Asianet Suvarna News Asianet Suvarna News

Personality Traits: ಕುಂಭ ರಾಶಿಯ ಐದು ಸೀಕ್ರೆಟ್ ಗುಣಲಕ್ಷಣಗಳು..

ತಮ್ಮ ನಿಜವಾದ ಭಾವನೆಗಳನ್ನು ಮರೆ ಮಾಚುವಲ್ಲಿ ಇವರು ಮಾಸ್ಟರ್, ಇವರು ಹೊರ ಜಗತ್ತಿಗೆ ತೋರಗೊಡಗ ಒಂದು ಕರಾಳ ಮುಖವನ್ನು ಹೊಂದಿದ್ದಾರೆ. ಕುಂಭ ರಾಶಿಚಕ್ರದ ವ್ಯಕ್ತಿತ್ವದ ಲಕ್ಷಣಗಳನ್ನು ನಿಖರವಾಗಿ ಅರಿಯಲು ಮುಂದೆ ಓದಿ..

Five secrets about Aquarius that you did not know skr
Author
First Published Aug 31, 2022, 4:19 PM IST

ಬಂಡಾಯ ಸ್ವಭಾವದ ಮತ್ತು ವಿಶಿಷ್ಟವಾದ ಗುಣದ ಕುಂಭ ರಾಶಿಚಕ್ರವು ಬುದ್ಧಿವಂತಿಕೆ, ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಕುಂಭ ರಾಶಿಯವರು ಔಟ್ ಆಫ್ ದಿ ಬಾಕ್ಸ್ ಥಿಂಕಿಂಗ್ ಮತ್ತು ವಿಲಕ್ಷಣ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಅವರು ಅತಿ ಭಾವುಕರೂ ಆಗಬಲ್ಲರು ಹಾಗೆಯೇ ಭಾವನಾತ್ಮಕವಾಗಿ ನ್ಯೂಟ್ರಲ್ ಆಗಿಯೂ ಇರಬಲ್ಲರು. ಅವರನ್ನು ಅರ್ಥ ಮಾಡಿಕೊಳ್ಳುವುದು ಎಲ್ಲರಿಂದಲೂ ಆಗುವ ಕೆಲಸವಲ್ಲ. ಅದಕ್ಕೆ ಕೊಂಚ ಹೆಚ್ಚೇ ಸಂವೇದನಾಶೀಲತೆ ಬೇಕು. ಇಂದು ಈ ಲೇಖನದಲ್ಲಿ ಕುಂಭ ರಾಶಿಯವರ 5 ಪ್ರಮುಖ ಗುಣಲಕ್ಷಣಗಳ ಬಗ್ಗೆ ತಿಳಿಯೋಣ. 

ಹೆಚ್ಚಿನ ಕುಂಭ ರಾಶಿಯವರು ಧನಾತ್ಮಕ ಚಿಂತಕರು ಮತ್ತು ಆಶಾವಾದಿ ಜೀವನಶೈಲಿಯನ್ನು ನಂಬುತ್ತಾರೆ. ಅತ್ಯಂತ ಪ್ರಾಮಾಣಿಕರಾಗಿರುವ ಇವರ ವ್ಯಕ್ತಿತ್ವವು ವಿಶಿಷ್ಠ ಲಕ್ಷಣಗಳಿಂದ ಕೂಡಿದೆ. ಪ್ರತಿ ವ್ಯಕ್ತಿಯೂ ತನ್ನ ಎಲ್ಲ ಗುಣಸ್ವಭಾವಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದಿಲ್ಲ. ಕೆಲವು ಗುಣಲಕ್ಷಣಗಳು ತೆರೆದಿರುತ್ತವೆ, ಆದರೆ ಕೆಲವು ಗುಣಲಕ್ಷಣಗಳನ್ನು ಮರೆಮಾಡಲಾಗಿರುತ್ತದೆ. ಅದೇನು ಉದ್ದೇಶಪೂರ್ವಕವಾಗಿಯಲ್ಲದಿದ್ದರೂ ಜನರಿರುವುದೇ ಹಾಗೆ. ಈಗ ಕುಂಭ ರಾಶಿಯ ಅಷ್ಟು ಹೊರ ಜಗತ್ತಿಗೆ ಕಾಣದ, ಕೊಂಚ ರಹಸ್ಯವಾದ 5 ಗುಣಲಕ್ಷಣಗಳನ್ನು ನೋಡೋಣ.

ಅತ್ಯಂತ ಭಾವನಾತ್ಮಕ(Extremely Emotional)
ಕುಂಭ ರಾಶಿಯವರು ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ತೋರಿಸುವುದಿಲ್ಲ. ಅವರಲ್ಲಿ ಹೆಚ್ಚಿನವರು ಅಗಾಧವಾಗಿ ಭಾವನಾತ್ಮಕವಾಗಿರುತ್ತಾರೆ ಮತ್ತು ಸಣ್ಣ ವಿಷಯಗಳು ಸಹ ಅವರನ್ನು ನೋಯಿಸಬಹುದು. ಆದರೆ, ಹೆಚ್ಚಿನ ಸಮಯ ಅವರು ಭಾವನಾತ್ಮಕ ಭಾಗವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ ಮತ್ತು ಬಹಳ ವಿರಳವಾಗಿ ಅದನ್ನು ತಮ್ಮ ಹತ್ತಿರದ ಮತ್ತು ಆತ್ಮೀಯರಿಗೆ ಮಾತ್ರ ತೋರಿಸುತ್ತಾರೆ.

