ಮೀನದಲ್ಲಿ ಗುರು ವಕ್ರಿ: ಈ ನಾಲ್ಕು ರಾಶಿಗಳ ವೈವಾಹಿಕ ಬದುಕಿನಲ್ಲಿ ಬಿರುಗಾಳಿ

ಗುರು ಗ್ರಹದ ವಕ್ರಿ ನಡೆ ನಾಲ್ಕು ತಿಂಗಳ ಕಾಲ ಇರಲಿದೆ. ಈ ಅವಧಿಯಲ್ಲಿ ನಾಲ್ಕು ರಾಶಿಗಳ ವೈವಾಹಿಕ ಜೀವನದಲ್ಲಿ ಜಗಳ, ವಾದವಿವಾದಗಳು ಹೆಚ್ಚಲಿವೆ. 

Retro Jupiter In Pisces From 29 July Havoc In 4 Signs Marital Life skrs

ಜ್ಯೋತಿಷ್ಯವು ಗುರು ಗ್ರಹದಂತಹ ಅದೃಷ್ಟದ ಗ್ರಹದ ಯಾವುದೇ ಚಲನೆಯನ್ನು ಅದು ಚಲಿಸುತ್ತಿರಲಿ ಅಥವಾ ಹಿಮ್ಮುಖವಾಗಲಿ ಮಹತ್ವದ್ದಾಗಿದೆ ಎಂದು ಪರಿಗಣಿಸುತ್ತದೆ. ವ್ಯಕ್ತಿಯ ಜಾತಕವನ್ನು ವಿಶ್ಲೇಷಿಸುವಾಗ, ಜ್ಯೋತಿಷಿಗಳು ಗುರುವಿನ ಸ್ಥಾನವನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ. ಏಕೆಂದರೆ ಗುರುವು ವ್ಯಕ್ತಿಯ ಸಂಪತ್ತು, ವೈವಾಹಿಕ ಸ್ಥಿತಿ ಮತ್ತು ಮಕ್ಕಳನ್ನು ಪರಿಗಣಿಸುತ್ತಾನೆ. ಅಂತಹ ಸಂದರ್ಭದಲ್ಲಿ, ವ್ಯಕ್ತಿಯ ಕುಟುಂಬ, ವೈವಾಹಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ವ್ಯಕ್ತಿಯ ಸ್ಥಾನವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
29 ಜುಲೈ 2022 ಶುಕ್ರವಾರದಂದು 1:33 ಕ್ಕೆ ಮೀನ ರಾಶಿಯಲ್ಲಿ ಗುರು ಗ್ರಹವು ತನ್ನ ಸ್ವತ ರಾಶಿಯಾದ ಮೀನದಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ನವೆಂಬರ್ 24, 2022 ರ ಗುರುವಾರ, 4:36ರವರೆಗೂ ಸುಮಾರು ನಾಲ್ಕು ತಿಂಗಳ ಕಾಲ ವಕ್ರಿಯಾಗಿ ಇರಲಿದ್ದಾನೆ. ಗುರುಗ್ರಹದ ಹಿಮ್ಮುಖ ಚಲನೆಯು ರಾಶಿಚಕ್ರದ ಪ್ರತಿಯೊಂದು ಚಿಹ್ನೆಯ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ, ಅದರಲ್ಲೂ ಗುರು ಗ್ರಹದ ರಾಶಿಗಳಾದ, ಮೀನ ಮತ್ತು ಧನು ರಾಶಿಯ ನಿವಾಸಿಗಳ ಜೀವನದಲ್ಲಿ ಈ ಸಮಯದಲ್ಲಿ ಗುರುಗ್ರಹದ ಹಿಮ್ಮುಖ ಚಲನೆಯು ಹೆಚ್ಚು ಬದಲಾವಣೆಗಳನ್ನು ಉಂಟುಮಾಡುತ್ತದೆ.

ಮೀನ(Pisces)ದಲ್ಲಿ ಗುರು ಹಿಮ್ಮೆಟ್ಟುವಿಕೆ
ಜ್ಯೋತಿಷಿಗಳು ಗುರುಗ್ರಹವು ತನ್ನ ರಾಶಿಚಕ್ರದ ಚಿಹ್ನೆಗಳಲ್ಲಿ ಒಂದನ್ನು ಪೂರ್ಣಗೊಳಿಸಲು ಸರಿಸುಮಾರು 13 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಿದ್ದಾರೆ. ಗುರುಗ್ರಹದ ವಕ್ರಿಯು ಸರಾಸರಿ ವರ್ಷಕ್ಕೊಮ್ಮೆ ಸಂಭವಿಸುತ್ತದೆ. ಗುರು ಗ್ರಹವು ಜುಲೈ 29ರಂದು ವಕ್ರಿಯಾಗಿರುವುದರಿಂದ 4 ರಾಶಿಗಳ ವೈವಾಹಿಕ ಜೀವನ(marital life)ದಲ್ಲಿ ಅಲ್ಲೋಲಕಲ್ಲೋಗಳು ಉಂಟಾಗುತ್ತವೆ. ಅವು ಯಾವ ರಾಶಿಗಳು ನೋಡೋಣ.

