ನಮಗೆ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಅಲ್ಲ, ರಾಮ ರಾಜ್ಯ ಕಟ್ಟುವ ಕನಸು ಇದೆ: ಪೇಜಾವರ ಶ್ರೀ
ನಮಗೆ 5 ಲಕ್ಷ ದಾನ ಮಾಡುವ ಶಕ್ತಿಯಿದ್ರೆ, ಅದನ್ನ ನಮ್ಮ ಅಕ್ಕಪಕ್ಕದಲ್ಲಿ ಮನೆಯಿಲ್ಲದರಿಗೆ ಮನೆ ನಿರ್ಮಿಸಿಕೊಡಿ. ನನ್ನ ಹತ್ರ ಶಿಕ್ಷಣ ಸಂಸ್ಥೆಯಿದ್ರೆ ಹತ್ತು ಜನ ಮಕ್ಕಳಿಗೆ ಉಚಿತ ಶಿಕ್ಷಣ ನೀಡೋಣ: ವಿಶ್ವ ಪ್ರಸನ್ನ ತೀರ್ಥ ಶ್ರೀಗಳು
ಉಡುಪಿ(ಜ.25): 2 ವರ್ಷಗಳ ಹಿಂದೆ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣೆ ನಡೆದಿತ್ತು. ನಮಗೆ ಕೇವಲ ರಾಮ ಮಂದಿರ ನಿರ್ಮಾಣ ಅಷ್ಟೇ ಅಲ್ಲ, ರಾಮ ರಾಜ್ಯ ಕಟ್ಟುವ ಕನಸು ಇದೆ. ರಾಮ ರಾಜ್ಯ ಕಟ್ಟುವುದು ಹೇಗೆ?, ಹೇಗೆ ನನಸಾಗುತ್ತೆ?. ರಾಮ ಭಕ್ತಿ ಬೇರೆಯಲ್ಲ ದೇಶ ಭಕ್ತಿಯೂ ಬೇರೆಯಲ್ಲ. ರಾಮನ ಸೇವೆ ಬೇರೆಯಲ್ಲ, ದೇಶ ಸೇವೆ ಬೇರೆಯಲ್ಲ. ನಮಗೆ 5 ಲಕ್ಷ ದಾನ ಮಾಡುವ ಶಕ್ತಿಯಿದ್ರೆ, ಅದನ್ನ ನಮ್ಮ ಅಕ್ಕಪಕ್ಕದಲ್ಲಿ ಮನೆಯಿಲ್ಲದರಿಗೆ ಮನೆ ನಿರ್ಮಿಸಿಕೊಡಿ. ನನ್ನ ಹತ್ರ ಶಿಕ್ಷಣ ಸಂಸ್ಥೆಯಿದ್ರೆ ಹತ್ತು ಜನ ಮಕ್ಕಳಿಗೆ ಉಚಿತ ಶಿಕ್ಷಣ ನೀಡೋಣ ಅಂತ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯರಾಗಿರುವ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದ್ದಾರೆ.
ಇಂದು(ಬುಧವಾರ) ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಅಯೋಧ್ಯೆ ರಾಮಮಂದಿರ ಯಾವಾಗ ಉದ್ಘಾಟನೆಯಾಗುತ್ತದೆ. ಮುಂದಿನ ಮಕರ ಸಂಕ್ರಾಂತಿಯ ಕಾಲಕ್ಕೆ ಒಂದು ಹಂತದ ಕಾಮಗಾರಿ ಮುಕ್ತಾಯಗೊಳ್ಳುತ್ತೆ, ನಂತರ ರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ ಅಂತ ಹೇಳಿದ್ದಾರೆ.
ರಾಮಮಂದಿರ ಜೊತೆ ರಾಮ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ, ಮೋದಿಗೆ ಪೇಜಾವರ ಶ್ರೀ ಸೂಚನೆ
ರಾಮರಾಜ್ಯ ಹೆಸರಲ್ಲಿ ಒಂದು ಆ್ಯಪ್ ಮಾಡೋಣ, ಅದರಲ್ಲಿ ಯಾವ ಯಾವ ಅಭಿವೃದ್ಧಿ ಕೆಲ್ಸ ಆಗಿದೆ ಅಂತಾ ನೋಡೋಣ ಅಂತ ಉಡುಪಿ ಶ್ರೀ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದ್ದಾರೆ.