ರಾಮಸೇತು ಆರಂಭದ ಬಿಂದು ಅರಿಚಲ್ ಮುನೈಗೆ ಮೋದಿ ಭೇಟಿ; ಈ ಸ್ಥಳದಲ್ಲೇ ರಾವಣನ ವಧೆಗೆ ರಾಮ ಮಾಡಿದ ಪ್ರತಿಜ್ಞೆ
ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಒಂದು ದಿನವಿರುವ ಮುನ್ನ ಪ್ರಧಾನಿ ಮೋದಿ, ರಾಮಸೇತುವಿನ ಆರಂಭದ ಪಾಯಿಂಟ್ ಅರಿಚಲ್ ಮುನೈ ಹಾಗೂ ರಾವಣನನ್ನು ಸೋಲಿಸಲು ರಾಮನು ಪ್ರತಿಜ್ಞೆ ಮಾಡಿದ ಸ್ಥಳ ಧನುಷ್ಕೋಡಿಗೆ ಭೇಟಿ ನೀಡಿದರು.
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ-ಪ್ರತಿಷ್ಠೆಗೆ ಇನ್ನೊಂದೇ ದಿನ ಬಾಕಿ ಇರುವ ಸಮಯದಲ್ಲಿ ಪ್ರಧಾನಿ ಮೋದಿ ತಮಿಳುನಾಡಿನ ಧನುಷ್ಕೋಡಿ ಬಳಿಯ ಅರಿಚಲ್ ಮುನೈಗೆ ಭೇಟಿ ನೀಡಿದರು. ಇದು ರಾವಣನ ಸಂಹಾರಕ್ಕಾಗಿ ಶ್ರೀಲಂಕಾಗೆ ತೆರಳಲು ನಿರ್ಮಿಸಿದ ರಾಮಸೇತುವಿನ ಆರಂಭಿಕ ಬಿಂದುವಾಗಿದೆ.
ರಾಮಮಂದಿರ ಉದ್ಘಾಟನೆಗೂ ಮುನ್ನ, ರಾಮಾಯಣ ಸಂಬಂಧ ಹೊಂದಿರುವ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಮೋದಿ, ಭಾನುವಾರ ತಮಿಳುನಾಡಿನ ಧನುಷ್ಕೋಡಿಗೆ ತೆರಳಿ ಸಮುದ್ರ ತೀರದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಶನಿವಾರ ಮುಂಜಾನೆ ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯ ಮತ್ತು ದಕ್ಷಿಣ ರಾಜ್ಯದ ರಾಮೇಶ್ವರಂನಲ್ಲಿರುವ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಭಾನುವಾರ ಧನುಷ್ಕೋಡಿ ಹಾಗೂ ಅರಿಚಿಲ್ ಮುನೈಗೆ ತೆರಳಿದರು. ಇಲ್ಲಿ ಪ್ರಾಣಾಯಾಮ ಮಾಡಿದ ಮೋದಿ, ನಂತರ ಧನುಷ್ಕೋಡಿಯ ಕೋದಂಡರಾಮ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಎಟಿಎಸ್ ಕಮಾಂಡೋ, ಐಪಿಎಸ್, ಪಿಪಿಎಸ್.. ಕಂಟೋನ್ಮೆಂಟ್ ಝೋನ್‌ನಂತಾದ ಅಯೋಧ ...