ಸತ್ಯವಾಗುತ್ತಿದೆಯೇ 2022ಕ್ಕೆ ನಾಸ್ಟ್ರಾಡಾಮಸ್ ನುಡಿದ ಭಯಾನಕ ಭವಿಷ್ಯವಾಣಿ?

ಮೇಷ ರಾಶಿ(Aries): ಗುರುಗ್ರಹದ ಹಿಮ್ಮೆಟ್ಟುವಿಕೆ ಈ ರಾಶಿಚಕ್ರದ ಜನರಿಗೆ ಅಶುಭವೆಂದು ಪರಿಗಣಿಸಲಾಗಿದೆ. ಕೆಲಸದ ಸ್ಥಳದಲ್ಲಿ ಅತಿಯಾದ ಕೆಲಸದ ಒತ್ತಡದಿಂದಾಗಿ ನೀವು ಅತೃಪ್ತರಾಗಬಹುದು. ಈ ಸಮಯದಲ್ಲಿ ನೀವು ಬಲವಂತದ ವರ್ಗಾವಣೆಯನ್ನು ಎದುರಿಸಬೇಕಾಗಬಹುದು. ಸ್ವಂತ ಕೆಲಸ ಮಾಡುವವರಿಗೂ ಕಷ್ಟವಾಗುತ್ತದೆ. ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಕಡಿಮೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಕೆಲಸದ ಒತ್ತಡ, ಹಣಕಾಸಿನ ಸಂಕಷ್ಟಗಳು ವೈವಾಹಿಕ ಜೀವನದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಒಂದೆರಡು ಆರೋಗ್ಯ ಸಮಸ್ಯೆಗಳೂ ಇರಬಹುದು.

ಸಿಂಹ ರಾಶಿ(Leo): ಈ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಈ ಅವಧಿಯಲ್ಲಿ ವ್ಯಾಪಾರಿಗಳು ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಸಣ್ಣ ಪುಟ್ಟ ವಿಚಾರಕ್ಕೂ ವಾದಗಳು ಹೆಚ್ಚಬಹುದು. ಆರೋಗ್ಯ ಹದಗೆಡಬಹುದು.

ಕನ್ಯಾ ರಾಶಿ(Virgo): ಈ ಅವಧಿಯಲ್ಲಿ ಲಾಭ ಗಳಿಸುವಲ್ಲಿ ಕೆಲವು ಸಮಸ್ಯೆಗಳಿರಬಹುದು. ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಕಡಿಮೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಕೌಟುಂಬಿಕ ಸಮಸ್ಯೆಗಳು ಹೆಚ್ಚಬಹುದು. ಅತ್ತೆ ಸೊಸೆ ಜಗಳ ತಲೆನೋವು ತರಬಹುದು. ಸಂಗಾತಿಯ ಚಟಗಳು, ಮಾತುಕತೆ ಎಲ್ಲವೂ ಜಗಳಕ್ಕೆ ದಾರಿ ಮಾಡಿಕೊಡಬಹುದು. 

ಮೀನದಲ್ಲಿ ಗುರು ವಕ್ರಿ; ಈ ಮೂರು ರಾಶಿಗಳಿಗೆ ಹೆಚ್ಚಲಿರುವ ಆರ್ಥಿಕ ಸಂಕಷ್ಟ

ತುಲಾ ರಾಶಿ(Libra): ಹಣಕಾಸಿನ ಸ್ಥಿತಿ ದುರ್ಬಲವಾಗಿರಬಹುದು. ಹಠಾತ್ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲವು ಕೆಲಸಗಳಿಗಾಗಿ ನೀವು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಮೇಲಧಿಕಾರಿಗಳೊಂದಿಗಿನ ಸಂಬಂಧಗಳು ಹದಗೆಡಬಹುದು. ಸಂಗಾತಿಯೊಂದಿಗೆ ಯಾವುದೋ ವಿಚಾರದಲ್ಲಿ ವಿವಾದ, ಜಗಳ ಉಂಟಾಗಬಹುದು. ಆರೋಗ್ಯ ಸಮಸ್ಯೆಗಳೂ ಇರಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios