Asianet Suvarna News Asianet Suvarna News

ರಾಮಮಂದಿರ ನಿರ್ಮಾಣಕ್ಕಾಗಿ ಕೇವಲ 45 ದಿನಗಳಲ್ಲಿ 2500 ಕೋಟಿ ರೂ ಸಂಗ್ರಹ

ವಿಶ್ವದ ಅತಿ ದೊಡ್ಡ ದೇಣಿಗೆ ಅಭಿಯಾನ ಎಂದು ಅಯೋಧ್ಯೆ ರಾಮ ಜನ್ಮಭೂಮಿಯ ನಿಧಿ ಸಂಗ್ರಹ ಅಭಿಯಾನ ಗುರುತಿಸಿಕೊಂಡಿದೆ. ಇದು ಕೇವಲ 45 ದಿನದಲ್ಲಿ 2500 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

Rs 2500 crore in 45 days 10 crore people donated for Ram temple construction skr
Author
First Published Jan 21, 2024, 4:40 PM IST

ವಿಶ್ವದ ಅತಿ ದೊಡ್ಡ ದೇಣಿಗೆ ಅಭಿಯಾನ ಎಂ ಹೆಗ್ಗಳಿಕೆಗೆ ರಾಮಮಂದಿರ ನಿರ್ಮಾಣ ನಿಧಿಯನ್ನು ಸಂಗ್ರಹ ಅಭಿಯಾನ ಪಾತ್ರವಾಗಿದೆ. ಇದು ಕೇವಲ 45 ದಿನಗಳಲ್ಲಿ 2500 ಕೋಟಿ ರೂ.ಗಳ ಪ್ರಭಾವಶಾಲಿ ಮೊತ್ತವನ್ನು ಸಂಗ್ರಹಿಸಿದೆ. ಈ ನಿಧಿ ಸಂಗ್ರಹ ಅಭಿಯಾನವು ಜನವರಿ 14, 2021 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 27, 2021ರಂದು ಮುಕ್ತಾಯಗೊಂಡಿತ್ತು. ಪ್ರಪಂಚದಾದ್ಯಂತ 10 ಕೋಟಿಗೂ ಹೆಚ್ಚು ಜನರು ಈ ಸಮಯದಲ್ಲಿ ದೇಣಿಗೆ ನೀಡಿದ್ದಾರೆ.

2019ರಲ್ಲಿ ಹೊರ ಬಿದ್ದ ಸುಪ್ರೀಂ ಕೋರ್ಟ್ ತೀರ್ಪು, ಅಯೋಧ್ಯೆಯಲ್ಲಿ ದಶಕಗಳ ಸುದೀರ್ಘ ರಾಮಮಂದಿರ-ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥಪಡಿಸಿತು. ಈ ಸಮಯದಲ್ಲಿ ದೇವಾಲಯದ ಟ್ರಸ್ಟ್‌ಗೆ 2.77 ಎಕರೆ ಭೂಮಿಯನ್ನು ನ್ಯಾಯಾಲಯವು ಮಂಜೂರು ಮಾಡಿತು. ಆ ಮೂಲಕ 7 ದಶಕಗಳ ಹಿಂದಿನ ಸಂಘರ್ಷವನ್ನು ಕೊನೆಗೊಳಿಸಿತು. ಹೆಚ್ಚುವರಿಯಾಗಿ, ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆ ಭೂಮಿಯನ್ನು ಹಂಚಲಾಯಿತು. ಈ ಮಹತ್ವದ ನಿರ್ಧಾರವು ರಾಮ ಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿತು.

ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಭವ್ಯ ಮಂದಿರದ ನಿರ್ಮಾಣ ಪ್ರಾರಂಭವಾಯಿತು ಮತ್ತು ವಿಎಚ್‌ಪಿ ದೇಣಿಗೆ ಅಭಿಯಾನವನ್ನು ಆಯೋಜಿಸಿದ ನಂತರ ಸಿದ್ಧತೆಗಳು ಪ್ರಾರಂಭವಾದವು.

ಶೃಂಗಾರಗೊಂಡ ಅಯೋಧ್ಯಾ ರಾಮಮಂದಿರದೊಳಗಿನ ಅದ್ಬುತ ಚಿತ್ರಗಳು

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ರೂ. ವೆಚ್ಚವಿದೆ. ಪ್ರಧಾನಿ ನರೇಂದ್ರ ಮೋದಿಯವರು 2020ರ ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಕೇವಲ 45 ದಿನಗಳಲ್ಲಿ, 10 ಕೋಟಿಗೂ ಹೆಚ್ಚು ಜನರು ನೀಡಿದ ದೇಣಿಗೆ 2500 ಕೋಟಿ ರೂ. 'ಶ್ರೀರಾಮ ಮಂದಿರ ನಿಧಿ ಸಮರ್ಪಣ' ಎಂದು ಹೆಸರಿಸಲಾದ ಈ ದೇಣಿಗೆ ಅಭಿಯಾನವು ನಾಲ್ಕು ಲಕ್ಷ ಹಳ್ಳಿಗಳನ್ನು ತಲುಪಿತು.

ದೇಣಿಗೆ ಅಭಿಯಾನವನ್ನು 400 ವಿವಿಧ ಸ್ಥಳಗಳಿಂದ ಏಕಕಾಲದಲ್ಲಿ ಪ್ರಾರಂಭಿಸಲಾಯಿತು. VHP ತನ್ನ ಅಭಿಯಾನವನ್ನು ದೇಶದ ಮೊದಲ ವ್ಯಕ್ತಿಯಾದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮತ್ತು ಅವರ ಕುಟುಂಬದ ಪರವಾಗಿ ₹500,100 ದೇಣಿಗೆಯೊಂದಿಗೆ ಪ್ರಾರಂಭಿಸಿತು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇದನ್ನು ಅನುಸರಿಸಿದರು, ಜೊತೆಗೆ ಹಲವಾರು ರಾಜ್ಯಗಳ ರಾಜ್ಯಪಾಲರು ಮತ್ತು ಸಿಎಂಗಳು ದೇವಾಲಯ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ.

ರಾಮಸೇತು ಆರಂಭದ ಬಿಂದು ಅರಿಚಲ್ ಮುನೈಗೆ ಮೋದಿ ಭೇಟಿ; ಈ ಸ್ಥಳದಲ್ಲೇ ರಾವಣನ ವಧೆಗೆ ರಾಮ ಮಾಡಿದ ಪ್ರತಿಜ್ಞೆ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ₹100 ಕೋಟಿಗಿಂತ ಸ್ವಲ್ಪ ಹೆಚ್ಚು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಗುಜರಾತ್ ಮೂಲದ ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ₹11.3 ಕೋಟಿ ದೇಣಿಗೆ ನೀಡಿದ್ದು, ಯುಎಸ್, ಕೆನಡಾ ಮತ್ತು ಯುಕೆಯಲ್ಲಿರುವ ಅವರ ಅನುಯಾಯಿಗಳು ಇನ್ನೂ ₹8 ಕೋಟಿ ಸಂಗ್ರಹಿಸಿದ್ದಾರೆ. 

Follow Us:
Download App:
  • android
  • ios