Asianet Suvarna News Asianet Suvarna News

ಮುಟ್ಟಾದ ಮಹಿಳೆಯರು ಋಷಿ ಪಂಚಮಿ ಆಚರಿಸಬೇಕು. ಯಾಕೆ ಗೊತ್ತಾ?

ಹಿಂದೂ ಧರ್ಮದಲ್ಲಿ ಋಷಿ ಪಂಚಮಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ, ಋಷಿ ಪಂಚಮಿಯ ಉಪವಾಸವನ್ನು ಸೆಪ್ಟೆಂಬರ್ 01, ಗುರುವಾರದಂದು ಆಚರಿಸಲಾಗುತ್ತದೆ.

Rishi Panchami 2022 puja vidhi vrat katha skr
Author
First Published Aug 31, 2022, 6:28 PM IST

ಹಿಂದೂ ಕ್ಯಾಲೆಂಡರ್ ಪ್ರಕಾರ, ಋಷಿ ಪಂಚಮಿಯು ಭಾದ್ರಪದ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಋಷಿ ಪಂಚಮಿಯ ಉಪವಾಸವು ಗಣೇಶ ಚತುರ್ಥಿಯ ಮರುದಿನ ಬರುತ್ತದೆ. ಈ ವರ್ಷ 2022 ರಲ್ಲಿ, ಋಷಿ ಪಂಚಮಿಯ ಉಪವಾಸವನ್ನು ಸೆಪ್ಟೆಂಬರ್ 01, ಗುರುವಾರದಂದು ಆಚರಿಸಲಾಗುತ್ತದೆ.

ಋಷಿ ಪಂಚಮಿಯ ದಿನದಂದು 7 ಋಷಿಗಳನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಈ ದಿನ ಗಂಗಾಸ್ನಾನ ಮಾಡುವುದರಿಂದ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅದೇ ಸಮಯದಲ್ಲಿ, ಮುಟ್ಟಿನ ಸಮಯದಲ್ಲಿ ಅಜಾಗರೂಕತೆಯಿಂದ ಮಾಡಿದ ತಪ್ಪುಗಳಿಗೆ ಕ್ಷಮೆ ಯಾಚಿಸಲು ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ. ಋಷಿ ಪಂಚಮಿಯ ಪೂಜಾ ವಿಧಾನ ಮತ್ತು ವ್ರತ ಕಥೆಯ ಬಗ್ಗೆ ತಿಳಿಯೋಣ.

ಋಷಿ ಪಂಚಮಿ 2022 ಪೂಜಾ ವಿಧಿ
ಋಷಿ ಪಂಚಮಿ ಉಪವಾಸವನ್ನು ಆಚರಿಸುವವರಿಗೆ ಗಂಗಾ ಸ್ನಾನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾವುದೋ ಕಾರಣದಿಂದ ಇದು ಸಾಧಯವಾಗದಿದ್ದರೆ, ಮನೆಯಲ್ಲಿ ಸ್ನಾನ ಮಾಡುವ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬಹುದು. ಬೆಳಿಗ್ಗೆ 108 ಬಾರಿ ಮಣ್ಣಿನಿಂದ ಕೈಗಳನ್ನು ತೊಳೆದುಕೊಳ್ಳಿ, ಹಸುವಿನ ಸಗಣಿ, ತುಳಸಿ, ಮಣ್ಣು, ಅಶ್ವತ್ಥ ಮರದ ಬುಡದ ಮಣ್ಣು, ಗಂಗೆಯ ಮಣ್ಣು, ಗೋಪಿ ಶ್ರೀಗಂಧ, ಎಳ್ಳು, ಆಮ್ಲ, ಗಂಗಾಜಲ, ಗೋಮೂತ್ರವನ್ನು ಬೆರೆಸಿ ಕೈಕಾಲುಗಳನ್ನು 108 ಬಾರಿ ತೊಳೆಯಲಾಗುತ್ತದೆ.

Personality Traits: ಕುಂಭ ರಾಶಿಯ ಐದು ಸೀಕ್ರೆಟ್ ಗುಣಲಕ್ಷಣಗಳು..

ಇದಾದ ನಂತರ ಸ್ನಾನ ಮಾಡಿರ ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನ ಪೂಜೆಯ ನಂತರ ಸಪ್ತಋಷಿಗಳ ಪೂಜೆ ಮಾಡಿ ಮತ್ತು ಕಥೆಯನ್ನು ಓದಲಾಗುತ್ತದೆ. ಬಳಿಕ ಬಾಳೆಹಣ್ಣು, ತುಪ್ಪ, ಸಕ್ಕರೆ ಮತ್ತು ದಕ್ಷಿಣೆಯನ್ನು ಇಟ್ಟು ಬಡವರಿಗೆ ದಾನ ಮಾಡಲಾಗುತ್ತದೆ. ದಿನಾಂತ್ಯದಲ್ಲಿ ಊಟ ಮಾಡಲಾಗುತ್ತದೆ. ಇದರಲ್ಲಿ ಹಾಲು, ಮೊಸರು, ಸಕ್ಕರೆ ಮತ್ತು ಧಾನ್ಯಗಳನ್ನು ತಿನ್ನುವುದಿಲ್ಲ. ಹಣ್ಣುಗಳು ಮತ್ತು ಬೀಜಗಳನ್ನು ಮಾತ್ರ ಸೇವಿಸಬಹುದು.

ಋಷಿ ಪಂಚಮಿ 2022 ವ್ರತ ಕಥಾ
ಬ್ರಹ್ಮ ಪುರಾಣದ ಪ್ರಕಾರ, ರಾಜ ಸಿತಾಶ್ವ ಒಮ್ಮೆ ಬ್ರಹ್ಮನನ್ನು ಕೇಳಿದನು - ತಂದೆಯೇ, ಇದು ಎಲ್ಲ ಉಪವಾಸಗಳಲ್ಲಿ ಉತ್ತಮ ಮತ್ತು ತಕ್ಷಣ ಫಲದಾಯಕವಾದ ಉಪವಾಸವಾಗಿದೆ. ಋಷಿ ಪಂಚಮಿಯ ಉಪವಾಸವು ಎಲ್ಲ ಉಪವಾಸಗಳಲ್ಲಿ ಅತ್ಯುತ್ತಮ ಮತ್ತು ಪಾಪಗಳ ನಾಶಕವಾಗಿರುವುದರ ಕಾರಣವೇನು?
ಬ್ರಹ್ಮನು ಹೇಳಿದನು, ಓ ರಾಜ, ವಿದರ್ಭ ದೇಶದಲ್ಲಿ ಉತ್ತಂಕನೆಂಬ ಸದ್ಗುಣಶೀಲ ಬ್ರಾಹ್ಮಣ ವಾಸಿಸುತ್ತಿದ್ದನು. ಅವನ ಪತ್ನಿ ಸುಶೀಲಾ ಸದ್ಗುಣಿಯಾಗಿದ್ದಳು. ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದರು.

Chanakya Niti: ಈ ನಾಲ್ಕು ಚಾಣಕ್ಯ ಮಂತ್ರಗಳನ್ನು ಅಳವಡಿಸಿಕೊಂಡ ಮನೆಯೇ ಸ್ವರ್ಗ!

ಅವರ ಮಗಳು ಮದುವೆಯ ನಂತರ ವಿಧವೆಯಾದಳು. ಅಸಂತೋಷಗೊಂಡ ಬ್ರಾಹ್ಮಣ ದಂಪತಿಯು ತಮ್ಮ ಹೆಣ್ಣುಮಕ್ಕಳೊಂದಿಗೆ ಗಂಗಾನದಿಯ ದಡದಲ್ಲಿ ಗುಡಿಸಲು ಮಾಡಿಕೊಂಡು ಜೀವನ ಆರಂಭಿಸಿದರು. ಸ್ವಲ್ಪ ಸಮಯದ ನಂತರ ಉತ್ತಕನಿಗೆ ತನ್ನ ಮಗಳು ಋತುಮತಿಯಾಗಿದ್ದರೂ ಪೂಜೆಯ ಪಾತ್ರೆಗಳನ್ನು ಮುಟ್ಟುತ್ತಿದ್ದಳು ಎಂದು ತಿಳಿಯಿತು. ಧಾರ್ಮಿಕ ಗ್ರಂಥಗಳ ಪ್ರಕಾರ, ಋತುಮತಿಯಾದ ಮಹಿಳೆ ಮೊದಲ ದಿನ ಚಾಂಡಾಲಿನಿಯಂತೆ, ಎರಡನೇ ದಿನ ಬ್ರಹ್ಮಘಟಿನಿಯಂತೆ ಮತ್ತು ಮೂರನೇ ದಿನ ತೊಳೆಯುವ ಮಹಿಳೆಯಂತೆ ಅಶುದ್ಧಳಾಗಿದ್ದಾಳೆ. ನಾಲ್ಕನೇ ದಿನ ಸ್ನಾನ ಮಾಡಿ ಶುದ್ಧಿಯಾಗುತ್ತಾಳೆ.
ಋಷಿ ಪಂಚಮಿಯ ಉಪವಾಸವನ್ನು ಶುದ್ಧ ಹೃದಯದಿಂದ ಆಚರಿಸಿದರೆ ಪಾಪದಿಂದ ಮುಕ್ತರಾಗಬಹುದು ಎಂದವರಿಗೆ ತಿಳಿದವರು ಹೇಳಿದರು. ತಂದೆಯ ಆದೇಶದ ಮೇರೆಗೆ ಅವರ ಮಗಳು ಶಾಸ್ತ್ರೋಕ್ತವಾಗಿ ಉಪವಾಸ ಮಾಡಿ ಪಂಚಮಿಯಂದು ಸಪ್ತ ಋಷಿಯನ್ನು ಪೂಜಿಸಿದರು. ವ್ರತದ ಪ್ರಭಾವದಿಂದ ಆಕೆ ಎಲ್ಲಾ ದುಃಖಗಳಿಂದ ಮುಕ್ತಳಾದಳು ಎಂದು ಹೇಳಲಾಗುತ್ತದೆ. ಹಾಗೆಯೇ ಮುಂದಿನ ಜನ್ಮದಲ್ಲಿ ಆಕೆಗೆ ಅಖಂಡ ಸೌಭಾಗ್ಯವೂ ಲಭಿಸಿತು.

Follow Us:
Download App:
  • android
  • ios