ರಾಮಸೇತು ಇರುವ ಸ್ಥಳ
ರಾವಣನನ್ನು ಸೋಲಿಸಲು ಭಗವಾನ್ ರಾಮನು ಪ್ರತಿಜ್ಞೆ ಮಾಡಿದ ಸ್ಥಳ ಧನುಷ್ಕೋಡಿಯಾಗಿದೆ. ರಾಕ್ಷಸ ರಾಜ ರಾವಣ ಸೀತೆಯನ್ನು ಸೆರೆಯಲ್ಲಿಟ್ಟ ಶ್ರೀಲಂಕಾಕ್ಕೆ ತನ್ನ ಸೈನ್ಯವನ್ನು ಸಾಗಿಸುವ ಸೇತುವೆಯನ್ನು ನಿರ್ಮಿಸಲು ಭಗವಾನ್ ರಾಮನು ಹನುಮಂತನಿಗೆ ಆಜ್ಞಾಪಿಸಿದ ಸ್ಥಳ ಧನುಷ್ಕೋಡಿ. ರಾವಣನ ಸಹೋದರ ವಿಭೀಷಣನು ಮೊದಲು ಭಗವಾನ್ ರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಕೂಡಾ ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಕೂಡಾ ಧನುಷ್ಕೋಡಿಯೇ. ರಾಮೇಶ್ವರಂನ ಮುಖ್ಯ ಪಟ್ಟಣದಿಂದ 20 ಕಿಮೀ ದೂರದಲ್ಲಿರುವ ಧನುಷ್ಕೋಡಿಯಲ್ಲಿ ರಾಮಸೇತುವನ್ನು ನೀವು ನೋಡಬಹುದು. ಶ್ರೀಲಂಕಾ ಈ ಪಟ್ಟಣದಿಂದ ಕೇವಲ 31 ಕಿಮೀ ದೂರದಲ್ಲಿದೆ. ಈ ಭಾಗದಲ್ಲಿ ಇಂದಿಗೂ ಕಾಣಬಹುದಾದ ಪ್ಯೂಮಿಸ್ ಕಲ್ಲುಗಳು- ನೀರಿನಲ್ಲಿ ತೇಲುವ ಕಲ್ಲನ್ನು ಬಳಸಿ ಸೇತುವೆ ನಿರ್ಮಿಸಲಾಗಿತ್ತು.
ಬಹಳ ಹಿಂದೆ, ವಿಶೇಷವಾಗಿ ಬ್ರಿಟಿಷರ ಕಾಲದಲ್ಲಿ, ಧನುಷ್ಕೋಡಿ ಒಂದು ಸಣ್ಣ ಆದರೆ ಸಮೃದ್ಧ ಪಟ್ಟಣವಾಗಿತ್ತು. ಇಲ್ಲಿ, ರೈಲ್ವೆ ನಿಲ್ದಾಣ, ಚರ್ಚ್, ದೇವಸ್ಥಾನ, ಪೋಸ್ಟ್ ಆಫೀಸ್ ಮತ್ತು ಮನೆಗಳು ಎಲ್ಲವೂ ಇದ್ದವು. ಒಂದು ಕಡೆ ಬಂಗಾಳ ಕೊಲ್ಲಿಯಿಂದ ಮತ್ತು ಇನ್ನೊಂದು ಕಡೆ ಹಿಂದೂ ಮಹಾಸಾಗರದಿಂದ ಗಡಿಯಲ್ಲಿರುವ ಧನುಷ್ಕೋಡಿ ಒಂದು ಕಾಲದಲ್ಲಿ ವ್ಯಾಪಾರಿಗಳು ಮತ್ತು ಯಾತ್ರಿಕರಿಗೆ ಪ್ರಮುಖ ಬಂದರು ಆಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, 1964ರ ರಾಮೇಶ್ವರಂ ಚಂಡಮಾರುತದಲ್ಲಿ ಪಟ್ಟಣವು ಸಂಪೂರ್ಣ ನಾಶವಾಗಿದೆ. 2004 ರ ಸುನಾಮಿಯ ಬಳಿಕ, ಮುಳುಗಿದ್ದ ಪಟ್ಟಣ ಮತ್ತೆ ಹೊರಬಂದಿದೆ. ಸಧ್ಯ ಇಲ್ಲಿ ಕೆಲ ಮೀನುಗಾರರು ಮಾತ್ರ ಹೊಟ್ಟೆಪಾಡಿಗಾಗಿ ಬದುಕುತ್ತಿದ್ದಾರೆ.
ಅಯೋಧ್ಯೆಗೆ ಬಂತು ಶ್ರೀರಂಗಂನ ಸೀರೆ ಅಲಿಗಢದ 50 ಕೇಜಿ ಬೀಗ, ಹೈದರಾಬಾದ್ ...
ಕೋದಂಡರಾಮ ದೇವಸ್ಥಾನ ಅಥವಾ ವಿಭೀಷಣ ದೇವಸ್ಥಾನ
ಭಾರತ ಮತ್ತು ಲಂಕಾ ನಡುವಿನ ಸೇತುವೆಯನ್ನು ನಿರ್ಮಿಸುವ ಸಮಯದಲ್ಲಿ ರಾಮ, ಲಕ್ಷ್ಮಣ ಮತ್ತು ವಾನರ ಸೈನ್ಯವು ಧನುಷ್ಕೋಡಿಯಲ್ಲಿ ಬೀಡುಬಿಟ್ಟಿತ್ತು. ಅಲ್ಲಿ ಅವರು ವಿಭೀಷಣನನ್ನು ಭೇಟಿಯಾದರು ವಿಭೀಷಣನು ಶ್ರೀಲಂಕಾದ ರಾಜನಾಗಿ ಪಟ್ಟಾಭಿಷೇಕ ಮಾಡಿದ ಸ್ಥಳವೂ ಇದೇ ಆಗಿದೆ. ಈ ಸ್ಥಳದಲ್ಲಿ ಕೋದಂಡರಾಮ ದೇವಾಲಯವಿದೆ. ಇದನ್ನು ವಿಭೀಷಣ ದೇವಾಲಯವೆಂದೂ ಕರೆಯಲಾಗುತ್ತದೆ.
ರಾಮನಾಥಸ್ವಾಮಿ ದೇವಸ್ಥಾನ
ರಾಮ ರಾವಣ ಯುದ್ಧದ ನಂತರ, ರಾಮನು ಭಾರತದ ಭೂಭಾಗಕ್ಕೆ ಹಿಂದಿರುಗುತ್ತಿದ್ದಾಗ, ಅವನು ಬ್ರಾಹ್ಮಣನನ್ನು (ರಾವಣ) ಕೊಂದ ಪಾಪವನ್ನು ಪರಿಹರಿಸಲು ಬಯಸಿದನು. ಅದಕ್ಕಾಗಿ ರಾಮನು ಶಿವಲಿಂಗವನ್ನು ಪಡೆಯಲು ಹನುಮಂತನನ್ನು ಕೈಲಾಸ ಪರ್ವತಕ್ಕೆ ಕಳುಹಿಸಿದನು. ಆದರೆ ಹನುಮಂತನು ಸಮಯಕ್ಕೆ ಹಿಂತಿರುಗದ ಕಾರಣ, ಸೀತೆ ದಡದಲ್ಲಿರುವ ಮರಳನ್ನು ಬಳಸಿಯೇ ಪೂಜೆಗಾಗಿ ಶಿವಲಿಂಗವನ್ನು ನಿರ್ಮಿಸಿದಳು. ಇದು ಇಂದಿನ ರಾಮನಾಥಸ್ವಾಮಿ ದೇವಾಲಯದ ಮುಖ್ಯ ದೇವತೆಯಾಗಿದೆ. ಹನುಮಂತನು ತನ್ನ ಶಿವಲಿಂಗದೊಂದಿಗೆ ಹಿಂತಿರುಗಿದಾಗ, ರಾಮನು ಈಗಾಗಲೇ ಶಿವಲಿಂಗವನ್ನು ಮಾಡಿದ್ದಾನೆಂದು ಅವನು ನಿರಾಶೆಗೊಂಡನು. ರಾಮ ಮತ್ತು ಸೀತೆ, ಹನುಮಂತ ತಂದ ಶಿವಲಿಂಗವನ್ನು ಸ್ಥಳದ ಪ್ರವೇಶದ್ವಾರದಲ್ಲಿ ಸ್ಥಾಪಿಸಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾಮೂರ್ತಿ ಎತ್ತಿ ಇಟ್ಟಿದ್ದು ನಾನೇ: ಯಾರು ನಂದಗೋಪಾಲ ಸಫಾರಿ?
ಹೋಗುವುದು ಹೇಗೆ?
ಈ ಸ್ಥಳವನ್ನು ತಲುಪಲು ಮುಖ್ಯ ಭೂಭಾಗದಿಂದ ಪಂಬನ್ ದ್ವೀಪವನ್ನು ದಾಟಬೇಕಾಗುತ್ತದೆ. ಇದಕ್ಕಾಗಿ ಪಂಬನ್ ಸೇತುವೆ ಮೂಲಕ ರೈಲಿನಲ್ಲಿ ಪ್ರಯಾಣಿಸಬೇಕು.