Chanakya Niti: ಈ ನಾಲ್ಕು ಚಾಣಕ್ಯ ಮಂತ್ರಗಳನ್ನು ಅಳವಡಿಸಿಕೊಂಡ ಮನೆಯೇ ಸ್ವರ್ಗ!

ಸುಳ್ಳು ಹೇಳಲು ಬಾರದವರು
ಕೆಲವರು ಸುಳ್ಳು ಹೇಳುವ ಕೌಶಲ್ಯವನ್ನು ಹೊಂದಿದ್ದಾರೆ ಮತ್ತು ಸುತ್ತಮುತ್ತಲಿನ ಜನರನ್ನು ಗಮನಿಸುವುದಿಲ್ಲ. ಕುಂಭ ರಾಶಿಯವರು ಪ್ರಾಮಾಣಿಕತೆಯನ್ನು ನಂಬುತ್ತಾರೆ ಮತ್ತು ಕೆಲವೊಮ್ಮೆ ಅವರು ಸುಳ್ಳು ಹೇಳಲು ಪ್ರಯತ್ನಿಸಿದರೆ, ಅದು ಅವರ ವಿರುದ್ಧವೇ ತಿರುಗುತ್ತದೆ. ಜನರೊಂದಿಗೆ ಮುಂಚೂಣಿಯಲ್ಲಿರುವ ಅವರ ಸ್ವಭಾವದಿಂದಾಗಿ, ಅವರು ಸಹಾನುಭೂತಿಯ ಸನ್ನಿವೇಶಗಳಲ್ಲಿ ಕೂಡಾ ಸುಳ್ಳು ಹೇಳಲು ಸಾಧ್ಯವಿಲ್ಲದವರು.

ಸರ್ಪ್ರೈಸ್ ನೀಡೋದಿಷ್ಟ
ಅವರು ತುಂಬಾ ಶಾಂತ ಮತ್ತು ಸಂಯೋಜಿತ ಜೀವನವನ್ನು ನಡೆಸುತ್ತಾರೆ ಮತ್ತು ಅಗತ್ಯವಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಸಮಸ್ಯೆಗಳ ಬಗ್ಗೆ ಯೋಚಿಸುವುದು ಮತ್ತು ಪೂರ್ವಯೋಜನೆ ಅವರ ಶೈಲಿಯಲ್ಲ. ಅಕ್ವೇರಿಯನ್ಸ್ ಎಂದರೆ ಆಶ್ಚರ್ಯವನ್ನು ನೀಡಲು ಇಷ್ಟಪಡುವ ಮತ್ತು ಅನಿರೀಕ್ಷಿತ ಜನರು.

ಕರುಣಾಮಯಿ(Compassionate)
ಮಾತನಾಡದೆ ಕೇವಲ ಕಾರ್ಯವನ್ನು ಮಾಡಿ ಮತ್ತು ಕೆಲಸವೇ ಮಾತಾಡಲಿ ಎಂಬುದನ್ನು ನಂಬಿವವರು ಕುಂಭ ರಾಶಿಯವರು. ಅವರು ಸುತ್ತಲಿನ ಪರಿಸರದ ಬಗ್ಗೆ ಯೋಚಿಸಲು ಇಷ್ಟಪಡುತ್ತಾರೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು ಮತ್ತು ಅಗತ್ಯವಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮಾರ್ಗಗಳ ಚಿಂತನೆ ಅವರಲ್ಲಿ ಅಂತರ್ಗತವಾಗಿರುತ್ತದೆ. ಜಗತ್ತಿನಾದ್ಯಂತ ಜೀವನ ಗುಣಮಟ್ಟವನ್ನು ಉನ್ನತೀಕರಿಸುವುದು ತಮ್ಮ ಜೀವನದ ಉದ್ದೇಶವೆಂದು ಅವರು ಪರಿಗಣಿಸುತ್ತಾರೆ.

Ganesh Visarjan 2022: ಗಣೇಶ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ಯಾವುದು?

ಸೃಜನಾತ್ಮಕ(Creative)
ಕುಂಭ ರಾಶಿಯವರು ಬಹಳ ಬುದ್ಧಿವಂತರು ಮತ್ತು ಸೃಜನಶೀಲರು. ಅವರು ಎಲ್ಲದರ ಬಗ್ಗೆಯೂ ಔಟ್ ಆಫ್ ದ ಬಾಕ್ಸ್ ಥಿಂಕಿಂಗ್ ಮಾಡಬಲ್ಲರು. ಇದು ತೀರಾ ಅಪರೂಪದ ಲಕ್ಷಣವಾದರೂ ಸಾರ್ವಜನಿಕವಾಗಿ ಅದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಅವರು ಸೃಜನಶೀಲರಾಗಲು ಪ್ರಯತ್ನಿಸದಿದ್ದರೂ ಸಹ, ಅದು ಸಹಜವಾಗಿ ಹರಿಯುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios