವುದು ಮನೆಯಲ್ಲಿ ಇರಬೇಕಾದ ಉಪಯುಕ್ತ ವಸ್ತುಗಳಲ್ಲಿ ಒಂದು. ಇದು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ವಾಸ್ತು ಪ್ರಕಾರ ಮನೆಯಲ್ಲಿದ್ದರೆ ಬಹಳ ಒಳ್ಳೆಯದು. ಇದು ಸಮೃದ್ಧಿ, ಯಶಸ್ಸು ಹಾಗೂ ಖ್ಯಾತಿಯನ್ನು ನೀಡುತ್ತದೆ. ವಾಸ್ತು ದೋಷಗಳ ಚಿಕಿತ್ಸೆಯಿಂದ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಒಂದು ಚಿಟಿಕೆ ಉಪ್ಪು ಒಬ್ಬರ ಜೀವನದಲ್ಲಿ ಅದ್ಬುತ ಪರಿಣಾಮ ಬೀರುತ್ತದೆ. ಉಪ್ಪು ಹೇಗೆಲ್ಲಾ ಪರಿಣಾಮ ಬೀರುತ್ತೆ ವಾಸ್ತು ಶಾಸ್ತçದಲ್ಲಿ ಏನು ಹೇಳಿದ್ದಾರೆ ಇಲ್ಲಿದೆ ಮಾಹಿತಿ.

1. ಒಂದು ಬೌಲ್‌ನಲ್ಲಿ ಮುಷ್ಟಿಯಷ್ಟು ಉಪ್ಪನ್ನು ತೆಗೆದುಕೊಂಡು ಬಾತ್‌ರೂಮ್‌ನ(Bathroom) ಒಣಗಿರುವ ಜಾಗದಲ್ಲಿ, ಒಂದು ಮೂಲೆಯಲ್ಲಿ ಇರಿಸಬೇಕು. ಇದನ್ನು ಪ್ರತೀ ದಿನ ಬದಲಾಯಿಸುತ್ತಿರಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಿಂದ ಬಡತನದ(Poverty) ಸಾಧ್ಯತೆಗಳನ್ನು ಹೊರಹಾಕಲು ಸಹಕರಿಸುತ್ತದೆ.
2. ಆಹಾರ ಸೇವಿಸುವ ಎಲ್ಲರೂ ಒಟ್ಟಿಗೆ ಕೂತು ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ಜನರು ಅಥವಾ ಕುಟುಂಬದವರು(Family) ಆಹಾರವನ್ನು ಸೇವಿಸುವ ಮೇಜಿನ(Table) ಮೇಲೆ ಉಪ್ಪನ್ನು ಇಟ್ಟುಕೊಳ್ಳುವುದು ಸಮೃದ್ಧಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಮನೆಯು ಎಂದಿಗೂ ಹಣವಿಲ್ಲದೆ ಹೋಗುವುದಿಲ್ಲ ಎಂದು ನಂಬಲಾಗಿದೆ.
3. ಶಾಸ್ತçದ ಪ್ರಕಾರ ಉಪ್ಪನ್ನು ಕೆಂಪು ಬಟ್ಟೆಯಲ್ಲಿ(Red Cloth) ಸುತ್ತಿ ಮುಖ್ಯ ದ್ವಾರದ(Main Door) ಮೇಲೆ ನೇತು ಹಾಕಲಾಗುತ್ತದೆ. ಹೀಗೆ ನೇತು ಹಾಕುವುದರಿಂದ ಮನೆಯೊಳಗೆ ನುಗ್ಗುವ ಯಾವುದೇ ನಕಾರಾತ್ಮಕ ಶಕ್ತಿ(Negative Energy) ಕಡಿಮೆಯಾಗುತ್ತದೆ ಮತ್ತು ಉತ್ತಮ ಕಂಪನಗಳು ಹಾಗೂ ಸಮೃದ್ಧತೆ ತುಂಬುವAತೆ ಮಾಡುತ್ತದೆ.
4. ಭಾನುವಾರ(Sunday) ಹೊರತುಪಡಿಸಿ ಉಳಿದ ದಿನಗಳಲ್ಲಿ ನೀರಿನಲ್ಲಿ ಸಮುದ್ರದ ಉಪ್ಪು(Ocean Salt) ಬೆರೆಸಿ ನೆಲ ಒರೆಸಲು(Flore Clean) ಉಪಯೋಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯ ಪ್ರತಿಯೊಂದು ಮೂಲೆಯಿಂದಲೂ ಬಡತನದ ಕುರುಹುಗಳು ದೂರವಾಗುತ್ತವೆ.

ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡಿದ್ರೆ ಸ್ನಾಯು ನೋವು ಕಾಡಲ್ಲ

5. ಮನೆಯಲ್ಲಿ ಹಣಕಾಸು(Money) ತುಂಬಿರಬೇಕೆAದರೆ ಒಂದು ಗಾಜಿನ ಲೋಟದ(Glass Cup) ತುಂಬಾ ನೀರು ಮತ್ತು ಅದಕ್ಕೆ ಚಿಟಕಿ ಉಪ್ಪು ಹಾಕಿ ಮನೆಯ ನೈರುತ್ಯ(South West) ಭಾಗದ ಮೂಲೆಯಲ್ಲಿ ಇಡಬೇಕು. ಈ ಗಾಜಿನ ಲೋಟದ ಸುತ್ತ ಕೆಂಪು ಲೈಟ್(Red Light) ಹೊಂದಿರಬೇಕು ಹಾಗೂ ಲೋಟದಲ್ಲಿ ನೀರು ಇಂಗಿದ ನಂತರ ಅದನ್ನು ಸ್ವಚ್ಛಗೊಳಿಸಿ ಪುನಃ ನೀರು, ಉಪ್ಪು ಹಾಕಿ ಅದೇ ಜಾಗದಲ್ಲಿಡಬೇಕು. 

ಮಗು ಎಲ್ಲವಕ್ಕೂ ಮೇಲುಪ್ಪು ಹಾಕಿ ಕೊಳ್ಳುತ್ತಾ? ತುಸು ಎಚ್ಚರ!

6. ಸ್ನಾನ ಮಾಡುವಾಗ ಉಪ್ಪನ್ನು ನೀರಿಗೆ ಹಾಕಿಕೊಳ್ಳುವುದರಿಂದ ದೇಹದ ಅಂಗಾAಗಗಳಲ್ಲಿನ(Body Parts) ವಿಷವನ್ನು(Toxins) ತೆಗೆದುಹಾಕುತ್ತದೆ. ಅಲ್ಲದೆ ಚರ್ಮದ(Skin) ಮೇಲಿನ ಬ್ಯಾಕ್ಟೀರಿಯಾ(Bacteria) ಮತ್ತು ಇತರೆ ಶಿಲಾಖಂಡರಾಶಿಗಳನ್ನು ಸಹ ದೂರ ಮಾಡುತ್ತದೆ. ಇದು ತಾಜಾ ಹಾಗೂ ಹೊಸ ಯೌವನ ಪಡೆಯುವಂತೆ ಮಾಡುತ್ತದೆ.
7. ಉಪ್ಪು ನೀರಿನ ಸ್ನಾನದಿಂದ ದೇಹದಲ್ಲಿ ಹಲವು ರೋಗಗಳಿಗೆ(Diseases) ರಾಮಬಾಣವಾಗಿದೆ. ಸಂಧಿ ನೋವು(Joint Pain), ಬೆನ್ನು ನೋವು(Back Pain), ಊತ(Bloating), ರಕ್ತ ಸಂಚಾರ ಸುಗಮ(Blood Pressure Easy), ಗಾಯಗಳನ್ನು(Wound) ಬಹುಬೇಗ ಗುಣವಾಗುವಂತೆ ಮಾಡುತ್ತದೆ.
8. ಮನೆಯ ಒಂದು ಮೂಲೆಯಲ್ಲಿ ನೀರು(Water), ಉಪ್ಪು(Salt), ಲವಂಗವನ್ನು(Cloves) ಹಾಕಿ ಇಡುವುದರಿಂದ ಮನೆಯಲ್ಲಿ ಸಂತೋಷ(Happy) ಹಾಗೂ ಶಾಂತಿ(Calm) ತುಂಬಿರುವAತೆ ನೋಡಿಕೊಳ್ಳುತ್ತದಲ್ಲದೆ ಉತ್ತಮ ಸುಗಂಧವನ್ನು(Fragrance) ಪಸರಿಸುತ್ತದೆ.
9. ಮನೆಯಲ್ಲಿ ವಾಸ್ತು ದೋಷವಿದ್ದಲ್ಲಿ ಒಂದು ಬೌಲ್‌ನಲ್ಲಿ ಕ್ರಿಸ್ಟಲ್ ಉಪ್ಪನ್ನು(Cristal Salt) ಹಾಕಿ ಅದಕ್ಕೆ ನೀರು ಹಾಕಿ ಬಾತ್‌ರೂಮ್‌ನಲ್ಲಿ ಯಾರಿಗೂ ಸಿಗದ ಜಾಗದಲ್ಲಿ ಇಡಬೇಕು. ಇದನ್ನು ಮೂರು ದಿನಕ್ಕೊಮ್ಮೆ ಬದಲಾಯಿಸುತ್ತಿರಬೇಕು(Change). ಹೀಗೆ ಮಾಡುವುದರಿಂದ ಮನೆಯಲ್ಲಿ ದೋಷ, ನೆಗೆಟಿವ್ ಎನರ್ಜಿ(Negative Energy) ಹಾಗೂ ವಾಸ್ತು ದೋಷಗಳು ನಿವಾರಣೆಗೆ ಸಹಕಾರಿಯಾಗಿದೆ ಎಂದು ವಾಸ್ತು ಶಾಸ್ತçದಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios