ರುದ್ರಾಕ್ಷಿಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ರುದ್ರಾಕ್ಷಿ ಇರುತ್ತದೆ. ಆದ್ರೆ ಅದಕ್ಕೆ ಸಂಬಂಧಿಸಿದ ನಿಯಮಗಳು ತಿಳಿದಿರುವುದಿಲ್ಲ. ಎಲ್ಲರೂ ಹೇಳ್ತಾರೆ ಎಂಬ ಕಾರಣಕ್ಕೆ ರುದ್ರಾಕ್ಷಿ ಧರಿಸಿದ್ರೆ ಸಾಲದು, ಎಲ್ಲಿ ಧರಿಸಬಾರದು ಎಂಬ ವಿಷ್ಯ ಗೊತ್ತಿರಬೇಕು.
ರುದ್ರಾಕ್ಷಿ (Rudraksha) ಯನ್ನು ಈಶ್ವರ (Ishwar) ನ ಅಂಶವೆನ್ನಲಾಗುತ್ತದೆ. ರುದ್ರಾಕ್ಷಿಗೆ ಹಿಂದು ಧರ್ಮದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ರುದ್ರಾಕ್ಷಿ ಭಗವಂತ ಶಿವನ ಅಳುವಿನಿಂದ ಹುಟ್ಟಿದೆ ಎನ್ನಲಾಗುತ್ತದೆ. ತಾಯಿ ಸತಿಯ ದೇಹ ತ್ಯಾಗದ ಬಗ್ಗೆ ಗೊತ್ತಾದಾದ ಶಿವ ಕಣ್ಣೀರಿಡ್ತಾನೆ. ಆ ಕಣ್ಣೀರು ಎಲ್ಲೆಲ್ಲಿ ಬಿದ್ದಿದೆಯೋ ಅಲ್ಲೆಲ್ಲ ರುದ್ರಾಕ್ಷಿ ಗಿಡ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ಗಿಡದಿಂದ ಬಂದ ಫಲವನ್ನು ಅದೇ ಕಾರಣಕ್ಕೆ ರುದ್ರಾಕ್ಷಿ ಎಂದು ಕರೆಯಲಾಗುತ್ತದೆ. ರುದ್ರಾಕ್ಷಿ ಧರಿಸುವುದ್ರಿಂದ ಭಗವಂತ ಶಿವನ ಕೃಪೆಗೆ ನಾವು ಪಾತ್ರರಾಗಬಹುದು ಎಂದು ನಂಬಲಾಗಿದೆ. ಇಲ್ಲದೆ ತಾಂತ್ರಿಕರ ಹಾಗೂ ನಕಾರಾತ್ಮಕ ಶಕ್ತಿಯನ್ನು ಇದು ದೂರ ಮಾಡುತ್ತದೆ. ದೇವರ ಮನೆಯಲ್ಲಿ ರುದ್ರಾಕ್ಷಿಯನ್ನಿಟ್ಟು ಅನೇಕರು ಪ್ರತಿನಿತ್ಯ ಪೂಜೆ (Worship) ಗಳನ್ನು ಮಾಡ್ತಾರೆ. ಯಾರ ಮನೆಯಲ್ಲಿ ರುದ್ರಾಕ್ಷಿಗೆ ಪೂಜೆ ನಡೆಯುತ್ತದೆಯೋ ಆ ಮನೆಯಲ್ಲಿ ಎಂದೂ ಅನಾಹುತಗಳು ನಡೆಯುವುದಿಲ್ಲ. ಧನ – ಸಂತೋಷದ ವೃದ್ಧಿ ಸದಾ ಆಗುತ್ತದೆ ಎಂದು ನಂಬಲಾಗಿದೆ. ರುದ್ರಾಕ್ಷಿಯನ್ನು ಪೂಜೆ ಮಾಡುವ ಕಾರಣ ಅದನ್ನು ಎಲ್ಲಿ ಬೇಕೆಂದ್ರೆ ಅಲ್ಲಿ ಧಾರಣೆ ಮಾಡುವಂತಿಲ್ಲ. ಹಾಗೆಯೇ ಅದನ್ನು ಧರಿಸುವವರು ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಇಂಉ ರುದ್ರಾಕ್ಷಿ ಧಾರಣೆ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಈ ಜಾಗದಲ್ಲಿ ರುದ್ರಾಕ್ಷಿಯನ್ನು ಧರಿಸಬೇಡಿ :
ಶವ ಸಂಸ್ಕಾರದ ವೇಳೆ : ನಾವು ರುದ್ರಾಕ್ಷಿ ಧರಿಸಿದ್ರೆ ಒಳ್ಳೆಯದು ಎನ್ನುವ ಕಾರಣಕ್ಕೆ ಅದನ್ನು ಧರಿಸಿರುತ್ತೇವೆ. ಆದ್ರೆ ಎಲ್ಲ ಸಂದರ್ಭದಲ್ಲೂ ಅದು ನಮ್ಮ ಮೈಮೇಲೆ ಇರುವುದು ಒಳ್ಳೆಯದಲ್ಲ. ಯಾರೋದ ಶವ ಸಂಸ್ಕಾರಕ್ಕೆ ನೀವು ಹೊರಟಿದ್ದೀರಿ ಎಂದಾದ್ರೆ ರುದ್ರಾಕ್ಷಿ ಧರಿಸಬೇಡಿ. ಮೈಮೇಲಿರುವ ರುದ್ರಾಕ್ಷಿಯನ್ನು ತೆಗೆದಿಟ್ಟು ಹೋಗಿ. ಭಗವಂತ ಶಿವ, ಜನನ ಹಾಗೂ ಮರಣವನ್ನು ಮೀರಿದವನು. ಹಾಗಾಗಿಯೇ ಅವನ ಅಂಶವನ್ನು ಕೂಡ ಸ್ಮಶಾನದಲ್ಲಿ ಧರಿಸಬಾರದು. ಒಂದು ವೇಳೆ ಶವ ಸಂಸ್ಕಾರದ ವೇಳೆ ರುದ್ರಾಕ್ಷಿ ಧರಿಸಿದ್ರೆ ಅದ್ರಲ್ಲಿರುವ ಶಕ್ತಿ ನಷ್ಟವಾಗುತ್ತದೆ.
ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತೆ ಗೊತ್ತಾ..?
ಹೆರಿಗೆಯಾಗುವ ಜಾಗದಲ್ಲಿ ರುದ್ರಾಕ್ಷಿ ಧರಿಸ್ಬೇಡಿ : ಹೆರಿಗೆಯಾಗುವ ಜಾಗದಲ್ಲಿ ಅಂದ್ರೆ ಮಗು ಜನಿಸುವ ಜಾಗಕ್ಕೂ ರುದ್ರಾಕ್ಷಿ ಧರಿಸಿ ಹೋಗ್ಬೇಡಿ. ಮಗುವಿಗೆ ಸಂಸ್ಕಾರವಾಗುವವರೆಗೂ ನಿರ್ಬಂಧವಿರುತ್ತದೆ. ಹಾಗಾಗಿ ಮಗು ಜನಿಸುವ ವೇಳೆ ರುದ್ರಾಕ್ಷಿ ಧರಿಸಬಾರದು ಎನ್ನಲಾಗುತ್ತದೆ.
ಮಲಗುವ ಮುನ್ನ ರುದ್ರಾಕ್ಷಿ ತೆಗೆದಿಡಿ : ಪ್ರತಿ ದಿನ ಮಲಗುವ ಮೊದಲು ರುದ್ರಾಕ್ಷಿಯನ್ನು ತೆಗೆದಿಟ್ಟು ಮಲಗಬೇಕು. ಅನೇಕರು ಹಾಗೆಯೇ ಮಲಗ್ತಾರೆ. ಇದು ಒಳ್ಳೆಯದಲ್ಲ. ಯಾವ ವ್ಯಕ್ತಿ ಮಲಗಿರ್ತಾನೋ ಆಗ ಅವನ ದೇಹ ಅಶುದ್ಧ ಮತ್ತು ನಿಸ್ತೇಜವಾಗಿರುತ್ತದೆ. ವ್ಯವಹಾರದ ದೃಷ್ಟಿಯಿಂದ ನೀವು ನೋಡಿದ್ರೆ, ರುದ್ರಾಕ್ಷಿ ಒಡೆಯುವ ಸಾಧ್ಯತೆಯಿರುತ್ತದೆ. ಮಲಗಿದ್ದಾಗ ರುದ್ರಾಕ್ಷಿ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ರುದ್ರಾಕ್ಷಿಯನ್ನು ತೆಗೆದಿಟ್ಟು ಮಲಗಬೇಕೆಂದು ಸಲಹೆ ನೀಡಲಾಗುತ್ತದೆ.
Gift ಕೊಡೋದಾದರೆ ಇದನ್ನೇ ಕೊಡಿ, ಪಡೆದವರಿಗೆ ಶುಭವಾಗುತ್ತೆ!
ರುದ್ರಾಕ್ಷಿಯನ್ನು ಇಲ್ಲಿಡಿ : ಮಲಗುವ ಮೊದಲು ರುದ್ರಾಕ್ಷಿಯನ್ನು ಏಕೆ ತೆಗೆದಿಡಬೇಕು ಎಂಬುದು ನಿಮಗೆ ಗೊತ್ತಾಯ್ತು. ಎಲ್ಲಿ ತೆಗೆದಿಡಬೇಕು ಎಂಬ ಪ್ರಶ್ನೆಗೂ ಉತ್ತರವಿದೆ. ರುದ್ರಾಕ್ಷಿಯನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಇದ್ರಿಂದ ಆತ್ಮ ಶಾಂತಿ ಸಿಗವುದಲ್ಲದೆ ಉತ್ತಮ ನಿದ್ರೆ ಆವರಿಸುತ್ತದೆ.
ಈ ಧಾತುವಿನಲ್ಲಿಯೇ ರುದ್ರಾಕ್ಷಿ ಧಾರಣೆಯಿರಲಿ : ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಎಂದೂ ಧಾರಣೆ ಮಾಡಬಾರದು. ಇದನ್ನು ಯಾವಾಗ್ಲೂ ಕೆಂಪು ಅಥವಾ ಹಳದಿ ದಾರದಲ್ಲಿಯೇ ಧರಿಸಬೇಕು. ರುದ್ರಾಕ್ಷಿ ಧಾರಣೆ ಮಾಡುವ ವ್ಯಕ್ತಿ ತಾಮಸಿಕ ಆಹಾರ ಸೇವನೆ ಮತ್ತು ಮದ್ಯಪಾನವನ್ನು ತ್ಯಜಿಸಬೇಕಾಗುತ್ತದೆ. ಒಂದ್ವೇಳೆ ನಿಯಮ ಪಾಲನೆ ಮಾಡದೆ ಹೋದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಕಾರಾತ್ಮಕ ಪರಿಣಾಮವಾಗುತ್ತದೆ.
ಈ ಸ್ಥಿತಿಯಲ್ಲಿ ರುದ್ರಾಕ್ಷಿ ಧಾರಣೆ ಬೇಡ : ಅನೇಕ ಕಾರಣಕ್ಕೆ ನಮ್ಮ ದೇಹ ಅಶುದ್ಧವಾಗುತ್ತದೆ. ಅಂಥ ಸಂದರ್ಭದಲ್ಲಿ ರುದ್ರಾಕ್ಷಿ ಧರಿಸಬಾರದು. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಹಾಗೂ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ರುದ್ರಾಕ್ಷಿ ಧರಿಸಬಾರದು. ಹಾಗೆಯೇ ಕೊಳಕು ಕೈನಲ್ಲಿ ಇದನ್ನು ಮುಟ್ಟಬಾರದು.
ರುದ್ರಾಕ್ಷಿ ಬಗ್ಗೆ ಇರಲಿ ಗಮನ : ನೀವು ಧರಿಸಿದ ರುದ್ರಾಕ್ಷಿಯನ್ನು ಎಂದಿಗೂ ಬೇರೆಯವರಿಗೆ ನೀಡ್ಬೇಡಿ. ಹಾಗೆಯೇ ರುದ್ರಾಕ್ಷಿಯನ್ನು ಬೆಸ ಸಂಖ್ಯೆಯಲ್ಲಿ ಧರಿಸಬೇಕು. 27 ರುದ್ರಾಕ್ಷಿಗಿಂತ ಕಡಿಮೆಯಿರುವ ಮಾಲೆಯನ್ನು ಎಂದೂ ಧರಿಸಬಾರದು.

